ಮೆನೊಪಾಸ್- ಮುಟ್ಟು ಕೊನೆಗೊಳ್ಳುವಿಕೆ

ಮುಟ್ಟು ಕೊನೆಗೊಳ್ಳುವುದಕ್ಕೆ ಪೂರ್ವದಲ್ಲಿ ಅಥವಾ ಪ್ರಿ-ಮೆನೊಪಾಸ್ ಅಂದರೆ ಕೊನೆ ಅವಧಿ ತನಕ ನಡೆಯುವ ಋತುಚಕ್ರ ಕ್ರಿಯೆ ಎಂದರ್ಥ. ಪುನರ್ ಉತ್ಪತ್ತಿಯ ಹಾರ್ಮೋನುಗಳ ಮಟ್ಟಗಳು ಈಗಾಗಲೇ ಕಡಿಮೆಯಾಗಿದ್ದು ಮತ್ತು ಹೆಚ್ಚು ದೋಷಪೂರಿತವಾಗಿದ್ದರೆ, ಹಾರ್ಮೋನು ಹಿಂಪಡೆಯುವ ಪರಿಣಾಮಗಳು ಅಸ್ತಿತ್ವದಲ್ಲಿರುತ್ತದೆ.
ಪ್ರಿ-ಮೆನೊಪಾಸ್ ಜೀವನದ ಒಂದು ನೈಸರ್ಗಿಕ ಹಂತ. ಇದು ರೋಗವಲ್ಲ ಅಥವಾ ದೋಷವೂ ಅಲ್ಲ. ಅದಕಾರಣ ಇದಕ್ಕೆ ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿಲ್ಲ. ಆದಾಗ್ಯೂ, ಪೂರ್ವ ಮುಟ್ಟುಕೊನೆಗೊಳ್ಳುವಿಕೆಯಲ್ಲಿ ದೈಹಿಕ, ಮಾನಸಿಕ ಮತ್ತು ಭಾವೋದ್ವೇಗದ ಪರಿಣಾಮಗಳು ತೀವ್ರವಾಗಿದ್ದರೆ ಹಾಗೂ ಮಹಿಳೆಯ ದಿನನಿತ್ಯದ ಬದುಕಿಗೆ ಅಡಚಣೆ ಉಂಟು ಮಾಡಿದ ಪ್ರಕರಣಗಳಲ್ಲಿ ವೈದ್ಯಕೀಯ ಚಿಕಿತ್ಸೆ ನೆರವಾಗುತ್ತದೆ.
ಮೆನೊಪಾಸ್ ನಂತರ
ಪೋಸ್ಟ್ ಮೆನೊಪಾಸ್ ಅಥವಾ ನಂತರದ ಮುಟ್ಟುಕೊನೆಗೊಳ್ಳುವಿಕೆ ಅಂದರೆ ಕೊನೆ ಅವಧಿ ನಂತರ ನಡೆಯುವ ಮಹಿಳೆಯರ ಬದುಕಿನಲ್ಲಿ ನಡೆಯುವ ಪ್ರಕ್ರಿಯೆ ಎಂದರ್ಥ. ಇದನ್ನು ಸರಿಯಾದ ರೀತಿಯಲ್ಲಿ ಹೇಳುವುದಾದರೆ, ಮಹಿಳೆಯರ ಅಂಡಾಣುಗಳು ನಿಷ್ಕ್ರಿಯವಾದ ಹಂತದ ನಂತರದ ದಿನಗಳನ್ನು ಪೋಸ್ಟ್ ಮೆನೊಪಾಸ್ ಎನ್ನಬಹುದು.
ಮಹಿಳೆ 12 ಪೂರ್ಣ ತಿಂಗಳುಗಳ ಕಾಲ ಯಾವುದೇ ಗುರುತಿಲ್ಲದೆ ಯಾವುದೇ ಋತುಸ್ರಾವವಿಲ್ಲದ ಹಂತ ತಲುಪುತ್ತಾರೆ. ಗರ್ಭಕೋಶ ಹೊಂದಿರುವ ಆಕೆಯನ್ನು ಪೋಸ್ಟ್ ಮೆನೋಪಾಸ್ ಸ್ಥಿತಿ ಎಂದು ಘೋಷಿಸಬಹುದು.
