ಬಂಜೆತನಕ್ಕೆ ಸ್ತ್ರೀಯೊಬ್ಬಳೇ ಕಾರಣಳಲ್ಲ. ಬಂಜೆತನವು ಸ್ತ್ರೀ ಮತ್ತು ಪುರುಷರಿಬ್ಬರಿಗೂ ಅನ್ವಯಿಸುವಂತಹದ್ದಾಗಿದೆ. ಆದರೆ ಸಮಾಜ ಸ್ತ್ರೀಯೊಬ್ಬಳನ್ನೇ ದೂಷಿಸುತ್ತದೆ. ಹಲವಾರು ಕಾರಣಗಳು `ಬಂಜೆತನ’ವನ್ನು ಹುಟ್ಟುಹಾಕಬಹುದು. ಇಂದು ವಿಶ್ವದಾದ್ಯಂತ `ಬಂಜೆತನ’ದ ಸಮಸ್ಯೆಯನ್ನು ಎಲ್ಲಾ ದೇಶಗಳೂ ಎದುರಿಸುತ್ತಿವೆ. ಇದು ಆರೋಗ್ಯ ಸಮಸ್ಯೆ ಎನ್ನುವುದಕ್ಕಿಂತ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತಿದೆ.
ಸ್ತ್ರೀ ಪುರುಷರ ಲೈಂಗಿಕ ಸಮಸ್ಯೆಗಳು ಸಂಬಂಧಗಳಲ್ಲಿ ಒಡಕು ಮೂಡಬಹುದು. ಕೆಲವು ಬಾರಿ ಅನೇಕ ಅನುಮಾನ, ಮಾನಸಿಕ ಒತ್ತಡಗಳಿಗೆ ಎಡೆಮಾಡಿಕೊಡುತ್ತದೆ. ಲೈಂಗಿಕ ಕ್ರಿಯೆಯು ಬರೀ ಸಂತಾನ ಪ್ರಾಪ್ತಿಗೆ ಮಾತ್ರ ಸೀಮಿತವಲ್ಲ, ಇದರಿಂದ ಸ್ತ್ರೀ ಪುರುಷರ ನಡುವೆ ಅನ್ಯೋನ್ಯತೆ ಬೆಳೆಯುವುದಲ್ಲದೇ ಸುಖ ಸಂತೃಪ್ತಿಯನ್ನು ಒದಗಿಸುವ ಒಂದು