ಒತ್ತಡ – ಆಧುನಿಕ ಜೀವನದ ದುರಂತ

ಒತ್ತಡ ಆಧುನಿಕ ಜೀವನಕ್ಕೆ ಒಂದು ದುರಂತವಾಗಿ ಪರಿಣಮಿಸಿದೆ. ಇದು ಸಾಮಾಜಿಕ ಸ್ವಾಸ್ಥ್ಯಕ್ಕೂ ಸವಾಲಾಗುತ್ತಿದೆ. 
ಹಾಗಾಗಿ ಒತ್ತಡವೂ ಇಂದು ಜಗತ್ತಿನಲ್ಲಿ ಚರ್ಚೆಯ ಒಂದು ಮುಖ್ಯ ವಿಷಯವಾಗಿ ಗಮನಸೆಳೆಯುತ್ತಿದೆ. ಜಾಗತೀಕರಣದ ಇಂದಿನ ದಿನಗಳಲ್ಲಿ ಒತ್ತಡದ ನಿರ್ವಹಣೆಯ ಕೌಶಲ ಶಿಕ್ಷಣದಲ್ಲೂ ಪ್ರಾಶಸ್ತ್ಯ ಪಡೆಯುತ್ತಿದೆ.

ಹೆಚ್ಚುತ್ತಿರುವ ಒತ್ತಡ ಆಧುನಿಕ ಜೀವನಕ್ಕೆ ಒಂದು ದುರಂತವಾಗಿ ಪರಿಣಮಿಸಿದೆ. ಇದು ಸಾಮಾಜಿಕ ಸ್ವಾಸ್ಥ್ಯಕ್ಕೂ ಸವಾಲಾಗುತ್ತಿದೆ. ಕಚೇರಿಯ ಕೆಲಸದ ವಾತಾವರಣದಲ್ಲಿ ಪ್ರಾಮಾಣಿಕವಾಗಿ ದುಡಿಯುವ ನೌಕರರು ಮತ್ತು ಉದ್ಯೋಗಿಗಳು ಇನ್ನೊಂದು ರೀತಿಯಲ್ಲಿ ಒತ್ತಡದ ಬದುಕಿಗೆ ಒಳಗಾಗುತ್ತಿದ್ದಾರೆ. ಎಷ್ಟೋ ಕಚೇರಿಗಳಲ್ಲಿ ಕೆಲಸ ಮಾಡದೇ ಕಾಡುಹರಟೆಯಲ್ಲಿ ಕಾಲಹರಣ ಮಾಡುತ್ತಾ ಬೇರೆಯವರಿಗೂ ಉಪಟಳ ನೀಡುವ ಮಂದಿಯೂ ನಮ್ಮ ನಡುವೆ ಇದ್ದಾರೆ. ಹಾಗೆಯೇ ಎಷ್ಟೇ ಪ್ರಾಮಾಣಿಕವಾಗಿ ದುಡಿಯಲಿ, ಅವರ ಕೆಲಸ-ಪ್ರತಿಭೆ-ಸಾಮಥ್ರ್ಯಗಳನ್ನೂ ಗುರುತಿಸುವವರೇ ಇಲ್ಲವಾಗುತ್ತಾರೆ. ಜಾಗತೀಕರಣದ ಇಂದಿನ ದಿನಗಳಲ್ಲಿ ಒತ್ತಡದ ನಿರ್ವಹಣೆಯ ಕೌಶಲ ಶಿಕ್ಷಣದಲ್ಲೂ ಪ್ರಾಶಸ್ತ್ಯ ಪಡೆಯುತ್ತಿದೆ. ಹಾಗಾಗಿ ಒತ್ತಡವೂ ಇಂದು ಜಗತ್ತಿನಲ್ಲಿ ಚರ್ಚೆಯ ಒಂದು ಮುಖ್ಯ ವಿಷಯವಾಗಿ ಗಮನಸೆಳೆಯುತ್ತಿದೆ.

