ಮಂಗಳೂರು: ಶ್ರೀಗುರು ಪರಾಶಕ್ತಿ ಮಠ, ಮರಕಡ ಮತ್ತು ಶ್ರೀ ಪರಾಶಕ್ತಿ ದೇಗುಲ ಸಮುಚ್ಛಯ ಮಡ್ಯಾರ್ ಆಶ್ರಯದಲ್ಲಿ ಇತ್ತೀಚೆಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು. ಜನವರಿ 26, ಶುಕ್ರವಾರದಂದು ಮರಕಡದಲ್ಲಿ ಪರಮಪೂಜ್ಯ ಶ್ರೀಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿ ಅವರ ಆಶೀರ್ವಾದದೊಂದಿಗೆ ನಡೆದ ಈ ಆರೋಗ್ಯ ತಪಾಸಣ ಕಾರ್ಯಕ್ರಮದಲ್ಲಿ ಕ್ಷೇತ್ರದ ಅಸಂಖ್ಯಾತ ಭಕ್ತರು ಪಾಲ್ಗೊಂಡು ಪ್ರಯೋಜನ ಪಡೆದರು.
ಗೋಮೂತ್ರ ಅರ್ಕದಿಂದ ಹಾಗೂ ಗೋವಿನಿಂದ ಲಭಿಸುವ ಉತ್ಪನ್ನಗಳಿಂದ ಆರೋಗ್ಯ ಉತ್ತಮಗೊಳಿಸುವ ಬಗ್ಗೆ ತಜ್ಞವೈದ್ಯರಿಂದ ಉಪನ್ಯಾಸ ಹಾಗೂ ವಿಚಾರ ಮಂಥನವೂ ನಡೆಯಿತು. ಈ ಸಂದರ್ಭದಲ್ಲಿ ಗೋ ಅರ್ಕ ಹಾಗೂ ಇತರೇ ಉತ್ಪನ್ನಗಳ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು.
ಗೋಮೂತ್ರ ಅರ್ಕ:
ಇದುವೇ ಸ್ವಸ್ಥ ಜೀವನದ ಮೂಲಮಂತ್ರ. ಆಯುರ್ವೇದದ ಪ್ರಕಾರ, ಎಲ್ಲಾ ರೋಗಿಗಳಿಗೆ ತ್ರಿದೋಷಗಳ ಸಂತುಲತೆ ಏರುಪೇರಾಗುವದೇ ಕಾರಣ – ವಾತ, ಪಿತ್ತ, ಕಫಗಳೆಂಬ ಈ ತ್ರಿದೋಷಗಳನ್ನು ಸಮತೋಲನದಲ್ಲಿರಿಸಲು ಗೋಮೂತ್ರ ಅರ್ಕ ನೆರವಾಗುವ ಮೂಲಕ ಆರೋಗ್ಯ ಉತ್ತಮವಾಗಿಸಲು ನೆರವಾಗುತ್ತದೆ.
ಪ್ರಯೋಜನಗಳು
- ಅಜೀರ್ಣ ಸಮಸ್ಯೆಗೆ
- ಯಕೃತ್ತಿನ ಕ್ಷಮತೆಗೆ
- ರೋಗನಿರೋಧಕ ಶಕ್ತಿ ವೃದ್ಧಿಗೆ
- ಕೊಬ್ಬು ಮತ್ತು ಕೊಲೆಸ್ಟ್ರಾಲ್ ನಿವಾರಣೆಗೆ
- ರಕ್ತ ಶುದ್ಧತೆ
- ಸಿಹಿಮೂತ್ರ, ಉದರದೋಷಗಳ ನಿವಾರಣೆಗೆ
ಪಥ್ಯ ಕ್ರಮ
- ದೇಹಕ್ಕೆ ಉಷ್ಣವಾಗುವ ಆಹಾರ ಪದಾರ್ಥಗಳನ್ನು ಸೇವಿಸಬಾರದು.
- ಮಸಾಲೆ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸಬೇಕು.
- ಸಸ್ಯಾಹಾರಕ್ಕೆ ಪ್ರಾಶಸ್ತ್ಯ.
- ನೀರನ್ನು ಹೆಚ್ಚು ಕುಡಿಯಬೇಕು.