ನವಜಾತ ಶಿಶುಗಳ ಶ್ರವಣ ಸಾಮಥ್ರ್ಯ ಸ್ಕ್ರೀನಿಂಗ್ ಕಡ್ಡಾಯಗೊಳಿಸಲು ಬ್ರೆಟ್ ಲೀ ಮನವಿ

ಬೆಂಗಳೂರು: ಆಸ್ಟ್ರೇಲಿಯಾ ಕ್ರಿಕೆಟ್‍ನ ದಂತಕಥೆ ಎನಿಸಿದ ಬ್ರೆಟ್ ಲೀ ತಮ್ಮ ಹೊಸ ಫೇವರಿಟ್ ಗುರಿ ಸಾಧಿಸುವ ಉದ್ದೇಶದಿಂದ ಬೆಂಗಳೂರಿಗೆ ಆಗಮಿಸಿದ್ದಾರೆ: ಅದೆಂದರೆ ಶ್ರವಣ ನಷ್ಟದ ಬಗ್ಗೆ ಜಾಗೃತಿ ಮೂಡಿಸುವುದು. ಶ್ರವಣಸಾಧನ ಉತ್ಪಾದನಾ ಮತ್ತು ಅಳವಡಿಕೆ ಕಂಪನಿಯಾದ ಕೊಶ್ಲೆರ್‍ಗೆ ಜಾಗತಿಕ ಶ್ರವಣ ರಾಯಭಾರಿಯಾಗಿರುವ ಬ್ರೆಟ್ ಲೀ, ಮುಖ್ಯವಾಗಿ ಮಕ್ಕಳಲ್ಲಿ ಶ್ರವಣ ನಷ್ಟ ಮತ್ತು ಅದರ ಭಾವನಾತ್ಮಕ ಹಾಗೂ ಸಾಮಾಜಿಕ ಪರಿಣಾಮದ ಬಗ್ಗೆ ಅರಿವು ಮುಡಿಸುವ ಅಭಿಯಾನದಲ್ಲಿ ನಾಲ್ಕು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ.

ನಾಲ್ಕು ವರ್ಷಗಳಿಂದ ತಮ್ಮ ಅಭಿಯಾನದ ಪ್ರಮುಖ ತಿರುಳು ಎನಿಸಿದ ಯುಎನ್‍ಎಚ್‍ಎಸ್ ಕಡ್ಡಾಯಗೊಳಿಸುವಂತೆ ಬ್ರೆಟ್ ಲೀ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಜತೆಗೆ ಶ್ರವಣ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವಂತೆಯೂ ಕೋರಿದ್ದಾರೆ. ತೀರಾ ಶ್ರವಣ ನಷ್ಟಕ್ಕೆ ಒಳಗಾಗುವ ಮಕ್ಕಳ ಪೋಷಕರು ಆರಂಭಿಕ ಹಂತದಲ್ಲೇ ಮಧ್ಯಪ್ರವೇಶಿಸಿ, ಮಕ್ಕಳು ಮಾಮೂಲಿ ಶಾಲೆಗಳಿಗೆ ಹೋಗಿ ಸಹಜ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದೂ ಲೀ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್‍ನಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಬ್ರೆಟ್ ಲೀ, “ಶ್ರವಣ ದೋಷ ಭಾರತದಲ್ಲಿ ಎರಡನೇ ಅತಿದೊಡ್ಡ ಅಂಗವೈಕಲ್ಯವಾಗಿದೆ. ಸಾಮಾನ್ಯವಾಗಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಶ್ರವಣ ಸಾಮಥ್ರ್ಯದ ಬಗ್ಗೆ ನವಜಾತ ಶಿಶುಗಳನ್ನು ಸ್ಕ್ರೀನಿಂಗ್‍ಗೆ ಒಳಪಡಿಸುವ ವ್ಯವಸ್ಥೆ ಇಲ್ಲ. ವಿದೇಶಗಳಲ್ಲಿ ಸಾರ್ವತ್ರಿಕವಾಗಿ ನವಜಾತ ಶಿಶುಗಳ ಶ್ರವಣ ಸ್ಕ್ರೀನಿಂಗ್ (ಯುಎನ್‍ಎಚ್‍ಎಸ್) ಕಡ್ಡಾಯ” ಎಂದು ವಿವರಿಸಿದರು.

