Vydyaloka

ಸಿರಿಧಾನ್ಯ ಗಳಿಂದ ಅದ್ಭುತ ಪ್ರಯೋಜನಗಳು

ಸಿರಿಧಾನ್ಯ ಅದ್ಭುತ ಪ್ರಯೋಜನಗಳು –   ಇವು ಸಣ್ಣ ಸಣ್ಣ ಧಾನ್ಯಗಳು, ಆದರೆ ಅದ್ಭುತ  ಆರೋಗ್ಯ ಪ್ರಯೋಜನಗಳು ಹಲವು. ಜೊತೆಗೆ ಅಪಾರವಾದ ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಪ್ರಯೋಜನಗಳನ್ನು ಹೊಂದಿದ್ದು, ಇಂದಿನ ಪರಿಸ್ಥಿತಿಯಲ್ಲಿ ಇದರ ಬಳಕೆ ಇನ್ನಷ್ಟು ಹೆಚ್ಚಾಗಬೇಕು.

ಪೋಷಣೆ ಮತ್ತು ಸುಸ್ಥಿರ ಕೃಷಿಯ ಕ್ಷೇತ್ರದಲ್ಲಿ ಸಿರಿಧಾನ್ಯಗಳು ಪ್ರಮುಖ ಸ್ಥಾನ ಹೊಂದಿದೆ. ಇಂದಿನ ಆರೋಗ್ಯ ಮತ್ತು ಪರಿಸರ ಸವಾಲುಗಳನ್ನು ಎದುರಿಸಲು ಸಿರಿಧಾನ್ಯ ಸೂಕ್ತವಾದ ಕೃಷಿ ಎಂದರೂ ತಪ್ಪಾಗಲಾರದು.

• ಆರ್ಥಿಕ ಮತ್ತು ಸಾಮಾಜಿಕ ಪ್ರಯೋಜನಗಳು: ಕೆಲವು ಪ್ರದೇಶಗಳಲ್ಲಿ ಆಹಾರ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯ ಸಮಸ್ಯೆಗಳನ್ನು ಪರಿಹರಿಸಲು ಸಿರಿಧಾನ್ಯಗಳು ಸೂಕ್ತ.
• ಆಹಾರ ಭದ್ರತೆ: ಪ್ರತಿಕೂಲ ಪರಿಸ್ಥಿತಿಗಳಲ್ಲಿ, ವಿಶೇಷವಾಗಿ ಇತರ ಬೆಳೆಗಳನ್ನು ಬೆಳೆಯಲು ಸಾಧ್ಯವಾಗದಿದ್ದಾಗ ಈ ಬೆಳೆಯನ್ನು ಬಹಳ ಸುಲಭವಾಗಿ ಬೆಳೆಯಬಹುದು. ಆದ್ದರಿಂದ ಬರ ಮತ್ತು ಆಹಾರದ ಕೊರತೆಗೆ ಒಳಗಾಗುವ ಪ್ರದೇಶಗಳಲ್ಲಿ ಸಿರಿಧಾನ್ಯಗಳು ಪೌಷ್ಟಿಕಾಂಶದ ಮೂಲವಾಗಿದೆ.
• ರೈತರ ಸಬಲೀಕರಣ: ಸಣ್ಣ ರೈತರಿಗೆ, ಸಿರಿಧಾನ್ಯ ಆರ್ಥಿಕ ಸಬಲೀಕರಣದ ಮಾರ್ಗವನ್ನು ನೀಡುತ್ತದೆ. ಸಾಂಪ್ರದಾಯಿಕ ಕೃಷಿ ಬೆಳೆಗಳು ಮಾರುಕಟ್ಟೆಯ ಪರಿಸ್ಥಿತಿಗನುಗುಣವಾಗಿ ದರದಲ್ಲಿ ಏರಿಳಿತ ಕಾಣುವುದು ಸರ್ವೇಸಾಮಾನ್ಯ. ಆದರೆ ಸಿರಿಧಾನ್ಯಗಳ ಆದಾಯದಲ್ಲಿ ದಲ್ಲಿ ಬಹುತೇಕ ಸ್ಥಿರತೆ ಕಾಣಬಹುದು.
• ವ್ಯಾಪಕ ಬೇಡಿಕೆ: ಹಾಗೆಯೇ ಇತ್ತೀಚಿನ ದಿನಗಳಲ್ಲಿ ಆರೋಗ್ಯದ ದೃಷ್ಟಿಯಿಂದ ಈ ಧಾನ್ಯಗಳಿಗೆ ವ್ಯಾಪಕವಾಗಿ ಬೇಡಿಕೆ ಇದೆ. ಬದಲಾಗುತ್ತಿರುವ ಕೃಷಿ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಅಂಶ ಸಿರಿಧಾನ್ಯದ ಕೃಷಿಗೆ ಹೆಚ್ಚು ಒತ್ತುಕೊಡಲು ರೈತರಿಗೆ ಪ್ರೇರೇಪಿಸುತ್ತದೆ.
• ಹವಾಮಾನ: ತೀವ್ರವಾಗಿ ಬದಲಾಗುತ್ತಿರುವ ಹವಾಮಾನದಲ್ಲಿ ಕೂಡ ಸಿರಿಧಾನ್ಯ ಬೆಳೆಯುತ್ತದೆ. ಒಳ್ಳೆಯ ಗುಣಮಟ್ಟದ ಮಣ್ಣಿನ ಅಗತ್ಯ ಕೂಡ ಸಿರಿಧಾನ್ಯ ಬೆಳೆಯಲು ಬೇಕಾಗುವುದಿಲ್ಲ. ಆದ್ದರಿಂದ ಸಿರಿಧಾನ್ಯ ಎಲ್ಲ ಹವಾಮಾನದಲ್ಲೂ ಬೆಳೆಯುತ್ತದೆ.
• ಕಡಿಮೆ ಬೆಳವಣಿಗೆಯ ಅವಧಿ: ಅನೇಕ ಸಿರಿಧಾನ್ಯಗಳು ಕಡಿಮೆ ಅವಧಿಯಲ್ಲಿ ಬೆಳೆಯುತ್ತವೆ. ಆದ್ದರಿಂದ ರೈತರು ಒಂದು ವರ್ಷದಲ್ಲಿ ಬಹು ಫಸಲು ಪಡೆಯುತ್ತಾರೆ. ಇದು ನಿಯಮಿತ ಆಹಾರ ಪೂರೈಕೆಗೆ ಸಹಾಯ ವಾಗುತ್ತದೆ. ಕೃಷಿ ಉತ್ಪಾದನೆ ಹೆಚ್ಚುವುದರ ಜೊತೆಗೆ ಆಹಾರ ಪೂರೈಕೆಯು ಆಗುತ್ತದೆ.
• ಆಮದು ಅವಲಂಬನೆ ಕಡಿಮೆ ಮಾಡಬಹುದು : ದೇಶೀಯವಾಗಿ ಧಾನ್ಯಗಳ ಬಳಕೆಯನ್ನು ಉತ್ತೇಜಿಸಿ, ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ವಿದೇಶಿ ವಿನಿಮಯವನ್ನು ಉಳಿಸಬಹುದು ಹಾಗೂ ಸ್ಥಳೀಯ ಕೃಷಿಯನ್ನು ಉತ್ತೇಜಿಸಬಹುದು.

ಸಿರಿಧಾನ್ಯಗಳು ಪೌಷ್ಟಿಕ ಆಹಾರದ ಆಯ್ಕೆ ಮಾತ್ರವಲ್ಲ, ಇದು ಕೃಷಿಗೆ ಸಮರ್ಥನೀಯ ಮತ್ತು ಆರ್ಥಿಕವಾಗಿ ಲಾಭದಾಯಕ. ಈ ಬದಲಾಗುತ್ತಿರುವ ಪರಿಸರಕ್ಕೆ ಸಿರಿಧಾನ್ಯ ಒಳ್ಳೆಯ ಕೃಷಿ, ಹಾಗೂ ಸಮತೋಲಿತ ಪೌಷ್ಟಿಕ ಆಹಾರವೂ ಹೌದು. ನಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯಗಳನ್ನು ಅಳವಡಿಸುವ ಮೂಲಕ, ನಾವು ವೈಯಕ್ತಿಕ ಸ್ವಾಸ್ಥ್ಯವನ್ನು ಕಾಪಾಡುವುದರ ಜೊತೆಗೆ ಸುಸ್ಥಿರ ಕೃಷಿಯನ್ನು ಉತ್ತೇಜಿಸಿ, ವಿಶ್ವಾದ್ಯಂತ ಆಹಾರ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯನ್ನು ಬಲಪಡಿಸ ಬಹುದು.

ಅಜಿತ್ ಕುಮಾರ್
ನಿರ್ದೇಶಕರು
ಆವಿಶ್ಜಿಯಾ ಪ್ರೈವೆಟ್ ಲಿಮಿಟೆಡ್
ನಂ. 28, 2ನೇ ಮುಖ್ಯರಸ್ತೆ, ಮುನಿಸ್ವಾಮಿ ಲೇಔಟ್,
ವಿದ್ಯಾರಣ್ಯಪುರ, ಬೆಂಗಳೂರು 560097
Ph: 98451 83494
ಮೇಲ್ ಐಡಿ: marketing@aavishjia.com
https://www.aavishjia.com

3-1 ಜಿನ್ಸೆಂಗ್ ಕಾಫಿ ಭಾರತದಲ್ಲಿ ಆವಿಶ್ಜಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಮತ್ತು ಎಲ್ಲಾ ಪ್ರಮುಖ ಇ-ಕಾಮರ್ಸ್ ವೆಬ್ ಪೋರ್ಟಲ್‌ಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ಜೊತೆಗೆ www.aavishjia.com ನಲ್ಲಿ ಲಭ್ಯವಿದೆ.

ಸಂಪರ್ಕ/WhatsApp – 63614 12347 / 89719 11440

ವಿತರಣೆ, ಸ್ಟಾಕ್ ಪಾಯಿಂಟ್‌ಗಳು, ಚಿಲ್ಲರೆ ವ್ಯಾಪಾರ ಇತ್ಯಾದಿಗಳಿಗಾಗಿ ಕೂಡ  ಸಂಪರ್ಕಿಸಬಹುದು.

Share this: