ಮುನಿಯಾಲು ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜಿಗೆ ಅನುಮತಿ

ಮುನಿಯಾಲು ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜಿಗೆ ಅನುಮತಿಮಣಿಪಾಲ: ಮುನಿಯಾಲು ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜು ನಡೆಸಲು ಸರಕಾರದ ಅನುಮತಿ ದೊರೆತಿದೆ  ಎಂದು ಸಂಸ್ಥೆ  ತಿಳಿಸಿದೆ. ಡಾ. ಯು. ಕೃಷ್ಣ ಮುನಿಯಾಲು ಇವರು 1939ರಲ್ಲಿ ಸ್ಥಾಪಿಸಿದ ಮುನಿಯಾಲು ಆಯುರ್ವೇದ ಸಂಸ್ಥೆಯು ಸದ್ಯ ಆಯುರ್ವೇದ ಆಸ್ಪತ್ರೆ, ಕಾಲೇಜು, ಸ್ನಾತಕೋತ್ತರ ವಿಭಾಗ, ಪಿ.ಹೆಚ್.ಡಿ. ಕೋರ್ಸುಗಳು, ಚಿಕಿತ್ಸಾಲಯಗಳು, ಸಂಶೋಧನಾ ಕೇಂದ್ರ, ಔಷಧಿ ತಯಾರಿಕಾ ಘಟಕ, ಗ್ರಂಥರಚನಾ ಕೇಂದ್ರ, ಗಿಡಮೂಲಿಕಾ ವನ ಮುಂತಾದವುಗಳನ್ನು ನಡೆಸುತ್ತಿದೆ ಎಂದು ಡಾ. ಯು. ಕೃಷ್ಣ ಮುನಿಯಾಲ್ ಮೆಮೋರಿಯಲ್ ಟ್ರಸ್ಟ್‍ ಸಂಸ್ಥೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಯೋಗದ ಉಪಯುಕ್ತತೆಯ ಬಗ್ಗೆ ಜಾಗತಿಕ ಮಟ್ಟದಲ್ಲಿಜಾಗೃತಿ ಮೂಡುತ್ತಿರುವ ಈ ಸಂದರ್ಭದಲ್ಲಿ ಪುರಾತನ ಯೋಗಪದ್ಧತಿಯ ಗತ ವೈಭವವನ್ನು ಅದರ ಎಲ್ಲಾ ಆಯಾಮಗಳೊಂದಿಗೆ ಸಂಶೋಧಿಸಿ, ಉಳಿಸಿ, ಬೆಳೆಸಲು ಇಲ್ಲಿ ಪ್ರಯತ್ನಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಮುನಿಯಾಲು ಆಯುರ್ವೇದ ಸಂಸ್ಥೆ ಆಯುರ್ವೇದದಲ್ಲಿ ಡಿಗ್ರಿಕೋರ್ಸ್, ಸ್ನಾತಕೋತ್ತರ ಕೋರ್ಸ್‍ಗಳು, ಪಿ.ಹೆಚ್.ಡಿ ಕೋರ್ಸ್‍ಗಳು, ಆಸ್ಪತ್ರೆ, ಗಿಡಮೂಲಿಕಾವನ, ಚಿಕಿತ್ಸಾಲಯಗಳು ಮತ್ತು ಔಷಧಿ ಉತ್ಪಾದನಾ ಘಟಕಗಳನ್ನು ನಡೆಸುತ್ತಿದೆ.

Dr-M.Vijayabhanu-shettyಸಂಸ್ಥೆಯ ಪ್ರಕಟಣೆಯಾದ ಸಚಿತ್ರ ಚರಕ ಸಂಹಿತೆಯು ಆಯುರ್ವೇದ ಕ್ಷೇತ್ರದ ಅತ್ಯಂತ ಪ್ರಮುಖ ಗ್ರಂಥವಾಗಿದ್ದು ಭಾರತದ ಮಾಜಿ ರಾಷ್ಟ್ರಪತಿ ಡಾ.ಎ.ಪಿ. ಜೆಅಬ್ದುಲ್‍ಕಲಾಂರಿಂದ ಪ್ರಶಂಸೆಗೊಳಪಟ್ಟು ಅವರಿಂದ ಬಿಡುಗಡೆಗೊಂಡಿರುತ್ತದೆ. ಮುನಿಯಾಲು ಆಯುರ್ವೇದ ಸಂಸ್ಥೆಯ ಅಧ್ಯಕ್ಷ ಡಾ. ಎಂ. ವಿಜಯಭಾನು ಶೆಟ್ಟಿಯವರು ಅಭಿವೃದ್ಧಿಪಡಿಸಿದ ಕ್ಯಾನ್ಸರ್ ಔಷಧಿ ಹಾಗೂ ಕ್ಯಾನ್ಸರ್ ಚಿಕಿತ್ಸಾ ಕ್ರಮಕ್ಕೆ ಎರಡು ಪ್ರತ್ಯೇಕ ಪೇಟೆಂಟ್‍ಗಳು ಅಮೆರಿಕಾದ ಡೈರೆಕ್ಟರ್ ಆಫ್ ಪೇಟೆಂಟ್ ಎಂಡ್ ಟ್ರೇಡ್‍ಮಾರ್ಕ್ ಆಫೀಸಿನಿಂದ ದೊರೆತಿದೆ. ಮುಂದಿನ ಇಪ್ಪತ್ತು ವರ್ಷಗಳ ಅವಧಿಗೆ ಸಲ್ಲುವ ಈ ಪೇಟೆಂಟ್ ಆಯುರ್ವೇದ ಇತಿಹಾಸದಲ್ಲಿ ಅಮೆರಿಕಾದಿಂದ ದೊರೆತ ಒಂದು ಅಪರೂಪದ ಮನ್ನಣೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!