Health Vision

Health Vision

SUBSCRIBE

Magazine

Click Here

ಡಾ. ನಂದನ್ಸ್ ಕೋಲ್ಡ್ ಲೇಸರ್ ಥೆರಪಿ – ಆರೋಗ್ಯ ಆರೈಕೆ ಪ್ರಶಸ್ತಿ

ಬೆಂಗಳೂರಿನ ಡಾ. ನಂದನ್ಸ್ ಕೋಲ್ಡ್ ಲೇಸರ್ ಥೆರಪಿ ಕ್ಲಿನಿಕ್ ಗೆ ನವದೆಹಲಿ ಮೂಲದ ಹೆಲ್ತ್ ಕೇರ್ ರಿಸರ್ಚ್ ಮಾರ್ಕೆಟ್ ಕಂಪನಿಯಿಂದ ಇತ್ತೀಚೆಗೆ ಭಾರತದ ಬಹು ವಿಶ್ವಾಸಾರ್ಹ ಹೆಲ್ತ್ ಕೇರ್ ಅವಾರ್ಡ್(ಆರೋಗ್ಯ ಆರೈಕೆ ಪ್ರಶಸ್ತಿ) ನೀಡಲಾಗಿದೆ.

ಶ್ರೀಸಂಜೀವಿನಿ ಹೆಲ್ತ್ ಸೆಲ್ಯೂಷನ್ಸ್‍ನ ಒಂದು ವಿಭಾಗವಾಗಿರುವ ಡಾ. ನಂದನ್ಸ್ ಕೋಲ್ಡ್ ಲೇಸರ್ ಥರಪಿ ಕ್ಲಿನಿಕ್  ಕೋಲ್ಡ್ ಲೇಸರ್ ಥೆರಪಿಯಲ್ಲಿ ಪ್ರಾವಿಣ್ಯತೆ ಪಡೆದಿದೆ. ಇದನ್ನು ಪರಿಗಣಿಸಿ ದೇಶದ ಬಹು ನಂಬಿಕೆಯ ಆರೋಗ್ಯ ಆರೈಕೆ ಪ್ರಶಸ್ತಿಯನ್ನು ಕೊಡ ಮಾಡಲಾಗಿದೆ.

ಡಾ.ನಂದನ್ಸ್ ಕೋಲ್ಡ್ ಲೇಸರ್ ಥೆರಪಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ಯಾಮ್ ರಘುನಂದನ್ ಹಾಗೂ ವೈದ್ಯಕೀಯ ನಿರ್ದೇಶಕ ಡಾ. ರವಿ ಪಂಡಿತ್ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು.

ಡಾ. ನಂದನ್ಸ್ ಕೋಲ್ಡ್ ಲೇಸರ್ ಥೆರಪಿ ಕ್ಲಿನಿಕ್ ಮುಂಚೂಣಿಯಲ್ಲಿರುವ ಆರೋಗ್ಯ ಆರೈಕೆ ಪೂರೈಸುತ್ತಿರುವ ಸಂಸ್ಥೆಯಾಗಿದ್ದು, 2009ರಿಂದಲೂ ಕೋಲ್ಡ್ ಲೇಸರ್ ಚಿಕಿತ್ಸೆಯಲ್ಲಿ ಗಮನಾರ್ಹ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಆರೋಗ್ಯ ಆರೈಕೆ ಸೇವೆಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಾ ಹಲವಾರು ಪುರಸ್ಕಾರ ಮತ್ತು ಮಾನ್ಯತೆಗೆ ಪಾತ್ರವಾಗಿದೆ.

 

Back To Top