Vydyaloka

ಸೌತೆಕಾಯಿ-ಹಸಿಯಾಗಿ ಸೇವಿಸುವುದು ಹೆಚ್ಚು ಲಾಭಕರ

ಸೌತೆಕಾಯಿ ಅಧಿಕವಾಗಿ ಪ್ರತ್ಯಾಮ್ಲೀಯ ಗುಣವುಳ್ಳ ಸಾಮಾನ್ಯವಾಗಿ ವರ್ಷದ ಎಲ್ಲ ಕಾಲಗಳಲ್ಲೂ ದೊರೆಯುವ ತರಕಾರಿ.ಸಾಂಬಾರು, ಕೋಸಂಬರಿ, ಮಜ್ಜಿಗೆ ಹುಳಿ, ಗೊಜ್ಜು, ಸಿಹಿಕೋಟು, ಮೊಸರುಬಜ್ಜಿ ಮುಂತಾದ ರುಚಿಕಟ್ಟಾದ ಪದಾರ್ಥಗಳನ್ನು ತಯಾರಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇದನ್ನು ಹಸಿಯಾಗಿ ಸೇವಿಸುವುದು ಹೆಚ್ಚು ಲಾಭಕರ. ಹಾಗೆಯೇ ಸೌತೆಕಾಯಿ ಮೇಲಿನ ಸಿಪ್ಪೆಯನ್ನು ಖಂಡಿತ ತೆಗೆಯಬೇಡಿ. ಇದರಲ್ಲಿ ನಾರಿನ ಅಂಶವಿದ್ದು, ಮಲಬದ್ಧತೆಯನ್ನು ಹೋಗಲಾಡಿಸುತ್ತದೆ.

ಸೌತೆಕಾಯಿ ಅಧಿಕವಾಗಿ ಪ್ರತ್ಯಾಮ್ಲೀಯ ಗುಣವುಳ್ಳ ತರಕಾರಿ. ಸೌತೆಕಾಯಿ ಸಾಮಾನ್ಯವಾಗಿ ವರ್ಷದ ಎಲ್ಲ ಕಾಲಗಳಲ್ಲೂ ದೊರೆಯುವುದಾದರೂ ಮಳೆಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ಬಹಳ ಸುಲಭವಾಗಿ ದೊರೆಯುತ್ತದೆ. ಸೌತೆಕಾಯಿ ಮೂಲ ಈಜಿಪ್ಟ್ . ಆದರೆ ಈಗ ಇದನ್ನು ಎಲ್ಲ ದೇಶಗಳಲ್ಲೂ ಕೃಷಿ ಮಾಡಲಾಗುತ್ತಿದ್ದು, ಬಹುಜನಪ್ರಿಯ ತರಕಾರಿ ಎನಿಸಿಕೊಂಡಿದೆ. ಪಚಡಿ ತಯಾರಿಕೆಯಲ್ಲಿ ಇದಕ್ಕೆ ಹೆಚ್ಚಿನ ಆದ್ಯತೆ. ದಕ್ಷಿಣ ಭಾರತದಲ್ಲಿ ಸಾಂಬಾರು, ಕೋಸಂಬರಿ, ಮಜ್ಜಿಗೆ ಹುಳಿ, ಗೊಜ್ಜು, ಸಿಹಿಕೋಟು, ಮೊಸರುಬಜ್ಜಿ ಮುಂತಾದ ರುಚಿಕಟ್ಟಾದ ಪದಾರ್ಥಗಳನ್ನು ತಯಾರಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇದನ್ನು ಹಸಿಯಾಗಿ ಸೇವಿಸುವುದು ಹೆಚ್ಚು ಲಾಭಕರ.

1. ಒಂದು ಸಾಮಾನ್ಯ ಸೌತೆಕಾಯಿಯಲ್ಲಿ ಶೇ. 64.05 ಅಂಶ ಪ್ರತ್ಯಾಮ್ಲೀಯ ಅಂಶಮತ್ತು ಶೇ. 35.95 ಆಮ್ಲೀಯ ಅಂಶ ಇರುತ್ತದೆ.   ಇದರ ಸೇವನೆಯಿಂದ  ಪ್ರತ್ಯಾಮ್ಲೀಯ ವಸ್ತುಗಳು ಜಠರದಲ್ಲಿನ ಆಮ್ಲೀಯ ಗುಣವನ್ನು ತಟಸ್ಥಗೊಳಿಸುತ್ತದೆ. ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ. ಆದರೆ ಸೌತೆಕಾಯಿಯನ್ನು ಬೇಯಿಸದೆ, ಸಿಪ್ಪೆ ಸಮೇತ ಸೇವಿಸಿದಾಗ ಮಾತ್ರ ಅದರ ಪ್ರತ್ಯಾಮ್ಲೀಯ ಗುಣದ ಲಾಭ  ದೊರಕುತ್ತದೆ.