ಇದಕ್ಕೂ ಮುನ್ನ ಬ್ರೆಟ್ ಲೀ, ವಾಯುಪಡೆಯ ಕಮಾಂಡ್ ಹಾಸ್ಪಿಟಲ್‍ಗೆ ಭೇಟಿ ನೀಡಿ, ಯುಎನ್‍ಎಚ್‍ಎಸ್ ಪ್ರಕ್ರಿಯೆಯ ಅಂಗವಾಗಿ ಎರಡು ನವಜಾತ ಶಿಶುಗಳ ಶ್ರವಣ ಸ್ಕ್ರೀನಿಂಗ್‍ಗೆ ಸಾಕ್ಷಿಯಾದರು. ಕಮಾಂಡ್ ಆಸ್ಪತ್ರೆಯಲ್ಲಿರುವ ಸೌಲಭ್ಯಗಳನ್ನು, ಅದರಲ್ಲೂ ಮುಖ್ಯವಾಗಿ ನವಜಾತ ಶಿಶುಗಳ ಶ್ರವಣ ಸ್ಕ್ರೀನಿಂಗ್‍ಗೆ ಇರುವ ಸೌಲಭ್ಯಗಳನ್ನು ವೀಕ್ಷಿಸಿದರು.

ಕಮಾಂಡ್ ಆಸ್ಪತ್ರೆಯ ಕಮಾಂಡೆಂಟ್ ವಾಯುಪಡೆಯ ಉಪ ಮಾರ್ಷಲ್ ರಾಕೇಶ್ ಕುಮಾರ್ ರನ್ಯಾಲ್, ಗ್ರೂಪ್ ಕ್ಯಾಪ್ಟನ್ ಡಾ.ಹಿಮಾಂಶು ಸ್ವಾಮಿ, ಕಮಾಂಡ್ ಆಸ್ಪತ್ರೆಯ ಇಎನ್‍ಟಿ ಸರ್ಜನ್ ಮತ್ತು ನರರೋಗಶಾಸ್ತ್ರಜ್ಞರು ಬ್ರೆಟ್ ಲೀ ಅವರ ಆಸ್ಪತ್ರೆ ವೀಕ್ಷಣೆಗೆ ಜತೆಗಿದ್ದರು. ವಾಯುಪಡೆಯ ಉಪ ಮಾರ್ಷಲ್ ರನ್ಯಾಲ್ ಅವರು, ಯುಎನ್‍ಎಚ್‍ಎಸ್‍ನ ಮಹತ್ವವನ್ನು ಒತ್ತಿ ಹೇಳಿದರು. “ನವ ಶ್ರುತಿ ತರಂಗ ಎನ್ನುವ ಆರೋಗ್ಯ ಯೋಜನೆ ತಮ್ಮ ಆಸ್ಪತ್ರೆಯ ಅತ್ಯಂತ ಯಶಸ್ವಿ ಯೋಜನೆಯಾಗಿದೆ” ಎಂದು ಅವರು ಹೇಳಿದರು. “ಕೊಶ್ಲೆರ್ ಶ್ರವಣ ಸಾಧನ ಅಳವಡಿಕೆ ವ್ಯವಸ್ಥೆಯನ್ನು ಹೊಂದಿದ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವಾ ಆಸ್ಪತ್ರೆ (ಎಎಫ್‍ಎಂಎಸ್)ಗಳ ಕೆಲವೇ ಆಸ್ಪತ್ರೆಗಳ ಪೈಕಿ ಕಮಾಂಡ್ ಹಾಸ್ಪಿಟಲ್ ಏರ್‍ಫೋರ್ಸ್ ಬೆಂಗಳೂರು (ಸಿಎಚ್‍ಎಎಫ್‍ಬಿ) ಕೂಡಾ ಒಂದು. ನವಶ್ರುತಿ ತರಂಗ್ ಯೋಜನೆ ಆರಂಭವಾದ ಬಳಿಕ ಇದುವರೆಗೆ 135 ಶ್ರವಣಸಾಧನ ಅಳವಡಿಕೆ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸಲಾಗಿದೆ” ಎಂದು ವಿವರಿಸಿದರು.