ಗರ್ಭಕೋಶ ಹೊಂದಿರುವ ವಯಸ್ಕ ಮಹಿಳೆಯರು ಗರ್ಭಿಣಿಯಾಗದಿದ್ದರೆ ಅಥವಾ ಸ್ತನಪಾನ ಮಾಡಿಸದಿದ್ದರೆ ಶಾಶ್ವತ (ಕನಿಷ್ಟ ಒಂದು ವರ್ಷ) ಮಾಸಿಕ ಅವಧಿ ಅಥವಾ ಋತುಸ್ರಾವ ಇಲ್ಲದಿರುವಿಕೆಯಿಂದ ಪೋಸ್ಟ್ ಮೆನೊಪಾಸ್‍ನನ್ನು ಗುರುತಿಸಬಹುದು. ಈ ಹಂತದಲ್ಲಿ ಮಹಿಳೆಯನ್ನು ಫಲವತ್ತತೆ ಇಲ್ಲದಿರುವಿಕೆ (ಬಂಜೆತನ) ಎಂದು ಪರಿಗಣಿಸಿ, ಗರ್ಭ ಧರಿಸುವ ಸಾಧ್ಯತೆ ಇಲ್ಲವೆಂಬ ನಿರ್ಧಾರಕ್ಕೆ ಬರಲಾಗುತ್ತದೆ. ಆದಾಗ್ಯೂ ಈ ಹಂತ ತಲುಪುವುದಕ್ಕೆ ಮುನ್ನ ಅನೇಕ ವರ್ಷಗಳ ಕಾಲ ಆಕೆ ಗರ್ಭಧರಿಸುವ ಸಾಧ್ಯತೆ ಸಾಮಾನ್ಯವಾಗಿ ತುಂಬಾ ಕಡಿಮೆ ಇರುತ್ತದೆ.
ಮಹಿಳೆಯ ಪುನರ್ ಉತ್ಪತ್ತಿ ಹಾರ್ಮೋನು ಮಟ್ಟಗಳು ಇಳಿಮುಖವಾಗಿ ಮುಂದುವರೆದು ಕೆಲಕಾಲ ಏರಿಳಿತ ಉಂಟಾಗಿ ಪೋಸ್ಟ್ ಮೆನೊಪಾಸ್ ಹಂತ ತಲುಪುತ್ತದೆ. ಹೀಗಾಗಿ ಮಹಿಳೆಯ ಅನುಭವಕ್ಕೆ ಬರುವ ಯಾವುದೇ ಹಾರ್ಮೋನು ಹಿಂದಕ್ಕೆ ಸರಿಯುವ ಲಕ್ಷಣಗಳು ತಕ್ಷಣ ನಿಲ್ಲುವುದಿಲ್ಲ. ಆದರೆ, ಅದು ಸಂಪೂರ್ಣ ಕಣ್ಮರೆಯಾಗಲು ಕೆಲ ಸಮಯ, ಹಲವಾರು ವರ್ಷಗಳೇ ಬೇಕಾಗಬಹುದು.
ಪೋಸ್ಟ್ ಮೆನೊಪಾಸ್ ವೇಳೆ ಚಿಕ್ಕ ಗುರುತು ಇದ್ದು, ಯಾವುದೇ ಋತುಸ್ರಾವದಂಥ ಹರಿವು ಕಾಣಿಸಿಕೊಂಡರೂ ವೈದ್ಯರಿಗೆ ವರದಿ ಮಾಡಬೇಕಾಗುತ್ತದೆ. ಕಾರಣವು ಸಣ್ಣದಾಗಿದ್ದರೂ, ಎಂಡೋಮೆಟ್ರಿಯಲ್ ಕ್ಯಾನ್ಸರ್ ಸಾಧ್ಯತೆಯನ್ನು ಪರಿಶೀಲಿಸಿ ಅದು ಇದ್ದರೆ ನಿರ್ಮೂಲನೆ ಮಾಡಬೇಕು.
ಮೆನೊಪಾಸ್ ವಿಧಾನಗಳು
ವಿವಿಧ ರೀತಿಯ ಮೆನೊಪಾಸ್‍ಗಳಿವೆ. ನಿಮಗೆ ಸ್ತನ ಕ್ಯಾನ್ಸರ್ ಇದ್ದರೆ, ನೀವು ಯಾವ ರೀತಿಯ ಮೆನೊಪಾಸ್ ಅನುಭವಿಸಬಹುದೆಂಬ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.

