ಬೆಂಗಳೂರು : ಬೆಂಗಳೂರಿನ ಯೋಗ ಚೈತನ್ಯ ಕೇಂದ್ರದ ಆಶ್ರಯದಲ್ಲಿ ಐದನೇ ರಾಷ್ಟ್ರೀಯ ಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ ಜುಲೈ 28-29 ರಂದು ನಡೆಯಲಿದೆ.
ಬೆಂಗಳೂರಿನ ಹೊಸೂರು ಮುಖ್ಯರಸ್ತೆ, ಹಳೆ ಚಂದಾಪುರದಲ್ಲಿರುವ `ಸನ್ ಪ್ಯಾಲೇಸ್’ ಸಭಾಂಗಣದಲ್ಲಿ ಯೋಗಾಸನ ಸ್ಪರ್ಧೆಗಳು ನಡೆಯಲಿದ್ದು, ಯೋಗ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಗುವುದು. ಹಾಗೆಯೇ ಯೋಗ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯಮಗಳ ಪ್ರದರ್ಶನ ಮೇಳವನ್ನು ಆಯೋಜಿಸಲಾಗಿದೆ. ಎಂದು ಚೈತನ್ಯ ಯೋಗ ಕೇಂದ್ರದ ಯೋಗಾಚಾರ್ಯ ಕೆ.ಎನ್. ಶ್ರೀವತ್ಸ ಕುಮಾರ್ ಹೇಳಿದ್ದಾರೆ.
www.chaithanyayoga.com ಮೂಲಕ ಆನ್‍ಲೈನ್‍ನಲ್ಲಿ ಸ್ಪರ್ಧೆಗೆ ನೋಂದಣಿಗೆ ಅವಕಾಶವಿದ್ದು, ಹೆಚ್ಚಿನ ವಿವರಗಳಿಗೆ ಚೈತನ್ಯ ಯೋಗ ಕೇಂದ್ರ, ನಂ.9, `ಪ್ರಗತಿ’, 8ನೇ ಕ್ರಾಸ್, ಇಟ್ಟುಮಡು ಮುಖ್ಯರಸ್ತೆ, ಬೆಂಗಳೂರು-85. ದೂ.: 9481213167/9035665166ನ್ನು ಸಂಪರ್ಕಿಸಬಹುದು.