2. ಒಂದು ನೂರು ಗ್ರಾಂ ಸೌತೆಕಾಯಿಯಲ್ಲಿ ನೀರಿನ ಅಂಶ ಶೇ.96.3, ಪ್ರೋಟಿನ್ ಶೇ.0.4, ಕೊಬ್ಬು ಶೇ. 0.1, ಖನಿಜಾಂಶಗಳು ಶೇ.0.3, ನಾರಿನ ಅಂಶ ಶೇ. 0.4, ಮತ್ತು ಶರ್ಕರ ಪಿಷ್ಟ ಶೇ. 2.5ರಷ್ಟು ಇರುತ್ತದೆ. ಇವುಗಳ ಜೊತೆಗೆ ಸೌತೆಕಾಯಿಯಲ್ಲಿ 100 ಗ್ರಾಂ. 10 ಮಿ.ಗ್ರಾಂ ಕ್ಯಾಲ್ಸಿಯಂ, 25 ಮಿ. ಗ್ರಾಂ. ರಂಜಕ, 1.5 ಮಿ. ಗ್ರಾಂ. ಕಬ್ಬಿಣ,7 ಮಿ. ಗ್ರಾಂ. ವಿಟಮಿನ್ ‘ಸಿ’ ಮತ್ತು ಅಲ್ಪ ಪ್ರಮಾಣದಲ್ಲಿ ವಿಟಮಿನ್‘ಬಿ’ ಕಾಂಪ್ಲೆಕ್ಸ್ ಸಹಾ ಇರುತ್ತವೆ. ಒಂದು ನೂರು ಗ್ರಾಂ. ಸೌತೆಕಾಯಿ ಕೇವಲ 13 ಕಿ.ಕ್ಯಾಲರಿಯಷ್ಟು ಮಾತ್ರ ಶಕ್ತಿ ನೀಡುವುದರಿಂದ ಸ್ಥೂಲಕಾಯದವರೂ ಸಹಾ ಇದನ್ನು ಸೇವಿಸಬಹುದು.

3. ಹಸಿಯಾಗಿ ತಿನ್ನುವಾಗ ಉಪ್ಪನ್ನು ಸೇರಿಸಬಾರದು. ಉಪ್ಪನ್ನು ಸೇರಿಸಿದ್ದಲ್ಲಿ ಅದರಪ್ರತ್ಯಾಮ್ಲೀತೆಯ ಗುಣ ಕಡಿಮೆಯಾಗುತ್ತದೆ. ಹಾಗೆಯೇ ಸೌತೆಕಾಯಿ ಮೇಲಿನ ಸಿಪ್ಪೆಯನ್ನು ಖಂಡಿತ ತೆಗೆಯಬೇಡಿ. ಇದರಲ್ಲಿ ನಾರಿನ ಅಂಶವಿದ್ದು, ಮಲಬದ್ಧತೆಯನ್ನು ಹೋಗಲಾಡಿಸುತ್ತದೆ. ಸೌತೆಕಾಯಿಯ ಒಳ ತಿರುಳನ್ನೊ  ಬಿಸಾಡಬೇಡಿ.

4. ಆಧುನಿಕ ರೋಗಗಳಲ್ಲಿ ಜಠರದಲ್ಲಿನ ಅತಿ ಆಮ್ಲೀಯತೆ ಸಹ ಒಂದು.ಇದರ ಪರಿಣಾಮವಾಗಿ ಹೊಟ್ಟೆಯಲ್ಲಿ ‘ಗ್ಯಾಸ್’ ಉಂಟಾಗಿ ಹೊಟ್ಟೆ ಉಬ್ಬರ ಕಾಣಿಸಿಕೊಳ್ಳುತ್ತದೆ. ಇದರ ನಿಯಂತ್ರಣಕ್ಕಾಗಿ ನಾವು ಔಷಧಿ ಅಂಗಡಿಗಳಲ್ಲಿ ದೊರೆಯುವ ಆ್ಯಂಟಿ ಆ್ಯಸಿಡ್ ಗುಳಿಗೆಗಳನ್ನು ಅಥವಾ ದ್ರಾವಣ ರೂಪದ ಔಷಧಿಯನ್ನು ಸೇವಿಸುತ್ತೇವೆ. ಆದರೆ ಜಠರದಲ್ಲಿ ಅತಿ ಆಮ್ಲೀತೆಯನ್ನು ಸಾಧಾರಣ ತರಕಾರಿ ಸೌತೆಕಾಯಿಯಿಂದ ನಿಯಂತ್ರಿಸಬಹುದು.