“ನವಜಾತ ಶಿಶುಗಳ ಶ್ರವಣ ಸ್ಕ್ರೀನಿಂಗ್‍ನಿಂದ ಹಿಡಿದು, ಶ್ರವಣ ಸಾಧನಗಳವರೆಗೆ, ತೀವ್ರತರ ಶ್ರವಣ ದೋಷದ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸಾ ನಿರ್ವಹಣೆ ಮತ್ತು ಕೊಶ್ಲೆರ್ ಶ್ರವಣ ಸಾಧನ ಅಳವಡಿಕೆವರೆಗೆ ನಮ್ಮ ಯೋಜನೆಯು ಸಮಗ್ರವಾಗಿದೆ” ಎಂದು ಗ್ರೂಪ್‍ಕ್ಯಾಪ್ಟನ್ ಡಾ.ಸ್ವಾಮಿ ಹೇಳಿದರು. ಆರೈಕೆಯಲ್ಲಿ ಅತ್ಯುತ್ತಮ ಗುಣಮಟ್ಟವನ್ನು ನಾವು ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವಾದ್ಯಂತ 466 ದಶಲಕ್ಷ ಮಂದಿ ಗಂಭೀರ ಪ್ರಮಾಣದ ಶ್ರವಣದೋಷದಿಂದ ಬಳಲುತ್ತಿದ್ದು, ಈ ಪೈಕಿ 34 ದಶಲಕ್ಷ ಮಂದಿ ಮಕ್ಕಳು ಸೇರಿದ್ದಾರೆ. ಯುಎನ್‍ಎಚ್‍ಎಸ್ ಕಡ್ಡಾಯಗೊಳಿಸುವಂಥ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ, 2050ರ ವೇಳೆಗೆ 900 ದಶಲಕ್ಷ ಮಂದಿ ಶ್ರವಣದೋಷದಿಂದ ಬಳಲಲಿದ್ದಾರೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇಷ್ಟಾಗಿಯೂ ಬಹುತೇಕ ಮಂದಿಗೆ ಶ್ರವಣದೋಷಕ್ಕೆ ಅತ್ಯಾಧುನಿಕ ಚಿಕಿತ್ಸೆ ಲಭ್ಯವಿದೆ ಎಂಬ ಅರಿವು ಇಲ್ಲ.

ಕೊಶ್ಲೆರ್ ಲಿಮಿಟೆಡ್ ಬಗ್ಗೆ:
ಕೊಶ್ಲೆರ್ ಅಳವಡಿಸಬಹುದಾದ ಶ್ರವಣ ಸೊಲ್ಯೂಶನ್ ಉತ್ಪಾದನೆಯಲ್ಲಿ ಜಾಗತಿಕವಾಗಿ ಅಗ್ರಗಣ್ಯ ಕಂಪನಿ. ಕಂಪನಿ ಜಾಗತಿಕವಾಗಿ 3500ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ಸಂಶೋಧನೆ ಮತ್ತು ಅಭಿವೃದ್ಧಿಗೆ ವಾರ್ಷಿಕ 150 ದಶಲಕ್ಷ ಆಸ್ಟ್ರೇಲಿಯನ್ ಡಾಲರ್ ಮೊತ್ತವನ್ನು ವಿನಿಯೋಗಿಸುತ್ತಿದೆ. ಕೊಶ್ಲೆರ್ ಅಳವಡಿಕೆಗೆ ಶ್ರವಣ ಸಾಧನಗಳು, ಎಲುಬು ಸಂಕುಚಿತಗೊಳಿಸುವ ಸಾಧನ ಮತ್ತು ಶ್ರವಣ ಸಾಧನಗಳು ಇದರ ಪ್ರಮುಖ ಉತ್ಪನ್ನಗಳಾಗಿವೆ. ಮಂದ ಪ್ರಮಾಣದ ಶ್ರವಣ ನಷ್ಟದಿಂದ ಹಿಡಿದು ತೀವ್ರ ಪ್ರಮಾಣದ ಶ್ರವಣ ದೋಷದ ವರೆಗೆ ಎಲ್ಲ ಬಗೆಯ ಶ್ರವಣದೋಷದ ಚಿಕಿತ್ಸೆಗೆ ಪೂರಕವಾಗುವಂತೆ ಉತ್ಪನ್ನಗಳನ್ನು ರೂಪಿಸಲಾಗಿದೆ. ವಿಶ್ವಾದ್ಯಂತ 100ಕ್ಕೂ ಹೆಚ್ಚು ದೇಶಗಳ ಎಲ್ಲ ವಯೋಮಾನದ 4.50 ಲಕ್ಷ ಮಂದಿ ಕೊಶ್ಲೆರ್‍ನಿಂದಾಗಿ ಶ್ರವಣ ಸಾಮಥ್ರ್ಯ ಪಡೆದಿದ್ದಾರೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!