ಆಯುರ್ವೇದ ಪ್ರಶಸ್ತಿ ಭಾಜನರು

ಪ್ರತಿವರ್ಷ ಧನ್ವಂತರಿ ಜಯಂತಿಯನ್ನು ರಾಷ್ಟ್ರೀಯ ಆಯುರ್ವೇದ ದಿನವಾಗಿ ಆಚರಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಆಯುರ್ವೇದ ಕ್ಷೇತ್ರದಲ್ಲಿ ಶ್ರೇಷ್ಠ ಸೇವೆಸಲ್ಲಿಸಿರುವ ಗಣ್ಯವರೇಣ್ಯರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲು ಆಯುರ್ವೇದ ಕ್ಷೇತ್ರದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿರುವ ಪ್ರಶಾಂತಿ ಆಯುರ್ವೆದಿಕ್ ಸೆಂಟರ್ ನಿರ್ಧರಿಸಿದೆ. ಐದೂ ಪ್ರಶಸ್ತಿಗಳನ್ನು ಈ ವರ್ಷದಿಂದ ಪ್ರಾರಂಭಿಸಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶೀಘ್ರದಲ್ಲಿ ಹಮ್ಮಿಕೊಳ್ಳಲಾಗುವುದು. 2019ರ ಪ್ರಶಸ್ತಿ ಭಾಜನರ ವಿವರ ಈ ಕೆಳಗಿನಂತಿದೆ.
ಆಯುರ್ವೇದ ರತ್ನ:
ಡಾ. ಬಿ.ಜಿ. ಗೋಪಿನಾಥ್, ಬೆಂಗಳೂರು
ವಿಶ್ವದ ಜನರ ಸ್ವಾಸ್ಥ್ಯಕ್ಕಾಗಿ, ದೇಶಕ್ಕಾಗಿ, ಆಯುರ್ವೇದಕ್ಕಾಗಿ, ಸರ್ವೋನ್ನತ ಸೇವೆಸಲ್ಲಿಸಿದ ಹಿರಿಯ ಆಯುರ್ವೇದ ವೈದ್ಯರಿಗೆ ಜೀವಮಾನದ ಶ್ರೇಷ್ಠ ಸಾಧನೆಗಾಗಿ ನೀಡಿ ಪುರಸ್ಕರಿಸುವ ಪರಮೋಚ್ಛ ಪ್ರಶಸ್ತಿ.
ಪ್ರಶಸ್ತಿಯು ಬಂಗಾರದ ಪದಕ, ತಾಮ್ರದ ಪ್ರಶಸ್ತಿ ಫಲಕ ಹಾಗೂ ಒಂದು ಲಕ್ಷ ರೂಪಾಯಿ ಗೌರವಧನವನ್ನು ಒಳಗೊಂಡಿರುತ್ತದೆ.
ಆಯುರ್ವೇದ ವಿಶಾರದ:
ಡಾ. ಶೈಲೇಶ್ ನಾಡಕರ್ಣಿ, ಮುಂಬೈ
ವಿಶ್ವದ ಜನರ ಸ್ವಾಸ್ಥ್ಯಕ್ಕಾಗಿ, ದೇಶಕ್ಕಾಗಿ, ಆಯುರ್ವೇದಕ್ಕಾಗಿ, ಅಪ್ರತಿಮ ಸೇವೆಸಲ್ಲಿಸಿದ ಹಿರಿಯ ಆಯುರ್ವೇದ ವೈದ್ಯರಿಗೆ ನೀಡಿ ಪುರಸ್ಕರಿಸುವ ಉತ್ಕೃಷ್ಟ ಪ್ರಶಸ್ತಿ.
ಪ್ರಶಸ್ತಿಯು ಬಂಗಾರದ ಪದಕ, ತಾಮ್ರದ ಪ್ರಶಸ್ತಿ ಫಲಕ ಹಾಗೂ ಎಪ್ಪತ್ತೈದು ಸಾವಿರ ರೂಪಾಯಿ ಗೌರವಧನವನ್ನು ಒಳಗೊಂಡಿರುತ್ತದೆ.