ನಿವೇದನ್‍ಗೆ (ಹೆಸರು ಬದಲಾವಣೆ ಮಾಡಲಾಗಿದೆ) ಬೆಳಗಿನ ಜಾವ 3 ಗಂಟೆಯಲ್ಲಿ ಹಠಾತ್ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ನಂತರ ಅಲ್ಸರ್ (ಹೊಟ್ಟೆಯಲ್ಲಿ ಹುಣ್ಣು/ಜಠರ ಹುಣ್ಣು) ಇರುವುದು ಪತ್ತೆಯಾಯಿತು. ಜೊತೆಗೆ ಕೊಲೆಸ್ಟರಾಲ್ ಮಟ್ಟವೂ ಹೆಚ್ಚಾಗಿ ಅವರು ಡಯಾಬಿಟಿಸ್ ಮತ್ತು ಹೃದ್ರೋಗಗಳಿಗೂ ಒಳಗಾಗಿರುವ ಸಾಧ್ಯತೆ ನಿಶ್ಚಳವಾಗಿತ್ತು.

ಈ ಮೇಲಿನ ಸಮಸ್ಯೆಯನ್ನು ಓದಿದ ಕೂಡಲೇ ನಿವೇದನ್ ದುಶ್ಚಟಗಳು ಮತ್ತು ಆಧುನಿಕ ಜೀವನಶೈಲಿಯಿಂದ ರೋಗಪೀಡಿತರಾಗಿರಬಹುದು ಎಂಬ ಭಾವನೆ ಮೂಡುವುದು ಸಹಜ. ಆದರೆ, ನಿವೇದನ್ ಕೆಲಸ ಮಾಡುವ ಸ್ಥಳದಲ್ಲಿನ ದೀರ್ಘಕಾಲದ ಉದ್ಯೋಗ ಒತ್ತಡದಿಂದ ಈ ತೊಂದರೆಗೆ ಒಳಗಾಗಿದ್ದಾರೆಂಬುದು ವಾಸ್ತವ ಸಂಗತಿ. ಸಂಸ್ಥೆಗಳು, ಕುಟುಂಬ ಮತ್ತು ವೃತ್ತಿಪರರು, ಕೆಲಸ ಮಾಡುವ ಸ್ಥಳದಲ್ಲಿನ ಒತ್ತಡವನ್ನು ಗುರುತಿಸಿ ಅದನ್ನು ಸರಿಪಡಿಸುವ ಮಹತ್ವವನ್ನು ಅರಿಯುವಲ್ಲಿ ವಿಫಲರಾಗಿ ವಿಪರ್ಯಾಸದ ಸಂಗತಿ.

ಸಾಂಸ್ಥಿಕ ಒತ್ತಡಗಳಿಗೆ ಅನೇಕ ಕಾರಣಗಳಿವೆ. ಅಸುರಕ್ಷಿತ ಉದ್ಯೋಗ, ನೌಕರಿ ಭದ್ರತೆ ಇಲ್ಲದ ಸ್ಥಿತಿ, ಕೆಲಸದ ತೀವ್ರ ಒತ್ತಡ, ಮೇಲಧಿಕಾರಿಗಳ ಜೊತೆ ಉತ್ತಮ ಬಾಂಧವ್ಯದ ಕೊರತೆ, ತಾರತಮ್ಯ, ಹೊಸ ಆಡಳಿತ ಶೈಲಿ, ಆಡಳಿತ ಮಂಡಲಿಯ ದುರಾಡಳಿತ, ವೃತ್ತಿ ಮಾತ್ಸರ್ಯ, ದ್ವೇಷ-ಅಸೂಯೆ, ಮೂದಲಿಕೆ, ಕೆಲಸ ಮಾಡುವ ಸ್ಥಳದಲ್ಲಿನ ಒತ್ತಡ ಗುರುತಿಸುವಿಕೆಯಲ್ಲಿ ವಿಫಲ, ಸಾಧನಾಶ್ರೇಣಿ ಮತ್ತು ಪ್ರತಿಭೆಯನ್ನು ಗುರುತಿಸದಿರುವಿಕೆ-ಈ ಎಲ್ಲ ಅಂಶಗಳು ಉದ್ಯೋಗ ಒತ್ತಡಕ್ಕೆ ಕಾರಣವಾಗಬಹುದು.

