ಹೃದಯ ದಿನ: ತಥಾಗತ್‍ನಿಂದ ಜಾಗೃತಿ ನಡಿಗೆ ಜಾಥಾ

ವಿಶ್ವಾದ್ಯಂತ ಸೆಪ್ಟೆಂಬರ್ 29ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಇದರ ಅಂಗವಾಗಿ ಬೆಂಗಳೂರಿನಲ್ಲಿ ಖ್ಯಾತ ಹಿರಿಯ ಹೃದ್ರೋಗ ತಜ್ಞ ಡಾ.ಮಹಂತೇಶ್ ಚರಂತಿಮಠ ಅವರ ನೇತೃತ್ವದಲ್ಲಿ ತಥಾಗತ್ ಹಾರ್ಟ್ ಕೇರ್ ಸೆಂಟರ್ ನಡೆಗೆ ಜಾಥಾ-ಮ್ಯಾರಥಾನ್ ಆಯೋಜಿಸಿದೆ. ಈ ಕೇಂದ್ರದಿಂದ ಪ್ರತಿವರ್ಷ ಹೃದ್ರೋಗ ತಡೆಗಟ್ಟುವಿಕೆ ಹಾಗೂ ಆರೋಗ್ಯಕರ ಹೃದಯಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿದೆ.

ಭಾರತದಲ್ಲಿ ಹೆಚ್ಚುತ್ತಿರುವ ತೀವ್ರ ಹೃದಯಾಘಾತ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲು ಈ ಜಾಥಾ ಹಮ್ಮಿಕೊಳ್ಳಲಾಗಿದೆ. ಯುವ ಜನತೆ, ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಹೃದ್ರೋಗದ ದುಷ್ಪರಿಣಾಮಗಳು ಮತ್ತು ಆರೋಗ್ಯಕರ ಹೃದಯದ ಬಗ್ಗೆ ಅರಿವು ಮೂಡಿಸುವುದು ಈ ಜಾಥಾದ ಉದ್ದೇಶ.

ಸೆಪ್ಟೆಂಬರ್ 30ರಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಿಂದ ಜಾಗೃತಿ ನಡಿಗೆ ಜಾಥಾ ಆರಂಭವಾಗಲಿದೆ. ಮಧ್ಯಾಹ್ನ 1 ಗಂಟೆ ವೇಳೆಗೆ ಮಲ್ಲೇಶ್ವರಂ (ಮಂತ್ರಿಮಾಲ್) ತನಕ ಹೃದಯ ಜಾಗೃತಿ ನಡಿಗೆ ಜಾಥಾ ನಡೆಯಲಿದೆ. ಮಂತ್ರಿಮಹೋದಯರು, ರಾಜಕೀಯ ಕ್ಷೇತ್ರದ ಧುರೀಣರು, ವಿವಿಧ ಕ್ಷೇತ್ರಗಳ ಖ್ಯಾತನಾಮರೂ ಸೇರಿದಂತೆ ಅನೇಕ ಗಣ್ಯರು, ಸಂಘ, ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ ಮಕ್ಕಳು, ವಿದ್ಯಾರ್ಥಿಗಳು, ವೈದ್ಯರು, ಶುಶ್ರೂಷಕರು ಒಳಗೊಂಡಂತೆ ಸಹಸ್ರಾರು ಮಂದಿ ಈ ನಡಿಗೆ ಜಾಥಾದಲ್ಲಿ ಪಾಲ್ಗೊಳ್ಳುವರು.

ಸ್ವಾತಂತ್ರ್ಯ ಉದ್ಯಾನದಿಂದ ಹೊರಟ ಜಾಥಾ ನಗರದ ವಿವಿಧೆಡೆ ಸಂಚರಿಸಿ ಮಂತ್ರಿಮಾಲ್ ಎದುರಿನ ಉದ್ಯಾನವನದಲ್ಲಿ ಸಮಾವೇಶಗೊಳ್ಳಲಿದೆ. ಪಾರ್ಕ್‍ನಲ್ಲಿ ತಜ್ಞ ವೈದ್ಯರು ಸಾರ್ವಜನಿಕರಿಗೆ ಉಚಿತ ಹೃದಯ ಆರೋಗ್ಯ ಮತ್ತು ಮಧುಮೇಹ ತಪಾಸಣೆ ನಡೆಸಿ ಔಷಧೋಪಚಾರಗಳ ಸಲಹೆ ಮತ್ತು ಮಾರ್ಗದರ್ಶನ ನೀಡುವರು.

