Health Vision

ಭಾರತೀಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ

 ಬದಲಾದ ಜೀವನಶೈಲಿ, ದೈಹಿಕ ಶ್ರಮವಿಲ್ಲದ ದುಡಿಮೆ ಭಾರತೀಯರಲ್ಲಿ ಹೃದಯಾಘಾತದ ಸಾಧ್ಯತಾ ಪ್ರಮಾಣ ಹೆಚ್ಚಿಸಿದೆ. ಆದರೂ ಶೇ. 76ರಷ್ಟು ಜನರು ಸಮಸ್ಯೆ ಅಂತಿಮ ಹಂತಕ್ಕೆ ಹೋಗುವ ತನಕ ವೈದ್ಯರ ತಪಾಸಣೆಗೆ ಒಳಗಾಗುತ್ತಿಲ್ಲ. 20ರಿಂದ 65 ವಯೋಮಾನದ ಶೇ.60ರಷ್ಟು ಭಾರತೀಯರಿಗೆ ಈ ಕುರಿತು ಸೂಕ್ತ ತಿಳುವಳಿಕೆಯೇ ಇಲ್ಲ. 20ರಿಂದ 30ರ ಹರೆಯದ ಯುವ ಜನತೆ, ತಮಗೆ ಹೃದಯಸಂಬಂಧಿ ಸಮಸ್ಯೆ ಬರುವುದಿಲ್ಲ ಎಂಬ ದೃಢನಂಬಿಕೆಯಲ್ಲಿ ತಪಾಸಣೆಗೆ ಒಳಗಾಗುವುದಿಲ್ಲ. ಆದರೆ, ಶೇ. 20ರಷ್ಟು ಜನರಿಗೆ ಹೃದ್ರೋಗ ವಂಶವಾಹಿಯಾಗಿದೆ ಎಂದು ಇತ್ತೀಚೆಗೆ ಆರೋಗ್ಯ ಸಮೀಕ್ಷೆ […]

Read More

ಮಧುಮೇಹ ರೋಗಿಗಳಿಗೆ ಏಕೆ ಹೃದ್ರೋಗ ಗಂಡಾಂತರ ಹೆಚ್ಚು?

ನಮ್ಮ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಮಂದಿಗೆ ಈ ರೋಗವಿದ್ದಾಗ ಅದನ್ನು ನೀವೇಗೆ ನಿಯಂತ್ರಣ ಮಾಡುತ್ತೀರಿ. ಅದರ ಬಗ್ಗೆ ಗೊತ್ತೇ ಇಲ್ಲ ಅಲ್ಲವೇ? ನಮ್ಮ ದೇಶದಲ್ಲಿನ ಡಯಾಬಿಟಿಸ್ ಜೊತೆಗಿನ ಪ್ರಕರಣ ಇದಾಗಿದೆ. ಪ್ರತಿವರ್ಷ ಬಹುತೇಕ 8,00,000 ಜನರಿಗೆ ಮಧುಮೇಹ ರೋಗ ಪತ್ತೆಯಾಗುತ್ತಿದ್ದು, ಈಗಾಗಲೇ ಈ ರೋಗವಿರುವ 15.7 ದಶಲಕ್ಷ ಜನರೊಂದಿಗೆ ಸೇರ್ಪಡೆಯಾಗುತ್ತಿದ್ದಾರೆ. ಈ ಪೈಕಿ 10.3 ದಶಲಕ್ಷ ಮಂದಿಗೆ ರೋಗವಿರುವ ಬಗ್ಗೆ ತಿಳಿದಿದ್ದರೆ, ಉಳಿದ 5.4 ದಶಲಕ್ಷ ಜನರಿಗೆ ತಮಗೆ ರೋಗವಿರುವ ಬಗ್ಗೆಯೇ ಗೊತ್ತಿರುವುದಿಲ್ಲ. ಆಂಜೈನಾ ಬೆಳವಣಿಗೆ […]

Read More

ಹೃದಯಾಘಾತವಾದಾಗ ಕೈಗೊಳ್ಳಬೇಕಾದ ಐದು ಕ್ರಮಗಳು

 ನಿಮ್ಮ ಕುಟುಂಬದ ಸದಸ್ಯರೋ, ಹತ್ತಿರದ ಸಂಬಂಧಿಗಳೋ ಅಥವಾ ಆಪ್ತರೇಷ್ಟರೋ ಹೃದಯಾಘಾತಕ್ಕ ಒಳಗಾಗಿದ್ದಾರೆಯೇ? ಹಾಗಾದರೆ ಆತಂಕ ಬೇಡ. ಶುದ್ಧ ರಕ್ತನಾಳಲ್ಲಿ ಹೆಪ್ಪುಗಟ್ಟುವಿಕೆಯಿಂದ ಹೃದಯಕ್ಕೆ ಸಮರ್ಪಕವಾಗಿ ರಕ್ತ ಪೂರೈಕೆಯ ಸಂಚಾರವಿಲ್ಲದ ಕಾರಣದಿಂದ ಹೃದಯಘಾತ ಅಥವಾ ಹಾರ್ಟ್ ಅಟ್ಯಾಕ್ ಸಂಭವಿಸುತ್ತದೆ. ತ್ವರಿತವಾಗಿ ರಕ್ತಚಲನೆಯನ್ನು ಸರಿಪಡಿಸದಿದ್ದರೆ, ಆಮ್ಲಜನಕ ಮತ್ತು ಪೋಷಕಾಂಶದ ಕೊರತೆಯಿಂದಾಗಿ ಹೃದಯಚ ಮಾಂಸಖಂಡಗಳಿಗೆ ಹಾನಿಯಾಗಿ ಮರಣ ಸಂಭವಿಸಬಹುದು. ಹೃದಯಾಘಾತ ಉಂಟಾದಾಗ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಬೇಕು. ಹೃದಯಾಘಾತ ಸಂಭವಿಸಿದಾಗ ಉಂಟಾಗುವ ಸ್ಥಿತಿಯ ಮೊದಲ ತಾಸನ್ನು ಗೋಲ್ಡನ್ ಹವರ್ ಎಂದು ಕರೆಯಲಾಗುತ್ತದೆ. ಇದು […]

Read More

ಮುನ್ನೆಚ್ಚರಿಕೆಯಿಂದ ಹೃದಯಾಘಾತ ತಡೆಗಟ್ಟಬಹುದು

ಭಾರತದಲ್ಲಿ ಹೃದಯಾಘಾತದ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ. ಇಂದಿನ ಮಕ್ಕಳಿಗೆ ಶಾಲಾ ದಿನಗಳಿಂದಲೇ ಹೃದಯಘಾತದ ದುಷ್ಪರಿಣಾಮಗಳಿಗೆ ಕಾರಣವಾಗುವ ವಿವಿಧ ಗಂಡಾಂತರಕಾರಿ ಅಂಶಗಳ ಬಗ್ಗೆ ತಿಳಿಸಿ ಅವರನ್ನು ಜಾಗೃತಗೊಳಿಸುವ ಅಗತ್ಯವಿದೆ.  ಭಾರತದಲ್ಲಿ ಹೃದಯಾಘಾತ ಪ್ರಕರಣಗಳು ಗಮನಾರ್ಹವಾಗಿ ಅಧಿಕವಾಗುತ್ತಿದೆ. ಇದಕ್ಕೆ ವಿರೋಧಾಭಾಸವಾಗಿ ಅಭಿವೃದ್ದಿ ಹೊಂದಿದ ರಾಷ್ಟ್ರಗಳಲ್ಲಿ ಹೃದಯಘಾತ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗುತ್ತಿದೆ. ಆ ದೇಶಗಳಲ್ಲಿನ ಜನ ಸಾಮಾನ್ಯರಲ್ಲಿ ಹೆಚ್ಚಿದ ಜಾಗೃತಿ ಹಾಗೂ ಆರಂಭದ ವರ್ಷಗಳಲ್ಲೇ ಕೈಗೊಂಡ ಮುನ್ನೆಚ್ಚರಿಕೆಗಳ ಫಲವಾಗಿ ಹಾರ್ಟ್ ಆಟ್ಯಾಕ್ ಹತೋಟಿಗೆ ಬಂದಿದೆ. ಮುಂಜಾಗ್ರತೆ ಕ್ರಮಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವುದರಿಂದ […]

