ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಸಹಾಯವಾಣಿ ಕಾರ್ಯಕ್ರಮ

ಮಾರ್ಚ್/ಏಪ್ರಿಲ್-2018ರಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ “ಸಹಾಯವಾಣಿ”ಯನ್ನು ಸ್ಥಾಪಿಸಲಾಗಿದೆ. ದಿನಾಂಕ 23.02.2018 ರಿಂದ 23.03.2018ರ ವರೆಗೆ ಸಹಾಯವಾಣಿ ಕೇಂದ್ರವನ್ನು ಹಾಗೂ 23.03.2018 ರಿಂದ 06.04.2018ರ ವರೆಗೆ ನಿಯಂತ್ರಣ ಕೊಠಡಿಯಾಗಿ ಕಾರ್ಯನಿರ್ವಹಿಸಲಾಗುತ್ತಿದ್ದು, ಸದರಿ ಸಹಾಯವಾಣಿಯು ದಿನಾಂಕ : 23.02.2018ರಂದು ಬೆಳಿಗ್ಗೆ 11:00 ಗಂಟೆಯಿಂದ ಕರ್ನಾಟಕ ಪ್ರೌಢ ಶಿಕ್ಷಣ ಮರೀಕ್ಷಾ ಮಂಡಳಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003 ಇಲ್ಲಿ ಸೇವಾನಿರತವಾಗಲಿದೆ.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ವಿದ್ಯಾರ್ಥಿಗಳ ಜೀವನದಲ್ಲಿ ನಿರ್ಣಾಯಕ ಹಂತದ ಪರೀಕ್ಷೆಯಾಗಿರುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಮಕ್ಕಳು ಗಳಿಸಬೇಕೆಂದು ಪೋಷಕರ ಅಭಿಲಾಷೆಯಾಗಿರುತ್ತದೆ. ವಿದ್ಯಾರ್ಥಿಗಳ ಸಾಮಥ್ರ್ಯ, ಬುದ್ಧಿಶಕ್ತಿ, ಆಸಕಿ, ಕ್ರಿಯಾಶೀಲತೆ ಮತ್ತು ಕಠಿಣ ಪರಿಶ್ರಮ ಇವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಹೆಚ್ಚು ಅಂಕಗಳನ್ನು ಗಳಿಸಿ ಎಂದು ಅವರ ಮೇಲೆ ಪೋಷಕರು, ಸಮಾಜ, ಶಿಕ್ಷಕರು ಒತ್ತಡವನ್ನು ಹಾಕುತ್ತಿರುವುದು ಇತ್ತೀಚಿನ ಸಮಸ್ಯೆಯಾಗಿದೆ. ಇದರಿಂದ ವಿದ್ಯಾರ್ಥಿಗಳು ಅಧ್ಯಯನ ಕಡೆ ಗಮನಹರಿಸಲಾಗದಿರುವುದು, ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿರುವುದ ಕಂಡು ಬಂದಿದ್ದು, ಈ ಸಮಸ್ಯೆ ನಿವಾರಣೆಯಾಗದೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಮರ್ಥವಾಗಿ ಬರೆಯಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗಳ ನಿವಾರಣೆ ಮಾಡಿ ಪರೀಕ್ಷೆಯನ್ನು ಸಮರ್ಥವಾಗಿ ಬರೆಯಲು ಸ್ಫೂರ್ತಿ ನೀಡಬೇಕಾದ ಅವಶ್ಯಕತೆ ಇದೆ.
ಈ ರೀತಿಯ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡು ಹಿಡಿಯುವ ಹಾಗೂ ಭಯರಹಿತವಾಗಿ ಆತ್ಮಸ್ಥೈರ್ಯ (Confidence) ತುಂಬುವ ಸದುದ್ದೇಶದಿಂದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಿಂದಿನ ವರ್ಷಗಳಂತೆ ಈ ವರ್ಷವೂ ಸಹ `ಸಹಾಯವಾಣಿ’ (Helpline) ಕೌನ್ಸಿಲಿಂಗ್ (Counselling ) ಕಾರ್ಯಕ್ರಮವು ದಿನಾಂಕ : 23.02.2018 ಶುಕ್ರವಾರ ಬೆಳಿಗ್ಗೆ 11:00 ಗಂಟೆಗೆ ಉದ್ಘಾಟನೆಯಾಗಲಿದೆ. ಇದಕ್ಕಾಗಿ ಈ ಕೆಳಗಿನ ಎರಡು ದೂರವಾಣಿ ಸಂಖ್ಯೆಗಳನ್ನು ಮೀಸಲಿಡಲಾಗಿದೆ.

080-23310075
080-23310076

ಈ ಸಹಾಯವಾಣಿಯು ದಿನಾಂಕ 23.02.2018 ರಿಂದ 23.03.2018ರ ವರೆಗೆ ಬೆಳಿಗ್ಗೆ 9:00 ಗಂಟೆ ಯಿಂದ ಸಂಜೆ 7:00 ಗಂಟೆವರೆಗೆ ಕಾರ್ಯನಿರ್ವಹಿಸಲಾಗುತ್ತಿದೆ. ದಿನಾಂಕ 23.03.2018 ರಿಂದ 06.04.2018ರವರೆಗೆ ನಿಯಂತ್ರಣ ಕೊಠಡಿಯಾಗಿ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 2:30 ಗಂಟೆವರೆಗೆ ಮಾತ್ರ ಕಛೇರಿ ದಿನಗಳಂದು ಕಾರ್ಯನಿರ್ವಹಿಸಲಾಗುತ್ತದೆ.
ಪೋಷಕರು, ವಿದ್ಯಾರ್ಥಿಗಳು ಮೇಲೆ ತಿಳಿಸಿರುವ ದೂರವಾಣಿ ಸಂಖ್ಯೆಗೆ ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಂದು ಕರೆಮಾಡಿ ತಮ್ಮ ಸಮಸ್ಯೆಗಳಿಗೆ, ಸಂದೇಹಗಳಿಗೆ ಪರಿಹಾರ ಪಡೆದುಕೊಳ್ಳಬಹುದು. ಹೆಚ್ಚಿನ ರೀತಿಯಲ್ಲಿ ವಿದ್ಯಾರ್ಥಿಗಳು, ಪೋಷಕರು ಸದರಿ ಕಾರ್ಯಕ್ರಮದ ಸದುಪಯೋಗಪಡಿಸಿಕೊಂಡು, ಈ ಕೆಳಕಂಡ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು.
ಶೈಕ್ಷಣಿಕ ವಿಷಯ:
ಅ) ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ವಿಧಾನ
ಆ) ಪ್ರಶ್ನೆ ಪತ್ರಿಕೆಯ ಮಾದರಿ
ಇ) ಅಧ್ಯಯನ ಕೌಶಲ್ಯ (Study Skill) ಇವುಗಳನ್ನು ಅಳವಡಿಸಿಕೊಳ್ಳುವ ವಿಧಾನ
ಪರೀಕ್ಷಾ ವಿಷಯ:
ಅ) ಪರೀಕ್ಷಾ ಭೀತಿ (Exam Fear)
ಆ) ಸಮಯ ನಿರ್ವಹಣೆ(Time Management)
ಇ) ಜ್ಞಾಪನಶಕ್ತಿ ಕಡಿಮೆ, ಮರೆವು ಎಂಬ ಭಾವನೆ, ನೆನಪಿನ ಶಕ್ತಿ ಉಳಿಸಿಕೊಳ್ಳುವ ವಿಧಾನ
ಈ) ತಂದೆ ತಾಯಿಗಳ, ಸಮಾಜ, ಸ್ನೇಹಿತರ ಒತ್ತಡ (Pressure) ನಿರ್ವಹಣೆ
ಉ) ಪರೀಕ್ಷೆ ಹತ್ತಿರವಾಗುತ್ತಿರುವ ವಿದ್ಯಾರ್ಥಿಗಳ ವರ್ತನೆಯು ಬದಲಾವಣೆಯಾಗುವುದು
ಊ) ಇಷ್ಟವಿಲ್ಲದ ವಿಷಯಗಳನ್ನು ಓದಬೇಕಾದ ಅನಿವಾರ್ಯತೆ, ಒತ್ತಡ (Pressure) ಕೀಳರಿಮೆ ಇತ್ಯಾದಿ.

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!