ಮಹಿಳೆಯರಿಗಾಗಿ ಜಾಗತಿಕ ಸೌಂದರ್ಯ ಬ್ರಾಂಡ್ – ಏವಾನ್‍ನಿಂದ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಅಭಿಯಾನ-2018ಕ್ಕೆ ಚಾಲನೆ

# ಪೇ ಅಟೆನ್ಷನ್(ಗಮನಹರಿಸಿ) ಅಭಿಯಾನ ಭಾರತದ 10 ನಗರಗಳಿಗೆ ತೆರಳಲಿದ್ದು ಸಮಯಕ್ಕೆ ಸರಿಯಾಗಿ ಮಹಿಳೆಯರಿಗೆ ನೆರವಾಗಲು ಮುಂದಾಗಿದೆ.

ಬೆಂಗಳೂರು, ಮೇ 2018: – ಮಹಿಳೆಯರ ಸೌಂದರ್ಯ ಬ್ರಾಂಡ್ ಆದ ಏವಾನ್ ಇಂಡಿಯಾ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಹೆಚ್ಚಿಸಲು ಭಾರತದ ಎಲ್ಲೆಡೆ ನಡೆಸಲಿರುವ ತನ್ನ ಅಭಿಯಾನದ 2ನೇ ಹಂತವನ್ನು ಆರಂಭಿಸಿದೆ. ಏವಾನ್ ಸ್ತನ ಕ್ಯಾನ್ಸರ್ ಜಾಗೃತಿಯ ಮೂಲ ಉದ್ದೇಶಕ್ಕೆ ಕಳೆದ 25 ವರ್ಷಗಳಿಗೂ ಹೆಚ್ಚಿನ ಕಾಲದಿಂದ ಬೆಂಬಲ ನೀಡುತ್ತಿದೆ. ಇದಕ್ಕೆ ವಿಶ್ವವ್ಯಾಪಿಯಾಗಿ ಆರು ದಶಲಕ್ಷ ಸ್ವತಂತ್ರ ಏವಾನ್ ಪ್ರತಿನಿಧಿಗಳ ಬೆಂಬಲ ಇದೆ.

ಹೆಚ್ಚು ವಿಸ್ತಾರವಾದ ಸಂಖ್ಯೆಯ ಜನರನ್ನು ತಲುಪಲು ಏವಾನ್ `#ಪೇ ಅಟೆನ್ಷನ್’(ಗಮನಹರಿಸಿ) ಎಂಬ ಹೆಸರಿನ ಅಭಿಯಾನವನ್ನು ಯೋಜಿಸಿದೆ. ಕಳೆದ ವರ್ಷ 5 ಲಕ್ಷ ಮಹಿಳೆಯರು ಸ್ತನ ಕ್ಯಾನ್ಸರ್‍ನಿಂದಾಗಿ ಜೀವ ಕಳೆದುಕೊಂಡಿದ್ದಾರೆ. ಸ್ತನ ಕ್ಯಾನ್ಸರ್ ಕುರಿತು ಜ್ಞಾನ ಮತ್ತು ಜಾಗೃತಿಯ ಕೊರತೆÀ ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಬಹಳಷ್ಟು ಮಹಿಳೆಯರಿಗೆ ರೋಗದ ಅಪಾಯ ಮತ್ತು ಲಕ್ಷಣಗಳ ಬಗ್ಗೆ ತಿಳಿದಿರುವುದಿಲ್ಲ. ಈ ರೋಗ ಕುರಿತು ಜಾಗೃತಿ ಹೆಚ್ಚಿಸುವ ಉದ್ದೇಶದ ಕಡೆಗೆ ಏವಾನ್ ಇಂಡಿಯಾ ಸತತವಾಗಿ ಕೆಲಸ ಮಾಡುತ್ತಿದೆ. ಕಳೆದ ವರ್ಷ ಈ ಅಭಿಯಾನ ಸಮಾಜದಲ್ಲಿ ದೊಡ್ಡ ಪ್ರಮಾಣದ ಧ್ವನಿ ಎಬ್ಬಿಸಿದ್ದು, ಇವುಗಳಲ್ಲಿ ಇನ್‍ಸ್ಟ್ರಾಮ್‍ನಲ್ಲಿ ನಡೆಸಲಾದ 185 ಸಾವಿರ ಪರಸ್ಪರ ಸಂವಾದಗಳು, ಫೇಸ್‍ಬುಕ್ ಪೋಸ್ಟ್‍ಗಳಲ್ಲಿ ನಡೆಸಲಾದ 199 ಸಾವಿರ ಸಂವಾದಗಳು ಸಾವಿರಾರು ಜೀವಗಳನ್ನು ಸ್ಪರ್ಶಿಸಿವೆ.

ಪ್ರಸಕ್ತ ವರ್ಷ ಈ `#ಗಮನಹರಿಸಿ’ ಅಭಿಯಾನದ ಅಂಗವಾಗಿ ಏವಾನ್ ಚಿಂತನೆಗೆ ಪ್ರೇರೇಪಿಸುವಂತಹ ಚಲನಚಿತ್ರವೊಂದನ್ನು ಅನಾವರಣಗೊಳಿಸಲಿವೆ. ಇವು ದೊಡ್ಡಪ್ರಮಾಣದ ಸಾಮಾಜಿಕ ಪರಿಣಾಮವನ್ನು ಉಂಟು ಮಾಡುವ ನಿರೀಕ್ಷೆ ಇದೆ. ಅಲ್ಲದೆ, ಈ ತೊಂದರೆಯನ್ನು ಸಮಯಕ್ಕೆ ಸರಿಯಾಗಿ ಪತ್ತೆ ಮಾಡುವುದಕ್ಕಾಗಿ ಪ್ರತಿಕ್ರಿಯಿಸಲು ಮತ್ತು ಸ್ವಯಂ ಪರೀಕ್ಷೆ ಮಾಡಿಕೊಳ್ಳಲು ಮುಂಬರುವುದಕ್ಕೆ ಜನರನ್ನು ಆಗ್ರಹಿಸಲಿದೆ.

ಈ ರಾಷ್ಟ್ರೀಯ ಉಪಕ್ರಮ ಕುರಿತು ಪ್ರಕಟಿಸುವಲ್ಲಿ ಉತ್ಸಾಹಿತರಾದ ಏವಾನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ರಾಹುಲ್ ಶಂಕರ್ ಅವರು ಮಾತನಾಡಿ, “ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ತಮ್ಮ ಉದ್ದೇಶದ ಕೇಂದ್ರವಾಗಿಟ್ಟುಕೊಂಡಿರುವುದಕ್ಕೆ ಏವಾನ್ ಇಂಡಿಯಾಗೆ ಜಾಗತಿಕವಾಗಿ ಮನ್ನಣೆ ದೊರೆತಿದೆ. ಕಳೆದ ವರ್ಷ ನಾವು ಏವಾನ್ ಸ್ತನ ಕ್ಯಾನ್ಸರ್ ಭರವಸೆ ಎಂಬ ಕಾರ್ಯಕ್ರಮವನ್ನು ಪ್ರಕಟಿಸಿದ್ದು ಇದು ಸ್ತನದ ಆರೋಗ್ಯ ಕುರಿತಂತೆ ಮಹಿಳೆಯರಿಗೆ ಶಿಕ್ಷಣ ನೀಡುವುಲ್ಲಿ ನಮ್ಮ ಬಹುವರ್ಷಗಳ ಬದ್ಧತೆಯ ನವೀಕರಣವಾಗಿದೆ. ಇದು ಸ್ತನ ಕ್ಯಾನ್ಸರ್‍ನ ಕುರಿತ ಉದ್ದೇಶಕ್ಕೆ ಬೆಂಬಲ ನೀಡುವ ಪರಂಪರೆಯನ್ನು ಮತ್ತಷ್ಟು ದೊಡ್ಡದಾಗಿ ನಿರ್ಮಿಸಿದೆ. 2018ರ ಅಭಿಯಾನ ಶಿಕ್ಷಣದಿಂದ ಕಾರ್ಯಕ್ಕೆ ಗಮನವನ್ನು ವರ್ಗಾಯಿಸಲಿದೆ. ಮುಂದಡಿಯಿಟ್ಟು ಕಾರ್ಯನಿರ್ವಹಿಸುವಂತೆ ನಗರಗಳ ಜನರ ಜೀವನವನ್ನು ಸ್ಪರ್ಶಿಸಿ ಅವರನ್ನು ನಾವು ಆಗ್ರಹಿಸುವ ಉದ್ದೇಶ ಹೊಂದಿದ್ದೇವೆ. ಮುಂದುವರಿದ ನಮ್ಮ ಮಾರ್ಗದಲ್ಲಿ ಪ್ರಸಕ್ತ ವರ್ಷ ಕೂಡ ಏವಾನ್ ಇಂಡಿಯಾ ಸ್ವಯಂ ಪರೀಕ್ಷೆ ಕುರಿತು ಜನರಿಗೆ ಶಿಕ್ಷಣ ನೀಡುವ ರಾಷ್ಟ್ರವ್ಯಾಪಿ ಅಭಿಯಾನವನ್ನು ಆರಂಭಿಸುತ್ತಿದೆ. ಜೊತೆಗೆ ಸ್ತನ ಕ್ಯಾನ್ಸರ್ ಕುರಿತು ತಪ್ಪು ಕಲ್ಪನೆಗಳನ್ನು ತೊಡೆದುಹಾಕುವ ಖಾತ್ರಿ ಮಾಡಿಕೊಳ್ಳಲು ಮುಂದಾಗಿದೆ’’ ಎಂದರು.

ಏವಾನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಸ್ವಾತಿ ಜೈನ್ ಅವರು ಮಾತನಾಡಿ, “ಭಾರತದಲ್ಲಿನ ಹಲವು ನಗರಗಳಲ್ಲಿ ಆರೋಗ್ಯ ತಪಾಸಣೆಗಳನ್ನು ಆರಂಭಿಸುವುದರೊಂದಿಗೆ ಏವಾನ್ ಇಂಡಿಯಾ ಅನೇಕ ಜೀವಗಳನ್ನು ಸ್ಪರ್ಶಿಸಿದೆ. ಪ್ರಸಕ್ತ ವರ್ಷ ಕೂಡ ಬೃಹತ್ ಸಾಮಾಜಿಕ ಪರಿಣಾಮವನ್ನು ನಮ್ಮ ಜಾಗೃತಿ ಅಭಿಯಾನ ನೀಡುವಂತೆ ಮಾಡಲು ನಾವು ಸಜ್ಜಾಗಿದ್ದೇವೆ. ಈ ವಿಡಿಯೋ ಮೂಲಕ ಕ್ಯಾನ್ಸರ್ ಪೀಡಿತರಾಗಿ ಉಳಿದುಕೊಂಡ ಮತ್ತು ಹೋರಾಟಗಾರ ತಾಯಿಯಾದ ಶಾಲಿನಿ ವಕೀಲ್ ಅವರ ಕಥೆಯನ್ನು ನಾವು ಹಂಚಿಕೊಳ್ಳಲಿದ್ದೇವೆ. ಜೊತೆಗೆ ಈಕೆ ಇತರರಿಗೆ ನೈಜ ಸ್ಫೂರ್ತಿಯೂ ಆಗಿರುತ್ತಾರೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಮಹಿಳೆಯರಲ್ಲಿನ ಕ್ಯಾನ್ಸರ್ ಪ್ರಕರಣಗಳಲ್ಲಿ 3ನೇ ಅತ್ಯಂತ ಹೆಚ್ಚಿನ ಸಂಖ್ಯೆಯನ್ನು ಭಾರತ ಹೊಂದಿದೆ. ಆದ್ದರಿಂದ ಮಹಿಳೆಯರಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಬೆದರಿಕೆಯನ್ನು ನಾವು ತುರ್ತಾಗಿ ಗಮನಿಸಬೇಕಿದೆ. ಜೊತೆಗೆ ಸಮಯಕ್ಕೆ ಸರಿಯಾಗಿ ರೋಗನಿದಾನ, ರೋಗವನ್ನು ತಡೆಯುವ ಕ್ರಮಗಳು ಹಾಗೂ ಪರಿಣಾಮಕಾರಿ ಚಿಕಿತ್ಸೆಯ ಕಡೆಗೆ ಒತ್ತು ನೀಡಬೇಕಿದೆ’’ ಎಂದರು.

