ಮೈಗ್ರೇನ್ ವಿರುದ್ದ ಹೋರಾಟಕ್ಕೆ ಜೀವನ ಶೈಲಿ ಬದಲಾವಣೆ ಮಾಡಬೇಕು. ಆರಂಭದಲ್ಲೇ ಮೈಗ್ರೇನ್ಗೆ ಸೂಕ್ತ ಚಿಕಿತ್ಸೆ ನೀಡುವುದರಿಂದ ಅದು ಉಲ್ಬಣಗೊಂಡು ತೀವ್ರ ಸ್ವರೂಪಕ್ಕೆ ಹೋಗುವುದನ್ನು ತಡೆಗಟ್ಟಬಹುದು. ಮೈಗ್ರೇನ್ ಮನುಕುಲದ ತೀರ ಸಾಮಾನ್ಯ ಯಾತನೆಯ ಸ್ಥಿತಿಗಳಲ್ಲಿ ಒಂದು. ತಲೆಯಲ್ಲಿ ಮುಖ್ಯವಾಗಿ ನೋವನ್ನು ಉಂಟು ಮಾಡುವ ಸಮಸ್ಯೆಯೇ
ತಲೆನೋವು ಅಥವಾ ಮೈಗ್ರೇನ್ ಅನೇಕರನ್ನು ಕಾಡುವ ಒಂದು ದೊಡ್ಡ ಸಮಸ್ಯೆ, ತೀವ್ರವಾದ ಸಿಡಿಯುವಂತಹ ತಲೆನೋವು ಇದಾಗಿದ್ದು, ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತದೆ. ಸಾಮಾನ್ಯವಾಗಿ ಬರುವ ತಲೆನೋವುಗಳಿಗಿಂತ ಇದು ಭಿನ್ನವಾಗಿದ್ದು, ಈ ತಲೆನೋವು ಕೆಲವೊಮ್ಮೆ ಬರುವ ಮುನ್ನ ರೋಗಿಗೆ ಮುನ್ಸೂಚನೆ ನೀಡಿ ಬರುತ್ತದೆ. ತೀವ್ರವಾದ ಅರ್ಧ ತಲೆ ನೋವು ಇದರ ಮುಖ್ಯ ಲಕ್ಷಣ. ತಲೆನೋವು ಬರುವ ಮುನ್ನ ಉಂಟಾಗುವ ಔರ (AURA)
ಅರೆತಲೆನೋವು ಅಥವಾ ಮೈಗ್ರೇನ್ ದಿನದ ಯಾವುದೇ ಸಮಯದಲ್ಲಾದರೂ ಕಾಣಿಸಿಕೊಳ್ಳಬಹುದು. ಅರೆತಲೆನೋವು ಹೆಚ್ಚಾಗಿ ಹೆಂಗಸರಲ್ಲಿ, ಅದರಲ್ಲೂ ಮೊದಲ ಋತುಸ್ರಾವದ ಅವಧಿಯಲ್ಲಿ ಬರುವುದು ಹೆಚ್ಚಾಗಿ ಕಂಡುಬಂದಿದೆ (ಶೇ.70). ಮೈಗ್ರೇನ್ ಎಂಬ ಗ್ರೀಕ್ ಪದದ ಅರ್ಥ-ಅರೆತಲೆನೋವು. ಇದು ತಲೆಯ ಒಂದು ಅರ್ಧ ಭಾಗವನ್ನಾದರೂ ಬಾಧಿಸುವ ನೋವು.