  • ನೈಸರ್ಗಿಕ ಮನೊಪಾಸ್ ಅಥವಾ ಭೌತಿಕ ಮೆನೊಪಾಸ್ ; ಇದು ವಯೋಮಾನ ಪ್ರಕ್ರಿಯೆಯ ಸಾಮಾನ್ಯ ಭಾಗ.
  • ಮೆಡಿಕಲ್ ಅಥವಾ ಸರ್ಜಿಕಲ್ ಮೆನೊಪಾಸ್ : ಕೆಮೋಥೆರಪಿ ಅಥವಾ ಅಂಡಾಶಯ ತೆಗದು ಹಾಕಿರುವ ಫಲವಿದು.
  • ಕೋಲ್ಡ್ ಟರ್ಕಿ ಮೆನೊಪಾಸ್ : ಮೆನೊಪಾಸ್ ಹಾರ್ಮೋನು ಚಿಕಿತ್ಸೆ (ಉದಾ : ಸ್ತನ ಕ್ಯಾನ್ಸರ್ ಪತ್ತೆಯಾದ ನಂತರದ) ಫಲವಿದು.

ಮೆನೊಪಾನ್ ಅಥವಾ ಮುಟ್ಟು ಕೊನೆಗೊಳ್ಳುವಿಕೆಗೆ ಕಾರಣಗಳು:

  • ಜೀವನ ಶೈಲಿ : ಮೆನೊಪಾಸ್‍ಗೆ ಜೀವನ ಶೈಲಿಯ ಬದಲಾವಣೆಗಳೂ ಕಾರಣವಾಗುತ್ತದೆ. ಪಥ್ಯಾಹಾರ, ವ್ಯಾಯಾಮ, ತೂಕ, ಧೂಮಪಾನ, ಪರಿಸರ-ಈ ಅಂಶಗಳು ಕೂಡ ಪ್ರಭಾವ ಬೀರುತ್ತವೆ.
  • ಮಹಿಳೆಯು ಬದುಕುವ ಸಾಂಸ್ಕತಿಕ ಹಿನ್ನೆಲೆಯು ಕೂಡ ಆಕೆ ಅನುಭವಿಸುವ ಮೆನೊಪಾಸ್ ಮೇಲೆ ಗಮನಾರ್ಹ ಪ್ರಭಾವ ಉಂಟು ಮಾಡುತ್ತದೆ.
  • ಅನುವಂಶೀಯತೆ : ಮುಟ್ಟು ಕೊನೆಗೊಳ್ಳುವುದಕ್ಕೆ ಪೂರ್ವದಲ್ಲಿ ಅಥವಾ ಪ್ರಿ-ಮೆನೊಪಾಸ್ ಅಂದರೆ ಕೊನೆ ಅವಧಿ ತನಕ ನಡೆಯುವ ಋತುಚಕ್ರ ಕ್ರಿಯೆ ಎಂದರ್ಥ. ಪುನರ್ ಉತ್ಪತ್ತಿಯ ಹಾರ್ಮೋನುಗಳ ಮಟ್ಟಗಳು ಈಗಾಗಲೇ ಕಡಿಮೆಯಾಗಿದ್ದು ಮತ್ತು ಹೆಚ್ಚು ದೋಷಪೂರಿತವಾಗಿದ್ದರೆ, ಹಾರ್ಮೋನು ಹಿಂಪಡೆಯುವ ಪರಿಣಾಮಗಳು ಅಸ್ತಿತ್ವದಲ್ಲಿರುತ್ತದೆ.

ಪ್ರಿ-ಮೆನೊಪಾಸ್ ಜೀವನದ ಒಂದು ನೈಸರ್ಗಿಕ ಹಂತ. ಇದು ರೋಗವಲ್ಲ ಅಥವಾ ದೋಷವೂ ಅಲ್ಲ. ಅದಕಾರಣ ಇದಕ್ಕೆ ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿಲ್ಲ. ಆದಾಗ್ಯೂ, ಪೂರ್ವ ಮುಟ್ಟುಕೊನೆಗೊಳ್ಳುವಿಕೆಯಲ್ಲಿ ದೈಹಿಕ, ಮಾನಸಿಕ ಮತ್ತು ಭಾವೋದ್ವೇಗದ ಪರಿಣಾಮಗಳು ತೀವ್ರವಾಗಿದ್ದರೆ ಹಾಗೂ ಮಹಿಳೆಯ ದಿನನಿತ್ಯದ ಬದುಕಿಗೆ ಅಡಚಣೆ ಉಂಟು ಮಾಡಿದ ಪ್ರಕರಣಗಳಲ್ಲಿ ವೈದ್ಯಕೀಯ ಚಿಕಿತ್ಸೆ ನೆರವಾಗುತ್ತದೆ.
ಮೆನೊಪಾಸ್ ನಂತರ

  • ಪೋಸ್ಟ್ ಮೆನೊಪಾಸ್ ಅಥವಾ ನಂತರದ ಮುಟ್ಟುಕೊನೆಗೊಳ್ಳುವಿಕೆ ಅಂದರೆ ಕೊನೆ ಅವಧಿ ನಂತರ ನಡೆಯುವ ಮಹಿಳೆಯರ ಬದುಕಿನಲ್ಲಿ ನಡೆಯುವ ಪ್ರಕ್ರಿಯೆ ಎಂದರ್ಥ. ಇದನ್ನು ಸರಿಯಾದ ರೀತಿಯಲ್ಲಿ ಹೇಳುವುದಾದರೆ, ಮಹಿಳೆಯರ ಅಂಡಾಣುಗಳು ನಿಷ್ಕ್ರಿಯವಾದ ಹಂತದ ನಂತರದ ದಿನಗಳನ್ನು ಪೋಸ್ಟ್ ಮೆನೊಪಾಸ್ ಎನ್ನಬಹುದು.
  • ಮಹಿಳೆ 12 ಪೂರ್ಣ ತಿಂಗಳುಗಳ ಕಾಲ ಯಾವುದೇ ಗುರುತಿಲ್ಲದೆ ಯಾವುದೇ ಋತುಸ್ರಾವವಿಲ್ಲದ ಹಂತ ತಲುಪುತ್ತಾರೆ. ಗರ್ಭಕೋಶ ಹೊಂದಿರುವ ಆಕೆಯನ್ನು ಪೋಸ್ಟ್ ಮೆನೋಪಾಸ್ ಸ್ಥಿತಿ ಎಂದು ಘೋಷಿಸಬಹುದು.

ಗರ್ಭಕೋಶ ಹೊಂದಿರುವ ವಯಸ್ಕ ಮಹಿಳೆಯರು ಗರ್ಭಿಣಿಯಾಗದಿದ್ದರೆ ಅಥವಾ ಸ್ತನಪಾನ ಮಾಡಿಸದಿದ್ದರೆ ಶಾಶ್ವತ (ಕನಿಷ್ಟ ಒಂದು ವರ್ಷ) ಮಾಸಿಕ ಅವಧಿ ಅಥವಾ ಋತುಸ್ರಾವ ಇಲ್ಲದಿರುವಿಕೆಯಿಂದ ಪೋಸ್ಟ್ ಮೆನೊಪಾಸ್‍ನನ್ನು ಗುರುತಿಸಬಹುದು. ಈ ಹಂತದಲ್ಲಿ ಮಹಿಳೆಯನ್ನು ಫಲವತ್ತತೆ ಇಲ್ಲದಿರುವಿಕೆ (ಬಂಜೆತನ) ಎಂದು ಪರಿಗಣಿಸಿ, ಗರ್ಭ ಧರಿಸುವ ಸಾಧ್ಯತೆ ಇಲ್ಲವೆಂಬ ನಿರ್ಧಾರಕ್ಕೆ ಬರಲಾಗುತ್ತದೆ. ಆದಾಗ್ಯೂ ಈ ಹಂತ ತಲುಪುವುದಕ್ಕೆ ಮುನ್ನ ಅನೇಕ ವರ್ಷಗಳ ಕಾಲ ಆಕೆ ಗರ್ಭಧರಿಸುವ ಸಾಧ್ಯತೆ ಸಾಮಾನ್ಯವಾಗಿ ತುಂಬಾ ಕಡಿಮೆ ಇರುತ್ತದೆ.
ಮಹಿಳೆಯ ಪುನರ್ ಉತ್ಪತ್ತಿ ಹಾರ್ಮೋನು ಮಟ್ಟಗಳು ಇಳಿಮುಖವಾಗಿ ಮುಂದುವರೆದು ಕೆಲಕಾಲ ಏರಿಳಿತ ಉಂಟಾಗಿ ಪೋಸ್ಟ್ ಮೆನೊಪಾಸ್ ಹಂತ ತಲುಪುತ್ತದೆ. ಹೀಗಾಗಿ ಮಹಿಳೆಯ ಅನುಭವಕ್ಕೆ ಬರುವ ಯಾವುದೇ ಹಾರ್ಮೋನು ಹಿಂದಕ್ಕೆ ಸರಿಯುವ ಲಕ್ಷಣಗಳು ತಕ್ಷಣ ನಿಲ್ಲುವುದಿಲ್ಲ. ಆದರೆ, ಅದು ಸಂಪೂರ್ಣ ಕಣ್ಮರೆಯಾಗಲು ಕೆಲ ಸಮಯ, ಹಲವಾರು ವರ್ಷಗಳೇ ಬೇಕಾಗಬಹುದು.
ಪೋಸ್ಟ್ ಮೆನೊಪಾಸ್ ವೇಳೆ ಚಿಕ್ಕ ಗುರುತು ಇದ್ದು, ಯಾವುದೇ ಋತುಸ್ರಾವದಂಥ ಹರಿವು ಕಾಣಿಸಿಕೊಂಡರೂ ವೈದ್ಯರಿಗೆ ವರದಿ ಮಾಡಬೇಕಾಗುತ್ತದೆ. ಕಾರಣವು ಸಣ್ಣದಾಗಿದ್ದರೂ, ಎಂಡೋಮೆಟ್ರಿಯಲ್ ಕ್ಯಾನ್ಸರ್ ಸಾಧ್ಯತೆಯನ್ನು ಪರಿಶೀಲಿಸಿ ಅದು ಇದ್ದರೆ ನಿರ್ಮೂಲನೆ ಮಾಡಬೇಕು.

