ಸಕ್ರ ವಲ್ರ್ಡ್ ಆಸ್ಪತ್ರೆಯಿಂದ “ಹ್ಯಾಂಡ್ಸ್- ಆನ್-ಹಿಸ್ಟರೊಸ್ಕೋಪಿ’ ಕಾರ್ಯಾಗಾರ

ಬೆಂಗಳೂರು: ಸಕ್ರ ವಲ್ರ್ಡ್ ಆಸ್ಪತ್ರೆಯು ಎಫ್‍ಒಜಿಎಸ್‍ಐ ಎಂಡೋಸ್ಕೋಪಿ ಸಮಿತಿ ಸಹಯೋಗದೊಂದಿಗೆ “ಹ್ಯಾಂಡ್ಸ್- ಆನ್- ಹಿಸ್ಟರೊಸ್ಕೋಪಿ’ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ನಗರದ ವಿವಿಧ ಆಸ್ಪತ್ರೆಯ ಪಿಜಿ ವಿದ್ಯಾರ್ಥಿಗಳು ಹಾಗೂ ತರಬೇತಿಯಲ್ಲಿರುವ ವೈದ್ಯರು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು. ಹಿಸ್ಟರೊಸ್ಕೋಪಿಯನ್ನು ವೀಕ್ಷಿಸುವ ಹಾಗೂ ಅದರ ಮೂಲಕ ಚಿಕಿತ್ಸೆ ನೀಡುವ ಕುರಿತು ವೈದ್ಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದಲೇ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗರ್ಭಾಶಯದ ಒಳ ನಾಳಗಳಲ್ಲಿ ಕಂಡುಬರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಮಾಹಿತಿ ಒದಗಿಸುವ ಮೂಲಕ ಪಾಲ್ಗೊಂಡಿರುವವರ ಜ್ಞಾನ ವೃದ್ಧಿ ಮಾಡುವುದು ಇದರ ಉದ್ದೇಶವಾಗಿತ್ತು. ಮುಟ್ಟಿನ ದಿನಗಳ ಅಸಮಾನತೆಗೆ ಹಾರ್ಮೋನುಗಳ ಅಸಮತೋಲನ, ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್ (ಪಿಸಿಒಎಸ್), ಬೊಜ್ಜು, ಫೈಬ್ರಾಯ್ಡ್ಸ್, ಪಾಲಿಪ್ಸ್, ಸೋಂಕುಗಳು, ಕ್ಯಾನ್ಸರ್ ಮತ್ತು ಕೆಲ ಔಷಧಗಳು ಕಾರಣವಾಗುತ್ತಿವೆ. ಇವುಗಳಲ್ಲಿಯೇ ಬೊಜ್ಜು ಇತರೆ ಕಾರಣಗಳಿಗಿಂತ ಹೆಚ್ಚಿನ ಪಾತ್ರ ವಹಿಸುತ್ತಿದೆ. ಇವು ನೇರವಾಗಿ ಗರ್ಭಾಶಯದ ಆಂತರಿಕ ಮಾರ್ಗ ಹಾಗೂ ಸ್ನಾಯುವಿನ ಪದರದ ಸಮಸ್ಯೆಗೆ ಕಾರಣವಾಗುತ್ತಿದೆ.

ಭಾರತ ದೇಶದಲ್ಲಿ ಅತಿ ಹೆಚ್ಚು ಅಂದರೆ ಶೇ.36ರಷ್ಟು ಹದಿಹರೆಯದ ಬಾಲಕೀಯರಲ್ಲಿ ಪಿಸಿಒಎಸ್ ಗೋಚರಿಸುತ್ತಿದೆ. ಜಾಗತೀಕರಣದ ಪ್ರಭಾವದಿಂದಾಗಿ ಇಂದಿನ ಜನಾಂಗವು ಆರೋಗ್ಯಕಾರಿ ಆಹಾರ ಸೇವನೆಯಿಂದ ದೂರವಾಗುತ್ತಿವೆ. ದುರ್ಭಲ ಆಹಾರಕ್ರಮ ರೂಢಿಸಿಕೊಳ್ಳುತ್ತಿದ್ದಾರೆ. ಒತ್ತಡದಿಂದ ಕೂಡಿದ ಹಾಗೂ ಜಡ ಜೀವನಶೈಲಿಗಳು ಋತುಚಕ್ರದ ಸಮಸ್ಯೆಗಳ ಬಗ್ಗೆ ಹೆಚ್ಚಿಗೆ ಕೊಡುಗೆ ನೀಡುತ್ತಿವೆ. ಸ್ತ್ರೀರೋಗದ ಚಿಕಿತ್ಸಾಲಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಇಂದು ಮುಟ್ಟಿನ ಅಸಮಾನತೆಯ ಸಮಸ್ಯೆ ಸಾಮಾನ್ಯ ಅನ್ನುವಂತಾಗಿದೆ. ಇದು ಹಲವರಲ್ಲಿ ಸಾಮಾನ್ಯ ಸಮಸ್ಯೆ ಅನ್ನುವಂತಾಗಿದೆ. ಆತಂಕಕಾರಿ ಸಂಗತಿಯೇನೆಂದರೆ ಇದು ಆರೋಗ್ಯ ಸ್ಥಿತಿ ಮತ್ತು ಮಹಿಳೆಯರ ಜೀವನದ ಗುಣಮಟ್ಟದ ಮೇಲೆ ಅಗಾಧವಾಗಿ ಕೆಟ್ಟ ಪರಿಣಾಮ ಬೀರುತ್ತಿದೆ.

ಸಕ್ರ ವಲ್ರ್ಡ್ ಆಸ್ಪತ್ರೆಯ ಮಹಿಳಾ ಲ್ಯಾಪ್ರೊಸ್ಕೋಪಿಕ್ ಚಿಕಿತ್ಸಾ ವಿಭಾಗದ ಸಲಹೆಗಾರರಾದ ಡಾ. ಶಾಂತಲಾ ತುಪ್ಪಣ್ಣಾ ಮಾತನಾಡಿ, “ಹೆಚ್ಚುತ್ತಿರುವ ಮುಟ್ಟಿನ ಅಸಮತೋಲನದ ಸಮಸ್ಯೆಯ ದೂರಿನ ಹಿನ್ನೆಲೆ, ಸಮಸ್ಯೆಯನ್ನು ವೈದ್ಯರು ಅತ್ಯಂತ ಪ್ರಮುಖವಾಗಿ ಪರಿಗಣಿಸಿ ಆದಷ್ಟು ಬೇಗ ಮತ್ತು ಉತ್ತಮವಾದ ಚಿಕಿತ್ಸಾ ವಿಧಾನವನ್ನು ಹುಡುಕಬೇಕಿದೆ. ಹಿಸ್ಟರೊಸ್ಕೋಪಿಯು ಸ್ತ್ರೀರೋಗ ತಜ್ಞರಿಗೆ ಅತ್ಯಂತ ಸಹಕಾರಿಯಾಗಿ ಲಭಿಸಲಿದೆ. ಗರ್ಭಾಶಯದ ಆಂತರಿಕ ಪದರಗಳ ಸಮಸ್ಯೆಯನ್ನು ಗಮನಿಸುವ ಹಾಗೂ ಚಿಕಿತ್ಸೆ ನೀಡುವ ಎರಡು ಕಾರ್ಯವನ್ನು ಏಕಕಾಲಕ್ಕೆ ಮಾಡಲು ಸಹಕಾರಿಯಾಗಿದೆ. ಕಡಿಮೆ ಆಕ್ರಮಣಶೀಲತೆ ಮೂಲಕ ಹೆಚ್ಚು ನಿಖರ ಚಿಕಿತ್ಸೆ ನೀಡಲು ತುಂಬಾ ಉಪಯುಕ್ತವಾಗಿದೆ’ ಎಂದಿದ್ದಾರೆ. 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!