Health Vision

ಬಹೂಪಯೋಗಿ ಲವಂಗ – ಚಿಕಿತ್ಸಾ ತಜ್ಞರಿಗೂ, ಪಾಕಪ್ರಿಯರಿಗೂ ಅಚ್ಚುಮೆಚ್ಚು

ಲವಂಗವು ಅನೇಕ ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಆಯುರ್ವೇದ ಚಿಕಿತ್ಸಾ ತಜ್ಞರಿಗೂ, ಖಾದ್ಯಗಳಿಗೆ ಒಳ್ಳೆಯ ಸ್ವಾದ ಹಾಗೂ ವಿಶಿಷ್ಟ ಸುವಾಸನೆಯನ್ನು ನೀಡುವುದರಿಂದ ಪಾಕಪ್ರಿಯರಿಗೂ ಅಚ್ಚುಮೆಚ್ಚಾಗಿದೆ. ಏಲಕ್ಕಿ, ಮೆಣಸ್ಸು, ದಾಲ್ಚಿನ್ನಿ (ಚಕ್ಕೆ), ಜಾಯಿಕಾಯಿ ಮುಂತಾದ ಸಾಂಬಾರ ಪದಾರ್ಥಗಳ ಗುಂಪಿಗೆ ಲವಂಗವೂ ಸೇರುತ್ತದೆ. ಮಿರ್ಟೀಸಿ ಕುಟುಂಬದ ಲವಂಗದ ವೈಜ್ಞಾನಿಕ ಹೆಸರು ಯುಜೀನಿಯಾ ಕ್ಯಾರಿಯೋಫಿಲ್ಲೇಜ ಲವಂಗದ ತವರೂರು ಇಂಡೋನೇಷಿಯವಾದರೂ, ಯುರೋಪ್, ಬ್ರೆಜಿಲ್, ಭಾರತ, ಶ್ರೀಲಂಕಾ, ಮಡಗಾಸ್ಕರ್ ಮತ್ತು ಮಾರಿಷಸ್ ದ್ವೀಪಗಳಲ್ಲಿಯೂ ಲವಂಗವನ್ನು ಬೆಳೆಯುತ್ತಾರೆ. ಪ್ರಪಂಚದಲ್ಲಿ ಲವಂಗವನ್ನು ಬೆಳೆಯುವ ದೇಶಗಳಲ್ಲಿ, ಇಂದಿಗೂ ಇಂಡೋನೇಷಿಯ ಪ್ರಥಮ […]

Read More

ಪಾಲೆ ಕಷಾಯ ಸೇವನೆ – ಸಂಪ್ರದಾಯವಾದರೂ ಇದು ಔಷಧಿ

ತುಳುನಾಡ ಆಟಿ ಅಮಾವಾಸ್ಯೆ  ಸಂಪ್ರದಾಯ: ಪಾಲೆ ಕಷಾಯ ಸೇವನೆ ಭಾರತದ ಪ್ರತಿ ಸಂಪ್ರದಾಯ, ಹಬ್ಬ ಹಾಗೂ ಆಚರಣೆಗಳು ತನ್ನದೇ ಆದ ಧಾರ್ಮಿಕ, ಸಾಮಾಜಿಕ, ವೈಚಾರಿಕ ಹಾಗೂ ಆಧ್ಯಾತ್ಮಿಕ ಮಹತ್ವದೊಂದಿಗೆ ಆರೋಗ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಈ ಆಚರಣೆಗಳನ್ನು ಆಯಾ ಪ್ರದೇಶದ ಹಾಗೂ ಅಲ್ಲಿನ ವಾತಾವರಣದ ಬದಲಾವಣೆಗೆ ತಕ್ಕಹಾಗೆ ರೂಪಿಸಲಾಗಿದೆ. ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳು ಸಮೃದ್ದವಾದ ತೌಳವ ಸಂಸ್ಕೃತಿಯನ್ನು ತನ್ನ ಒಡಲ್ಲಲ್ಲಿ ಇರಿಸಿಕೊಂಡಿರುವ ತುಳುನಾಡು. ಇಲ್ಲಿಯ ಕಲೆ, ಸಂಸ್ಕೃತಿ, ಆಹಾರ ಹಾಗೂ ನಂಬಿಕೆಗಳು […]

Read More

ಸೋರಿಯಾಸಿಸ್ ಮುಕ್ತಿಗೆ ಆಯುರ್ವೇದ ಚಿಕಿತ್ಸೆ

ಚರ್ಮವು ದೇಹದ ಒಳ ಅಂಗಗಳನ್ನು ಹೊರಜಗತ್ತಿನಿಂದ ಬೇರ್ಪಡಿಸುವ ಕೇವಲ ಒಂದು ಅಂಗವಲ್ಲ. ದೇಹದ ಹೊರ ಪರಿಸರಕ್ಕೆ ಜೈವಿಕ ಹಾಗೂ ಸಾಮಾಜಿಕ ಸಂಪರ್ಕವನ್ನು ಕಲ್ಪಿಸುವ ಸೂಕ್ಷ್ಮವಾದ ಬಹು ದೊಡ್ಡಅಂಗವಾಗಿದೆ. ಅಂತೆಯೇ ದೇಹದಲ್ಲಾಗುವ ಹಲವು ಬದಲಾವಣೆಗಳ ಪ್ರಭಾವವು ಚರ್ಮದಲ್ಲಿ ವ್ಯಕ್ತವಾಗುತ್ತದೆ, ಮತ್ತು ಹಲವು ಚರ್ಮರೋಗಗಳನ್ನು ಸಹ ವ್ಯಕ್ತಪಡಿಸುತ್ತದೆ. ದೀರ್ಘಕಾಲಿಕವಾಗಿ ಕಾಡುವ ಚರ್ಮರೋಗಗಳಲ್ಲಿ ಸೋರಿಯಾಸಿಸ್ ಬಹಳ ಮುಖ್ಯವಾದುದು. ಈ ರೋಗವು ಚರ್ಮವನ್ನು ವಿರೂಪಗೊಳಿಸುತ್ತದೆ. ಆದ್ದರಿಂದ ರೋಗಿ  ಸಾಮಾಜಿಕ ಹಾಗೂ ಮಾನಸಿಕ ಖಿನ್ನತೆಗೆ ಓಳಗಾಗುತ್ತಾ ಸಮಾಜದಿಂದ ವಿಮುಖನಾಗುತ್ತಾನೆ. ಸೋರಿಯಾಸಿಸ್ ಅಂಟುರೋಗ ಅಥವಾ ಅನುವಂಶಿಕವಾಗಿ ಬರುವ […]

Read More

ಮಳೆಗಾಲದಲ್ಲಿ – ಸ್ವಾಸ್ಥ್ಯರಕ್ಷಣೆ -ಯಾವ ಆಹಾರ?

ವರ್ಷ ಋತು ಅಥವಾ ಮಳೆಗಾಲದಲ್ಲಿ, ಪಶ್ಚಿಮ ದಿಕ್ಕಿನಿಂದ ಬೀಸುವ ಗಾಳಿಯು (ವಾಯುವು) ಆಕಾಶದಲ್ಲಿ ಮೋಡವನ್ನು ಮೂಡಿಸುವುದರೊಂದಿಗೆ ಮಿಂಚು ಸಹಿತ ಮಳೆಯನ್ನು ತರುತ್ತದೆ. ಬೇಸಿಗೆಯಲ್ಲಿ ಅಧಿಕವಾಗಿದ್ದ ಬಿಸಿಲು (ಉಷ್ಣಾಂಶವು) ಮಳೆಗಾಲದ ಪ್ರಾರಂಭದೊಂದಿಗೆ ದೇಹದ ಹಾಗೂ ಭೂಮಿಯ ಉಷ್ಣತೆಯನ್ನು ಕಡಿಮೆಗೊಳಿಸುತ್ತದೆ. ಮಳೆಯ ಹನಿಗಳು ವಾತಾವರಣದ ಉಷ್ಣತೆಯನ್ನು ಅಧಿಕ ಪ್ರಮಾಣದಲ್ಲಿ ಕಡಿಮೆಗೊಳಿಸಿ ಭೂಮಿಯಲ್ಲಿನ ಹಾಗೂ ವಾತಾವರಣದಲ್ಲಿರುವ ತೇವಾಂಶವನ್ನು ಕ್ರಮೇಣ ಹೆಚ್ಚಿಸುತ್ತದೆ. ಆದ್ದರಿಂದ ಭೂಮಿಯು ಹಚ್ಚ ಹಸಿರಿನ ಮರಗಳಿಂದ, ಕದಂಬ, ಬೇವು, ಕುಟಜ ಮುಂತಾದ ಗಿಡಮೂಲಿಕೆಗಳಿಂದ ಕೂಡಿರುತ್ತದೆ. ಬೇಸಿಗೆಯಲ್ಲಿನ ಅತಿಯಾದ ಉಷ್ಣತೆಯಿಂದಾಗಿ ಕಡಿಮೆಯಾಗಿದ್ದ […]