ಮೆನೊಪಾಸ್ ವಿಧಾನಗಳು

  • ವಿವಿಧ ರೀತಿಯ ಮೆನೊಪಾಸ್‍ಗಳಿವೆ. ನಿಮಗೆ ಸ್ತನ ಕ್ಯಾನ್ಸರ್ ಇದ್ದರೆ, ನೀವು ಯಾವ ರೀತಿಯ ಮೆನೊಪಾಸ್ ಅನುಭವಿಸಬಹುದೆಂಬ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.
  • ನೈಸರ್ಗಿಕ ಮನೊಪಾಸ್ ಅಥವಾ ಭೌತಿಕ ಮೆನೊಪಾಸ್ ; ಇದು ವಯೋಮಾನ ಪ್ರಕ್ರಿಯೆಯ ಸಾಮಾನ್ಯ ಭಾಗ.
  • ಮೆಡಿಕಲ್ ಅಥವಾ ಸರ್ಜಿಕಲ್ ಮೆನೊಪಾಸ್ : ಕೆಮೋಥೆರಪಿ ಅಥವಾ ಅಂಡಾಶಯ ತೆಗದು ಹಾಕಿರುವ ಫಲವಿದು.
  • ಕೋಲ್ಡ್ ಟರ್ಕಿ ಮೆನೊಪಾಸ್ : ಮೆನೊಪಾಸ್ ಹಾರ್ಮೋನು ಚಿಕಿತ್ಸೆ (ಉದಾ : ಸ್ತನ ಕ್ಯಾನ್ಸರ್ ಪತ್ತೆಯಾದ ನಂತರದ) ಫಲವಿದು.

ಮೆನೊಪಾನ್ ಅಥವಾ ಮುಟ್ಟು ಕೊನೆಗೊಳ್ಳುವಿಕೆಗೆ ಕಾರಣಗಳು:

  • ಜೀವನ ಶೈಲಿ : ಮೆನೊಪಾಸ್‍ಗೆ ಜೀವನ ಶೈಲಿಯ ಬದಲಾವಣೆಗಳೂ ಕಾರಣವಾಗುತ್ತದೆ. ಪಥ್ಯಾಹಾರ, ವ್ಯಾಯಾಮ, ತೂಕ, ಧೂಮಪಾನ, ಪರಿಸರ-ಈ ಅಂಶಗಳು ಕೂಡ ಪ್ರಭಾವ ಬೀರುತ್ತವೆ.
  • ಮಹಿಳೆಯು ಬದುಕುವ ಸಾಂಸ್ಕøತಿಕ ಹಿನ್ನೆಲೆಯು ಕೂಡ ಆಕೆ ಅನುಭವಿಸುವ ಮೆನೊಪಾಸ್ ಮೇಲೆ ಗಮನಾರ್ಹ ಪ್ರಭಾವ ಉಂಟು ಮಾಡುತ್ತದೆ.
  • ಅನುವಂಶೀಯತೆ : ವಂಶವಾಹಿಗಳು ನಿಮ್ಮ ಪೋಷಕರಿಂದ ಬಂದಿದ್ದರೆ ಅದು ನಿಮ್ಮ ಭವಿಷ್ಯದ ಆರೋಗ್ಯದ ನೀಲಿ ನಕ್ಷೆಯಾಗಿರುತ್ತದೆ.
  • ಹಾರ್ಮೋನುಗಳು : ಈಸ್ಟೋಜೆನ್, ಪ್ರೊಜೆಸ್ಟರೋನ್ ಮತ್ತು ಇತರ ಹಾರ್ಮೋನುಗಳು ಇದಕ್ಕೆ ಕಾರಣವಾಗುತ್ತದೆ.
  • ಸಾಮಾಜಿಕ ಸ್ಥಳಗಳು : ಸಾಮಾಜಿಕ ಸ್ಥಳಗಳು ಕೂಡ ಮಹಿಳೆಯ ಮುಟ್ಟು ಕೊನೆಗೊಳ್ಳುವಿಕೆ ಮತ್ತು ಅದಕ್ಕೆ ಸಂಬಂಧಿಸಿದ ಜೈವಿಕ ಪರಿಣಾಮಗಳಿಗೆ ಕಾರಣವಾಗುತ್ತದೆ.
  • ಜನಾಂಗ ಮತ್ತು ಭೌಗೋಳಿಕ ಸ್ಥಳಗಳೂ ಕೂಡ ಮೆನೊಪಾಸ್ ಅನುಭವದಲ್ಲಿ ಪಾತ್ರ ವಹಿಸುತ್ತದೆ.

