ಮದ್ದೂರು : ಯಾವುದೇ ರೀತಿಯ ಅಡ್ಡ ಪರಿಣಾಮವಿಲ್ಲದ ವೈದ್ಯ ಪದ್ಧತಿ `ಆಯುರ್ವೇದ ವೈದ್ಯ ಪದ್ಧತಿ’ಯಾಗಿದ್ದು ಇದರಿಂದ ಸಕಾರಾತ್ಮಕ ಚಿಕಿತ್ಸೆ ಸಾಧ್ಯ’ ಎಂದು ಶಾಸಕ ಡಿ.ಸಿ. ತಮ್ಮಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಭವನದಲ್ಲಿ ಮದ್ದೂರು ರೋಟರಿ ಸಂಸ್ಥೆ, ಮೈತ್ರಿ ರೋಟರಿ ಹಾಗೂ ಇನ್ನರ್‍ವ್ಹೀಲ್ ಸಂಸ್ಥೆ ಭಾನುವಾರ ಉಚಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಹೊಸಕೋಟೆಯ ಖುಷಿ ಆಯುರ್ವೇದ ಸಂಶೋಧನಾಲಯದ ವೈದ್ಯರು 150ಕ್ಕೂ ಹೆಚ್ಚು ಮಂದಿಯನ್ನು ತಪಾಸಣೆ ಮಾಡಿ ಔಷಧಿ ನೀಡಿದರು. ಮದ್ದೂರು ಡಯಾಗ್ನಸ್ಟಿಕ್ ಸೆಂಟರ್ ಸಿಬ್ಬಂದಿ ರೋಗಿಗಳ ರಕ್ತ ತಪಾಸಣೆ ನಡೆಸಿದರು.
ರೋಟರಿ ಸಂಸ್ಥೆ ಅಧ್ಯಕ್ಷ ಡಿ.ಪಿ. ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯ ಚಿಕ್ಕಮರಿಯಪ್ಪ, ರೋಟರಿ ನಿಯೋಜಿತ ಉಪ ಗವರ್ನರ್ ತಿಪ್ಪೂರು ರಾಜೇಶ್, ಮಾಜಿ ಅಧ್ಯಕ್ಷರಾದ ನೈದಿಲೆ ಚಂದ್ರು, ಬಿ.ಡಿ. ಹೊನ್ನೇಗೌಡ, ಎಚ್.ಎಸ್. ರಾಜಶೇಖರಮೂರ್ತಿ, ಬಿ. ಅಪ್ಪಾಜಿಗೌಡ, ಎಂ.ಬಿ. ಹಳ್ಳಿ ಬಸವರಾಜು, ಮೈತ್ರಿ ರೋಟರಿ ಅಧ್ಯಕ್ಷ ಮಮತಾಚಂದ್, ಮಾಜಿ ಅಧ್ಯಕ್ಷೆ ಅನಸೂಯ ಶಿವಪ್ಪ, ಇನ್ನರ್‍ವ್ಹೀಲ್ ಅಧ್ಯಕ್ಷೆ ಧನಲಕ್ಷ್ಮಿ, ಕಾರ್ಯದರ್ಶಿ ಸೌಮ್ಯ, ಪದಾಧಿಕಾರಿಗಳಾದ ಸಾದೊಳಲು ಮಹೇ, ಪ್ರಶಾಂತ್, ಮಧು ಪಾಲ್ಗೊಂಡಿದ್ದರು.