Read More

ವಿಟಿಲಿಗೊ (ತೊನ್ನು ರೋಗ) ಕ್ಕೆ ಆಯುರ್ವೇದ ಚಿಕಿತ್ಸೆ

ಜೂ. 25: ವಿಶ್ವ ವಿಟಿಲಿಗೊ (ತೊನ್ನು ರೋಗ) ದಿನಾಚರಣೆ      ವಿಟಿಲಿಗೋ ಬಿಳಿ ಚರ್ಮ, ಲ್ಯೂಕೊಡೆರ್ಮ ಅಥವಾ ತೊನ್ನು ರೋಗ ಚರ್ಮದ ವರ್ಣಕ್ಕೆ ಸಂಭಂದಿಸಿದ ಸಾಂಕ್ರಾಮಿಕವಲ್ಲದ, ಆಟೊಇಮ್ಯೂನ್ ಹಾಗೂ ಚಿರಕಾಲೀನ ಚರ್ಮರೋಗ. ಚರ್ಮಕ್ಕೆ ಪ್ರಾಕೃತ ವರ್ಣವನ್ನು ನೀಡುವ ಮೆಲೆನೋಸೈಟ್ಸ್ ಕಣಗಳ ಕೊರತೆ ಅಥವ ನಾಶದಿಂದ ರೋಗ ಉತ್ಪತ್ತಿಯಾಗುತ್ತದೆ. ಕೆಲವು ಔಷಧಿಗಳ ಪ್ರತಿಕೂಲ ಪ್ರಯೋಗ, ಕೀಮೋಥೆರಪಿ ಹಾಗೂ ರೇಡಿಯೇಶನ್ ಚಿಕಿತ್ಸೆಯ ಅಡ್ಡಪರಿಣಾಮಗಳಿಂದಲೂ ಬರಬಹುದು ಅನುವಂಶವಾಗಿ ಬರಬಹುದು, ತಂದೆ ತಾಯಿ ಇಬ್ಬರಲ್ಲೂ ಕಂಡು ಬಂದಲ್ಲಿ ಮಕ್ಕಳಿಗೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಚರ್ಮದ […]

Read More

ಯೋಗ ಬಲ್ಲವನಿಗೆ ರೋಗವಿಲ್ಲ…!!!

ಜೂನ್ 21 – ವಿಶ್ವ ಯೋಗ ದಿನ ಯೋಗ ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಈ ಪದವನ್ನು ಧ್ಯಾನದ ಆಚರಣೆಗಳೊಂದಿಗೆ ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಹಿಂದೂ ತತ್ವಶಾಸ್ತ್ರದ ಆರು ಸಂಪ್ರದಾಯಬದ್ಧ (ಆಸ್ಥಿಕ) ಶಾಖೆ/ಪಂಥಗಳಲ್ಲಿ ಒಂದಕ್ಕೆ ಈ ಪದವನ್ನು ಬಳಸುತ್ತಾರಲ್ಲದೆ ಆ ಪಂಥವು ತನ್ನ ಆಚರಣೆಗಳಿಂದ ತಲುಪಲು ಬಯಸುವ ಗುರಿಗೂ ಇದೇ ಪದವನ್ನು ಬಳಸುತ್ತಾರೆ. ಜೈನ ಧರ್ಮದಲ್ಲಿ ? ಮಾನಸಿಕ, ಮೌಖಿಕ […]

Read More

ಯೋಗ ಒಂದು ಅವಲೋಕನ

ಜೂನ್ 21 – ವಿಶ್ವ ಯೋಗ ದಿನ ಯೋಗ ಎಂದರೇನು ? ಯೋಗ ಶಬ್ದವು ಸಂಸ್ಕøತದಲ್ಲಿ ‘ಯುಜ್’ ಎಂಬ ಧಾತುವಿನಿಂದ ಬಂದಿದ್ದು, ಯೋಗ ಎಂದರೆ ಕೂಡಿಸು, ಸೇರಿಸು, ಜೋಡಿಸು, ಸಂಬಂಧ, ಸಂಯೋಗ, ಬಂಧನ, ಮುಂತಾದವುಗಳಿಂದ ಕೂಡಿರುವುದೇ ಯೋಗ. ಯೋಗ ? ಯೋ = ಯೋಗ್ಯವಾದದ್ದನ್ನು ಗ = ಗಮನದಲ್ಲಿಟ್ಟು ಮಾಡುವುದೇ ಯೋಗ “ಯುಜ್ಯತೇ ಅನೇನ ಇತಿ ಯೋಗಃ” “ಅನೇಕ ಪ್ರಕಾರವಾಗಿ ಜೋಡಿಸುವಂಥದ್ದೇ ಯೋಗ” ಯುಜ್ ಪದದ ವಿವಿಧ ಅರ್ಥಗಳು ಇಂತಿವೆ: “ಯುಜ್ ಸಮಾಧೌ” ಯುಜ್ ಎಂದರೆ ಸಮಾಧಿ. […]