ಪರಿಣಾಮಗಳು ಅಥವಾ ಮೆನೊಪಾಸ್ ಲಕ್ಷಣಗಳು ?

ಪ್ರತಿ ಮಹಿಳೆಯ ಜೀವನದ ಒಂದು ಕಡೆ, ಆಕೆಯ ಮಾಸಿಕ ಅವಧಿ ಮುಂದುವರಿಸಲು ಬೇಕಾದ ಮಟ್ಟಕ್ಕಿಂತ ಕೆಳಗೆ ಹಾರ್ಮೋನು ಉತ್ಪಾದನೆ ಕುಂಠಿತಗೊಳ್ಳುತ್ತದೆ. ಕೆಲವು ಮಹಿಳೆಯರು ಮಾಸಿಕ ರಕ್ತಸ್ರಾವ, ಊದಿಕೊಳ್ಳುವಿಕೆ ಮತ್ತು ಕಿರಿಕಿರಿಯಿಂದ ಮುಕ್ತಿ ಪಡೆಯಲು ಮೆನೊಪಾಸ್‍ನನ್ನು ಸ್ವಾಗತಿಸುತ್ತಾರೆ. ಮುಟ್ಟು ಕೊನೆಗೊಳ್ಳುವಿಕೆ ಪ್ರಕ್ರಿಯೆಯು ದಿಢೀರನೇ ಸಂಭವಿಸಿದರೆ (ಸ್ತನ ಕ್ಯಾನ್ಸರ್ ಚಿಕಿತ್ಸೆಯಿಂದ ಕಾರಣವಾದುದು) ಅನಾನುಕೂಲಕರ ಅಡ್ಡ ಪರಿಣಾಮ ಉಂಟಾಗುತ್ತದೆ ಮತ್ತು ಮಗುವನ್ನು ಹೊಂದುವ ಭರವಸೆಗಳು ನಶಿಸಿ ಹೋಗುತ್ತವೆ. ಅಲ್ಲದೇ, ಇದು ಸ್ತನ ಕ್ಯಾನ್ಸರ್‍ಗಿಂತ ಕೆಟ್ಟದಾದ ರೋಗದಂತೆ ಭಾಸವಾಗುತ್ತದೆ. ಇಂತಹ ಮೆನೊಪಾಸ್ ಪರಿವರ್ತನೆಗಳು ದಿನನಿತ್ಯದ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತದೆ. ಮನೊಪಾಸ್ ಮಹಿಳೆಯ ಮೇಲೆ ಈ ರೀತಿ ಪ್ರಭಾವ ಬೀರುತ್ತದೆ.
ರಾತ್ರಿ ಬೆವರುವಿಕೆಯಂಥ ವ್ಯಾಸ್ಕುಲರ್ ಅಸ್ಥಿರತೆಗೆ ಕಾರಣವಾಗಬಹುದು ಮತ್ತು ಕೆಲವು ಮಹಿಳೆಯರಲ್ಲಿ ತಣ್ಣನೆಯ ಜ್ವಲನ ಮತ್ತು ಮೈಗ್ರೇನ್‍ನಂಥ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.
ಬಿಸಿ ಜ್ವಲನ ಅಥವಾ ಬಿಸಿ ಚಿಮ್ಮುವಿಕೆ : ನಿಮಗೆ ಯಾವುದಾದರು ಒಂದು ಸಮಸ್ಯೆ ಇದ್ದರೆ, ಅದು ಸಹಜವಾದುದು. ಆದರೆ ಕ್ಷಿಪ್ರ ಹೃದಯ ಬಡಿತ ಮತ್ತು ಬೆವರುವಿಕೆ, ತಲೆಸುತ್ತುವಿಕೆ, ನಿತ್ರಾಣ, ಮಂಪರು, ಉದ್ವೇಗ, ತಲೆನೋವು, ಸುಸ್ತು ಅಥವಾ ಉಸಿರುಗಟ್ಟಿದ ಅನುಭವದೊಂದಿಗೆ ಮುಖ ಮತ್ತು ದೇಹದಲ್ಲಿ ದಿಢೀರನೆ ತೀವ್ರವಾದ ಬಿಸಿ ಶಾಖ ಉಂಟಾಗುತ್ತದೆ. ಕೆಲವು ಮಹಿಳೆಯರಿಗೆ ‘ಔರಾ’ ಎಂಬ ಸಮಸ್ಯೆಯ ಅನುಭವವಾಗುತ್ತದೆ. ಬಿಸಿ ಜ್ವಲನಕ್ಕೂ ಮುನ್ನ ಏನೋ ಒಂದು ರೀತಿಯ ಅನಾನುಕೂಲತೆ ಕಾಣಿಸಿಕೊಂಡು ಒಂದು ಸಮಸ್ಯೆ ಎದುರಾಗುತ್ತದೆ ಎಂಬುದು ಗೊತ್ತಾಗುತ್ತದೆ. ಇಸ್ಟ್ರೋಜೆನ್ ಹಾರ್ಮೋನುಗಳ ಕುಂಠಿತ ಮಟ್ಟದಿಂದಾಗಿ ನಿಮ್ಮ ಹಸಿವು, ನಿದ್ರಾ ಚಕ್ರ, ಲೈಂಗಿಕ ಹಾರ್ಮೋನು ಮತ್ತು ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಕಾರಣವಾಗುವ ಮೆದುಳಿನ ಮೇಲೆ ನೇರ ದುಷ್ಪರಿಣಾಮ ಉಂಟು ಮಾಡುತ್ತದೆ. ಈ ಶಾಖ ಬಿಡುಗಡೆ ವಿಧಾನವು ಬೇಸಿಗೆಯಲ್ಲಿ ನಿಮ್ಮ ದೇಹ ಹೆಚ್ಚು ಉಷ್ಣಾಂಶಕ್ಕೆ ಒಳಪಡುವ ರೀತಿಯಲ್ಲಿ ಇರುತ್ತದೆ. ಆದರೆ, ಇಸ್ಟ್ರೋಜೆನ್ ಕುಂಠಿತವಾಗುವ ಬದಲು ಈ ಪ್ರಕ್ರಿಯೆ ಉಂಟಾದರೆ ಮೆದುಳಿನಲ್ಲಿ ಉಂಟಾಗುವ ಗೊಂದಲ ಪ್ರತಿಕ್ರಿಯೆಯಿಂದ ನೀವು ತುಂಬಾ ಅಸ್ವಸ್ಥಗೊಳ್ಳಬಹುದು. ಶಾಖ ಜ್ವಲನದ ವೇಳೆ ಕೆಲವು ಮಹಿಳೆಯರ ಚರ್ಮ ತಾಪಮಾನ ಆರು ಡಿಗ್ರಿ ಸೆಂಟಿಗ್ರೇಡ್‍ವರೆಗೆ ಹೆಚ್ಚಾಗಬಹುದು. ಇದು ಆಗದಿದ್ದರೆ, ನಿಮ್ಮ ದೇಹ ತಣ್ಣಗಾಗಿ ನೀವು ತುಂಬಾ ಕಿರಿಕಿರಿ ಅನುಭವಿಸುತ್ತೀರಿ. ಕಚೇರಿಯಲ್ಲಿದ್ದಾಗ ಅಥವಾ ಅಡುಗೆ ಮಾಡುವಾಗ ಅಥವಾ ಮಧ್ಯರಾತ್ರಿ ವೇಳೆ ನೀವು ವಿಪರೀತ ಬೆವರಿನಿಂದ ಒದ್ದೆಯಾಗುತ್ತೀರಿ. ಬಹುತೇಕ ಮಹಿಳೆಯರಿಗೆ ಅಲ್ಪಪ್ರಮಾಣದಿಂದ ಸಾಧಾರಣ ಪ್ರಮಾಣದ ಶಾಖ ಜ್ವಲನವಾಗುತ್ತದೆ. ಆದರೆ, ಶೇಕಡ 10 ರಿಂದ 15 ಮಹಿಳೆಯರಿಗೆ ತೀವ್ರ ಸ್ವರೂಪದ ಶಾಖ ಜ್ವಲನ ಅಥವಾ ಬಿಸಿ ಚಿಮ್ಮುವಿಕೆಯ ಅನುಭವವಾಗುತ್ತದೆ. ಇಂಥ ಸಂದರ್ಭದಲ್ಲಿ ಅವರಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ.
ಅಸ್ಥಿಪಂಜರ ಸಮಸ್ಯೆಗಳು : ಮೆನೊಪಾಸ್‍ನಲ್ಲಿ ಅಸ್ಥಿಪಂಜರ ಸಮಸ್ಯಗಳು ಸಾಮಾನ್ಯ. ಅಂದರೆ ಕೀಲುನೋವು, ಮಾಂಸಖಂಡ ನೋವು, ಬೆನ್ನುನೋವು ಕಂಡುಬರುತ್ತದೆ.
ಚರ್ಮ ಸಮಸ್ಯೆಗಳು : ಬ್ರೆಸ್ಟ್ ಅಟ್ರೊಫಿಯಂತೆ, ಚರ್ಮ ತೆಳ್ಳಗಾಗುವಿಕೆ ಮತ್ತು ಒಣಗುವಿಕೆ, ಚರ್ಮದ ಸ್ಥಿತಿಸ್ಥಾಪಕ ಶಕ್ತಿ ಕುಂಠಿತ, ಪಿನ್ ಮತ್ತು ಸೂಜಿಯಲ್ಲಿ ಚುಚ್ಚಿದ ಅನುಭವ, ಚರ್ಮದ ಮೇಲೆ ಮತ್ತು ಕೆಳಗೆ ಇರುವೆಗಳು ತೆವಳುವಿಕೆ.
ಮಾನಸಿಕ ಸಮಸ್ಯೆಗಳು : ಚಿಂತನೆಯ ಅಡಚಣೆಗಳು, ಭಾವಾನಾತ್ಮಕ ಅಡಚಣೆಗಳು, ಕಿರಿಕಿರಿ ಉಂಟಾಗುವಿಕೆ, ಜ್ಞಾಪಕಶಕ್ತಿ ಕಳೆದುಕೊಳ್ಳುವಿಕೆ, ಏಕಾಗ್ರತೆ ಕೊರತೆ, ಉದ್ವೇಗ, ಹತಾಶೆ, ನಿದ್ರಾಭಂಗ, ನಿದ್ರಾಹೀನತೆ, ಅಲ್ಪನಿದ್ರೆ, ನಿತ್ರಾಣ, ನಿದ್ರಾನಾಶ ಸಾಮಾನ್ಯವಾಗಿ ಕಾಡುತ್ತದೆ.
ದು:ಖ, ಖಿನ್ನತೆ, ಹತಾಶೆ ಮತ್ತು ಮಾನಸಿಕ ಕ್ಷೋಭೆ
ದೀರ್ಘಕಾಲೀನ ವಿಷಯಗಳು : ಇದು ಆಸ್ಟಿಯೋಪೊರೆಸಿಸ್, ಹೃದ್ರೋಗ ಮತ್ತು ವ್ಯಾಸ್ಕುಲರ್ ರೋಗ ನಿರ್ವಹಣೆ ಹಾಗೂ ಪೂರ್ಣ ಮತ್ತು ಸಕಾರಣಿಕ ಸಂತೋಷದ ಜೀವನವನ್ನು ಹೇಗೆ ಬದುಕುವುದು ಎಂಬುದನ್ನು ಒಳಗೊಂಡಿರುತ್ತದೆ.
ಲೈಂಗಿಕ ಸಮಸ್ಯೆಗಳು : ಯೋನಿ ಸಮಸ್ಯೆಗಳು, ಕೆರೆತ, ಕಡಿತ, ಒಣಗುವಿಕೆ, ಸ್ರಾವ, ನೀರು ಸೋರುವಿಕೆ, ತುರ್ತು ಮೂತ್ರ ವಿಸರ್ಜನೆ, ಮೂತ್ರ ಮಾಡುವ ಸ್ಥಳದಲ್ಲಿ ಉರಿ ಮತ್ತು ಸೋಂಕು,
ಯೋನಿ ಒಣಗುವಿಕೆ : ಮೆನೊಪಾಸ್ ನಂತರ ಇಸ್ಟ್ರೋಜೆನ್ ಹಾರ್ಮೋನಿನ ಗಣನೀಯ ಇಳಿಕೆ. ಯೋನಿಯ ಪದರ ತೆಳ್ಳಗಾಗುವಿಕೆ, ಹಿಗ್ಗುವ ಮತ್ತು ಕುಗ್ಗುವ ದುರ್ಬಲತೆ, ಲೂಬ್ರಿಕೆಂಟ್ ದ್ರವಗಳ ಉತ್ಪಾದನೆಯಲ್ಲಿ ಕುಂಠಿತ, ಲೈಂಗಿಕ ಕ್ರಿಯೆ, ಸಂಭೋಗಕ್ಕೆ ಅನಾನುಕೂಲವಾಗುವಿಕೆ ಅಥವಾ ನೋವುಕಾರಕವಾಗುವಿಕೆ
ಜೀವಕೋಶಗಳ ತಲುಪುವಿಕೆ ಸಮಸ್ಯೆ : ಕಡಿಮೆ ಜೈವಿಕ ಕ್ರಿಯೆ (ಮೆಟಬಾಲಿಸಮ್), ಲೈಂಗಿಕ ನಿರಾಸಕ್ತಿ, ಕಾಮಾಸಕ್ತಿ ಕೊರತೆ.
ಲೂಬ್ರಿಕೇಷನ್ : ಅನೇಕ ಮಹಿಳೆಯರು, ಯೋನಿ ಒಣಗುವಿಕೆ ಸಮಸ್ಯೆ ನಿವಾರಣೆಗೆ ಲೂಬ್ರಿಕೆಂಟ್‍ಗಳು ನೆರವಾಗುತ್ತದೆ ಎಂದು ನಂಬಿದ್ದಾರೆ.