ಈ ಭಾರತದ ಎಲ್ಲೆಡೆಯ ಉಪಕ್ರಮ #ಪೇ ಅಟೆನ್ಷನ್’ನ ಆರಂಭದೊಂದಿಗೆ ಏವಾನ್ ಇಂಡಿಯಾ ಕಳೆದ ವರ್ಷ 19,000 ಪ್ರತಿಕ್ರಿಯಿಸಿದವರೊಂದಿಗೆ ಸಮೀಕ್ಷೆಯೊಂದನ್ನು ನಡೆಸಿತ್ತು. ಪುರುಷರು ಮತ್ತು ಮಹಿಳೆಯರನ್ನು ಗುರಿಯಾಗಿಟ್ಟುಕೊಂಡಿದ್ದ ಈ ಸಮೀಕ್ಷೆಯಲ್ಲಿ ಶೀಘ್ರ ಲಕ್ಷಣಗಳನ್ನು ಪತ್ತೆ ಮಾಡಲು ಸರಳವಾದ ರೀತಿಯಲ್ಲಿ ಸ್ವಯಂ ಸ್ತನ ಪರೀಕ್ಷೆ ಮಾಡಿಕೊಳ್ಳುವ ಕ್ರಮ ಕೈಗೊಳ್ಳಲು ಹೇಳಲಾಗಿತ್ತು. ಸಮೀಕ್ಷೆಯಲ್ಲಿ ಭಾಗವಹಿಸಿದ ಮಹಿಳೆಯರ ಪೈಕಿ ಅರ್ಧದಷ್ಟು ಮಂದಿ ತಾವು ಕ್ಯಾನ್ಸರ್‍ನಿಂದಾಗಿ ಸ್ತನದಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ತಿಳಿದಿದ್ದೇವೆ ಎಂಬ ವಿಶ್ವಾಸ ಹೊಂದಿದ್ದರು. ಆದರೆ, ಕಾಲು ಭಾಗ (ಶೇ.25) ಜನರು ಸ್ತನ ಕ್ಯಾನ್ಸರ್‍ನ ಏಕೈಕ ಲಕ್ಷಣ ಎಂದರೆ ಒಂದು ಗಡ್ಡೆಯಾಗಿದ್ದು ಇದನ್ನು ವೈದ್ಯಕೀಯ ಉಪಕರಣಗಳಿಲ್ಲದೆ ಗುರುತಿಸಬಹುದು ಎಂದು ಯೋಚಿಸಿದ್ದರು.

ಏವಾನ್ ಕುರಿತು :-

ಏವಾನ್ 130 ವರ್ಷಗಳ ಹಳೆಯ ಕಂಪನಿಯಾಗಿದ್ದು ಸೌಂದರ್ಯ, ನವೀನತೆ ಮತ್ತು ಆಶಾವಾದಗಳ ಪ್ರತಿರೂಪವಾಗಿದ್ದು ಎಲ್ಲದಕ್ಕೂ ಹೆಚ್ಚಾಗಿ ಮಹಿಳೆಯರ ಪರವಾಗಿ ಸಂಸ್ಥೆ ನಿಂತಿದೆ. ವಾರ್ಷಿಕವಾಗಿ ಆರು ಶತಕೋಟಿ ಡಾಲರ್ ಆದಾಯ ಹೊಂದಿರುವ ಸಂಸ್ಥೆಯ ಏವಾನ್‍ನ ಉತ್ಪನ್ನಗಳನ್ನು 60 ಲಕ್ಷ ಸಕ್ರಿಯ ಮಾರಾಟ ಪ್ರತಿನಿಧಿಗಳ ಮೂಲಕ ವಿಶ್ವವ್ಯಾಪಿಯಾಗಿ ಮಾರಾಟ ಮಾಡಲಾಗುತ್ತಿದೆ. ಏವಾನ್‍ನ ಉತ್ಪನ್ನಗಳಲ್ಲಿ ಬಣ್ಣದ ಸೌಂದರ್ಯವರ್ಧಕಗಳು, ತ್ವಚೆಯ ಆರೈಕೆ ಉತ್ಪನ್ನಗಳು, ಸುಗಂಧಗಳು, ಫ್ಯಾಷನ್ ಮತ್ತು ಗೃಹೋತ್ಪನ್ನಗಳು ಸೇರಿವೆ. ಏವಾನ್ ಕಲರ್, ಎನ್ಯೂ, ಏವಾನ್ ಕೇರ್, ಸ್ಕಿನ್-ಸೋ ಸಾಫ್ಟ್ ಮತ್ತು ಅಡ್ವಾನ್ಸ್ಡ್ ಟೆಕ್ನಿಕ್‍ಗಳಂತಹ ಬ್ರಾಂಡ್‍ಗಳನ್ನೊಂದಿರುವ ಏವಾನ್ ಮತ್ತು ಅದರ ಉತ್ಪನ್ನಗಳನ್ನು ಕುರಿತು ಹೆಚ್ಚಿನ ಮಾಹಿತಿಗಾಗಿ  www.avoncompany.com ರಲ್ಲಿ ಸಂದರ್ಶಿಸಿ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!