ಹೃದಯ ಮಾಂಸಖಂಡಗಳ ಕುಗ್ಗುವುದರಿಂದ ಅಧಿಕ ರಕ್ತದೊತ್ತಡ ಕಂಡುಬರುತ್ತದೆ. ರಕ್ತ ನಾಳಗಳ ಪ್ರತಿರೋಧದಿಂದಲೂ ಹೈಪರ್ಟೆನ್ಷನ್ ಉಂಟಾಗುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ವೇಳೆ ಹೃದಯದ ಸಂಕೋಚನವು ಆರ್ಟರಿಗಳ ವಿಸ್ತರಣೆಗೆ ಒತ್ತಡ ಹಾಕುತ್ತದೆ. ಹೃದಯವು ಸಂಕುಚಿತಗೊಂಡಾಗ ಒತ್ತಡ ಹೆಚ್ಚಾಗುತ್ತದೆ ಹಾಗೂ ಅದು ವಿಶ್ರಾಂತಿಯಲ್ಲಿದ್ದಾಗ ಒತ್ತಡವು ಕಡಿಮೆಯಾಗುತ್ತದೆ.