ಸಣ್ಣ ಪರಿವರ್ತನೆಗಳಿಂದ ಪ್ರಬಲ ವ್ಯತ್ಯಾಸ ಸಾಧ್ಯ. ವಿಶ್ವ ಹೃದಯ ದಿನದ ಅಂಗವಾಗಿ ನಿಮ್ಮ ಶಕ್ತಿ, ನಿಮ್ಮ ಹೃದಯ ಮತ್ತು ಪ್ರೇರಣೆಯಿಂದ ಆರೋಗ್ಯಕರ ಹೃದಯದ ಬಗ್ಗೆ ವಿಶ್ವದ ಲಕ್ಷಾಂತರ ಜನರಿಗೆ ನೀವು ಸ್ಫೂರ್ತಿಯಾಗಬೇಕು. ಜಾಗತಿಕವಾಗಿ ಎಲ್ಲ ಸಾವಿನ ಪ್ರಕರಣಗಳಲ್ಲಿ ಹೃದ್ರೋಗ(ಕಾರ್ಡಿಯೋವ್ಯಾಸ್ಕುಲರ್ ಡಿಸೀಸ್-ಸಿವಿಡಿ)ದಿಂದಲೇ ಶೇ.31ರಷ್ಟು ಮಂದಿ ಸಾವಿಗೀಡಾಗುತ್ತಿದ್ದಾರೆ. ಪ್ರತಿ ವಷ್ 17.5 ದಶಲಕ್ಷ ಜನರು ಮೃತರಾಗುತ್ತಿದ್ದಾರೆ. ಆತಂಕದ ಸಂಗತಿ ಎಂದರೆ ಶೇಕಡ 80ರಷ್ಟು ಸಾವುಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಸಂಭವಿಸುತ್ತಿದೆ.

ನಿಮ್ಮ ಹೃದಯವು ನಿಮ್ಮ ಇಡೀ ದೇಹಕ್ಕೆ ಶಕ್ತಿ ಒದಗಿಸುತ್ತದೆ. ಇದು ನೀವು ಪ್ರೀತಿಸಲು, ನಗಲು ಮತ್ತು ನಿಮ್ಮ ಪರಿಪೂರ್ಣ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ಇದೇ ಕಾರಣಕ್ಕಾಗಿ ನೀವು ನಿಮ್ಮ ಹೃದಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ, ನೀವೇ ನಿಮ್ಮ ಹೃದಯವನ್ನು ಆಪತ್ತಿಗೆ ಒಳಪಡಿಸಿ ನಿಮ್ಮ ಅಮೂಲ್ಯ ಜೀವನಕ್ಕೆ ಗಂಡಾಂತರ ತಂದುಕೊಳ್ಳುತ್ತೀರಿ. ಸಿವಿಡಿಯು ಹೃದ್ರೋಗ ಮತ್ತು ಪಾಶ್ರ್ವವಾಯುನಂಥ ಗಂಭೀರ ಸಮಸ್ಯೆಗಳನ್ನು ಒಳಗೊಂಡಿರುತ್ತದೆ. ಸಿವಿಡಿ ವಿಶ್ವದ ನಂ.1 ಹಂತಕ. ಪ್ರತಿ ವರ್ಷ ಇದು 17.5 ದಶಲಕ್ಷ ಸಾವುಗಳಿಗೆ ಕಾರಣವಾಗುತ್ತಿದೆ. 2030ರ ವೇಳೆಗೆ ಇದು 23 ದಶಲಕ್ಷ ತಲುಪುವ ಆತಂಕ ಸೃಷ್ಟಿಯಾಗಿದೆ.

ಆದರೆ ಶುಭ ಸುದ್ದಿ ಎಂದರೆ ಸಿವಿಡಿಗಳಲ್ಲಿ ಬಹುತೇಕ ಸಮೆಸ್ಯೆಗಳನ್ನು ತಡೆಗಟ್ಟಲು ಸಾಧ್ಯ. ದೈನಂದಿನ ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ, ಆರೋಗ್ಯಕರ ಆಹಾರ ಮತ್ತು ನೀರು ಸೇವನೆಯಿಂದ, ದೂಮಪಾನ ವ್ಯರ್ಜಿಸುವುದರಿಂದ ಮತ್ತು ನಿಯತವಾಗಿ ವ್ಯಾಯಾಮ ಮಡುವುದರಿಂದ ಹೃದ್ರೋಗ ಉಲ್ಬಣಗೊಳ್ಳುವುದಕ್ಕೆ ಕಡಿವಾಣ ಹಾಕಬಹುದು.