ಶೀಲಿಂಧ್ರ ಸೋಂಕು ಅಥವಾ ಯೀಸ್ಟ್ ಇನ್‍ಫೆಕ್ಷನ್

ನಿಮಗೆ ಶೀಲಿಂಧ್ರ ಸೋಂಕು ಅಥವಾ ಯೀಸ್ಟ್ ಇನ್‍ಫೆಕ್ಷನ್ ಆಗಬಹುದು. ಇದು ಆಂಟಿಬಯೋಟಿಕ್ ಮತ್ತು ಸ್ಟಿರಾಯ್ಡ್‍ಗಳಿಂದ ಉಂಟಾಗುವ ಸಾಮಾನ್ಯ ಸಮಸ್ಯೆ. ಯೋನಿಯೊಳಗೆ ಇದು ಅನಾನುಕೂಲ ಉಂಟು ಮಾಡುತ್ತದೆ. ದಟ್ಟವಾದ ಬಿಳಿ ಸೆರಗು ಸ್ರಾವವಾಗಿ ದುರ್ನಾತದಿಂದ ಕೂಡಿರುತ್ತದೆ. ಆ ಭಾಗವನ್ನು ಮೃದುವಾಗಿ ಸ್ವಚ್ಚಗೊಳಿಸಬೇಕು. ಶೀಲಿಂಧ್ರ ಸೋಂಕು ನಿವಾರಣೆಗೆ ನೀವು ಯೀಸ್ಟ್ ವಿರುದ್ಧ ಹೋರಾಡುವ ಕ್ರೀಮ್ ಅಥವಾ ಮಾತ್ರೆಗಳನ್ನು ಬಳಸಬಹುದು. ಆಂಟಿಯೀಸ್ಟ್ ಮತ್ತು ಸ್ಟಿರಾಯ್ಡ್ ಔಷಧಿಗಳು ಯೋನಿಯಲ್ಲಿನ ಉರಿ ಸಮಸ್ಯೆ ಹೋಗಲಾಡಿಸಲು ನೆರವಾಗುತ್ತದೆ ಮತ್ತು ಸೋಂಕು ನಿವಾರಣೆಗೆ ಸಹಕಾರಿಯಾಗುತ್ತದೆ.
ಸ್ರಾವ : ಮೆನೊಪಾಸ್ ಜೊತೆ ಯೋನಿಯಿಂದ ಕಿರಿಕಿರಿ ಉಂಟು ಮಾಡುವ ಸ್ರಾವ ಸಹ ಉಂಟಾಗಬಹುದು. ಈ ಎಲ್ಲ ಉಪಶಮನಗಳನ್ನು ಉಪಯೋಗಿಸಿದ ನಂತರವೂ ನಿಮ್ಮ ಯೋನಿ ಸಮಸ್ಯೆಯಲ್ಲಿ ಯಾವುದೇ ಸುಧಾರಣೆಗಳು ಕಂಡುಬರದಿದ್ದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು.
ಇತರ ಸಮಸ್ಯೆಗಳು : ತೂಕ ಹೆಚ್ಚಳ, ಶಕ್ತಿ ನಷ್ಟ ಹಾಗೂ ಚರ್ಮ ಮತ್ತು ಕೂದಲು ಬದಲಾಗುವಿಕೆ, ಕೀಲು ಮತ್ತು ಮಾಂಸಖಂಡಗಳ ಬೇನೆ, ಅಲರ್ಜಿ ಲಕ್ಷಣಗಳು, ಸ್ತನ ಮೃದುವಾಗುವಿಕೆ, ದೀರ್ಘಕಾಲೀನ ಖಿನ್ನತೆ ಮತ್ತು ಬೆಳಗಿನ ಅಸೌಖ್ಯತೆ, ಕೈ ಅಥವಾ ಕಾಲಿನಲ್ಲಿ ತಣ್ಣನೆಯ ಅಥವಾ ಚುಚ್ಚಿದ ಅನುಭವ, ಸಿಹಿ ತಿನಿಸುಗಳು, ಕೆಫೇನ್, ಕಾರ್ಬೋಹೈಡ್ರೆಟ್ ಆಹಾರಗಳತ್ತ ಒಲವು, ಅಸ್ಥಿರವಾದ ಬ್ಲಡ್ ಷುಗರ್ ಮಟ್ಟ, ಒಣ ತೆಳು ಅಥವಾ ಸುಕ್ಕುಗಟ್ಟಿದ ಚರ್ಮ, ಮುಖದಲ್ಲಿ ಕೂದಲು ಬೆಳವಣಿಗೆ, ಸ್ತನಗಳ ವಿಕಾರತೆ, ಕೂದಲು ಉದುರುವಿಕೆ, ಕೂದಲು ತೆಳ್ಳಗಾಗುವಿಕೆ, ತಲೆನೋವು, ಹೃದಯದ ಕಂಪನ ಅಧಿಕ, ಅಲ್ಪಸ್ರಾವ, ಕ್ರಮಬದ್ಧವಲ್ಲದ ಋತು ಅವಧಿ, ಕಿರಿಕಿರಿ, ಒತ್ತಡ ನಿಭಾಯಿಸುವ ಅಸಮರ್ಥನೆ, ಏಕಾಗ್ರತೆ ಕೊರತೆ, ವಿಚಿತ್ರ ಆಲೋಚನೆ, ಜ್ಞಾಪಕ ಶಕ್ತಿ ನಷ್ಟ, ಕಾಲು ಸೆಳೆತ, ಪಿಎಂಎಸ್ ಮತ್ತು ಋತುಸ್ರಾವ ಸೆಳೆತ, ರಾತ್ರಿ ಬೆವರುವಿಕೆ, ಎಲುಬು ಟೊಳ್ಳಾಗುವಿಕೆ, ಕಿವಿಯಲ್ಲಿ ಶಬ್ಧ, ನಿದ್ರಾಭಂಗ, ನಿದ್ರಾಹೀನತೆ, ರಕ್ತಸ್ರಾವ, ಲಘು ಸ್ರಾವ, ನೀರು ಸೇರಿಕೊಳ್ಳುವಿಕೆ, ದಿಢೀರ್ ತೂಕ ಹೆಚ್ಚಳ, ನಿತಂಬ, ಸೊಂಟ, ಹೊಟ್ಟೆ ಭಾಗ ದಪ್ಪಗಾಗುವಿಕೆ ಇತ್ಯಾದಿಯಂಥ ಮೆನೋಪಾಸ್ ಲಕ್ಷಣಗಳು ಗೋಚರಿಸಬಹುದು ಅಥವಾ ಇವುಗಳಲ್ಲಿ ಬಹುತೇಕ ಕಾಣಿಸಿಕೊಳ್ಳಬಹುದು.
ಈ ಸಮಸ್ಯೆಗಳನ್ನು ಹೋಗಲಾಡಿಸಲು ಅನೇಕ ಚಿಕಿತ್ಸೆಗಳಿವೆ. ಆದಾಗ್ಯೂ ಅಡ್ಡಪರಿಣಾಮ ಮತ್ತು ದುಷ್ಪರಿಣಾಮ ಉಂಟಾಗುವ ಕಾರಣ, ಮಹಿಳೆ ಮತ್ತು ವೈದ್ಯರು ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಮಹಿಳೆಯ ಸ್ಥಿತಿ, ಆಕೆ ಎದುರಿಸುತ್ತಿರುವ ಸಮಸ್ಯೆ ಮತ್ತು ಆಕೆಗೆ ಸಂಬಂಧಿಸಿದ ಗಂಡಾಂತರ ಇವೆಲ್ಲವನ್ನೂ ಚಿಕಿತ್ಸೆಗೆ ಮುನ್ನವೇ ನಿರ್ಧರಿಸಬೇಕು.

ಡಾ. ಬಿ. ರಮೇಶ್
ಆಲ್ಟಿಯಸ್ ಹಾಸ್ಪಿಟಲ್
#915, 1ನೇ ಮಹಡಿಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರಬೆಂಗಳೂರು-560098. Ph:o80-28606789/9663311128
ಶಾಖೆ: ರಾಜಾಜಿನಗರ:080-2315873/ 9900031842
E-mail : endoram2006@yahoo.co.in   /altiushospital@yahoo.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!