Health Vision

ಅಪೋಲೊ ಚಿಕಿತ್ಸಾಲಯಗಳಾದ್ಯಂತ ಸುರಕ್ಷಿತ ಒಪಿಡಿ

ಅಪೋಲೊ ಚಿಕಿತ್ಸಾಲಯಗಳಾದ್ಯಂತ ಐಸಿಎಂಆರ್ ನ ಮಾರ್ಗಸೂಚಿಗಳ ಪ್ರಕಾರ ಸುರಕ್ಷಿತ ಒಪಿಡಿ ಕ್ರಮಗಳನ್ನು ಅನುಸರಿಸಲಾಗುತ್ತದೆ.

ಬೆಂಗಳೂರು, 16 ಜೂನ್, 2020 : ಅಪೋಲೊ ಕ್ಲಿನಿಕ್ ಹೊರರೋಗಿ ಸೇವೆಗಳಲ್ಲಿ ಕಠಿಣವಾದ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಪೋಲೊ ಕ್ಲಿನಿಕ್ಸ್ ಪ್ರಾಥಮಿಕ ಆರೋಗ್ಯ ಚಿಕಿತ್ಸಾಲಯಗಳ ಪ್ರಸಿದ್ಧ ಸರಪಳಿಯಾಗಿದ್ದು, 36 ವರ್ಷಗಳ ಶ್ರೇಷ್ಠತೆಯ ಪರಂಪರೆಯಿಂದ ಬೆಳೆದುಕೊಂಡು ಬಂದಿದೆ.

Apollo-clinic-

ಈ COVID-19 ಕಾಲದಲ್ಲಿ, ಸುರಕ್ಷಿತ ಸೌಲಭ್ಯನೀಡುವಲ್ಲಿ ರೋಗಿಯ ಸುರಕ್ಷಿತ  ಅನುಭವವನ್ನು ಖಚಿತಪಡಿಸಿಕೊಳ್ಳಲು ಅಪೋಲೊ ಕ್ಲಿನಿಕ್ ಹೊರರೋಗಿಸೇವೆಗಳಲ್ಲಿ  ಕಠಿಣವಾದ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಪೋಲೊ ಕ್ಲಿನಿಕ್ ರೋಗನಿರ್ಣಯ ಸೇವೆಗಳಿಗಾಗಿ ಭೇಟಿ ನೀಡುವವರಿಗೆ ಮತ್ತು ಸಮಾಲೋಚನೆಗಳನ್ನು ಪಡೆಯಲು ಬರುವವರಿಗೆ ಸುರಕ್ಷಿತ ಒಪಿಡಿಗಳನ್ನು (ಹೊರರೋಗಿ ವಿಭಾಗಗಳು) ಘೋಷಿಸಿದೆ. ಸುರಕ್ಷತೆ ಮತ್ತು  ಸೋಂಕುಗಳು ಹರಡದೇ ಇರುವುದಕ್ಕಾಗಿ  ಸಮಗ್ರ ಕ್ರಮಗಳನ್ನು ಅಳವಡಿಸಿಕೊಂಡಿದೆ.

ಸಿಒಒ, ಅಪೊಲೊ ಕ್ಲಿನಿಕ್ಸ್ ಆನಂದ್ ವಾಸ್ಕರ್ ರ ಪ್ರಕಾರ ಐಸಿಎಂಆರ್ ನ ಮಾರ್ಗಸೂಚಿಗಳ ಪ್ರಕಾರ ಸುರಕ್ಷಿತ ಒಪಿಡಿ ಕ್ರಮಗಳನ್ನು ಅನುಸರಿಸಲಾಗುತ್ತದೆ. ಕನಿಷ್ಟ 6 ಅಡಿಗಳ ಕಡ್ಡಾಯವಾಗಿ ಸಾಮಾಜಿಕ ಅಂತರದಿಂದ ದೂರವಿರುವುದು, ಚಿಕಿತ್ಸಾಲಯಗಳಾದ್ಯಂತ ಅನೇಕ ಹಂತಗಳಲ್ಲಿ ಸ್ಯಾನಿಟೈಜರ್‌ಗಳ ಲಭ್ಯತೆ, ಕೋವಿಡ್ ರೋಗಲಕ್ಷಣ ಇರುವವರಿಗೆ ಮತ್ತು ಇತರ  ರೋಗಿಗಳಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಕಟ್ಟುನಿಟ್ಟಾದ ಸುರಕ್ಷಾ ನಿಯಮಗಳು, ರೋಗಿಗಳು ಮತ್ತು ಕ್ಲಿನಿಕ್ ಸಿಬ್ಬಂದಿಗೆ ಏಕ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳು, ಅಪೋಲೊ ಚಿಕಿತ್ಸಾಲಯಗಳನ್ನು ನಿಯಮಿತವಾಗಿ ಸ್ವಚ್ಚ  ಗೊಳಿಸಲಾಗಿದೆ,  ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗೆ ಸುರಕ್ಷಾ ಸಾಧನಗಳನ್ನು ನೀಡಲಾಗಿದೆ.

Back To Top