ದೀಪಾವಳಿ ಸಂಪ್ರದಾಯಗಳು ವಾತ ಶಕ್ತಿಯನ್ನು ಶಾಂತ ಮಾಡುತ್ತವೆ. ದೀಪಾವಳಿ ಸಮಯ ಅತಿ ತಿನ್ನುವಿಕೆ ಹಾಗೂ ತೂಕದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಉಸಿರಾಟದ ತೊಂದರೆಗಳಿಂದ ನರಳುವ ಜನರಿಗೆ ಇದು ಕೆಟ್ಟ ಸಮಯ. ಈ ಸಮಯದಲ್ಲಿ ಸುರಕ್ಷತೆ ಹಾಗೂ ಆರೋಗ್ಯ ರಕ್ಷಣೆ ಬಹಳ ಮುಖ್ಯ. ದೀಪಾವಳಿ
ಆಯುರ್ವೇದದ ದೃಷ್ಟಿಯಿಂದ ದೀಪಾವಳಿ ಹಬ್ಬ ಆಚರಣೆ ಧಾರ್ಮಿಕ, ಸಾಮಾಜಿಕ ಆಚರಣೆಗೂ ಮೀರಿ ಮಹತ್ವದ್ದಾಗಿದೆ. ದೀಪಾವಳಿಯ ಎಲ್ಲಾ ಆಚರಣೆ, ಸಂಪ್ರದಾಯಗಳು ವಾತ ದೋಷವನ್ನು ಶಮನ ಮಾಡಿ, ದೇಹದಲ್ಲಿನ ವೈಪರೀತ್ಯಗಳನ್ನು ಸಮತೋಲನ ಮಾಡುವ ನಿಟ್ಟಿನಲ್ಲಿ ಅಳವಡಿಸಲಾಗಿದೆ. ದೀಪಾವಳಿ ಭಾರತದಲ್ಲಿ ಆಚರಿಸುವ ಬಹಳ ಪ್ರಮುಖ ಹಬ್ಬ.