ಮೆನೊಪಾಸ್-ಒಂದು ರೋಗವಲ್ಲ, ಸ್ವಾಭಾವಿಕ ಕ್ರಿಯೆ

ಮೆನೊಪಾಸ್ ಅಥವಾ ಮುಟ್ಟು ಕೊನೆಗೊಳ್ಳುವಿಕೆಯು ಮಹಿಳೆಯರ ಜೀವನದ ನೈಸರ್ಗಿಕ ಕ್ರಿಯೆ. ಇದು ಕಾಯಿಲೆಯಲ್ಲ. ಹೆಂಗಸರಿಗೆ ವಯಸ್ಸಾದಂತೆಲ್ಲ ಪುನರ್ ಉತ್ಪತ್ತಿ ಚಕ್ರ ಮತ್ತು ವಿಧಾನ ನಿರೀಕ್ಷೆಯಂತೆ ನಿಧಾನವಾಗುತ್ತಾ ಅಂತಿಮವಾಗಿ ಮುಟ್ಟು ಕೊನೆಗೊಳ್ಳುತ್ತದೆ. ಇದು ಸಾಮಾನ್ಯ ಸಂಗತಿ. ಅನಾರೋಗ್ಯದ ಲಕ್ಷಣವಲ್ಲ. ಹಾರ್ಮೋನುಗಳ ಅಸಮತೋಲನ ಅಥವಾ ದೋಷಪೂರಿತ ಆಹಾರ ಸೇವನೆ ಅಭ್ಯಾಸಗಳು, ಒತ್ತಡ, ಸ್ಥೂಲಕಾಯ ಮತ್ತು ಇತರ ಅಂಶಗಳಿಂದ ದೇಹಕ್ಕೆ ಹಾನಿಯಾಗುವಿಕೆಯ ಸೂಚನೆಗಳು ಮೆನೊಪಾಸ್‍ನ ಲಕ್ಷಣಗಳಾಗಿವೆ.
ಮೆನೊಪಾಸ್‍ನನ್ನು ರಜೋ ನಿವೃತ್ತಿ ಎಂದು ಕರೆಯುತ್ತಾರೆ. ಮುಟ್ಟು ತೀರುವಿಕೆ ಅಥವಾ ಮಹಿಳೆಯರ ಮುಟ್ಟು ಯಾ ರಜಸ್ಸು ಕಡೆಯದಾಗಿ ನಿಂತುಹೋಗುತ್ತದೆ ಎಂಬುದು ಇದರ ಅರ್ಥ. ಹೆಂಗಸರಲ್ಲಿ ಇದನ್ನು ಮುಟ್ಟು ನಿಲ್ಲುವ ಕಾಲ ಎಂದು ಬಣ್ಣಿಸಲಾಗುತ್ತದೆ. ಮೆನೊಪಾಸ್ ಪದವನ್ನು ಮಹಿಳೆಯರ ಪುನರ್ ಉತ್ಪತ್ತಿ ಬದಲಾವಣೆ ಎಂದು ಮೂಲತ: ಬಣ್ಣಿಸಲಾಗುತ್ತದೆ. ಅಂದರೆ, ಋತುಸ್ರಾವ ಅಥವಾ ಮುಟ್ಟು ಶಾಶ್ವತವಾಗಿ ನಿಂತು ಹೋಗುವುದನ್ನು ಸಾಂಪ್ರದಾಯಿಕವಾಗಿ ಸೂಚಿಸುವ ಫಲವತ್ತತೆಯ ಅಂತ್ಯವೇ ಮೆನೊಪಾಸ್. ಮೆನೊಪಾಸ್ ಅಂದರೆ ಮಾಸಿಕ ಚಕ್ರದ ಕೊನೆ ಎಂದರ್ಥ.
ಮಹಿಳೆಯರಲ್ಲಿ ಮುಟ್ಟು ಕೊನೆಗೊಳ್ಳುವಿಕೆಯು ಮಧ್ಯ ವಯಸ್ಸಿನಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ ಸಾಮಾನ್ಯವಾಗಿರುತ್ತದೆ. ಇದು ಸ್ತ್ರೀಯರ ಫಲವತ್ತತೆಯ ಹಂತ ಕೊನೆಗೊಂಡಿದೆ ಎಂಬುದನ್ನು ಸೂಚಿಸುತ್ತದೆ. ಮಹಿಳೆಯರ ಜೀವನದಲ್ಲಿ ಮನೊಪಾಸ್ ನೈಸರ್ಗಿಕ ಕ್ರಿಯೆ ಒಂದು ಘಟ್ಟ. ಮೆನೊಪಾಸ್, ಮೆನಾರ್ಕೆಯ ವಿರುದ್ಧದ ಪದ. ಮೆನಾರ್ಕೆ ಅಂದರೆ ಋತುಚಕ್ರ ಆರಂಭ ಎಂದರ್ಥ. ಮೆನೊಪಾಸ್ ಅಂದರೆ ಋತುಚಕ್ರ ಕೊನೆಗೊಳ್ಳುವಿಕೆ ಎಂಬ ಅರ್ಥವನ್ನು ನೀಡುತ್ತದೆ.
ಅದಾಗ್ಯೂ, ಮಹಿಳೆಯರಲ್ಲಿನ ಮಟ್ಟು ಕೊನೆಗೊಳ್ಳುವಿಕೆಯನ್ನು ಮಾಸಿಕ ಅವಧಿಯು ಶಾಶ್ವತವಾಗಿ ಕೊನೆಗೊಳ್ಳುವಿಕೆ ಎಂದು ತೃಪ್ತಿಕರವಾಗಿ ಬಣ್ಣಿಸಲು ಸಾಧ್ಯವಿಲ್ಲ. ಏಕೆಂದರೆ ಮಹಿಳೆಯರ ಜೀವನದ ಸಾಮಾನ್ಯ ಪ್ರಕ್ರಿಯೆಗಿಂತ, ಗರ್ಭಕೋಶಕ್ಕೆ ಏನಾಗಿದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಅಂಡಾಣುಗಳಿಗೆ ಏನಾಗಿದೆ ಎಂಬುದು ಮಹತ್ವದ ಅಂಶವಾಗುತ್ತದೆ.
ವೈದ್ಯಕೀಯ ಕಾರಣಗಳಿಗಾಗಿ, ಯುವತಿಯಲ್ಲಿನ ಗರ್ಭಕೋಶವನ್ನು ಶಸ್ತ್ರಚಿಕಿತ್ಸೆ ಮೂಲಕ ಕೆಲವೊಮ್ಮೆ ತೆಗೆದು ಹಾಕುವುದರಿಂದ ಆಕೆಯ ಋತುಚಕ್ರ ಶಾಶ್ವತವಾಗಿ ನಿಂತು ಹೋಗುತ್ತದೆ ಮತ್ತು ಆಕೆ ತಾಂತ್ರಿಕವಾಗಿ ಬಂಜೆತನದ ಸಮಸ್ಯೆ ಎದುರಿಸುತ್ತಾಳೆ. ಆದರೆ, ಎಲ್ಲಿಯ ತನಕ ಆಕೆಯ ಅಂಡಾಣುಗಳಲ್ಲಿ ಕನಿಷ್ಠ ಒಂದಾದರೂ ಕಾರ್ಯನಿರ್ವಹಿಸುತ್ತದೆಯೋ ಅಲ್ಲಿಯವರೆಗೆ ಮಹಿಳೆ ಮೆನೊಪಾಸ್ ಸ್ಥಿತಿ ತಲುಪುವುದಿಲ್ಲ. ಗರ್ಭಕೋಶ ಇಲ್ಲದಿದ್ದರೂ, ಅಂಡಾಣು ಮತ್ತು ಪುನರ್ ಉತ್ಪತ್ತಿ ಹಾರ್ಮೋನುಗಳ ಬಿಡುಗಡೆ ಕ್ರಮವು ಮುಟ್ಟು ಕೊನೆಗೊಳ್ಳುವಿಕೆ ಪ್ರಕ್ರಿಯೆ ತನಕ ಚಕ್ರವು ಮುಂದುವರಿಯುತ್ತದೆ. ಮಹಿಳೆಯ ಅಂಡಾಶಯ ತೆಗೆದು ಹಾಕಿದ ಸನ್ನಿವೇಶದಲ್ಲಿ, ಗರ್ಭಕೋಶವನ್ನು ಮುಟ್ಟದೇ ಹಾಗೇ ಬಿಟ್ಟರೂ, ಆ ಮಹಿಳೆ ತಕ್ಷಣವೇ ಸರ್ಜಿಕಲ್ ಮೆನೊಪಾಸ್ ಸ್ಥಿತಿ ತಲುಪುತ್ತಾಳೆ.
ವೈದ್ಯಕೀಯವಾಗಿ ಹೇಳುವುದಾದರೆ, ಮೆನೋಪಸ್ ಒಂದು ದಿನಾಂಕ. ಗರ್ಭಕೋಶ ಹೊಂದಿರುವ ಸ್ತ್ರೀಯರಲ್ಲಿ ಇದನ್ನು ವ್ಯಾಖ್ಯಾನಿಸುವುದಾದರೆ, ಮಹಿಳೆಯ ಅಂತಿಮ ಋತುಚಕ್ರದ ಅವಧಿ ಮುಗಿದ ಮರುದಿನ ಎಂಬುದಾಗಿದೆ. ಸಾಮಾನ್ಯವಗಿ 45 ರಿಂದ 55 ವರ್ಷಗಳ ವಯೋಮಾನದ ಶ್ರೇಣಿ ನಡುವೆ ಮುಟ್ಟು ಕೊನೆಗೊಳ್ಳುವಿಕೆ ಪ್ರಕ್ರಿಯೆ ನಡೆಯುತ್ತದೆ. ಭೌಗೋಳಿಕ ಸ್ಥಳಗಳಿಗೆ ಅನುಗುಣವಾಗಿ ಮೆನೊಪಾಸ್ ಸರಾಸರಿ ವರ್ಷವೂ ವ್ಯತ್ಯಯಗೊಳ್ಳುತ್ತದೆ.
ತೀರಾ ಅಪರೂಪವಾಗಿ ಅಂಡಾಣುಗಳು ತುಂಬಾ ಚಿಕ್ಕವಯಸ್ಸಿನಲ್ಲೇ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಇದು ಋತುಮತಿಯಾದ ವಯಸ್ಸಿನಿಂದ 40 ವರ್ಷದ ನಡುವೆ ಯಾವಾಗ ಬೇಕಾದರೂ ಉಂಟಾಗಬಹುದು. ಇದನ್ನು ಪೂರ್ವ ಅಂಡಾಣು ವಿಫಲತೆ (ಪ್ರಿಮೇಚೂರ್ ಒವರಿಯನ್ ಫೆಲ್ಯೂರ್-ಪಿಒಎಫ್) ಎನ್ನುತ್ತಾರೆ. ಇದಕ್ಕೆ ವಯೋಮಾನದ ಸಾಮಾನ್ಯ ಪರಿಣಾಮಗಳು ಕಾರಣ ಎಂದು ಪರಿಗಣಿಸಬಾರದು. ಪೂರ್ವ ಅಂಡಾಣು ವಿಫಲತೆಗೆ ಆಟೋ ಇಮ್ಯೂನೋ ದೋಷಗಳು, ಥೈರಾಯ್ಡ್ ರೋಗ, ಮಧುಮೇಹ, ಕಿಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆ ಸೇರಿದಂತೆ ಕೆಲವು ಕಾರಣಗಳನ್ನು ಗುರುತಿಸಲಾಗಿದೆ. ಆದಾಗ್ಯೂ, ದಿಢೀರನೇ ಕಾಣಿಸಿಕೊಳ್ಳುವ ಬಹುತೇಕ ಪ್ರಕರಣಗಳಿಗೆ ಕಾರಣ ತಿಳಿದಿಲ್ಲ. ಧೂಮಪಾನ ಮಾಡದವರಿಗಿಂತ ಸಿಗರೇಟು ಸೇದುವ ಮಹಿಳೆಯರು ಬೇಗ ಮೆನೊಪಾಸ್‍ಗೆ ಒಳಗಾಗುತ್ತಾರೆ.
ಇದಕ್ಕೆ ಕಾರಣವೇನು? ಹಲವಾರು ಕಾರಣಗಳಿವೆ. ಮಹಿಳೆಯರು ಪದೇ ಪದೇ ತಮ್ಮ ದೇಹಗಳ ಮೇಲೆ ಭಾರೀ ಬೇಡಿಕೆಗಳನ್ನು ಹೇರಿಕೊಳ್ಳುತ್ತಾರೆ. ಅದನ್ನು ನಿಭಾಯಿಸಲು ಸಾಧ್ಯವಿಲ್ಲದಂತ ಅಧಿಕ ಒತ್ತಡಗಳಿಗೆ ಒಳಗಾಗಿ ನಂತರ ಅದಕ್ಕೆ ಬೇಕಾದ ಆಧಾರಗಳ್ನು ನೀಡುವುದಿಲ್ಲ. ಮಹಿಳೆಯರಲ್ಲಿ ಒತ್ತಡಯುಕ್ತ ಬದುಕಿನ ಬೇಡಿಕೆಗಳು ಹೆಚ್ಚಾಗುತ್ತಿರುತ್ತದೆ. ಅವರಿಗೆ ಕುಟುಂಬದ ಜವಾಬ್ದಾರಿಗಳಿರುತ್ತವೆ. ಸಂಗಾತಿ ಅಥವಾ ಪತಿ ಜೊತೆಗೆ ಸಂಬಂಧ ಸರಿ ಇರದಿರಬಹುದು. ವಯಸ್ಸಾದ ಪೋಷಕರ ಹೊಣೆ ಇನ್ನಷ್ಟು ಹೊರೆಯಾಗಿಸುತ್ತದೆ. ಇವುಗಳೆಲ್ಲವೂ ಮತ್ತು ಇತರ ಹೊಣೆಗಳಿಂದಾಗಿ ಮಹಿಳೆಯರ ದೇಹ ಮತ್ತು ಆರೋಗ್ಯವು ತೊಂದರೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇದೇ ವೇಳೆ, ಮಹಿಳೆಯರ ಶರೀರವು ಅದು ನಿರ್ವಹಿಸಬೇಕಾದ ಕಾರ್ಯಗಳಿಗೆ ಅಗತ್ಯವಾದ ಆಧಾರವನ್ನು ಪಡೆಯುವುದಿಲ್ಲ. ದೋಷಪೂರಿತ ಆಹಾರ ಅಭ್ಯಾಸಗಳು, ದೈಹಿಕ ಚಟುವಟಿಕೆ ಕೊರತೆ, ಸ್ಥೂಲಕಾಯ, ಅಧಿಕ ಕಾಫಿ ಟೀ ಸೇವನೆಯಿಂದ ಕೆಫೇನ್ ಅಂಶದ ಹೆಚ್ಚಳ ಇತ್ಯಾದಿ ಆಕೆಯ ದೇಹದ ಬೇಡಿಕೆಗಳಿಗೆ ಸ್ಪಂದಿಸಿ ನೆರವಾಗುವ ಬದಲು ಸಮಸ್ಯೆಗಳನ್ನು ತಂದೊಡ್ಡುತ್ತವೆ. ದೇಹದ ಬೇಡಿಕೆಗಳು ಮತ್ತು ಆಧಾರ ನೀಡುವ ಅಂಶಗಳು ಅಸಮತೋಲನದಿಂದ ಮೆನೊಪಾಸ್ ಲಕ್ಷಣಗಳಿಗೆ ಎಡೆಮಾಡಿಕೊಡುತ್ತದೆ.

ಡಾ. ಬಿ. ರಮೇಶ್
ಆಲ್ಟಿಯಸ್ ಹಾಸ್ಪಿಟಲ್
#915, 1ನೇ ಮಹಡಿಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರಬೆಂಗಳೂರು-560098. Ph:o80-28606789/9663311128
ಶಾಖೆ: ರಾಜಾಜಿನಗರ:080-2315873/ 9900031842
E-mail : endoram2006@yahoo.co.in   /altiushospital@yahoo.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!