ಉದ್ಯೋಗ ಒತ್ತಡದ ಲಕ್ಷಣಗಳು

  • ನಿದ್ರೆ ಬಾರದಿರುವಿಕೆ, ನಿದ್ರಾಹೀನತೆ, ನಿದ್ರಾಭಂಗ
  • ಆಹಾರ ಸೇರದಿರುವಿಕೆ
  • ಏಕಾಗ್ರತೆ ಕೊರತೆ
  • ನಡವಳಿಕೆ/ವರ್ತನೆ ದೋಷಗಳು
  • ಕೋಪ, ಸಿಟ್ಟು, ಸೆಡವು
  • ಭಾವೋದ್ವೇಗ ಹೊರಹೊಮ್ಮುವಿಕೆ
  • ಮಿತಿ ಮೀರಿದ ಮದ್ಯಪಾನ ಮತ್ತು ಧೂಮಪಾನ
  • ನಡುಕ, ಆತಂಕ, ಹೆದರಿಕೆ, ಭಯ

ಒತ್ತಡ ನಿವಾರಣೆಯಲ್ಲಿ ಸಂಸ್ಥೆಗಳ ಪಾತ್ರ

  • ಉದ್ಯೋಗಿಗಳ ಒಳಿತಿಗಾಗಿ ನೌಕಕರ ಬಗ್ಗೆ ಕಾಳಜಿ-ಕಳಕಳಿ ಇರುವ ಒಳ್ಳೆಯ ಆಡಳಿತ ಮಂಡಳಿ ಸ್ಥಾಪನೆ ಮೂಲಕ ಕೆಲಸ ನಿರ್ವಹಿಸುವ ಸ್ಥಳದಲ್ಲಿ ಉತ್ತಮ ಪರಿಸರ ಸೃಷ್ಟಿ.
  • ಪರಿಣಾಮಕಾರಿ ಔಪಚಾರಿಕ ಮತ್ತು ಅನೌಪಚಾರಿಕ ಸಂವಹನೆ
  • ಪಾತ್ರಗಳು ಮತ್ತು ಕಾರ್ಯಗಳ ಸೃಷ್ಟಿ ವ್ಯಾಖ್ಯಾನ.
  • ಕ್ರಿಯಾಶೀಲ ಆಡಳಿತ ಮಂಡಳಿಗೆ ನೆರವಾಗಲು ಪರಿಣಾಮಕಾರಿ ಮಾನವ ಸಂಪನ್ಮೂಲ ವ್ಯವಸ್ಥೆ.
  • ವಿವಾದ, ಬಿಕ್ಕಟ್ಟು, ಘರ್ಷಣೆ ಮತ್ತು ಕುಂದುಕೊರತೆಗಳ ಸಮರ್ಥ ಇತ್ಯರ್ಥ.
  • ಕೆಲಸ ಮಾಡುವ ಸ್ಥಳದಲ್ಲಿ ಸಾಮಾಜಿಕ ಮತ್ತು ಕ್ರೀಡಾ ಚಟುವಟಿಕೆಗೆ ಉತ್ತೇಜನ.

ಒತ್ತಡ ನಿರ್ವಹಣೆಯಲ್ಲಿ ವ್ಯಕ್ತಿ ಮತ್ತು ವೈಯಕ್ತಿಕ ಪಾತ್ರ

1. ನೀವು ಹಾಸ್ಯ ಪ್ರಜ್ಞೆಯುಳ್ಳವರಾಗಿರಿ: ಏಕೆಂದರೆ ಹೆಚ್ಚು ನಗುವುದರಿಂದ ಮೆದುಳಿನಲ್ಲಿ ಪ್ರಯೋಜನಕಾರಿ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಇದು ನಿಮ್ಮ ತನುಮನಗಳಿಗೆ ಹೊಸ ಉಲ್ಲಾಸ-ಉತ್ಸಾಹ ಮತ್ತು ಲವಲವಿಕೆ ನೀಡುತ್ತದೆ.

2. ಬಿರು ನಡಿಗೆ ಮತ್ತು ಪರಿಸರ ಬದಲಾವಣೆ : ಬಿರುಸಾಗಿ ನಡೆಯಿರಿ ಅಥವಾ ಉಸಿರಾಟ ಗಮನಿಸಲು ಆಳ ಉಸಿರಾಟ ಮಾಡಿ.

3. ನೀರು ಕುಡಿಯಿರಿ: ಹೆಚ್ಚಾಗಿ ನೀರು ಕುಡಿಯಿರಿ (ಕಾಫಿ, ಟೀ, ಇತರ ಪೇಯ, ತಂಪು ಪಾನೀಯ ಇತ್ಯಾದಿ ಬೇಡ). ನಿಮ್ಮ ಡೆಸ್ಕ್ ಅಥವಾ ಟೇಬಲ್ ಮೇಲೆ ನೀರು ಇದ್ದರೆ ನೀವು ಹೆಚ್ಚಿಗೆ ನೀರು ಕುಡಿಯುತ್ತೀರಿ. ಕಣ್ಣಿಗೆ ಕಾಣುವುದನ್ನು ಸೇವಿಸುವುದು ಮಾನವನ ಗುಣ. ನೀವು ಹೆಚ್ಚಿಗೆ ನೀರು ಕುಡಿದಷ್ಟೂ ದೇಹಕ್ಕೆ ಒಳ್ಳೆಯದು. ಹೆಚ್ಚು ನೀರು ಸೇವಿಸುವುದರಿಂದ ನೀವು ವಾಶ್ ರೂಮ್‍ಗೆ ಹೋಗಲು ವಿರಾಮ ಲಭಿಸಿದಂತಾಗುತ್ತದೆ.

4. ಅಳು ಮತ್ತು ಕಣ್ಣೀರಿಗೆ ಶಕ್ತಿ ಇದೆ : ವಿಶೇಷವಾಗಿ ಉದ್ಯೋಗದಲ್ಲಿರುವ ಮಹಿಳೆಯರು ಅತ್ತಾಗ, ಕಣ್ಣೀರ ಧಾರೆ ಹರಿದರೆ ಅದು ಒತ್ತಡ ಮಟ್ಟವನ್ನು ನಿಯಂತ್ರಿಸುವಲ್ಲಿ ತುಂಬಾ ಪರಿಣಾಮಕಾರಿ ಮತ್ತು ಪ್ರಯೋಜನಕಾರಿ. ವಿಜ್ಞಾನ ಏನೇ ಇರಲಿ, ಆಳುವುದರಿಂದ ಎಂಥ ಕಲ್ಲು ಹೃದಯದವರೂ ಕರಗುತ್ತಾರೆ. ಅಳುವುದರಿಂದ ಅನೇಕ ಮಂದಿ ತಮ್ಮ ಒತ್ತಡ ನೋವನ್ನು ಉಪಶಮನ ಮಾಡಿಕೊಳ್ಳುತ್ತಾರೆ.

5. ನಿದ್ರೆ : 6 ರಿಂದ 8 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಿ.

6. ಪೌಷ್ಠಿಕ ಆಹಾರ : ಪೋಷಕಾಂಶ ಅಧಿಕವಾಗಿರುವ ಹಣ್ಣು-ತರಕಾರಿ ಮತ್ತು ಹಣ್ಣಿನ ರಸದ ಆರೋಗ್ಯಕರ ಆಹಾರ ಸೇವಿಸಿ.

7. ಕುಟುಂಬದ ಜೊತೆ ಒಡನಾಟ : ನಿಮ್ಮ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಿರಿ. ಕೆಲಸ ಮತ್ತು ಕೆಲಸಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಕೆಲಕಾಲ ಬದಿಗಿಟ್ಟು ಕುಟುಂಬದ ಸದಸ್ಯರೊಂದಿಗೆ ಕೆಲಸ ಮಾಡುವ ಸ್ಥಳದಿಂದ ದೂರ ಹೋಗಿ ಬನ್ನಿ.

ಡಾ.ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ, ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್

#82, ಇಪಿಐಪಿ ವೈಟ್‍ಫೀಲ್ಡ್, ಬೆಂಗಳೂರು -560066, ಫೋನ್ : 080-28413381/2/3/4 www.vims.ac.in

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!