Read More

ಹೃದಯಕ್ಕೆ ಬೇಡ ಅನಗತ್ಯ ಒತ್ತಡ

ಹೃದಯ ಕಾಯಿಲೆಗಳಿಗೆ ಪ್ರಮುಕ ಗಂಡಾಂತರಕಾರಿ ಅಂಶವೆಂದರೆ ಕೆಲಸಕ್ಕೆ ಸಂಬಂಧಿಸಿದ ಒತ್ತಡ. ಇದನ್ನು ಹೇಗೆ ಪರಿಣಾಮಕಾರಿಯಾಗಿ ನಿಭಾಯಿಸಬೇಕು ಮತ್ತು ನಿಮ್ಮ ಹೃದಯವನ್ನು ಹೇಗೆ ರಕ್ಷಿಸಬೇಕು ಎಂಬ ಬಗ್ಗೆ ಇಲ್ಲಿ ಅಮೂಲ್ಯ ಸಲಹೆಗಳನ್ನು ನೀಡಲಾಗಿದೆ. ಇಂದಿನ ಆಧುನಿಕ ಜೀವನ ಶೈಲಿ ಮತ್ತು ಜಂಜಾಟದ ಬದುಕಿನಲ್ಲಿ ಕೆಲಸ ಕಾರ್ಯಗಳಿಗೆ ಸಂಬಂಧಿಸಿದ ಒತ್ತಡ ಸಾಮಾನ್ಯ. ಒತ್ತಡ ಹೆಚ್ಚಾದಷ್ಟೂ ಅದು ಹೃದಯ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಕೆಲಸದ ಒತ್ತಡದಿಂದಾಗಿ ವಿಶ್ರಾಂತಿ ಪಡೆಯಲು ನಮಗೆ ಸಮಯವೇ ಲಭಿಸದಂತಾಗುತ್ತದೆ. ನಾವು ಕೆಲಸ ಮಾಡುವ ಸ್ಥಳದಲ್ಲಿನ ಒತ್ತಡ […]

Read More

ಕಡಿಮೆ ರಕ್ತದ ಒತ್ತಡ ಕಾರಣಗಳೇನು ?

ಹೃದಯದಿಂದ ನಿರಂತರವಾಗಿ ರಕ್ತ ದೇಹದ ಎಲ್ಲಾ ಅಂಗಗಳಿಗೆ ಸರಬರಾಜು ಆಗುತ್ತಲೇ ಇರುತ್ತದೆ. ಹೃದಯದಿಂದ ರಕ್ತ ಹೊರಹಾಕಲ್ಪಟ್ಟ ಮೇಲೆ ರಕ್ತದ ಏಕಮುಖ ಹರಿವು ರಕ್ತನಾಳಗಳ ಒಳಪದರಗಳ ಮೇಲೆ ಹೇರುವ ಒತ್ತಡವನ್ನು “ರಕ್ತದ ಒತ್ತಡ” ಎಂದು ಕರೆಯಲಾಗುತ್ತದೆ. ಆರೋಗ್ಯವಂತ ಮಧ್ಯ ವಯಸ್ಕ ಮಹಿಳೆ ಮತ್ತು ಪುರುಷರಲ್ಲಿ ರಕ್ತದ ಒತ್ತಡವು 120/80 ಮಿಲಿ ಮೀಟರ್‍ನಷ್ಟು (ಪಾದರಸ ಕಂಬದ ಎತ್ತರ) ಇರುತ್ತದೆ. ವಯಸ್ಸಾದಂತೆಲ್ಲ 50ರ ಹರೆಯದ ನಂತರ ಸುಮಾರು 130/90 ಮಿಲಿ ಮೀಟರ್‍ನಷ್ಟು ಇರುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ದೇಹದ ತೂಕ, ಎತ್ತರ, […]

Read More

ಗರ್ಭಿಣಿಯಲ್ಲಿ ಕ್ಷಯ : ತಡೆಯುವುದು ಹೇಗೆ?

ಇಂದಿನ ಜಂಜಾಟದ ಜೀವನದ ಮಧ್ಯೆ ಅತ್ಯಂತ ಆತಂಕದ ಘಟನೆ ಗರ್ಭಾವಸ್ಥೆ ಮತ್ತು ಹೆರಿಗೆ. ಗರ್ಭಾವಧಿ ಮತ್ತು ಹೆರಿಗೆ ಸುಗಮವಾಗಿ ಕೊನೆಗೊಂಡರೆ ಪುನರ್‍ಜನ್ಮ ಎಂಬ ಮಾತು ಇಂದಿಗೂ ಸತ್ಯ. ನಮ್ಮ ದೇಶದಲ್ಲಿ ಗರ್ಭಿಣಿಯರ ಸಾವು ಅತ್ಯಧಿಕ.ಇದಕ್ಕೆ ಕ್ಷಯ ರೋಗವು ಕೂಡ ಕಾರಣ. ಗರ್ಭಿಣಿಗೆ ಕ್ಷಯ ಕಾಣಿಸಿಕೊಂಡರೆ ಆತಂಕ ಸರ್ವೇಸಾಮಾನ್ಯ. ಕ್ಷಯದಿಂದ ಗರ್ಭಿಣಿ ಬಳಲುವುದು ಇತ್ತೀಚೆಗೆ ಹೆಚ್ಚು. ಕ್ಷಯ ಚಿಕಿತ್ಸೆಗಾಗಿ ಬಳಸುವ ಕೆಲವು ಔಷಧಿಗಳು, ಗರ್ಭಸ್ಥ ಶಿಶುವಿಗೆ ಅಪಾಯವಾಗುವುದರಿಂದ  ಔಷಧಗಳನ್ನು ಗರ್ಭಿಣಿಗೆ ನೀಡುವಂತಿಲ್ಲ. ಕುಂಠಿತ ರೋಗ ನಿರೋಧಕ ಶಕ್ತಿ, ಅಪೌಷ್ಠಿಕತೆ, […]

Read More

ಯುವಜನರಲ್ಲಿ ಹಾಗೂ ಮಹಿಳೆಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ !!

ಭಾರತದಲ್ಲಿ ಹೃದಯಾಘಾತದ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಯುವಜನರಲ್ಲಿ ಹಾಗೂ ಮಹಿಳೆಯರಲ್ಲಿ ಹೆಚ್ಚುತ್ತಿರುವುದು ತೀವ್ರ ಆತಂಕಕಾರಿ ವಿಷಯ. ಇಂದಿನ ಮಕ್ಕಳಿಗೆ ಶಾಲಾ ದಿನಗಳಿಂದಲೇ ಹೃದಯಘಾತದ ದುಷ್ಪರಿಣಾಮಗಳಿಗೆ ಕಾರಣವಾಗುವ ವಿವಿಧ ಗಂಡಾಂತರಕಾರಿ ಅಂಶಗಳ ಬಗ್ಗೆ ತಿಳಿಸಿ ಅವರನ್ನು ಜಾಗೃತಗೊಳಿಸುವ ಅಗತ್ಯವಿದೆ. ಭಾರತದಲ್ಲಿ ಹೃದಯಾಘಾತ ಪ್ರಕರಣಗಳು ಗಮನಾರ್ಹವಾಗಿ ಅಧಿಕವಾಗುತ್ತಿದೆ. ಇದಕ್ಕೆ ವಿರೋಧಾಭಾಸವಾಗಿ ಅಭಿವೃದ್ದಿ ಹೊಂದಿದ ರಾಷ್ಟ್ರಗಳಲ್ಲಿ ಹೃದಯಘಾತ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗುತ್ತಿದೆ. ಆ ದೇಶಗಳಲ್ಲಿನ ಜನ ಸಾಮಾನ್ಯರಲ್ಲಿ ಹೆಚ್ಚಿದ ಜಾಗೃತಿ ಹಾಗೂ ಆರಂಭದ ವರ್ಷಗಳಲ್ಲೇ ಕೈಗೊಂಡ ಮುನ್ನೆಚ್ಚರಿಕೆಗಳ ಫಲವಾಗಿ […]

Read More

ಹೃದ್ರೋಗಿಗಳ ಆಹಾರ ಕ್ರಮಗಳು ಹೇಗಿರಬೇಕು ?

ಹೃದ್ರೋಗಿಗಳು ಆಹಾರ ನಿಯಂತ್ರಿಸಿ, ವ್ಯಾಯಾಮದ ಮೂಲಕವೂ ಎತ್ತರಕ್ಕೆ ಅನುಗುಣವಾದ ತೂಕದ ಶೇಕದ 10ರಷ್ಟನ್ನು ಕಡಿಮೆಗೊಳಿಸುವುದು ಒಳ್ಳೆಯದು. ಆದರೆ ಹೇಳುವಾಗ ಸುಲಭವಾಗಿದ್ದರೂ, ಆಹಾರ ಪಥ್ಯಕ್ರಮಗಳು ರೋಗಿಯ ಬಾಯಿ ಚಪಲ ಮತ್ತು ಸುಖಮಯ ಜೀವನಕ್ಕೆ ತೊಂದರೆಯಾಗುವುದರಿಂದ ಇದನ್ನು ಪಾಲಿಸುವುದು, ಅನುಸರಿಸುವುದು ಕಷ್ಟದಾಯಕ. ಮಾನವ ಸಾಮಾನ್ಯವಾಗಿ ಆಹಾರಪ್ರಿಯ. ಆದರೆ, ಪ್ರಾಣಿಗಳು ಆಹಾರ ಸೇವಿಸುವುದು ಅದರ ಉಳಿವಿಗಾಗಿ. ಆದಾಗ್ಯೂ, ಮನುಷ್ಯ ತನ್ನ ಜೀವನ ನಡೆಸಲು ಮತ್ತು ಆತ್ಮಸಂತೃಪ್ತಿಗಾಗಿ ಆಹಾರ ಸೇವಿಸುತ್ತಾನೆ. ಇದರಿಂದಾಗಿ ನಾವು ಅಗತ್ಯಕ್ಕಿಂತ ಶೇಕಡ 3 ರಿಂದ 4 ಪಟ್ಟು ಹೆಚ್ಚು […]

Read More

Back To Top