Vydyaloka

ಸ್ತನ್ಯಪಾನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ

ಸ್ತನ್ಯಪಾನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸ್ತನ್ಯಪಾನ ಮಾಡಿಸುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆಗೊಳಿಸುತ್ತವೆ ಎಂದು ಕ್ಲಿನಿಕಲ್ ಸಂಶೋಧನೆಯಿಂದ ಸಾಬೀತಾಗಿದೆ. ಹೆಂಗಸರು ಸ್ತನ್ಯಪಾನ ಮಾಡಿಸಿದರೆ ಸ್ತನಗಳು ವಿಕಾರ ಹೊಂದುವುದಿಲ್ಲ ಎಂದು ಹಲವಾರು ಸಂಶೋಧಕರು ದೃಢೀಕರಿಸುತ್ತಾರೆ.

ಮಗುವೊಂದು ಹುಟ್ಟಿದರೆ ಅದರ ಮೊದಲ ಆಹಾರ ತಾಯಿಯ ಹಾಲು. ತಾಯಿಯ `ಹಾಲನ್ನು ಅಮೃತ ಸಮಾನ` ಎಂದು ಪರಿಗಣಿಸಲಾಗಿದೆ. ಸ್ತನ್ಯಪಾನವನ್ನು ಪ್ರೋತ್ಸಾಹಿಸುವ ಸಲುವಾಗಿ ತಾಯಿ ಮತ್ತು ಮಕ್ಕಳ ಆರೋಗ್ಯಕ್ಕಾಗಿ ಭಾರತವು ಸೇರಿದಂತೆ ಹಲವಾರು ದೇಶಗಳಲ್ಲಿ ಆಗಸ್ಟ್‌ 1-7 ನೇ ತಾರೀಖಿನಂದು ಜಾಗತಿಕ ಸ್ತನ್ಯಪಾನ ಸಪ್ತಾಹ ವನ್ನು ಆಚರಿಸಲಾಗುತ್ತಿದೆ. ಸ್ತನ್ಯಪಾನದ ರಕ್ಷಣೆ, ಸ್ತನ್ಯಪಾನ ಪ್ರೋತ್ಸಾಹ ಮತ್ತು ಬೆಂಬಲಿಸಲು 1990ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್‌ ಹೊರಡಿಸಿದ ಘೋಷಣೆಯ ಸ್ಮರಣಾರ್ಥ ಈ ಸಪ್ತಾಹವನ್ನು ಆಚರಿಸಲಾಗುತ್ತಿದೆ.

ಸ್ತನ್ಯಪಾನ  ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆಗೊಳಿಸುತ್ತವೆ:

ಆಂಕಾಲಜಿ ಮತ್ತು ಪ್ಯಾಥೋಲಜಿ ಸಂಶೋಧನೆಯ ಪ್ರಕಾರ ‘ಸ್ತನ್ಯಪಾನ ಮಾಡಿಸುವುದು ವಿಫಲವಾದರೆ ಸ್ತನ, ಅಂಡಾಶಯ ಮತ್ತು ಗರ್ಭಾಶಯದ ಕ್ಯಾನ್ಸರ್ ನಂಥ ಮಾರಕ ರೋಗಗಳಿಗೆ ತುತ್ತಾಗುತ್ತಾರೆ.  30 ವರ್ಷಕ್ಕಿಂತ ಹೆಚ್ಚಿನ ವಯಸ್ಸಿಗೆ ಮಕ್ಕಳು ಜನಿಸಿದ ಹೆಂಗಸರು ಹೆಚ್ಚು ಸ್ತನ ಕ್ಯಾನ್ಸರ್ ಗೆ ಒಳಗಾಗುತ್ತಾರೆ ಎಂದು ಹೇಳಿದೆ. ಮಾನವನ ಹಾಲು ಸ್ರವಿಸುವಿಕೆಯ ಸಂಕೀರ್ಣ ಅಂಶಗಳು ಮತ್ತು ನಿರ್ದಿಷ್ಟ ಸಮಯದವರೆಗೆ ತಮ್ಮ ಶಿಶುಗಳನ್ನು ಸ್ತನ್ಯಪಾನ ಮಾಡಿಸುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆಗೊಳಿಸುತ್ತವೆ ಎಂದು ಕ್ಲಿನಿಕಲ್ ಸಂಶೋಧನೆಯಿಂದ ಸಾಬೀತಾಗಿದೆ. ಹೆಂಗಸರು ಸ್ತನ್ಯಪಾನ ಮಾಡಿಸಿದರೆ ಸ್ತನಗಳು ವಿಕಾರ ಹೊಂದುವುದಿಲ್ಲ ಎಂದು ಹಲವಾರು ಸಂಶೋಧಕರು ದೃಢೀಕರಿಸುತ್ತಾರೆ.

Also Read: ಮಹಿಳೆಯರಲ್ಲಿ ಕ್ಯಾನ್ಸರ್ – ಆರಂಭಿಕ ಪತ್ತೆಯು ತಡೆಗಟ್ಟುವಿಕೆಗೆ ಸಹಕಾರಿ

ಇಂದಿನ ಕೆಲ ಆಧುನಿಕ ಮಹಿಳೆಯರು ಸೌಂದರ್ಯ ರಕ್ಷಣೆಯ ನೆಪದಲ್ಲಿ ಮಗುವಿಗೆ ಹಾಲು ಕುಡಿಸಲು ಹಿಂದೇಟು ಹಾಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವೃತ್ತಿ ನಿರತ ತಾಯಿಯರು ಒಂದು ವರ್ಷಕ್ಕೂ ಮೊದಲೇ ಮಕ್ಕಳು ಸ್ತನ್ಯಪಾನದಿಂದ ವಂಚಿತರಾಗುವಂತೆ ಮಾಡುತ್ತಿರುವುದರಿಂದ ಇಂದಿನ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ, ಮಾತ್ರವಲ್ಲ ಚಿಕ್ಕ ವಯಸ್ಸಿನಿಂದಲೇ ತಾಯಿಯರೂ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕೆಲವರು ಕೆಲವೇ ತಿಂಗಳು ಸ್ತನ್ಯಪಾನ ಮಾಡಿಸಿ, ಬಳಿಕ ಮಗುವಿಗೆ ಕೃತಕ ಹಾಲು ಕುಡಿಸಲು ಅಭ್ಯಾಸ ಮಾಡಿಸುತ್ತಾರೆ. ಇದರಿಂದಾಗಿ ಆರೋಗ್ಯ ಹಾಗೂ ಬಾಂಧವ್ಯದ ಸಮಸ್ಯೆಗಳು ಉದ್ಭವಿಸುತ್ತವೆ.

ತಾಯಿ ಹಾಲು ಎಲ್ಲ ವಾಕ್ಸಿನ್ ಗಳಿಗಿಂತಲೂ ಹೆಚ್ಚು ಶಕ್ತಿಶಾಲಿ:

ತಾಯಿಯ ಹಾಲು ಅತ್ಯಂತ ಪುಷ್ಟಿದಾಯಕ ಹಾಗೂ ಆರೋಗ್ಯಕರ. ಆದರೆ ಹೆಚ್ಚುತ್ತಿರುವ ವಯಸ್ಸು, ಧೂಮಪಾನ ಮತ್ತು ಮಹಿಳೆಯ ಗರ್ಭಧಾರಣೆಯ ಸಂಖ್ಯೆ ಇವುಗಳ ಕಾರಣಗಳಿಂದ  ಸ್ತನಗಳ ವಿಕಾರಕ್ಕೆ ಕಾರಣವಾಗಿದೆ. ಎದೆ ಹಾಲು ಕುಡಿಸುವುದರಿಂದ ಫಿಟ್ನೆಸ್ ಮರಳಿ ಪಡೆಯಲು ಸಹಾಯವಾಗಿದೆ. ಎದೆಹಾಲು ಉತ್ಪತ್ತಿಯಾಗಲು ಹಾಗೂ ಅದನ್ನು ಮಗುವಿಗೆ ನೀಡಲು ಸಾಕಷ್ಟು ಸಮಯ ತೆಗೆದುಕೊಳ್ಳುವುದು. ಆದರೆ ಇದರಿಂದಾಗಿ ಮಗುವಿಗೆ ಬೇಕಾದ ಪೋಷಕಾಂಶಗಳು ದೊರೆಯುತ್ತದೆ ಹಾಗೂ ತಾಯಿ-ಮಗುವಿನ ನಡುವೆ ಸುಂದರ ಬಂಧ ಏರ್ಪಡುತ್ತದೆ. ಈಗ, ನಿರೀಕ್ಷಿತ ತಾಯಂದಿರಿಗೆ ಸ್ತನ್ಯಪಾನ (ತ್ಯಾಗ) ಮಾಡಿಸುವುದರಿಂದ ತಮ್ಮ ಸ್ತನಗಳ ನೋಟದಲ್ಲಿ ಯಾವುದೇ ವಿಕಾರ ಆಗುವುದಿಲ್ಲ ಮತ್ತು ಇದರಿಂದ  ಸ್ತನ ಕ್ಯಾನ್ಸರ್ ಅನ್ನು ತಡೆಯಲು ಸಹಾಯ ಮಾಡುತ್ತದೆ.

