ಸುಶಾಂತ್ ಸಾವಿಗೆ ಬೈಪೋಲಾರ್ ಡಿಸಾರ್ಡರ್ ಕಾರಣವಾಯ್ತಾ ? ಒಂದು ವರದಿಯ ಪ್ರಕಾರ ಆತನು ‘ಬೈಪೋಲಾರ್’ ಕಾಯಿಲೆಯಿಂದ ಬಳಲುತ್ತಿದ್ದ ಎಂದೂ ಹಾಗೂ ಅವನದನ್ನು ಎಲ್ಲರಿಂದ ಮುಚ್ಚಿಟ್ಟಿದ್ದನಂತೆ!
“ಸುಶಾಂತ್ಗೆ ಬೈಪೋಲಾರ್ ಡಿಸಾರ್ಡರ್ ಇದೆಯೆಂದು ಬಹಿರಂಗಪಡಿಸುತ್ತೇನೆ ಎಂದು ರಿಯಾ ಬ್ಲ್ಯಾಕ್ಮೇಲ್ ಮಾಡುತ್ತಿದ್ದಳು. ಇದರಿಂದಾಗಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ.”ಎನ್ನುತ್ತಾರವರು. ಆ ಬಗ್ಗೆ ಇನ್ನೂ ತನಿಖೆ ಪ್ರಗತಿಯಲ್ಲಿದ್ದು ಆ ಡೆತ್ ಮಿಸ್ಟರಿ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಬೈಪೋಲಾರ್ ಡಿಸಾರ್ಡರ್ ಕಾಯಿಲೆಯ ಬಗ್ಗೆ ಇಲ್ಲಿ ಕಿರು ಮಾಹಿತಿ ನೀಡಲಾಗಿದೆ.
ಬೈಪೋಲಾರ್ ಡಿಸಾರ್ಡರ್ ಕಾಯಿಲೆ:
ಬೈಪೋಲಾರ್ ಡಿಸಾರ್ಡರ್ ಕಾಯಿಲೆಯು ಒಂದು ಬಗೆಯ ಮಾನಸಿಕ ಸಮಸ್ಯೆ. ಇದನ್ನು ಹೊಂದಿರುವವರು ಒಂದು ಕ್ಷಣ ಇದ್ದಂತೆ ಇನ್ನೊಂದು ಕ್ಷಣ ಇರುವುದೇ ಇಲ್ಲ. ಕೆಲವೊಮ್ಮೆ ಅವರ ಮಾನಸಿಕ ಸ್ಥಿತಿ ಕೆರಳಿದಾಗ, ತಾವು ಏನು ಮಾಡುತ್ತಿದ್ದೇವೆ ಅನ್ನುವುದೂ ಅವರಿಗೆ ಗೊತ್ತಾಗುವುದಿಲ್ಲ. ಈ ಕ್ಷಣ ಮಾಡಿದ ಕೆಲಸ ಮುಂದಿನ ಕ್ಷಣದಲ್ಲಿ ಮರೆತು ಹೋಗಲೂ ಬಹುದು. ಈ ಕಾಯಿಲೆಗೆ ತುತ್ತಾದವರು ಹೈ ಎನರ್ಜಿ, ಭಯಂಕರ ಚಟುವಟಿಕೆ ಪ್ರದರ್ಶಿಸುತ್ತಿರುತ್ತಾರೆ. ಇವರಿಗೆ ನಿದ್ದೆ ಹೆಚ್ಚು ಬೇಕಾಗುವುದಿಲ್ಲ, ಅವರು ಸರಿಯಾಗಿ ನಿದ್ರಿಸುವುದೇ ಇಲ್ಲ. ಒಂದುರೀತಿಯಲ್ಲಿ ವಾಸ್ತವದ ಸ್ಪರ್ಶವನ್ನೇ ಕಳೆದುಕೊಳ್ಳುತ್ತಾರೆ. ಸದಾ ಕನಸಿನ ಜಗತ್ತಿನಲ್ಲಿ, ಅವಾಸ್ತವಿಕ ಜಗತ್ತಿನಲ್ಲಿ ಜೀವಿಸುತ್ತಿರುತ್ತಾರೆ. ಇವರಿಗೆ ಡಿಪ್ರೆಶನ್ ಉಂಟಾದಾಗ ಖಿನ್ನತೆ ಬಹುವಾಗಿ ಕಾಡುತ್ತದೆ.
ಕೌನ್ಸೆಲಿಂಗ್ ಮತ್ತು ಔಷಧಗಳ ಮೂಲಕ ನಿಯಂತ್ರಣ:
ಈ ಕಾಯಿಲೆ ನಿಜಕ್ಕೂ ಯಾಕೆ ಬರುತ್ತದೆ ಅನ್ನುವುದು ಗೊತ್ತಿಲ್ಲ. ಆದರೆ ಅನುವಂಶೀಯತೆ, ಪರಿಸರದ ನಕಾರಾತ್ಮಕ ಪ್ರಭಾವ, ಮೆದುಳಿನಲ್ಲಿ ಆಗಿರುವ ಸಣ್ಣಪುಟ್ಟ ನರ ಪರಿವರ್ತನೆ, ಹಾರ್ಮೋನ್ ಅಸಮತೋಲನ ಹಾಗೂರಾಸಾಯನಿಕ ಪ್ರಚೋದನೆಗಳು ಇತ್ಯಾದಿ ಹಲವು ಕಾರಣಗಳು ಒಟ್ಟಾಗಿ ಈ ಕಾಯಿಲೆ ಬರಬಹುದು. ಕಾಯಿಲೆಗೆ ಜೀವನಪೂರ್ತಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಆದರೆ ಕೌನ್ಸೆಲಿಂಗ್ ಮತ್ತು ಔಷಧಗಳ ಮೂಲಕ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಖಿನ್ನತೆಯಲ್ಲಿರುವವರ ಬಳಿ ಒಳ್ಳೆಯ ಮಾತುಗಳನ್ನಾಡುವುದು, ಅವರ ಜೊತೆಗೆ ನಾವಿರುತ್ತೇವೆ ಎನ್ನುವ ಬೆಂಬಲವೇ ಅವರಿಗೆ ಉತ್ತಮ ಚಿಕಿತ್ಸೆ ಆಗಬಲ್ಲುದು.