ವಿಶ್ವ ಆರೋಗ್ಯ ದಿನದ ಸಂದರ್ಭದಲ್ಲಿ ನಿಮ್ಮ ಶಕ್ತಿ, ನಿಮ್ಮ ಹೃದಯ ಮತ್ತು ಪ್ರೇರಣೆಯಿಂದ ಆರೋಗ್ಯಕರ ಹೃದಯ ಹೊಂದಲು ವಿಶ್ವದ ಲಕ್ಷಾಂತರ ಜನರಿಗೆ ಹೇಗೆ ನೀವು ಸ್ಫೂರ್ತಿಯಾಗಬಲ್ಲಿರಿ ಎಂಬುದನ್ನು ವಿನಿಮಯ ಮಾಡಿಕೊಳ್ಳುವಂತೆ ನಾವು ನಿಮ್ಮನ್ನು ಕೋರುತ್ತಿದ್ದೇವೆ. ಆದಕಾರಣ ನಾವೆಲ್ಲರೂ ನಮ್ಮ ಹೃದಯಗಳು ಉತ್ತಮವಾಗಿರುವಂತೆ ಕ್ರಮ ಕೈಗೊಂಡು ಆ ಮೂಲಕ ನಮ್ಮ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆ ಮಾಡಿಕೊಳ್ಳಬೇಕಾದ ಅಗತ್ಯವಿದೆ.

ನಿಮ್ಮ ಹೃದಯಕ್ಕೆ ಶಕ್ತಿ ತುಂಬಿ, ನಿಮ್ಮ ಹೃದಯವನ್ನು ಸುಸ್ಥಿತಿಯ ಚಲನೆಯಲ್ಲಿಡಿ, ನಿಮ್ಮ ಹೃದಯವನ್ನು ಪ್ರೀತಿಸಿ ಮತ್ತು ನಿಮ್ಮ ಶಕ್ತಿಯ ಸ್ರೂರ್ತಿಯನ್ನು ಹಂಚಿಕೊಳ್ಳಿ.
ಕಾರ್ಯಕ್ರಮ ಉದ್ಘಾಟನೆ ಮತ್ತು ಭಾಗವಹಿಸಲಿರುವ ಗಣ್ಯರು
ಡಾ.ಸಿ.ಎಸ್.ಅಶ್ವತ್ಧ ನಾರಾಯಣ, ಮಾನ್ಯ ಉಪ ಮುಖ್ಯಮಂತ್ರಿಯವರು, ಕರ್ನಾಟಕ ಸರ್ಕಾರ
ಶ್ರೀ ದಿನೇಶ್ ಗುಂಡೂರಾವ್, ಮಾನ್ಯ ಶಾಸಕರು, ಗಾಂಧಿನಗರ ಹಾಗೂ ಕೆಪಿಸಿಸಿ ಅಧ್ಯಕ್ಷರು
ಶ್ರೀಮತಿ ಸೌಮ್ಯ ರೆಡ್ಡಿ, ಮಾನ್ಯ ಶಾಸಕರು, ಜಯನಗರ, ಬೆಂಗಳೂರು,
ಶ್ರೀ ಪಿ.ಆರ್.ರಮೇಶ್, ಮಾನ್ಯ ವಿಧಾನ ಪರಿಷತ್ ಸದಸ್ಯರು,
ಶ್ರೀ ಬಾಸ್ಕರ್ ರಾವ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ.
ಡಾ. ಮಹಂತೇಶ್ ಆರ್. ಚರಂತಿಮಠ್, ವ್ಯವಸ್ಥಾಪಕ ನಿರ್ದೇಶಕರು,
ತಥಾಗತ್ ಹಾರ್ಟ್ ಕೇರ್ ಸೆಂಟರ್.

ಕಾರ್ಯಕ್ರಮ ವಿವರ

ವಿಶ್ವ ಆರೋಗ್ಯ ದಿನಾಚರಣೆ ಜಾಗೃತಿ ನಡಿಗೆ
ದಿನಾಂಕ: 30ನೇ ಸೆಪ್ಟೆಂಬರ್, 2019, ಸೋಮವಾರ
ಸಮಯ: ಬೆಳಗ್ಗೆ 8 ರಿಂದ ಮಧ್ಯಾಹ್ನ 1ರವರೆಗೆ
ಸ್ಥಳ: ಪ್ರೀಡಂ ಪಾರ್ಕ್‍ನಿಂದ ಮಂತ್ರಿಮಾಲ್ ಎದುರಿನ ಉದ್ಯಾನವನ
ಜಾಥಾ ಹಾಗೂ ಉಚಿತ ಹೃದಯ ಮತ್ತು ಮಧುಮೇಹ ತಪಾಸಣೆ
ಸಹಭಾಗಿತ್ವ: ಬೆಂಗಳೂರು ನಗರದ ಕಾಲೇಜು ವಿದ್ಯಾರ್ಥಿಗಳು, ಶಾಲಾ ಮಕ್ಕಳು, ಮಲ್ಲಿಗೆ ಆಸ್ಪತ್ರೆ,
ಬಸವ ಬಳಗ, ಬಿ.ಎಲ್. ಕಶ್ಯಪ್ ಅಂಡ್ ಕಂಪನಿ, ಲಯನ್ಸ್ ಕ್ಲಬ್, ಔಷಧಿ ತಯಾರಿಕಾ
ಕಂಪನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಮತ್ತು ಸಮಾಜ ಸೇವಕರು

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!