ನಾರಾಯಣ ಹೆಲ್ತ್ನಿಂದ ಬೆಂಗಳೂರಿನಲ್ಲಿ ಉಚಿತ ಆರೋಗ್ಯ ತಪಾಸಣೆ

ಬೆಂಗಳೂರು: ನಗರದಾದ್ಯಂತ ನಾರಾಯಣ ಹೆಲ್ತ್ ವತಿಯಿಂದ ಎಲುಬು ಮತ್ತು ಕೀಲು, ಮಕ್ಕಳ ರೋಗ ಮತ್ತು ಇಎನ್ಟಿ ತಪಾಸಣೆ ಆಯೋಜಿಸಲಾಗಿದೆ. ಬೆಂಗಳೂರಿನ ಜನತೆಯಲ್ಲಿ ನಿಯತ ಆರೋಗ್ಯ ತಪಾಸಣೆ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಈ ಶಿಬಿರದ ಉದ್ದೇಶ. ಈ ಆರೋಗ್ಯ ತಪಾಸಣೆಯ ವೇಳೆ, ವೈದ್ಯರು ಸುಲಭವಾದ ಆರೋಗ್ಯ ಕಾಳಜಿ ಬಗ್ಗೆ ಸಲಹೆಗಳನ್ನು ನೀಡುವರು ಹಗೂ ಆರೋಗ್ಯಕರ ಜೀವನಶೈಲಿಯಲ್ಲಿ ಅನುಸರಿಬೇಕಾದ ಮತ್ತು ಅನುಸರಿಬಾರದ ವಿಧಾನಗಳ ಬಗ್ಗೆ ಅರಿವು ಮೂಡಿಸುವರು.

• ಉಚಿತ ಮೂಳೆ ಮತ್ತು ಕೀಲು ತಪಾಸಣಾ ಶಿಬಿರದಲ್ಲಿ ಪ್ರಮುಖವಾಗಿ ಭುಜ, ಮೊಣಕಾಲು, ಕೀಲು ಮತ್ತು ಬೆನ್ನು ನೋವು ಸಮಸ್ಯೆಗಳಿಗೆ ಮೂಲಭೂತ ತಪಾಸಣೆ ಮತ್ತು ತಜ್ಞ ವೈದ್ಯರ ಸಲಹೆ ಒಳಗೊಂಡಿರುತ್ತದೆ.

• ಇಎನ್ಟಿ ತಪಾಸಣೆಯಲ್ಲಿ ಪ್ರಮಮುಖವಾಗಿ, ರಕ್ತದ ಒತ್ತಡ, ಎತ್ತರ, ತೂಕ, ದೇಹ ತೂಕ ಅನುಪಾತ, ಗ್ಲೂಕೋಸ್ ರ್ಯಾಂಡಮ್ ಬ್ಲಡ್ ಶುಗರ್ ಟೆಸ್ಟ್, ಕಿವಿ, ಮೂಗು ಮತ್ತು ಗಂಟಲಿನ ಎಂಡೋಸ್ಕೋಪಿಕ್ ತಪಾಸಣೆ ಒಳಗೊಂಡಿರುತ್ತದೆ.

• ಮಕ್ಕಳ ಆರೋಗ್ಯ ತಪಾಸಣೆಯಲ್ಲಿ ಅತಿಸಾರ, ನ್ಯುಮೋನಿಯಾ, ಮಲೇರಿಯಾ, ಸಿಡುಬು, ಟೆಟುನಸ್ ಮತ್ತು ಅಪೌಷ್ಟಿಕತೆಯ ಸ್ಥಿತಿಗತಿ ಬಗ್ಗೆ ತಜ್ಞ ವೈದ್ಯರ ಸಲಹೆಎ ಮತ್ತು ಮೂಲಭೂತ ತಪಾಸಣೆಗಳು ಮತ್ತಿತರ ಅಂಶಗಳು ಒಳಗೊಳ್ಳುತ್ತವೆ.

• ಮಧುಮೇಹ ಪರೀಕ್ಷೆಯಲ್ಲಿ ಮುಖ್ಯವಾಗಿ ಡಯಾಬಿಟಿಕ್ ರೆಟಿನೋಪತಿ, ಡಯಾಬಿಟಿಕ್ ಮೂತ್ರಶಾಸ್ತ್ರ, ರಕ್ತದ ಸಕ್ಕರೆ ಅಂಶದ ನಿಯಂತ್ರಣ ಮತ್ತಿತರ ವಿಷಯಗಳ ಬಗ್ಗೆ ತಜ್ಞ ವೈದ್ಯರ ಸಲಹೆ ಮತ್ತು ಮೂಲಭೂತ ತಪಾಸಣೆಗಳು ಒಳಗೊಳ್ಳುತ್ತವೆ.

• ನೋಂದಣಿ ಮತ್ತು ಮುಂಚಿತವಾಗಿ ವೈದ್ಯರ ಭೇಟಿ ಸಮಯ ನಿಗದಿಪಡಿಸಿಕೊಳ್ಳುವುದು ಕಡ್ಡಾಯ. ಧೀರ್ಘಕಾಲಿಕ ಸ್ಥಿತಿಯ ಪ್ರಕರಣಗಳಲ್ಲಿ, ರೋಗಿಗಳು ಈ ಹಿಂದಿನ ವೈದ್ಯಕೀಯ ದಾಖಲೆಗಳು ಇದ್ದಲ್ಲಿ ತರಬೇಕಾಗುತ್ತದೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!