ಪಿಂಪಲ್ಸ್ ಚರ್ಮದ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಮೊಡವೆಯ ಚಿಕಿತ್ಸೆಗೆ ಅಯುರ್ವೇದದಲ್ಲಿ ಹಲವಾರು ನಿವಾರಣೋಪಾಯಗಳನ್ನು ತಿಳಿಸಿದ್ದಾರೆ.
ಕಾರಣಗಳು
ಕಾರಣಗಳನ್ನು ಕಾಲ ಸಂಬಂಧಿ, ಆಹಾರ ಸಂಬಂಧಿ, ವಿಹಾರ ಸಂಬಂಧಿ ಹಾಗೂ ಮನ ಸಂಬಂಧಿ ಕಾರಣಗಳಾಗಿ ವಿಂಗಡಿಸಿಕೊಳ್ಳಬಹುದಾಗಿದೆ.
• ಕಾಲ ಸಂಬಂಧಿ- ಅಂದರೆಕಾಲಕ್ಕೆ ಅನುಗುಣವಾಗಿ ಕಾಣಿಸಿಕೊಳ್ಳುವ ಶತ್ರು ಎಂದರ್ಥ; ನೆನಪಿರಲಿ ಇಲ್ಲಿ ಕಾಲ ಎಂಬುದು ವಯಸ್ಸಿಗೆ ಸಂಬಂಧಿಸಿದ್ದಾಗಿರಬಹುದು ಇಲ್ಲವೆ ಖುತುವಿಗೆ ಸಂಬಂಧಿಸಿದ್ದಾಗಿರಬಹುದು. ಮೊದಲೆ ಹೇಳಿದ ಹಾಗೆ ಯೌವನದಲ್ಲಿ ; ವಸಂತ (March- April)-ಶರದ್ (September-October)-ಗ್ರಿಷ್ಮ (May-June) ಋತುವಿನಲ್ಲಿ ಈ ಶತ್ರುವಿನ ಬಾಧೆ ಹೆಚ್ಚಳವಾಗುತ್ತದೆ.
• ಆಹಾರ ಸಂಬಂಧಿ -ಅತಿಯಾದ ಕಟು (Pungent), ತಿಕ್ತ (Bitter), ಅಮ್ಲ (Sour), ಲವಣ (Salty) ರಸ ಬಳಕೆ ಮಾಡುವುದು ಹಾಗೂ ಜಿಡ್ಡಿನ ಪಾದಾರ್ಥ ಸೇವನೆ ಪಿಂಪಲ್ಸ್ ಗೆ ಕಾರಣವಾಗಬಹುದು.
• ವಿಹಾರ ಸಂಬಂಧಿ- ದಿನದಲ್ಲಿ ನಿದ್ರಿಸುವುದು, ಅತಿಯಾಗಿ ಬಿಸಿಲಿಗೆ ಹೋಗುವುದು, ರಾತ್ರಿ ಜಾಗರಣೆಯು ಈ ಮುಖ ದೂಷಿಕನ ಮಿತ್ರರಾಗಬಲ್ಲರು.
• ಮನ ಸಂಬಂಧಿ – ಅತಿಯಾದ ಚಿಂತೆ, ಕೋಪ-ತಾಪ, ಭಯ, ಉದ್ವೇಗಗಳು ಪಿಂಪಲ್ಸ್ ನ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಹೇಗೆ ಹಾಗು ಲಕ್ಷಣಗಳು
ನಿವಾರಣೋಪಾಯಗಳು-
ಮೊಡವೆಯ ಚಿಕಿತ್ಸೆಗೆ ಅಯುರ್ವೇದದಲ್ಲಿ ಹಲವಾರು ನಿವಾರಣೋಪಾಯಗಳನ್ನು ತಿಳಿಸಿದ್ದಾರೆ.
• ಶೋಧನ – ದೋಷ-ಕಾಲ-ವ್ಯಕ್ತಿ-ಋತುವಿನ ಅನುಸಾರವಾಗಿ; ವಮನ, ವಿರೇಚನ, ನಸ್ಯ ಅಥವ ರಕ್ತ ಮೋಕ್ಷಣ ಶೋಧನ ಚಿಕಿತ್ಸೆಯನ್ನು ಪಡೆಯಬಹುದು.
• ಶಮನ ಚಿಕಿತ್ಸೆ – ರಕ್ತ ಶೋದಕವಾದ, ತಿಕ್ತ(Bitter)ರಸವುಳ್ಳ ಔಷದ ಸೇವನೆ ಲಾಭದಾಯಕ. ಹಲವು ಮುಖ ಲೇಪಕಗಳು ಮೋಡವೆ ನಿವಾರಿಸುವಲ್ಲಿ ಉತ್ತಮ .
ಮನೆಮದ್ದು-
1.ಮೊಡವೆ ಹಾಗೂ ಮುಖದ ಕಲೆ ನಿವಾರಣೆಗೆ – ಆಮಲಕ್ಕಿ(Emblicaofficinalis) ಕಷಾಯದಿಂದ ಮುಖ ತೊಳೆಯುವುದು.
2. ರಾತ್ರಿ ಕೊತ್ತಂಬರಿ ಕಾಳನ್ನು ನೆನೆಸಿರುವ ನೀರಿನಿಂದ, ಆಗಾಗ (ದಿನಕ್ಕೆ ೨-೩ ಬಾರಿ) ಮುಖ ತೊಳೆಯುವುದು.
3. ಅರಿಷಿಣ-ಚಂದನ ಮಿಶ್ರಿತ ಲೇಪ ಬಳಕೆ
4. ನಿಯಮಿತವಾಗಿ ಲೋದ್ರ (Symplocosracemosa) ಚೂರ್ಣದ ಲೇಪ ಬಳಕೆ
ಅನಿವಾರ್ಯ ಎಂಬಲ್ಲಿ ವೈದ್ಯರ ಭೇಟಿ ಸೂಕ್ತ. ಕೊನೆಯದಾಗಿ ; “ನಿಮ್ಮ ಸಮ್ಮತಿ ಇಲ್ಲದೆ ಯಾರು ನಿಮ್ಮನು ಹೀನರಾಗಿ ಕಾಣಲಾಗದು”; ಆ ಚಂದ್ರನಲ್ಲೂ ತಗ್ಗುಗಳುಂಟು. ಆದರು ಆತನನ್ನು ಸೌಂದರ್ಯಾದ ಉಪಮವಾಗಿ ಕಾಣುವಾಗ, ಮೊಡವೆಯನ್ನು ಒಡವೆಯಾಗಿಸಿಕೊಂಡು ಆಂತರಿಕ ಸೌಂದರ್ಯವನ್ನೆಕೆ ಹೆಚ್ಚಿಸಿಕೊಳ್ಳಬಾರದು???????
ಡಾ || ಅಶ್ವಿನಿ . ಎನ್
ಆದಿಚುಂಚನಗಿರಿ ಆಯುರ್ವೇದ ವೈದ್ಯಕೀಯ ಕಾಲೇಜು
ನಾಗರೂರು, ನೆಲಮಂಗಲ,, ಬೆಂಗಳೂರು ಉತ್ತರ- 562123
Ph: 7026362663