ಮಕ್ಕಳ ಬೆಳವಣಿಗೆಗೆ ಪೌಷ್ಠಿಕ ಆಹಾರ ಬಹಳ ಅಗತ್ಯ. ಪೌಷ್ಠಿಕ ಆಹಾರ ಎಂದರೆ ಬಣ್ಣ ಬಣ್ಣದ ಡಬ್ಬಿ, ಪ್ಯಾಕೇಟ್‍ಗಳಲ್ಲಿ ದೊರೆಯುವಂತವುಗಳು ಅಲ್ಲ. ಮನೆಯಲ್ಲಿ ರಾಗಿ, ಸಜ್ಜೆ, ಕಡಲೆ, ಸೊಪ್ಪು ತರಕಾರಿ ಇವೆಲ್ಲವೂ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಈ ಪದಾರ್ಥಗಳು ನೀಡುತ್ತವೆ ಎಂಬುದು ಮುಖ್ಯ.
ಮಗುವಿಗೆ ಮೂರು ತಿಂಗಳು ತುಂಬುತ್ತಿದ್ದಂತೆ ಅಗತ್ಯಕ್ಕೆ ತಕ್ಕಂತೆ ತಾಯಿ ಹಾಲು ಇರುವುದಿಲ್ಲ. ಅದು ಅಲ್ಲದೆ, ಬೆಳೆಯುವ ವಯಸ್ಸಿನ ಮಕ್ಕಳಿಗೆ ಕೇವಲ ಹಾಲು ಮಾತ್ರ ಕುಡಿಸಿದರೆ ಸರಿ ಹೋಗದು. ಹೆಚ್ಚುವರಿ ಪ್ರತ್ಯೇಕ ಆಹಾರ ನೀಡಬೇಕು. ಅಹಾರದಿಂದ ಶಕ್ತಿ ಲಭಿಸುತ್ತದೆ. ನಾವು ಕೆಲಸ ಮಾಡುತ್ತಿದ್ದರೂ ವಿಶ್ರಾಂತಿಯಿಂದಿದ್ದರೂ ನಮ್ಮ ಶರೀರದಲ್ಲಿ ನಿರ್ವಿಕಾರವಾಗಿ ಜೀವಕ್ರಿಯೆ ನಡೆಯುತ್ತಲೇ ಇರುತ್ತದೆ. ನಾವು ವಿಶ್ರಾಂತಿ ಪಡೆಯುತ್ತಿದ್ದೇವೆಂದು ನಮ್ಮ ಹೃದಯ, ಉಸಿರಾಟ, ಜೀರ್ಣಾಶಯ, ಮೂತ್ರಪಿಂಡಗಳು ವಿಶ್ರಾಂತಿಯಿಂದಿರುವುದಿಲ್ಲ. ಅವು ನಿತ್ಯ ನಿರಂತರ ಚಟುವಟಿಕೆಯಲ್ಲಿ ತೊಡಗಿರುತ್ತವೆ. ಈ ಜೀವಕ್ರಿಯೆಯಲ್ಲಿ ತೊಡಗಿರುತ್ತವೆ. ಈ ಜೀವಕ್ರಿಯೆಗಳಿಗೆಲ್ಲ ಬೇಕಾದ ಶಕ್ತಿ ನಾವು ಸೇವಿಸುವ ಆಹಾರದಿಂದಲೇ ದೊರೆಯುತ್ತದೆ.
ದೇಹದ ಬೆಳವಣಿಗೆಗೆ ಮಾಂಸಖಂಡಗಳ ನಿರ್ಮಾಣಕ್ಕೆ, ರಕ್ತ ಉತ್ಪಾದನೆಗೆ, ಮೂಳೆಗಳ ತಯಾರಿಗೆ ಆಹಾರ ನೆರವಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಅನಾರೋಗ್ಯ ಬರದಂತೆ ಕಾಪಾಡುತ್ತದೆ. ನಮ್ಮ ಆರೋಗ್ಯ ಎಂಬ ಭವನ ನಿರ್ಮಿಸಲು ನಾರು, ಕೊಬ್ಬು ಪದಾರ್ಥಗಳು, ವಿಟಮಿನ್‍ಗಳು, ನೀರು, ಖನಿಜಾಂಶಗಳು ಮನುಷ್ಯ ಹಾಗೂ ಜೀವಕಣಗಳು ಬೆಳವಣಿಗೆಗೆ ಸಹಾಯ ಮಾಡುತ್ತವೆ. ಆಹಾರದಲ್ಲಿ ಮೂರು ಪ್ರಕಾರಗಳಿವೆ. ಅವುಗಳೆಂದರೆ ಘನ ಆಹಾರ, ಮಧ್ಯಮ ಆಹಾರ ಮತ್ತು ದ್ರವ ಆಹಾರ. ಮತ್ತಗೆ ಬೇಯಿಸಿದ ಅನ್ನ, ಮೊಟ್ಟೆ, ತರಕಾರಿ, ಚಪಾತಿ ಇವು ಘನ ಅಹಾರ. ದ್ರವ ಪ್ರದಾರ್ಥ ಪಾಯಿಸಿದಂತಹವು ಮಧ್ಯಮ ಅಹಾರವಾದರೆ, ಹಣ್ಣಿನ ರಸಗಳು, ಸೂಪು ಇವು ದ್ರವ ಆಹಾರದ ಪರಧಿಗೆ ಸೇರುತ್ತವೆ.
ಯಾವಾಗ? ಹೇಗೆ?
ಬಹುಜನ ತಾಯಂದಿರು ಎದುರಿಸುವ ಸಮಸ್ಯೆ ಇದು. ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಯಾವ ರೀತಿಯ ಆಹಾರ ನೀಡಬೇಕು ಎಂಬ ಗೊಂದಲವಿರುತ್ತದೆ.
1. 3 ರಿಂದ 4 ತಿಂಗಳು ಇವರಿಗೆ ಮೆತ್ತಗೆ ಬೇಯಿಸಿದ ಆಹಾರ ನೀಡಬೇಕು.
2. 4 ರಿಂದ 6 ತಿಂಗಳು ಬೇಯಿಸಿದ ತರಕಾರಿ ಕಲಿಸಿಕೊಡಿ.
3. 7 ರಿಂದ 8 ತಿಂಗಳು ಕಿಚಡಿ, ಮೊಸರು, ಮೊಟ್ಟೆಯಲ್ಲಿನ ಬಿಳಿಭಾಗ, ಬ್ರೆಡ್, ಬಿಸ್ಕೆಟ್, ಕ್ಯಾರೆಟ್ ಕೊಡಿ.
4. 8ರಿಂದ 10ತಿಂಗಳು ಮೇಲೆ ತಿಳಿಸಿದ ಎಲ್ಲ ಪದಾರ್ಥಗಳು ಕೊಡುವುದರೊಂದಿಗೆ ದಿನಗಳದಂತೆ ಆಹಾರದ ಪ್ರಮಾಣ ಹೆಚ್ಚಿಸಿ.
Also Read: ರೋಗ ನಿರೋಧಕ ಶಕ್ತಿ ಹೆಚ್ಚಲು ಏನ್ ಮಾಡೋದು?