Vydyaloka

ಈರುಳ್ಳಿ ಉತ್ತಮ ಆರೋಗ್ಯಕರ ತರಕಾರಿ

ಈರುಳ್ಳಿ ಉತ್ತಮ ಆರೋಗ್ಯಕರ ತರಕಾರಿ. ಔಷಧಿ ರೂಪದಲ್ಲಿ ಬಳಸುವಾಗ ಬೇಯಿಸಿದ ಈರುಳ್ಳಿಗಿಂತ ಹಸಿ ಈರುಳ್ಳಿಯೇ ಹೆಚ್ಚು ಪರಿಣಾಮಕಾರಿ. ಈರುಳ್ಳಿಯಲ್ಲಿ ಕ್ರಿಮಿನಾಶಕ ಗುಣವಿರುವುದರಿಂದ ಇದನ್ನು ಸೌತೆಕಾಯಿ, ಕ್ಯಾರೆಟ್ ಮತ್ತು ಟೊಮೊಟೊ ಕೊಸಂಬರಿಯೊಂದಿಗೆ ಸೇವಿಸುವುದರಿಂದ ಜಠರ ಮತ್ತು ಕರುಳಿಗೆ ಸಂಬಂಧಪಟ್ಟ ಅನೇಕ ರೋಗಗಳಿಂದ ಮುಕ್ತರಾಗಬಹುದು.

1. ಈರುಳ್ಳಿ ಸೇವಿಸುವುದರಿಂದ ಆಯುಷ್ಯ ಪ್ರಮಾಣ ವೃದ್ದಿಯಾಗುತ್ತದೆ.

2. ಈರುಳ್ಳಿಯಲ್ಲಿ ಕ್ರಿಮಿನಾಶಕ ಗುಣವಿರುವುದರಿಂದ ಇದನ್ನು ಸೌತೆಕಾಯಿ, ಕ್ಯಾರೆಟ್ ಮತ್ತು ಟೊಮೊಟೊ ಕೊಸಂಬರಿಯೊಂದಿಗೆ ಸೇವಿಸುವುದರಿಂದ ಜಠರ ಮತ್ತು ಕರುಳಿಗೆ ಸಂಬಂಧಪಟ್ಟ ಅನೇಕ ರೋಗಗಳಿಂದ ಮುಕ್ತರಾಗಬಹುದು.

3. ಪ್ರತಿ ದಿನ ಈರುಳ್ಳಿ ಸೇವಿಸುತ್ತಿದ್ದರೆ ಹೃದ್ರೋಗದ ತೊಂದರೆ ಇರದು.

4. ವಸಡಿನಿಂದ ರಕ್ತ ಸ್ರಾವವಾಗುತ್ತಿದ್ದರೆ, ಈರುಳ್ಳಿಯನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚಿ ಮೃದುವಾಗಿ ತಿಕ್ಕಿದರೆ ರಕ್ತಸ್ರಾವ ನಿಲ್ಲುತ್ತದೆ.

Also Read: ವಸಡುಗಳ ರಕ್ತಸ್ರಾವ – ಎಚ್ಚರವಾಗಿರಿ

5. ಈರುಳ್ಳಿಯಲ್ಲಿ ರೋಗಾಣುಗಳನ್ನು ನಾಶಪಡಿಸುವ ಗುಣವಿರುವುದರಿಂದ ಇದರ ಸತತ ಉಪಯೋಗದಿಂದ ಕಾಲರ, ವಿಷಮ ಶೀತಜ್ವರ, ಸಿಡುಬು, ಆಮಶಂಕೆ, ಅತಿಸಾರ ಇತ್ಯಾದಿ ಅಂಟುಜಾಡ್ಯಗಳ ಭಯವಿರುವುದಿಲ್ಲ.

6. ಊಟದ ನಂತರ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಕುಡಿಯುವ ನೀರಿನ ಮೂಲಕ ದೇಹಕ್ಕೆ ಸೇರುವ ರೋಗಾಣುಗಳು ನಾಶ ಹೊಂದುತ್ತವೆ.

7. ಸುಟ್ಟ ಈರುಳ್ಳಿ ತಿನ್ನುವುದರಿಂದ ರೋಗಾಣುಪೂರಿತ ಆಮಶಂಕೆ ಗುಣವಾಗುತ್ತದೆ. ಅಜೀರ್ಣ ನಿವಾರಣೆಯಾಗುತ್ತದೆ.

8. ಹಸಿ ಈರುಳ್ಳಿಯನ್ನು ಹಲ್ಲಿನಿಂದ ಕಡಿದು ತಿನ್ನುವುದರಿಂದ ದಂತಕ್ಷಯ (ಹಲ್ಲಿನ ಸವಕಳಿ) ನಿವಾರಣೆಯಾಗುತ್ತದೆ.

9. ಜೇನುನೋಣ ಅಥವಾ ಚೇಳು ಕಚ್ಚಿದ ಜಾಗದ ಮೇಳೆ ಜಜ್ಜಿದ ಈರುಳ್ಳಿಯನ್ನು ತಿಕ್ಕುವುದರಿಂದ ಸಾಕಷ್ಟು ಪರಿಹಾರ ದೊರೆಯುತ್ತದೆ.

10. ಬಿಳಿ ಈರುಳ್ಳಿ ರಸವನ್ನು ಅರಿಶಿನದ ಪುಡಿಯಲ್ಲಿ ಕಲಸಿ ಹಚ್ಚಿದರೆ ತುರಿಕಜ್ಜಿ ಗುಣವಾಗುತ್ತದೆ.

11. ವಾಂತಿಯಾಗುತ್ತಿದ್ದಾಗ, ಜಜ್ಜಿದ ಈರುಳ್ಳಿಯನ್ನು ಚೆನ್ನಾಗಿ ಮೂಸುತ್ತಿದ್ದರೆ ವಾಂತಿ ನಿಲ್ಲುತ್ತದೆ. ಜಜ್ಜಿದ ಈರುಳ್ಳಿಯ ವಾಸನೆಯನ್ನು ತೆಗೆದುಕೊಳ್ಳುವುದರಿಂದ ನೆಗಡಿ, ತಲೆನೋವು ಶಾಂತವಾಗುತ್ತದೆ. ಅಂಗಾಲು ಒಡೆದಿರುವಾಗ ಜಜ್ಜಿದ ಈರುಳ್ಳಿಯನ್ನು ಒಡೆದಿರುವ ಭಾಗಕ್ಕೆ ಕಟ್ಟುವುದರಿಂದ ಉತ್ತಮ ಫಲ ದೊರೆಯುತ್ತದೆ.

12. ಗಲಭೆ ಸಂದರ್ಭದಲ್ಲಿ ಪೊಲೀಸರಿಂದ ಆಶ್ರುವಾಯು ಉಪಯೋಗಿಸಲ್ಪಟ್ಟಾಗ ಈರುಳ್ಳಿಯನ್ನು ಮೂಸಿ ನೋಡುವುದರಿಂದ ಮತ್ತು ತಿನ್ನುವುದರಿಂದ ಆಶ್ರುವಾಯುವಿನಿಂದ ಆಗುವ ಹಾನಿಯಿಂದ ರಕ್ಷಣೆ ಪಡೆಯಬಹುದು.

13. ಈರುಳ್ಳಿಯನ್ನು ಬೆಲ್ಲದ ಸಮೇತ ಸೇವಿಸುವುದರಿಂದ ದೇಹ ತೂಕವನ್ನು ಹೆಚ್ಚಿಸಬಹುದು.

14. ಈರುಳ್ಳಿಯಲ್ಲಿ ಕಬ್ಬಿಣಾಂಶವಿದ್ದು, ಅದು ರಕ್ತ ಉತ್ಪಾದನೆಯನ್ನು ವೃದ್ದಿಸುತ್ತದೆ.

15. ಈರುಳ್ಳಿ ರಸದಲ್ಲಿ ಹತ್ತಿಯನ್ನು ನೆನೆಸಿ. ಆ ಹತ್ತಿಯನ್ನು ಮೂಗಿನ ಹೊಳ್ಳಿಯಲ್ಲಿ ಹದಿನೈದು ನಿಮಿಷಗಳ ಕಾಲ ಇಡಿ. ಈ ಚಿಕಿತ್ಸೆಯನ್ನು ಮೂರು ಬಾರಿ ಮಾಡಿದರೆ ನೆಗಡಿ ಗುಣಮುಖವಾಗುತ್ತದೆ.

16. ಈರುಳ್ಳಿ, ಬೆಳ್ಳುಳ್ಳಿ ಮತ್ತು ಹೆಸರುಕಾಳು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಸ್ವಲ್ಪ ತುಪ್ಪದೊಂದಿಗೆ ನುಣ್ಣಗೆ ಅರೆದು ವಸಡಿನ ಮೇಲೆ ಲೇಪಿಸಿದರೆ ವಸಡಿನ ಊತ ಸ್ವಲ್ಪಮಟ್ಟಿಗೆ ಇಳಿಯುತ್ತದೆ ಹಾಗೂ ನೋವು ಕಡಿಮೆಯಾಗುತ್ತದೆ.

17. ಅತ್ಯಂತ ಶೀತ ಗಾಳಿಗೆ ಮೈವೊಡ್ಡಿದಾಗ ಕಿವಿ ನೋವು ಉಂಟಾಗುತ್ತದೆ. ಆದ ನಾಲ್ಕೈದು ತೊಟ್ಟು ಈರುಳ್ಳಿ ರಸವನ್ನು ಸ್ವಲ್ಪ ಬಿಸಿ ಮಾಡಿ ಕಿವಿಗೆ ಹಾಕುತ್ತಿದ್ದರೆ, ಕಿವಿ ನೋವು ನಿಲ್ಲುತ್ತದೆ.

18. ಕೊಳವೆಯಾಕಾರದ ಈರುಳ್ಳಿ ಎಲೆಯನ್ನು (ಈರುಳ್ಳಿ ಹೂವು) ತಿನ್ನುವುದರಿಂದ ಲಾಲಾರಸ ಹೆಚ್ಚು ಹೆಚ್ಚು ಸ್ರವಿಸುತ್ತದೆ. ಜೀರ್ಣಶಕ್ತಿ ಹೆಚ್ಚಾಗುತ್ತದೆ. ಈರುಳ್ಳಿ ಎಲೆಗಳನ್ನು ಸೇವಿಸುತ್ತಿದ್ದರೆ ಅರಿಶಿನ ಕಾಮಾಲೆ, ಮೂಲವ್ಯಾಧಿ ರೋಗಗಳಲ್ಲಿ ಉತ್ತಮ ಗುಣಮುಖ ಕಂಡುಬರುತ್ತದೆ.

19. ಪ್ರತಿ ದಿನ ಊಟದ ಜೊತೆ ಒಂದು ಈರುಳ್ಳಿ ಗೆಡ್ಡೆ ಸೇವಿಸುತ್ತಿದ್ದರೆ ಕಣ್ಣು ನೋವು, ಕಣ್ಣುರಿ, ಕಣ್ಣು ಚುಚ್ಚುವಿಕೆ, ತಲೆನೋವು ಗುಣವಾಗುತ್ತದೆ.

ನಾರಾಯಣಿ ಭಟ್

Share this: