ಮುನಿಯಾಲು ಆಯುರ್ವೇದ ಆಸ್ಪತ್ರೆಯಲ್ಲಿ ನೂತನ ಫಿಸಿಯೋಥೆರಪಿ ವಿಭಾಗ ಆರಂಭಗೊಂಡಿದೆ. ನರವ್ಯೂಹದ, ಮಾಂಸಪೇಶಿಗಳ, ಮೂಳೆಗಳ ತೊಂದರೆ, ಪಕ್ಷಾಘಾತ, ಸಂದು ನೋವು, ಬೆನ್ನು ನೋವುಗಳಂತಹಾ ಸಮಸ್ಯೆಗಳಿಗೆ ಫಿಸಿಯೋಥೆರಪಿ ಒಳ್ಳೆಯ ಪರಿಣಾಮಕಾರೀ ಚಿಕಿತ್ಸಾ ಕ್ರಮವಾಗಿದೆ.
ಮಣಿಪಾಲ: ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶ್‍ದಲ್ಲಿರುವ ಮುನಿಯಾಲು ಆಯುರ್ವೇದ ಆಸ್ಪತ್ರೆಯಲ್ಲಿ ನೂತನ ಫಿಸಿಯೋಥೆರಪಿ ವಿಭಾಗ ಆರಂಭಗೊಂಡಿದೆ. ದಿನಾಂಕ 08/04/2021ನೇ ಗುರುವಾರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಸತ್ಯನಾರಾಯಣರವರು ದೀಪ ಬೆಳಗಿಸುವುದರೊಂದಿಗೆ ವಿಭಾಗದ ಶುಭಾರಂಭಗೈದು ಮಾತನಾಡುತ್ತಾ, ಆಸ್ಪತ್ರೆಯಲ್ಲಿ ಈಗಾಗಲೇ ಲಭ್ಯವಿರುವ ಪಂಚಕರ್ಮ, ಯೋಗಚಿಕಿತ್ಸೆ, ಪಿರಮಿಡ್‍ಚಿಕಿತ್ಸೆ, ಮರ್ಮಚಿಕಿತ್ಸೆ, ಆಕ್ಯುಪಂಕ್ಚರ್‍ನಂತಹಾ ವಿಶೇಷ ಚಿಕಿತ್ಸಾ ಸೌಲಭ್ಯಗಳೊಂದಿಗೆ ಫಿಸಿಯೋಥೆರಪಿ ವಿಭಾಗ ಆರಂಭಗೊಂಡಿರುವುದು ರೋಗಿಗಳಿಗೆ ವರದಾನವಾಗಿ ಪರಿಣಮಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕಿಯಾದ ಡಾ. ಶ್ರದ್ಧಾ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ಯೋಗಿಶ್ ಶೆಟ್ಟಿ, ಹಿರಿಯ ವೈದ್ಯರಾದ ಡಾ. ಚಂದ್ರಕಾಂತ, ಡಾ. ಶ್ರೀಪತಿ ಆಚಾರ್ಯ, ಡಾ. ದಿನೇಶ ನಾಯಕ್, ಡಾ. ರವಿಶಂಕರ್ ಶೆಣೈ ಹಾಗೂ ಆಸ್ಪತ್ರೆಯ ಇನ್ನಿತರ ವೈದ್ಯಕೀಯ ಸಿಬ್ಬಂದಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.
ನರವ್ಯೂಹದ, ಮಾಂಸಪೇಶಿಗಳ, ಮೂಳೆಗಳ ತೊಂದರೆ, ಪಕ್ಷಾಘಾತ, ಸಂದು ನೋವು, ಬೆನ್ನು ನೋವುಗಳಂತಹಾ ಸಮಸ್ಯೆಗಳಿಗೆ ಫಿಸಿಯೋಥೆರಪಿ ಒಳ್ಳೆಯ ಪರಿಣಾಮಕಾರೀ ಚಿಕಿತ್ಸಾ ಕ್ರಮವಾಗಿದೆ. ಫಿಸಿಯೊಥೆರಪಿಯ ತಜ್ಞರ ತಂಡ ಇಲ್ಲಿ ಕಾರ್ಯ ನಿರ್ವಹಿಸಲಿದ್ದು ರೋಗಿಗಳು ಇದರ ಉಪಯೋಗ ಪಡೆಯ ಬಹುದಾಗಿದೆಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.