Read More

ಸುಗಂಧಿತ ರೆಂಜೆ ಔಷಧದ ಕಣಜ

ರೆಂಜೆ ಎಂಬ ಪುಟ್ಟ ಪುಟ್ಟ ಹೂಗಳನ್ನು ಉದುರಿಸುವ ಮರ ಎಲ್ಲರಿಗೂ ಪರಿಚಿತವಾದುದು. ಬಿಳಿಯ ಚಿಕ್ಕ ಹೂವಿನಲ್ಲೂ ಚಕ್ರದಂತೆ ಅರಗಳಿದ್ದು ಮಧ್ಯೆ ಗುಳಿಯಿದೆ. ಇದನ್ನು ಬೆಳಗಾಗುವಾಗ ಹೆಕ್ಕಿ ಮಾಲೆ ಮಾಡುವುದು ಹೆಂಗಳೆಯರಿಗೆ ತುಂಬ ಪ್ರಿಯವಾದ ಕೆಲಸ. ಈ ಮರದ ಹೂ, ಎಲೆ, ತೊಗಟೆ, ಬೀಜ, ಹಣ್ಣು, ಬೇರು ಎಲ್ಲವೂ ಹಲವಾರು ವ್ಯಾಧಿಗಳನ್ನು ಗುಣಪಡಿಸುವ ಔಷಧಗಳಾಗಿವೆ. ಮಾಗಿದ ಹಣ್ಣು ತಿನ್ನಲು ಸಿಹಿಯಾಗಿ ರುಚಿಕರವಾಗಿದೆ. ವೈಜ್ಞಾನಿಕವಾಗಿ ಮಿಮ್‍ಸೋಪ್ ಎಲೆಂಜಿ ಎಂಬ ಹೆಸರಿರುವ ಇದು ಸಪೋಟೇಸಿಯೇ ಕುಟುಂಬಕ್ಕೆ ಸೇರಿದೆ. ಸಂಸ್ಕತದಲ್ಲಿ ಬಕುಲ, ಗಂಧಪುಷ್ಪ […]

Read More

ವೈದ್ಯಕೀಯ ಕ್ಷೇತ್ರದ ಧ್ರುವತಾರೆ: ಡಾ. ಶಾಂತಗಿರಿ

ಹಿಂದಿನಿಂದಲೂ ನಾವು ವೈದ್ಯರನ್ನು ವೈದ್ಯೋ ನಾರಾಯಣೋ ಹರಿ ಎಂದು ನಂಬಿದವರು. ಆದರೆ ವೈದ್ಯರ ಪ್ರಮಾದದಿಂದ ಎಷ್ಟೋ ಪ್ರಾಣ ಪಕ್ಷಿಗಳು ಹಾರಿ ಹೋಗಿವೆ. ಹೌದು ವೈದ್ಯರು ಬರೆಯುವ ಬ್ರಹ್ಮಲಿಪಿ ಅಕ್ಷರಗಳು ಸ್ವತಃ ವೈದ್ಯರಿಗೆ ಅರ್ಥವಾಗಲ್ಲ. ಇನ್ನೂ ಔಷಧ ವ್ಯಾಪಾರಿಗಳು ಅದನ್ನು ಅರ್ಥೈಸಿಕೊಂಡು, ಅರ್ಥ ಅನರ್ಥವಾಗಿ ರೋಗಿಗಳಿಗೆ ಬೇರೆ ಔಷಧ ನೀಡಿ ಸಾಕಷ್ಟು ಅವಾಂತರಗಳು ಆಗಿದ್ದನ್ನು ನೋಡಿದ್ದೇವೆ ಕೇಳಿದ್ದೇವೆ. ಈ ಪ್ರಹಸನಗಳಿಗೆ ಪರ್ಯಾಯ ಮಾರ್ಗವೆಂದರೆ ವೈದ್ಯರು ಕಡ್ಡಾಯವಾಗಿ ವೈದ್ಯಕೀಯ ಚೀಟಿಗಳನ್ನು (ಕ್ಯಾಪಿಟಲ್) ದಪ್ಪ ಅಕ್ಷರಗಳಲ್ಲೇ ಬರೆಯಬೇಕು. ಆದರೆ ಶೋಚನೀಯ ಸಂಗತಿ […]

Read More

Back To Top