ತಾಯಿಯ ಹಾಲಿನಲ್ಲಿರುವ ಪ್ರೊಟೀನ್ ಮತ್ತು ಕೊಬ್ಬಿನ ಅಂಶಗಳು ಶಿಶುವಿನ ಬೆಳವಣಿಗೆಗೆ ಸಹಾಯಕವಾಗಿವೆ. ಮಗು ಬೆಳವಣಿಗೆ ಹೊಂದಿದಂತೆಲ್ಲ ಅದಕ್ಕೆ ಪೋಷಕಾಂಶಗಳನ್ನು ಹೀರಿಕೊಳ್ಳುವ ಪ್ರಕ್ರಿಯೆಗೆ ತಾಯಿಯ ಹಾಲು ನೆರವಾಗುತ್ತದೆ. ಇತ್ತೀಚೆಗೆ ಪುಟ್ಟ ಮಗುವಿಗೂ ತಿಂಗಳು ಚುಚ್ಚು ಮದ್ದು ನೀಡುವುದನ್ನು ಕಾಣುತ್ತೇವೆ. ಬದಲಾದ ಕಾಲದಲ್ಲಿ ಅದು ಅನಿವಾರ್ಯವೆನ್ನಿಸಿದೆ. ಆದರೆ ತಾಯಿ ಹಾಲು ಈ ಎಲ್ಲ ವಾಕ್ಸಿನ್ ಗಳಿಗಿಂತಲೂ ಹೆಚ್ಚು ಶಕ್ತಿಶಾಲಿ. ವಾಕ್ಸಿನ್ಗಳು ದೇಹವನ್ನು ರೋಗಗಳಿಂದ ಕಾಪಾಡುವುದಕ್ಕಿಂತ ಹೆಚ್ಚು ತಾಯಿಹಾಲು ಕಾಪಾಡುತ್ತದೆ.

ಕರ್ನಾಟಕದಲ್ಲಿ ಪ್ರತಿ ವರ್ಷವೂ 1000 ಕ್ಕೆ 31 ಕ್ಕೂ ಅಧಿಕ ಶಿಶುಗಳು ಸಾವಿಗೀಡಾಗುತ್ತಿದ್ದಾರೆ. ಮೊದಲ ಆರು ತಿಂಗಳ ಜೀವಿತಾವಧಿಯಲ್ಲಿ, ಸೂಕ್ತ ಬೆಳವಣಿಗೆ, ಅಭಿವೃದ್ಧಿ ಮತ್ತು ಆರೋಗ್ಯವನ್ನು ಸಾಧಿಸಲು ಶಿಶುಗಳಿಗೆ  ಪ್ರತ್ಯೇಕವಾಗಿ ಎದೆಹಾಲು ಕುಡಿಸಬೇಕು ಎಂದು WHO ಶಿಫಾರಸು ಮಾಡುತ್ತದೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ಸ್ತನ ಮತ್ತು ಗರ್ಭಕೋಶವು ಹೆಚ್ಚು ಕ್ಯಾನ್ಸರ್ ರೋಗ ತರುವಂತಹ ಅಂಗವಾಗಿದೆ.  ಕೀನ್ಯಾ ವೈದ್ಯಕೀಯ ರಿಸರ್ಚ್ ಇನ್ಸ್ಟಿಟ್ಯೂಟ್ (ಕೆಮ್ರಿ) ನಲ್ಲಿ ಆಂಕಾಲಜಿ ಮತ್ತು ಪ್ಯಾಥೋಲಜಿ ಸಂಶೋಧನೆಯ ಪ್ರಕಾರ 100,000 ಕ್ಕೆ 34,000 ಜನರಿಗೆ  ಸ್ತನ ಕ್ಯಾನ್ಸರ್ ನಿಂದ  ಪರಿಣಾಮ ಬೀರುತ್ತದೆ.

UNICEF ಪ್ರಕಾರ ಸ್ತನ್ಯಪಾನದ ಕುರಿತು ಕೆಲವು ಸಂಗತಿಗಳು:

1. ಸ್ತನ್ಯಪಾನ ದಿಂದಾಗಿ ಐದನೇ ವರ್ಷಕ್ಕಿಂತ ಕಡಿಮೆ ವಯಸ್ಸಿನ 820000 ಕ್ಕಿಂತ ಹೆಚ್ಚು ಮಕ್ಕಳು, ಅದರಲ್ಲೂ ವಿಶೇಷವಾಗಿ 6 ​​ತಿಂಗಳೊಳಗಿನ ಮಕ್ಕಳುಗಳ ಜೀವ ಉಳಿಸಿದೆ.

2. ವಾರ್ಷಿಕವಾಗಿ ಸ್ತನ್ಯಪಾನವು 20000 ಸ್ತನ ಕ್ಯಾನ್ಸರ್ ಸಾವುಗಳನ್ನು ತಡೆಯುತ್ತದೆ.

3. ತಾಯಿ ಹಾಲಿನಲ್ಲಿ ರೋಗನಿರೋಧಕ ಶಕ್ತಿ ಹೇರಳವಾಗಿರುತ್ತದೆ. ಮಗುವಿನ ಮೂಗು, ಗಂಟಲು, ಕರುಳಿನಲ್ಲಿ ಸಂರಕ್ಷಕ ಕವಚ ನಿರ್ಮಿಸಿ ಶ್ವಾಸಕೋಶ, ಕಿವಿಯ ಸೋಂಕು, ಜಠರ, ಕರುಳಿನ ತೊಂದರೆ, ಮೆದುಳು ಜ್ವರ ಮುಂತಾದ ಮಾರಕ ರೋಗಗಳಿಂದ ಮಗುವನ್ನು ರಕ್ಷಿಸುತ್ತದೆ.

4. ಟೈಫಾಯ್ಡ್‌, ಮಲೇರಿಯಾ, ಕ್ಷಯ, ಜಾಂಡೀಸ್‌ ಅಥವಾ ಕುಷ್ಠರೋಗಗಳಿದ್ದಾಗಲೂ ಎದೆಹಾಲೂಡಿಸುವುದನ್ನು ನಿಲ್ಲಿಸುವ ಅಗತ್ಯವಿಲ್ಲ.

5. ಸ್ತನ್ಯಪಾನದಿಂದಾಗಿ 3 ರಿಂದ 4 ಬಿಂದುಗಳಷ್ಟು ಐಕ್ಯೂ ಹೆಚ್ಚಳಕ್ಕೆ ಸಂಬಂಧಿಸಿದೆ.

6. ಸ್ತನ್ಯ ಪಾನ ಮಾಡಿಸುವುದರಿಂದ ನಂತರದ ಭಾಗದ ರಕ್ತಸ್ರಾವ, ಪ್ರಸವಾನಂತರದ ಖಿನ್ನತೆ, ಅಂಡಾಶಯ ಮತ್ತು ಸ್ತನ ಕ್ಯಾನ್ಸರ್, ಹೃದ್ರೋಗ ಮತ್ತು ಟೈಪ್ 2 ಸಕ್ಕರೆ ಖಾಯಿಲೆ (ಡಯಾಬಿಟಿಸ್) ವಿರುದ್ಧ ತಾಯಿಗಳನ್ನು ರಕ್ಷಿಸುತ್ತದೆ.

7. ತಾಯಿಯ ಹಾಲು ಸುಲಭವಾಗಿ ಜೀರ್ಣವಾಗುತ್ತದೆ. ಹೀಗಾಗಿ ಮೊದಲ ಆರು ತಿಂಗಳವರೆಗೆ ಅದು ಮಗುವಿಗೆ ಉತ್ತಮ ರಕ್ಷಣೆ ನೀಡುತ್ತದೆ.

8. ಚೀನಾ, ಭಾರತ, ಇಂಡೋನೇಷಿಯಾ, ಮೆಕ್ಸಿಕೋ, ಮತ್ತು ನೈಜೀರಿಯಾ – ಐದು ದೇಶಗಳು – ಪ್ರತಿ ವರ್ಷ 2,36,000 ಮಕ್ಕಳ ಸಾವುಗಳು  ಸ್ತನ್ಯ ಪಾನ ಅಭಾವದಿಂದಾಗಿಯೇ ಆಗಿವೆ.  ಗ್ಲೋಬಲ್ ಬ್ರೆಸ್ಟಪೀಡ್ ಕಲೆಕ್ಟಿವ್ ನ ಸಹಯೋಗದೊಂದಿಗೆ ನಡೆಸಿದ ಯುನಿಸೆಫ್ ಮತ್ತು WHO ವರದಿಯ ಪ್ರಕಾರ ಸ್ವಭಾವ ಮತ್ತು ಅರಿವಿನ ನಷ್ಟದಿಂದಾಗಿ ಈ ದೇಶಗಳು ಒಟ್ಟಾರೆಯಾಗಿ $ 119 ಬಿಲಿಯನ್ಗಳಷ್ಟು ಆರ್ಥಿಕ ವೆಚ್ಚವನ್ನು ಅನುಭವಿಸುತ್ತಿವೆ ಎಂದು ಅಂದಾಜಿಸಲಾಗಿದೆ.

ಡಾ. ರಾಧ. ಎಸ್. ರಾವ್
ಒ.ಬಿ.ಜಿ, ಪ್ರಸೂತಿ ಮತ್ತು ಸ್ತ್ರೀರೋಗತಜ್ಞರು
ಅಪೋಲೊ ಕ್ರೆಡಲ್ ಆಸ್ಪತ್ರೆ, ಬೆಂಗಳೂರು

Share this: