ಸಿಂಗಾಪುರ ಮೂಲದ ಕಿಂಡರ್ ಆಸ್ಪತ್ರೆ ನಗರದ ಐಟಿ ಹಬ್ ಆದ ಮಹದೇವಪುರದಲ್ಲಿ ಉದ್ಘಾಟನೆಯಾಯಿತು. ತಾಯಿ ಮತ್ತು ಮಗುವಿನ ಆರೈಕೆಯ ಕಿಂಡರ್ ಆಸ್ಪತ್ರೆಯು ಉತ್ತಮ ಗುಣಮಟ್ಟದ ಹಾಗೂ ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ಚಿಕಿತ್ಸಾ ಕೇಂದ್ರವಾಗಿದೆ.
ಬೆಂಗಳೂರು, ಮಾರ್ಚಿ 24, 2022: ನಗರದ ಐಟಿ ಹಬ್ ಆದ ಮಹದೇವಪುರದಲ್ಲಿ ಹೊಸದಾಗಿ ನವೀನ ಮಾದರಿಯ ಕಿಂಡರ್ ತಾಯಿ ಮತ್ತು ಮಗುವಿನ ಆಸ್ಪತ್ರೆಯು ಉದ್ಘಾಟನೆಯಾಯಿತು. ಸಿಂಗಾಪುರ ಮೂಲದ ಕಿಂಡರ್ ಆಸ್ಪತ್ರೆಯು ಉತ್ತಮ ಗುಣಮಟ್ಟದ ಹಾಗೂ ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ಚಿಕಿತ್ಸಾ ಕೇಂದ್ರವಾಗಿದೆ. ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮಕ್ಕೆ ಮಾಜಿ ಸಚಿವ ಮತ್ತು ಶಾಸಕರಾದ ಶ್ರೀ ಆರ್ ವಿ ದೇಶಪಾಂಡೆಯವರು ದೀಪ ಬೆಳಗಿಸಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಕಿಂಡರ್ ಆಸ್ಪತ್ರೆ ಸಮೂಹದ ಛೇರ್ಮನ್ ಡಾ. ವಿ. ಕೆ. ಪ್ರದೀಪ್ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ನಗರದ ಜನತೆಗೆ ಅದರಲ್ಲೂ ಐಟಿ ಉದ್ಯೋಗಿಗಳೇ ಹೆಚ್ಚಾಗಿರುವ ಮಹದೇವಪುರ ಮತ್ತು ವೈಟ್ಫೀಲ್ಡ್ ಪ್ರದೇಶದಲ್ಲಿ ತ್ವರಿತವಾಗಿ ತಾಯಿ ಮತ್ತು ಮಗುವಿನ ಆರೈಕೆಯ ಆಸ್ಪತ್ರೆಯ ಅವಶ್ಯಕತೆಯನ್ನು ನಾವು ಮನಗೊಂಡು, ಕೇರಳ ನಂತರದಲ್ಲಿ ಇದೇ ಮೊದಲ ಬಾರಿಗೆ ಕಿಂಡರ್ ಬೆಂಗಳೂರಿಗೆ ತನ್ನ ಆರೋಗ್ಯ ಸೇವೆಯನ್ನು ನೀಡಲು ಉತ್ಸುಕವಾಗಿದ್ದು, ಈ ನಿಟ್ಟಿನಲ್ಲಿ ನಮಗೆ ನಗರದ ನಾಗರೀಕರ ಬೆಂಬಲ ಮತ್ತು ಹಾರೈಕೆ ಇರಲಿ ಎಂದು ಹೇಳಿದರು. ಮುಂದುವರಿದು ಮಾತನಾಡಿದ ಅವರು, ಈ ಅತ್ಯಾಧುನಿಕ ಆಸ್ಪತ್ರೆಯಲ್ಲಿ ವಿಶೇಷವಾಗಿ ಸ್ಪಾ ಸೇವೆಯನ್ನು ಸಹ ನಾವು ನೀಡಲು ಬಯಸಿದ್ದು, ಇದರ ಸೌಲಭ್ಯವನ್ನು ನಾಗರೀಕರು ಪಡೆದುಕೊಳ್ಳಲು ತಿಳಿಸಿದರು.”
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಮಾಜಿ ಸಚಿವ ಮತ್ತು ಶಾಸಕರಾದ ಶ್ರೀ ಆರ್ ವಿ ದೇಶಪಾಂಡೆಯವರು, “ಕಿಂಡರ್ ಆಸ್ಪತ್ರೆ ಎಲ್ಲಾ ತೆರನಾದ ಆರೋಗ್ಯ ಸೇವಾ ಸೌಲಭ್ಯವನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ಚಿಕಿತ್ಸಾ ಕ್ರಮವನ್ನು ಅನುಸರಿಸಿ ನಗರದ ಜನತೆಗೆ ಯಶಸ್ವಿ ಆರೋಗ್ಯ ಸೇವೆ ನೀಡಲಿ,” ಎಂದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೆಂಜಿತ್ ಕೃಷ್ಣನ್, ಆಡಳಿತ ಸಿಬ್ಬಂದಿ ಮತ್ತಿತರರು ಹಾಜರಿದ್ದರು.