ಅರೆತಲೆನೋವು ಅಥವಾ ಮೈಗ್ರೇನ್ ದಿನದ ಯಾವುದೇ ಸಮಯದಲ್ಲಾದರೂ ಕಾಣಿಸಿಕೊಳ್ಳಬಹುದು. ಅರೆತಲೆನೋವು ಹೆಚ್ಚಾಗಿ ಹೆಂಗಸರಲ್ಲಿ, ಅದರಲ್ಲೂ ಮೊದಲ ಋತುಸ್ರಾವದ ಅವಧಿಯಲ್ಲಿ ಬರುವುದು ಹೆಚ್ಚಾಗಿ ಕಂಡುಬಂದಿದೆ (ಶೇ.70). ಮೈಗ್ರೇನ್ ಎಂಬ ಗ್ರೀಕ್ ಪದದ ಅರ್ಥ-ಅರೆತಲೆನೋವು. ಇದು ತಲೆಯ ಒಂದು ಅರ್ಧ ಭಾಗವನ್ನಾದರೂ ಬಾಧಿಸುವ ನೋವು.