Vydyaloka

ಧೂಮಪಾನ ಮತ್ತು ದುಶ್ಚಟಗಳಿಂದ ದೂರವಿರಿ

women_bad-habit-smoking ಧೂಮಪಾನ ಮತ್ತು ದುಶ್ಚಟಗಳಿಂದ ದೂರವಿರಿಧೂಮಪಾನ ಮತ್ತು ದುಶ್ಚಟಗಳಿಂದ ದೂರವಿರಿ.ಮದ್ಯಪಾನದಿಂದ ಅನೇಕ ದುಷ್ಪರಿಣಾಮ ಮತ್ತು ಕೆಡುಕುಗಳು ಉಂಟಾಗುತ್ತವೆ. ಲಘು ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುವವರು ಆಲ್ಕೋಹಾಲ್‍ಗೆ ದಾಸಾನುದಾಸರಾಗಿರುವುದಿಲ್ಲ. ಅದರೆ ವಿಪರೀತ ಕುಡಿಯುವವರು ಈ ದುಶ್ಚಟಕ್ಕೆ ಬಲಿಯಾಗುತ್ತಾರೆ. ಹಾಗೆಯೇ ಧೂಮಪಾನವನ್ನು ಅತಿಯಾಗಿ ಮಾಡುವುದು ಆರೋಗ್ಯಕ್ಕೆ ಮಾರಕ. ಇತ್ತೀಚೆಗೆ ಧೂಮಪಾನ ಮತ್ತು ಮದ್ಯಪಾನಕ್ಕೆ ಯುವ ಮಹಿಳೆಯರು ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿರುವುದು ಸಮಾಜದ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ.ನೇರ ಮತ್ತು ಪರೋಕ್ಷ ಧೂಮಪಾನವನ್ನು ತಪ್ಪಿಸಿ, ಏಕೆಂದರೆ ಇದು ಪೋಷಕಾಂಶ ಹೀರುವಿಕೆಗೆ ತಡೆಯೊಡ್ಡುತ್ತದೆ. ಆಲ್ಕೋಹಾಲ್ ಸೇವನೆಯನ್ನು ತಪ್ಪಿಸುವುದು ಒಳ್ಳೆಯದು. ಏಕೆಂದರೆ ಇಂದು ಎದೆ ಹಾಲಿನೊಳಗೆ ಪ್ರವೇಶಿಸಿ  ಮಗುವಿಗೆ ಮಂಪರು ಬರಿಸುತ್ತದೆ.

ಧೂಮಪಾನ

ಕ್ಷಯರೋಗ
ಹೃದ್ರೋಗ

ಧೂಮಪಾನ, ಸ್ಥೂಲಕಾಯ, ಐಷಾರಾಮಿ ಜೀವನ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೃದ್ರೋಗಕ್ಕೆ ಎಡೆ ಮಾಡಿಕೊಡಬಹುದು. ಅಧಿಕ ರಕ್ತದೊತ್ತಡವು ನಿಧಾನ, ಮೌನ ಮತ್ತು ಖಂಡಿತಾ ಕೊಲೆಗಾರ ಎಂಬುದನ್ನು ನೆನಪಿಡಿ. ಕಾಲಕಾಲಕ್ಕೆ ನಿಮ್ಮ ರಕ್ತದೊತ್ತಡವನ್ನು ತಪಾಸಣೆಗೆ ಒಳಪಡಿಸಿ. ರಕ್ತದ ಏರೋತ್ತಡ ಹೆಚ್ಚಾಗದಂತೆ ನಿಯಂತ್ರಿಸಿ. ಅಧಿಕ ರಕ್ತದೊತ್ತಡವು ಯಾವುದೇ ಲಕ್ಷಣ ಮತ್ತು ಚಿಹ್ನೆಗಳನ್ನು ತೋರ್ಪಡಿಸುವುದಿಲ್ಲ. ಅಧಿಕ ರಕ್ತದೊತ್ತಡಕ್ಕೆ ಜೀವನಪೂರ್ತಿ ಚಿಕಿತ್ಸೆ ನೀಡಬೇಕು. ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವುದು ಅತ್ಯವಶ್ಯ.

