Vydyaloka

ಮುದ್ರೆಯಿಂದ ಬೆನ್ನುನೋವಿನ ನಿವಾರಣೆ

ಮುದ್ರೆಯಿಂದ ಬೆನ್ನುನೋವಿನ ನಿವಾರಣೆ ಸಾಧ್ಯ. ದಿನವೂ ನಿರಂತರವಾಗಿ ಮುದ್ರೆಗಳನ್ನು ಅಭ್ಯಾಸ ಮಾಡುವುದರಿಂದ ಬೆನ್ನುನೋವಿನ ತೊಂದರೆಯಿಂದ ಮುಕ್ತವಾಗಬಹುದು. ಬೆನ್ನುನೋವನ್ನು ನಿವಾರಣೆ ಮಾಡಿಕೊಳ್ಳಲು ರುದ್ರಮುದ್ರೆ ಹಾಗೂ ವ್ಯಾನ ಮುದ್ರೆ – ಈ 2 ಮುದ್ರೆಗಳನ್ನು ಅಭ್ಯಾಸ ಮಾಡಬೇಕು.

ಈ ಬ್ರಹ್ಮಾಂಡವು ಪಂಚತತ್ವಗಳಿಂದ ಕೂಡಿದೆ. ಅವುಗಳಾವುವುವೆಂದರೆ ಅಗ್ನಿ, ವಾಯು, ಆಕಾಶ, ಪೃಥ್ವಿ ಮತ್ತು ಜಲ. ಅದೇ ರೀತಿ ನಮ್ಮ ಶರೀರವು ಸಹ ಪಂಚತತ್ವಗಳಿಂದಾಗಿದೆ. ಯಾವಾಗ ಈ ಪಂಚತತ್ವಗಳು ಸಮತೋಲನದಲ್ಲಿರುತ್ತವೆಯೋ, ಆಗ ನಾವು ಆರೋಗ್ಯದಿಂದಿರುತ್ತೇವೆ. ಯಾವಾಗ ಸಮತೋಲನ ಕಳೆದುಕೊಳ್ಳುತ್ತವೆಯೋ ಆಗ ನಮಗೆ ಅನಾರೋಗ್ಯದಿಂದ ರೋಗಗಳು ತಲೆದೋರುತ್ತವೆ. ಈ ಪಂಚತತ್ವಗಳನ್ನು ಸಮತೋಲನದಲ್ಲಿ ಕಾಪಾಡುವುದೇ ಮುದ್ರಾಯೋಗದ ಉದ್ದೇಶವಾಗಿದೆ.

ನಮ್ಮ ಶರೀರದಿಂದ ಇಲೆಕ್ಟ್ರೋ ಮ್ಯಾಗ್ನೆಟಿಕ್ ಪವರ್ ಅಥವಾ ವಿದ್ಯುತ್ ಕಾಂತೀಯ ಅಲೆಗಳು, ಸತತವಾಗಿ ಹೊರಹೊಮ್ಮುತ್ತಿರುತ್ತೆ. ಈ ಚೈತನ್ಯ ಶಕ್ತಿಯು ಕೈ ಬೆರಳುಗಳ ತುದಿ, ಮೂಗು, ತುಟಿ, ಕಿವಿ ಮತ್ತು ಕಾಲುಬೆರಳುಗಳ ತುದಿಯಿಂದ ಸದಾ ಹೊರಹೊಮ್ಮುತ್ತಿರುತ್ತವೆ. ಮುದ್ರಾಯೋಗವನ್ನು ಕೈಬೆರಳುಗಳಿಂದ ಮಾಡುವ ಮೂಲಕ, ಈ ಚೈತನ್ಯ ಶಕ್ತಿಯನ್ನು ಬಂಧಿಸಿ ಶರೀರಕ್ಕೆ ಮರುಕಳಿಸುವಂತೆ ಮಾಡಿ, ಪಂಚತತ್ವಗಳನ್ನು ಸಮತೋಲನವಾಗಿ ಇಟ್ಟುಕೊಳ್ಳಬಹುದಾಗಿರುತ್ತದೆ.

ಅಗ್ನಿ ತತ್ವ – ನಾಭಿಯಿಂದ ಎದೆಯವರೆಗೆ – ಹೆಬ್ಬೆರಳು.
ವಾಯು ತತ್ವ – ಮೂಗಿನಿಂದ ಎದೆಯವರೆಗೆ – ತೋರು ಬೆರಳು.
ಆಕಾಶ ತತ್ವ – ಶಿರಸ್ಸು – ಮಧ್ಯದ ಬೆರಳು.
ಪೃಥ್ವಿ ತತ್ವ – ಅಂಗಾಲಿನಿಂದ ಮಂಡಿಗಳವರೆಗೆ – ಉಂಗುರದ ಬೆರಳು.
ಜಲ ತತ್ವ – ಮಂಡಿಗಳಿಂದ ನಾಭಿಯವರೆಗೆ – ಕಿರು ಬೆರಳು.

ಬೆನ್ನುನೋವು ಯಾಕೆ ಜಾಸ್ತಿಯಾಗುತ್ತಿದೆ?

ನಮ್ಮ ಯುವಕ ಹಾಗೂ ಯುವತಿಯರನ್ನು ಕಾಡುತ್ತಿರುವ ಸಾಮಾನ್ಯ ತೊಂದರೆ ಎಂದರೆ ಬೆನ್ನುನೋವು. ಈ ಬೆನ್ನುನೋವು ಯಾಕೆ ಜಾಸ್ತಿಯಾಗುತ್ತಿದೆ? ನಾವೆಲ್ಲಾ ಹೊಲದಲ್ಲಿ ಹೋಗಿ ಕೆಲಸ ಮಾಡುತ್ತಿಲ್ಲ? ಆದರೂ ಬೆನ್ನುನೋವು ಕಾಡುತ್ತಿದೆ. ಎಲ್ಲಾ ಕೆಲಸ ಮಾಡಲು ನಾವು ಸುಲಭ ಉಪಾಯಗಳನ್ನು ಕಂಡುಕೊಂಡಿದ್ದೇವೆ. ಅಂದರೆ ನೆಲ ಒರೆಸಲು ಮಾಪ್ (ಕೋಲಿನ ಸಹಾಯದಿಂದ), ಬಟ್ಟೆ ಒಗೆಯಲು ವಾಷಿಂಗ್ ಮೆಷಿನ್ ಹೀಗೆ ನಮ್ಮ ದಿನನಿತ್ಯದ ಕೆಲಸ ಮಾಡಲು ನಾವು ಸುಲಭವಾದ ಸಾಧನಗಳನ್ನು ಉಪಯೋಗಿಸುತ್ತದ್ದೇವೆ. ಆದರೂ ನಮಗೆ ಬೆನ್ನುನೋವು ಕಾಡುತ್ತಿದೆ. ಇದಕ್ಕೆಲ್ಲಾ ಕಾರಣ ನಡೆಯುವುದಕ್ಕಿಂತ ಜಾಸ್ತಿ ಗಾಡಿಯಲ್ಲಿ ತಿರುಗಾಡುವುದು, ಓಡಾಡುವುದು.

ಗಾಡಿ ಹೇಗೆ ವೈಬ್ರೇಟ್ (vibrate) ಆಗುತ್ತದೋ ಹಾಗೆಯೇ ನಮ್ಮ ಶರೀರವೂ ಸಹ ವೈಬ್ರೇಟ್ ಆಗುವುದರಿಂದ ನಮ್ಮ ಬೆನ್ನೆಲುಬಿನ (Spinal card) ಮೇಲೆ ಒತ್ತಡ ಬೀಳುತ್ತದೆ. ನಮ್ಮ ಬೆನ್ನೆಲುಬಿನಿಂದ ಎಲ್ಲಾ ನರಗಳು ನಮ್ಮ ದೇಹದವರೆಗೂ ಹೋಗಿರುತ್ತದೆ. ನಮ್ಮ ಬೆನ್ನೆಲುಬಿನಿಂದ ಒಂದು ನರ ಜಗ್ಗಿದರೂ ನಮಗೆ ಬೆನ್ನು ನೋವು ಕಾಡುತ್ತದೆ. ಬೆನ್ನುನೋವು ಬಿಟ್ಟರೆ ತುಂಬಾ ಜನರಿಗೆ ಎಲ್4(ಐ4), ಎಲ್5(ಐ5), ಡಿಸ್ಕ್ ಬಲ್ಜ್ (ಊದುವುದು), ಡಿಸ್‍ಲೊಕೇಷನ್, ಸಯಾಟಿಕಾ ತೊಂದರೆ ಅನುಭವಿಸುತ್ತಾರೆ.

ಮುದ್ರೆಯಿಂದ ಬೆನ್ನುನೋವಿನ ನಿವಾರಣೆ

ರುದ್ರ ಮುದ್ರೆ (L) ಹಾಗೂ ವ್ಯಾನ ಮುದ್ರೆ(R)

ಈ ತೊಂದರೆಗಳು ಕಂಡುಬಂದಲ್ಲಿ ನಾವು ನಮ್ಮ ದಿನನಿತ್ಯದ ಕೆಲಸವನ್ನು ಸಹ ಮಾಡುವುದಕ್ಕೆ ಅಸಾಧ್ಯವೆನಿಸುತ್ತದೆ. ಇದಕ್ಕೆ ಪರಿಹಾರವೆಂದರೆ ಮೊದಲು ಗಾಡಿಯಲ್ಲಿ ಓಡಾಡುವುದನ್ನು ಕಡಿಮೆ ಮಾಡಬೇಕು. ಎರಡನೆಯದಾಗಿ ಚಿಂತೆ. ಅತಿಯಾದ ಚಿಂತೆಯಿಂದಲೂ ಸಹ ಈ ಬೆನ್ನುನೋವಿನ ತೊಂದರೆ ಉಂಟಾಗುತ್ತದೆ. ಈ ಎಲ್ಲಾ ಲಕ್ಷಣಗಳನ್ನು ನಾವು ಹೇಗೆ ಮುದ್ರೆಯಿಂದ ಸರಿಪಡಿಸಿಕೊಳ್ಳಬಹುದು ನೋಡೋಣ. ಈ ಬೆನ್ನುನೋವನ್ನು ನಿವಾರಣೆ ಮಾಡಿಕೊಳ್ಳಲು ರುದ್ರಮುದ್ರೆ ಹಾಗೂ ವ್ಯಾನ ಮುದ್ರೆ – ಈ 2 ಮುದ್ರೆಗಳನ್ನು ಅಭ್ಯಾಸ ಮಾಡಬೇಕು.

1. ರುದ್ರ ಮುದ್ರೆ : ಬೆನ್ನು ನೇರವಾಗಿರಿಸಿ ಕುಳಿತುಕೊಳ್ಳಬೇಕು. ನಂತರ ಹೆಬ್ಬೆರೆಳು (Thumb), ತೋರು ಬೆರಳು (Fore finger)  ಹಾಗೂ ಉಂಗುರದ ಬೆರಳು(Ring Finger)  ಜೋಡಿಸಿ ಕುಳಿತುಕೊಳ್ಳಬೇಕು. ರಾತ್ರಿ ಮಲಗುವ ಅರ್ಧಗಂಟೆ ಮೊದಲು 10 ರಿಂದ 15 ನಿಮಿಷ ಈ ಮುದ್ರೆಯನ್ನು ಅಭ್ಯಾಸ ಮಾಡಿ 10 ನಿಮಿಷದ ನಂತರ ಮಲಗಬೇಕು. ನಿರಂತರವಾಗಿ ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಬೆನ್ನುನೋವಿಗೆ ಸಂಬಂಧಿಸಿದ ಎಲ್ಲಾ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು.

2. ವ್ಯಾನ ಮುದ್ರೆ : ಬೆನ್ನು ನೇರವಾಗಿರಿಸಿ ಕುಳಿತುಕೊಳ್ಳಬೇಕು. ನಂತರ ಹೆಬ್ಬೆರೆಳು(Thumb), ತೋರು ಬೆರಳು (Fore finger) ಹಾಗೂ ಮಧ್ಯದ ಬೆರಳು (Middle Finger) ಗಳನ್ನು ಜೋಡಿಸಿ ಕುಳಿತುಕೊಳ್ಳಬೇಕು. ಈ ಮುದ್ರೆಗಳಲ್ಲಿ ಕುಳಿತುಕೊಂಡು ಧ್ಯಾನ ಮಾಡಬಹುದು. ದಿನವೂ ನಿರಂತರವಾಗಿ ಮುದ್ರೆಗಳನ್ನು ಅಭ್ಯಾಸ ಮಾಡುವುದರಿಂದ ಬೆನ್ನುನೋವಿನ ತೊಂದರೆಯಿಂದ ಮುಕ್ತವಾಗಬಹುದು.

Also Read: ಬೆನ್ನುನೋವು-ತಲೆನೋವು; ಯಾರನ್ನೂ ಬಿಡದು! 

ಈ ರೀತಿ ನೈಸರ್ಗಿಕ ಚಿಕಿತ್ಸೆಯಾದಂತಹ ಮುದ್ರೆಗಳನ್ನು ಅಭ್ಯಾಸ ಮಾಡಿ ನಮ್ಮ ದೇಹದಲ್ಲಿ ಆಗುವ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು.

ಯೋಗ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ.

ಬಿ.ವಿ. ಶ್ರೀಮತಿ ರಮೇಶ್
ಶ್ರೀ ಯೋಗ ಮತ್ತು ಸಾಂಸ್ಕøತಿಕ ಅಕಾಡೆಮಿ(ರಿ)
ಸಂಸ್ಥಾಪಕಿ, ಕಾರ್ಯದರ್ಶಿ ಮತ್ತು ಯೋಗ ಶಿಕ್ಷಕಿ
mobile – 98803 86687
email : sri.ycaofficial@gmail.com

Share this: