ಮಣಿಪಾಲ್​ ಆಸ್ಪತ್ರೆ ತೆಕ್ಕೆಗೆ ಕೊಲಂಬಿಯಾ ಏಷ್ಯಾ ; 2 ಸಾವಿರ ಕೋಟಿಗೆ ಮಾರಾಟ

ಮಣಿಪಾಲ್​ ಆಸ್ಪತ್ರೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಯನ್ನು 2000 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿರುವ ಕುರಿತು ಮಣಿಪಾಲ್​ ಆಸ್ಪತ್ರೆ ಪ್ರಕಟಣೆ ಹೊರಡಿಸಿದೆ. 

manipal-columbia-asia ಮಣಿಪಾಲ್​ ಆಸ್ಪತ್ರೆ ತೆಕ್ಕೆಗೆ ಕೊಲಂಬಿಯಾ ಏಷ್ಯಾ ; 2 ಸಾವಿರ ಕೋಟಿಗೆ ಮಾರಾಟ

ಬೆಂಗಳೂರು (ನ.2): ಸಿಲಿಕಾನ್​ ಸಿಟಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೆಸರುಗಳಿಸಿದ್ದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಶೇ.100ರಷ್ಟು ಶೇರ್​ ಅನ್ನು ಖರೀದಿಸುವ ಮೂಲಕ ಮಣಿಪಾಲ್​ ಆಸ್ಪತ್ರೆ ಖರೀದಿ ಮಾಡಿದೆ. ಈ ಕುರಿತು ಮಣಿಪಾಲ್​ ಆಸ್ಪತ್ರೆ ಪ್ರಕಟಣೆ ಹೊರಡಿಸಿದೆ. ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್​ ಪ್ರೈವೇಟ್​ ಲಿಮಿಟೆಡ್​ನ ಶೇ.100ರಷ್ಟು ಪಾಲನ್ನು ಸರಿ ಸುಮಾರು 2 ಸಾವಿರ ಕೋಟಿಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಈ ಸ್ವಾದೀನ ಪ್ರಕ್ರಿಯೆ ಭೌಗೋಳಿಕ ಮತ್ತು ಸಾಂಸ್ಕೃತಿಕವಾಗಿ ಗಮನಾರ್ಹವಾಗಿದೆ. ಅಲ್ಲದೇ ಇದರಿಂದ ಆಸ್ಪತ್ರೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದೆ. ಕೊಲಂಬಿಯಾ ಏಷ್ಯಾ ಆಸ್ಪತ್ರೆಯನ್ನು 2000 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿರುವ ಕುರಿತು ಆಸ್ಪತ್ರೆ ಮೂಲ ತಿಳಿಸಿದೆ.

ಎರಡು ಆಸ್ಪತ್ರೆಗಳು ಒಟ್ಟಿಗೆ ಸೇರಿ 15 ನಗರಗಳಲ್ಲಿ 27ಕ್ಕೂ ಹೆಚ್ಚು ಆಸ್ಪತ್ರೆಯನ್ನು ಮಣಿಪಾಲ್​ ಆಸ್ಪತ್ರೆ ಹೊಂದಿದೆ. 7,200 ಕ್ಕೂ ಹೆಚ್ಚು ಬೆಡ್​ ವ್ಯವಸ್ಥೆ ಹೊಂದಿದ್ದು, 4000ಕ್ಕೂ ಅಧಿಕ ವೈದ್ಯರು ಮತ್ತು 10 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಆಸ್ಪತ್ರೆ ವರ್ಷದಲ್ಲಿ ನಾಲ್ಕು ದಶಲಕ್ಷಕ್ಕೂ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಇನ್ನು ಆಸ್ಪತ್ರೆಯ ಮಾಲೀಕತ್ವದ ವರ್ಗಾವಣೆ ನಿಯಂತ್ರಕ ಅನುಮೋದನೆ ಬಳಿಕ ಪೂರ್ಣಗೊಳ್ಳಲಿದೆ.

ಮಣಿಪಾಲ್​ ಆಸ್ಪತ್ರೆ ತೆಕ್ಕೆಗೆ ಕೊಲಂಬಿಯಾ ಏಷ್ಯಾ ; 2 ಸಾವಿರ ಕೋಟಿಗೆ ಮಾರಾಟ
ಮಣಿಪಾಲ್​ ಎಜುಕೇಷನ್​ ಮತ್ತು ಮೆಡಿಕಲ್​ ಗ್ರೂಪ್​ ಮುಖ್ಯಸ್ಥ ಡಾ ರಂಜನ್​ ಪೈ

ಇನ್ನು ಈ ಕುರಿತು ಮಾತನಾಡಿರುವ ಮಣಿಪಾಲ್​ ಎಜುಕೇಷನ್​ ಮತ್ತು ಮೆಡಿಕಲ್​ ಗ್ರೂಪ್​ ಮುಖ್ಯಸ್ಥ ಡಾ ರಂಜನ್​ ಪೈ, ಕೊಲಂಬಿಯಾ ಏಷ್ಯಾ ಆಸ್ಪತ್ರೆಯನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುತ್ತಿದ್ದೇವೆ, ಕೊಲಂಬಿಯಾ ತನ್ನ ಗುಣಮಟ್ಟಣದ ಆರೋಗ್ಯ ಸೇವೆ ಮೂಲಕ ಗುರುತಿಸಿಕೊಂಡಿದೆ. ನಮ್ಮ ಮೌಲ್ಯಗಳೊಂದಿಗೆ ಸಂಸ್ಥೆ ಉತ್ತಮ ಹೊಂದಾಣಿಕೆ ಮಾಡಿಕೊಂಡಿದೆ. ರೋಗಿಗಳ ಸೇವೆಯನ್ನು ಬದ್ಧತೆಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಈ ಆಸ್ಪತ್ರೆ ಸೇರ್ಪಡನೆ ಮೂಲಕ ದೇಶದಲ್ಲಿ ಆರೋಗ್ಯ ಸೇವೆ ನೀಡುತ್ತಿರುವ ದೊಡ್ಡ ಮತ್ತು ಬಲಶಾಲು ಹಾಗೂ ಅನನ್ಯ ಸ್ಥಾನವನ್ನು ನಾವು ಹೊಂದಿದ್ದೇವೆ ಎಂದರು.

2005ರಲ್ಲಿ ಹೆಬ್ಬಾಳದಲ್ಲಿ ಮೊದಲ ಬಾರಿ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಆರಂಭಿಸಿತು. ಪ್ರಸ್ತುತ ಬೆಂಗಳೂರು, ಮೈಸೂರು, ಕೊಲ್ಕತ್ತಾ, ಗುರುಗ್ರಾಮ್​, ಗಾಜಿಯಾಬಾದ್, ಪಟಿಯಾಲ ಮತ್ತು ಪುಣೆ ಸೇರಿದಂತೆ ದೇಶಾದ್ಯಂತ 11 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!