ಸ್ತನಪಾನ ಮಾಡಿದ ಶಿಶುಗಳಿಗೆ ಒದಗುವ ಲಾಭಗಳು

ಸ್ತನಪಾನ ಮಾಡಿದ ಮಕ್ಕಳ ಜೀವಗಳು ಅಥವಾ ಹಸುಳೆಗಳ ಪೋಷಕರ ಆರೋಗ್ಯಕ್ಕೂ ಸಂಬಂಧವಿದೆ ಎಂಬುದು ಈ ಅಧ್ಯಯನದಿಂದ ತಿಳಿದುಬರುತ್ತದೆ. ಈ ಕುರಿತು ಅನೇಕ ಸಂಶೋಧನೆ ಮತ್ತು ಅಧ್ಯಯನಗಳು ನಡೆದಿದ್ದು, ಸ್ತನಪಾನ ಮಾಡಿದ ಮಕ್ಕಳು ಹೆಚ್ಚು ಆರೋಗ್ಯವಾಗಿರುತ್ತವೆ ಎಂಬುದು ತಿಳಿದುಬಂದಿವೆ. ವಿವಿಧ ಪರಿಸರದಲ್ಲಿನ ಬೃಹತ್ ಸಂಖ್ಯೆಯ ಶಿಶುಗಳನ್ನು ಪರೀಕ್ಷೆಗೆ ಒಳಪಡಿಸಲಾದ ಸಂಶೋಧನೆಯಲ್ಲಿ ಸ್ತನಪಾನ ಮಾಡಿದ ಹಸುಳೆಗಳಿಗೆ ಈ ಕೆಳಕಂಡ ರೋಗಗಳು ಮತ್ತು ಸೋಂಕುಗಳು ತಗಲುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ತಿಳಿದುಬಂದಿದೆ.

ಉತ್ತಮ ಆರೋಗ್ಯಕ್ಕಾಗಿ

1.ತೂಕ ಕಡಿಮೆ ಮಾಡಿಕೊಳ್ಳಲು  ಯತ್ನಿಸುವಾಗ ವಾಸ್ತವ ಗುರಿಗಳನ್ನು ನಿಗದಿಗೊಳಿಸಿ ಮತ್ತು ಎಲ್ಲ ರೀತಿಯ ಹತಾಶೆಯನ್ನು ಬದಿಗೊತ್ತಿ.
2.ಹಾಲು ಪೂರೈಕೆಯ ಉತ್ಪಾದನೆಗೆ ನೆರವಾಗುವ ಕ್ಯಾಲೋರಿ ಸೇವನೆಯನ್ನು ಕಾಲಕ್ರಮೇಣ ಕಡಿಮೆ ಮಾಡಿ.
3.ಸ್ತನಪಾನವು ನಿಮ್ಮ ಕಂದಮ್ಮನನ್ನು ಪೋಷಣೆ ಮಾಡಲು ಉತ್ತಮ ಮಾರ್ಗ ಮಾತ್ರವಲ್ಲ ; ಅದು ಗರ್ಭಧಾರಣೆ ಮತ್ತು ಹೆರಿಗೆ ನಂತರ ಸಂಗ್ರಹವಾಗಿರುವ 4.ಕೊಬ್ಬನ್ನು ನಿವಾರಿಸಲು ತುಂಬಾ ಪರಿಣಾಮಕಾರಿ ಮಾರ್ಗವಾಗಿದೆ.
5.ದೇಹದಲ್ಲಿರುವ ತಾಜ್ಯ ವಸ್ತುಗಳನ್ನು ಹೊರ ಹಾಕಲು ಹಾಗೂ ನಿರ್ಜಲೀಕರಣವನ್ನು ತಡೆಗಟ್ಟಲು ಸಾಕಷ್ಟು ನೀರು ಕುಡಿಯಿರಿ.
6.ಸ್ತನಪಾನ ಮಾಡಿಸುತ್ತಿದ್ದರೆ ಪ್ರತಿ ದಿನ ಕನಿಷ್ಠ 16 ಕಪ್‍ಗಳಷ್ಟು ದ್ರವ ರೂಪದ ಆಹಾರ ಸೇವಿಸಬೇಕು. ಸಾಕಷ್ಟು ಹಾಲು ಪೂರೈಕೆ ಮತ್ತು ತೂಕ ನಿಯಂತ್ರಣ ಮಾಡುವ ಯತ್ನ, ಇವರೆಡಕ್ಕೂ ಇದು ಸಹಕಾರಿ.
7.ಸಾಕಷ್ಟು ವಿಟಮಿನ್‍ಗಳು, ಖನಿಜಗಳು ಮತ್ತು ಫೈಬರ್ ಹೊಂದಿರುವ ಕಾರಣ ಹಣ್ಣು ಮತ್ತು ತರಕಾರಿಗಳಂಥ ತಾಜಾ ಮತ್ತು ಆರೋಗ್ಯಕರ ಆಹಾರ ಸೇವಿಸಿ.
8.ಪ್ರತಿದಿನ ಸೇವಿಸುವ ಪ್ರೊಟೀನ್ ಪ್ರಮಾಣವು 62-65 ಗ್ರಾಂಗಳಷ್ಟು ಇರಬೇಕು. ಇದರಿಂದಾಗಿ ನಿಮ್ಮ ಮಾಂಸಖಂಡಗಳು ದುರ್ಬಲವಾಗುವುದಿಲ್ಲ.
9.ಯಾವುದೇ ಪೌಷ್ಠಿಕಾಂಶ ಮೌಲ್ಯ ಇಲ್ಲದ ಪ್ಯಾಕೇಜ್ಡ್ ಮತ್ತು ಸಂಸ್ಕರಿತ ಆಹಾರವನ್ನು ಬಳಸಬೇಡಿ.
10.ಚಯಾಪಚಯಾ ಪ್ರಮಾಣವನ್ನು ಹೆಚ್ಚಿಸಲು ಆಗಾಗ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸಿ.
11.ಮೀನು, ವಾಲ್‍ನಟ್‍ಗಳು, ಮೊಟ್ಟೆ, ಪಾಲಕ್ ಸೊಪ್ಪು, ತುಳಸಿ ಇತ್ಯಾದಿಯಂಥ ಆರೋಗ್ಯಕರ ಕೊಬ್ಬು (ಓಮೆಗಾ 3 ಫ್ಯಾಟಿ ಆಸಿಡ್) ಆಹಾರದಲ್ಲಿರಲಿ.
12.ಪಾಲಕ್, ಇತರೆ ಸೊಪ್ಪು, ಕಪ್ಪು ಹುರುಳಿ ಬೀಜಗಳಂಥ ಕಬ್ಬಿಣ ಸಮೃದ್ಧ ಆಹಾರವನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ.
13.ಕಂದು ಅಕ್ಕಿ, ಗೋಧಿ, ಸಿಹಿ ಗೆಣಸು ಇತ್ಯಾದಿಯಂಥ ಸಂಕೀರ್ಣ ಕಾರ್ಬೊಹೈಡ್ರೆಡ್‍ಗಳನ್ನು ಸೇವಿಸಿ. ಇದರಲ್ಲಿ ಸಾಕಷ್ಟು ಫೈಬರ್ ಇರುತ್ತದೆ. ಇವು  ಹೊಟ್ಟೆಯನ್ನು ತುಂಬಿಸುವ ಜೊತೆಗೆ ಕೊಬ್ಬನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ.
14.ಕ್ಯಾಲ್ಷಿಯಂ ಮತ್ತು ಪ್ರೊಟೀನ್ ಸಮೃದ್ಧ ಆಹಾರ ಸೇವಿಸಿ.
15.ಹೆಚ್ಚು ಕೊಬ್ಬನ್ನು ಕರಗಿಸಲು ಹಾಗೂ  ಮಾಂಸಖಂಡಗಳು ವ್ಯಾಯಾಮವಾಗಲು ಸಾಧಾರಣ ವ್ಯಾಯಾಮ ಮಾಡಿ.

ಔಷಧಿಗಳ ಸೇವನೆ ಬಗ್ಗೆ ಎಚ್ಚರ

ಸ್ವಯಂ ಔಷಧಿ ಸೇವನೆಯಲ್ಲಿ ತೊಡಗಬೇಡಿ.  ಔಷಧಿಗಳು ಹಾನಿಕಾರಕವಾಗಿರುತ್ತವೆ. ಸೇವಿಸುವ  ಔಷಧಗಳ ಹೆಸರು ಯಾವಾಗಲೂ  ನಿಮಗೆ ಗೊತ್ತಿರಬೇಕು. ಈ ಹಿಂದೆ  ತೆಗೆದುಕೊಂಡ ಔಷಧಿ ನಿಮ್ಮ ಮತ್ತು ನಿಮ್ಮ ಕುಟುಂಬದ ಯಾವುದೇ ಸದಸ್ಯರಿಗೆ ಉಂಟಾದ ಪ್ರತಿಕ್ರಿಯೆಗಳು ಮತ್ತು ಎಲ್ಲ ರೀತಿಯ ಅಲರ್ಜಿಗಳ ಬಗ್ಗೆ  ವೈದ್ಯರಿಗೆ ತಿಳಿಸಿ. ಲೇಬಲ್ ಇರದ ಕಂಟೈನರ್‍ನಲ್ಲಿರುವ ಔಷಧಿಗಳನ್ನು ಎಂದೂ ಬಳಸಬೇಡಿ. ನಿಮಗೆ ಈ ಕೆಳಕಂಡ ಸಂಗತಿಗಳು ಸ್ಪಷ್ಟವಾಗದಿದ್ದರೆ ನಿಮ್ಮ ಔಷಧಿ ಅಂಗಡಿಯವರ ಜೊತೆ ಪರಿಶೀಲಿಸಿ :

ಡಾ. ಬಿ. ರಮೇಶ್- ಆಲ್ಟಿಯಸ್ ಹಾಸ್ಪಿಟಲ್
ಶಾಖೆ: ರಾಜಾಜಿನಗರ: 6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
Ph: 9900031842/ 080-23151873

ಶಾಖೆ:ರಾಜರಾಜೇಶ್ವರಿನಗರ : 915, 1ನೇ ಮಹಡಿಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರಬೆಂಗಳೂರು-560098.

Ph:o80-28606789/9663311128

 E-mail : endoram2006@yahoo.co.in   /altiushospital@yahoo.com

www.altiushospital.com

Share this: