ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ : ಸ್ತನ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ

 ಮಣಿಪಾಲದ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇದೇ ದಿನಾಂಕ 11.11.209 ರಿಂದ 16.11.2019 ರವರೆಗೆ ಪೂರ್ವಾಹ್ನ 10.00 ರಿಂದ ಅಪರಾಹ್ನ 4.00 ರವರೆಗೆ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ವತಿಯಿಂದ ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚರಣೆಯ ಅಂಗವಾಗಿ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಈ ಶಿಬಿರವನ್ನು ದಿನಾಂಕ 11.11.2019 ರಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ. ಯವರು ದೀಪೋಜ್ವಲನ ಮಾಡುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು. ಸ್ನಾತಕೋತ್ತರ ಶಿಕ್ಷಣ ವಿಭಾಗದ ಡೀನ್ ಡಾ. ಗುರುರಾಜ ತಂತ್ರಿ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಡಾ. ಕಾವ್ಯ, ಡಾ. ಪ್ರೀತಿ ಪಾಟೀಲ್, ಹಾಗೂ ಡಾ. ವೀರಾಜ್ ಹೆಗ್ಡೆ ಉಪಸ್ಥಿತರಿದ್ದರು. ಈಗಾಗಲೇ ಅನೇಕ ರೋಗಿಗಳು ಈ ಚಿಕಿತ್ಸಾ ಶಿಬಿರದ ಪ್ರಯೋಜನವನ್ನು ಪಡೆದುಕೊಂಡಿರುತ್ತಾರೆ. ದಿನಾಂಕ 16.11.2019 ಶನಿವಾರದವರೆಗೆ ಮುಂದುವರೆಯುವ ಈ ಚಿಕಿತ್ಸಾ ಶಿಬಿರದಲ್ಲಿ ಸ್ತನದ ಆಕಾರದಲ್ಲಿ ಬದಲಾವಣೆ, ಸ್ತನದಲ್ಲಿ ಉಂಡೆ ಆಕಾರದ ಗೆಡ್ಡೆಗಳ ಬೆಳವಣಿಗೆ, ಸ್ತನ ಚರ್ಮದ ಬಣ್ಣದ ಬದಲಾವಣೆ – ಊತ, ಕೆಂಪು ಬಣ್ಣ, ತುರಿಕೆ, ಕಜ್ಜಿ , ಗುಳಿ ಆಕಾರ ಮತ್ತು ಒಣ ಚರ್ಮ ಕಾಣಿಸಿಕೊಳ್ಳುವುದು, ಸ್ತನದ ತೊಟ್ಟು ಒಳಮುಖವಾಗುವಿಕೆ, ಕಂಕುಳು ಕೆಳಗೆ ಮತ್ತು ಕಾಲರ್ ಮೂಳೆಯ ಮೇಲೆ ಗೆಡ್ಡೆಗಳ ಬೆಳವಣಿಗೆ, ಅಭಿಧಮನಿ ಬೆಳವಣಿಗೆ, ಇದ್ದಕ್ಕಿದ್ದಂತೆ ತೂಕ ಇಳಿಕೆ ಆಗುವುದು, ಮುಟ್ಟಾದ ನಂತರವು ಸ್ತನದ ನೋವು ಕಡಿಮೆಯಾಗದಿರುವುದು ಇತ್ಯಾದಿ ಲಕ್ಷಣಗಳಿರುವ ಮಹಿಳೆಯರ ಸಮಸ್ಯೆಗೆ ತಜ್ಞ ವೈದ್ಯರು ಆಯುರ್ವೇದ ರೀತ್ಯಾ ವಿಶೇಷ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!