ಆಯುರ್ವೇದ ವಿಭೂಷಣ:
ಡಾ. ಎಲ್. ಮಹಾದೇವನ್, ಕನ್ಯಾಕುಮಾರಿ
ವಿಶ್ವದ ಜನರ ಸ್ವಾಸ್ಥ್ಯಕ್ಕಾಗಿ, ದೇಶಕ್ಕಾಗಿ, ಆಯುರ್ವೇದಕ್ಕಾಗಿ, ಅನುಪಮ ಸೇವೆಸಲ್ಲಿಸಿದ ಆಯುರ್ವೇದ ತಜ್ಞ ಚಿಕಿತ್ಸಕರಿಗೆ ನೀಡಿ ಪುರಸ್ಕರಿಸುವ ಅತ್ಯುನ್ನತ ಪ್ರಶಸ್ತಿ.
ಪ್ರಶಸ್ತಿಯು ಬಂಗಾರದ ಪದಕ, ತಾಮ್ರದ ಪ್ರಶಸ್ತಿ ಫಲಕ ಹಾಗೂ ಅರುವತ್ತು ಸಾವಿರ ರೂಪಾಯಿ ಗೌರವಧನವನ್ನು ಒಳಗೊಂಡಿರುತ್ತದೆ.
ಆಯುರ್ವೇದ ಭೂಷಣ:
ಡಾ. ಎನ್. ಶ್ರೀಕಾಂತ್, ನವದೆಹಲಿ
ವಿಶ್ವದ ಜನರ ಸ್ವಾಸ್ಥ್ಯಕ್ಕಾಗಿ, ದೇಶಕ್ಕಾಗಿ, ಆಯುರ್ವೇದಕ್ಕಾಗಿ, ಅಪ್ರತಿಮ ಸೇವೆಸಲ್ಲಿಸಿದ ಆಯುರ್ವೇದ ತಜ್ಞರಿಗೆ ನೀಡಲಾಗುವ ಉನ್ನತ ಪ್ರಶಸ್ತಿ.
ಪ್ರಶಸ್ತಿಯು ಬಂಗಾರದ ಪದಕ, ತಾಮ್ರದ ಪ್ರಶಸ್ತಿ ಫಲಕ ಹಾಗೂ ನಲುವತ್ತೈದು ಸಾವಿರ ರೂಪಾಯಿ ಗೌರವಧನವನ್ನು ಒಳಗೊಂಡಿರುತ್ತದೆ.
ಆಯುರ್ವೇದ ಶ್ರೀ:
ಡಾ. ಎಚ್. ಹನುಮಂತರಾಯ, ಬೆಂಗಳೂರು
ವಿಶ್ವದ ಜನರ ಸ್ವಾಸ್ಥ್ಯಕ್ಕಾಗಿ, ದೇಶಕ್ಕಾಗಿ, ಆಯುರ್ವೇದಕ್ಕಾಗಿ, ಅನವರತ ಸೇವೆಸಲ್ಲಿಸಿದ ಆಯುರ್ವೇದ ಔಷಧ ಉತ್ಪಾದನಾ ಕ್ಷೇತ್ರದವರಿಗೆ ಕೊಡಮಾಡುವ ಅತುಲ್ಯ ಪ್ರಶಸ್ತಿ.
ಪ್ರಶಸ್ತಿಯು ಬಂಗಾರದ ಪದಕ, ತಾಮ್ರದ ಪ್ರಶಸ್ತಿ ಫಲಕ ಹಾಗೂ ಮೂವತ್ತು ಸಾವಿರ ರೂಪಾಯಿ ಗೌರವಧನವನ್ನು ಒಳಗೊಂಡಿರುತ್ತದೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!