5. ಇದರ ಬೀಜದಲ್ಲಿ ‘ಎರೆಪ್ಸಿನ್’ ಜೀವಕಿಣ್ವವಿದ್ದು, ಪಚನಕ್ರಿಯೆಯಲ್ಲಿಅಧಿಕ ನೆರವು ನೀಡುತ್ತದೆ. ಸೌತೆಕಾಯಿ ಸ್ವಭಾವತಃ ತಂಪು ಉಂಟುಮಾಡುವ ತರಕಾರಿ. ಇದರ ಸೇವನೆಯಿಂದ ಮೂತ್ರ ಸಂಬಂಧಿತೊಂದರೆಗಳು ಕಡಿಮೆಯಾಗುತ್ತದೆ. ಬಾಯಾರಿಕೆ ಕಡಿಮೆಯಾಗುತ್ತದೆ.

Also Read: ಮೂತ್ರಪಿಂಡ ರೋಗಗಳ ಕುರಿತು ತಪ್ಪು ಕಲ್ಪನೆಗಳು ಮತ್ತು ವಾಸ್ತವ ವಿಷಯಗಳು 

6. ದೇಹದ ರಕ್ತದಲ್ಲಿ ಪ್ರತ್ಯಾಮ್ಲೀಯ ದ್ರಾವಣದ ಮಟ್ಟವನ್ನು ಸಿದ್ಧಗೊಳಿಸುವಲ್ಲಿಸೌತೆಕಾಯಿ ಬಹು ಸಹಾಯಕ. ಇದರಿಂದ ರಸ ತಯಾರಿಸಿಕೊಂಡು ಸೇವಿಸಿದಲ್ಲಿ ಹೊಟ್ಟೆ ಉರಿ ನಿವಾರಣೆಯಾಗುತ್ತದೆ. ಕೀಲುನೋವು ನಿವಾರಣೆಯಲ್ಲೂ ಇದರ ಸೇವನೆ ಲಾಭಧಾಯಕ.

7. ಸೌತೆಕಾಯಿಯನ್ನು ಸೌಂದರ್ಯವರ್ಧಕವನ್ನಾಗಿಯೂ ಬಳಸುತ್ತಾರೆ. ಕಣ್ಣಿನ ಉರಿ ಇದ್ದಲ್ಲಿ ಇದರ ಬಿಲ್ಲೆಗಳನ್ನು ಕಣ್ಣಿನ ರೆಪ್ಪೆಯ ಮೇಲಿಟ್ಟುಕೊಂಡು ಮಲಗಿದರೆ ಉರಿ ಶಮನವಾಗುತ್ತದೆ. ಚರ್ಮವನ್ನು ಶುದ್ಧೀಕರಿಸಲು,ಮುಖದ ಮೇಲಿನ ಮೊಡವೆಗಳನ್ನುಹೋಗಲಾಡಿಸಲು ಮತ್ತು ಕಪ್ಪು ಗುಳ್ಳೆಗಳನ್ನು ನಿವಾರಿಸಲು ಇದರ ರಸವನ್ನು ದಿನಕ್ಕೆ ಎರಡು ಮೂರು ಬಾರಿ ಲೇಪನ ಮಾಡಿಕೊಂಡು ಸ್ವಲ್ಪ ಹೊತ್ತಾದ ಮೇಲೆ ಮುಖ ತೊಳೆದುಕೊಳ್ಳುವುದರಿಂದ ಮೇಲಿನ ತೊಂದರೆಗಳನ್ನು ಕ್ರಮೇಣ ನಿಯಂತ್ರಿಸಬಹುದು.

8. ಅಂಗೈನಲ್ಲಿನಉರಿತವನ್ನು ಕಡಿಮೆಮಾಡಲು ಇದರ ರಸವನ್ನು ಲೇಪಿಸಿಕೊಳ್ಳಬಹುದು.ಒರಟು ಚರ್ಮವನ್ನು ಇದು ನುಣುಪುಗೊಳಿಸುತ್ತದೆ. ಇದರಲ್ಲಿ ಸಿಲಿಕಾನ್‍ಮತ್ತು ಗಂಧಕದ ಅಂಶಗಳೂ ಇದ್ದು, ಕೇಶವರ್ಧನೆಗೆ ಸಹಾಯಕವೆಂದು ಹೇಳಲಾಗಿದೆ.

Share this: