ಡಿಪ್ರೆಷನ್ ಸಮಸ್ಯೆ ಬಗ್ಗೆ ಆತಂಕ ಬೇಡ. ಕೋವಿಡ್ ಕಾಯಿಲೆಯಿಂದಾಗಿ ಖಿನ್ನತೆಯಿಂದ ಬಳಲುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಭಾರತದಂತಹ ಮುಂದುವರಿಯುತ್ತಿರುವ ದೇಶಗಳಲ್ಲಿ ಖಿನ್ನತೆಗೆ ಒಳಗಾಗುತ್ತಿರುವವರ ಸಾಧ್ಯತೆಗಳು ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಹ ಎಚ್ಚರಿಸಿದೆ.
ಇದೇನು ಚಿಕ್ಕ ಸಮಸ್ಯೆಯೆಂದು ಭಾವಿಸಬಾರದು. ಗುಣಮುಖವಾಗದ ವ್ಯಾಧಿ ಕೂಡಾ. ಇದು ಕುಟುಂಬದ ಸಹಕಾರದಿಂದ, ಅಗತ್ಯ ಎನಿಸಿದರೆ ಸೂಕ್ತ ಚಿಕಿತ್ಸೆಯಿಂದ ಮಾತ್ರ ವಿಗುಣರಾಗಬಹುದು. ಆದರೆ ಜೀವನದಲ್ಲಿ ಎಲ್ಲವೂ ಸರಿಯಾಗಿದ್ದರೂ ಡಿಪ್ರೆಷನ್ ಬರಬಹುದು. ಪುರುಷರಿಗಿಂತಲೂ ಮಹಿಳೆಯರಲ್ಲೇ ಹೆಚ್ಚು. ಡಿಪ್ರೆಷನ್ ಮಕ್ಕಳಿಗೂ ಬರುವ ಸಾಧ್ಯತೆಗಳೂ ಇವೆ.
ಯಾರಿಗಾದರೂ ಡಿಪ್ರೆಷನ್…
ಬಹಳಷ್ಟು ಮಂದಿ ಚುರುಕಿದ್ದವರಿಗೆ, ಬುದ್ಧಿವಂತರಿಗೆ, ಹಣ, ಅಧಿಕಾರ ಇರುವವರಿಗೆ ಡಿಪ್ರೆಷನ್ ಬರುವುದಿಲ್ಲ ಎನ್ನುತ್ತಾರೆ. ಆದರೆ ಇದು ತಪ್ಪು. ಎಲ್ಲರನ್ನೂ ಇದು ಯಾವುದೇ ಸಂದರ್ಭದಲ್ಲಾದರೂ ಕಾಡಬಹುದು. ಇತ್ತೀಚೆಗೆ ಇದರಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಭಾರತದಂತಹ ಮುಂದುವರಿಯುತ್ತಿರುವ ದೇಶಗಳಲ್ಲಿ ಖಿನ್ನತೆಗೆ ಒಳಗಾಗುತ್ತಿರುವವರ ಸಾಧ್ಯತೆಗಳು ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಡಿಪ್ರೆಷನ್‌ಗೆ ಒಳಗಾದರೆ ವಿಷಾದ, ಕೋಪ, ಮಾನಸಿಕ ಆಂದೋಲನ, ಏನನ್ನೋ ಕಳೆದುಕೊಂಡಿದ್ದೇವೆ ಎಂಬ ಭಾವನೆ ಸದಾ ಮೂಡುತ್ತದೆ. ದೈನಂದಿನ ಜೀವನವನ್ನೂ ಪ್ರಭಾವಿತಗೊಳಿಸುತ್ತದೆ. ಸುತ್ತಮುತ್ತಲಿನ ಅಂಶಗಳನ್ನೆಲ್ಲ ನೆಗಟಿವ್ ಆಗಿ ನೋಡುತ್ತಾ ಯಾವುದೇ ಸಣ್ಣ ಸಮಸ್ಯೆ ಎದುರಾದರೂ ಅದನ್ನು ಸಹಾನುಭೂತಿಯಿಂದ ಪರಿಷ್ಕರಿಸಬಹುದೆಂಬ ಧೋರಣೆಯನ್ನು ಬಿಟ್ಟು ಕೋಪ, ಭಯದಂತಹ ನೆಗಟಿವ್ ಭಾವನೆಗಳು ಮೂಡುತ್ತವೆ.
ಡಿಪ್ರೆಷನ್‌ನಿಂದ ಏನಾಗುತ್ತದೆ?
ಖಿನ್ನತೆಯಿಂದ ಹಸಿವು ಕಡಿಮೆಯಾಗುವುದು, ಆರೋಗ್ಯವಾಗಿಯೇ ಇದ್ದರೂ ತೂಕದಲ್ಲಿ ಕಡಿತವಾಗುವುದು. ಏಕಾಗ್ರತೆ ಇಲ್ಲದಿರುವುದು. ನಿದ್ರೆ ಕಡಿಮೆಯಾಗುವುದು. ಕಿರಿಕಿರಿ ಸದಾ ದುಃಖ, ಕಳವಳ, ಅವಸರ ಹೆಚ್ಚುವುದು, ತಕ್ಷಣವೇ ಆಳು ಬರುವುದು. ವಿಪರೀತ ಎನಿಸುವ ಅಶಕ್ತತೆ, ಏನನ್ನೂ ಮಾಡಲಾಗದ ಮನೋಭಾವ. ಪ್ರತಿಯೊಂದಕ್ಕೂ ಅಸಹಾಯಕತೆ, ನಾನು ಯಾವ ಕೆಲಸಕ್ಕೂ ಬರುವುದಿಲ್ಲ ಎಂಬುದು.
ಇಷ್ಟಪಟ್ಟ ಸಂಗತಿಗಳ ಬಗ್ಗೆಯೂ ಅಸಡ್ಡೆ. ಶಾರೀರಕವಾಗಿ ಚುರುಕುತನ ಕಡಿಮೆಯಾಗಿ ಒಂದೇ ಕಡೆ ಕುಳಿತುಕೊಳ್ಳುವುದು. ಇತರರೊಂದಿಗೆ ಬೆರೆಯದಿರುವುದು. ಪದೇ ಪದೇ ತಲೆನೋವು, ಹೊಟ್ಟೆಯಲ್ಲೂ ನೋವಿನ ಭಾದೆ. ಭವಿಷ್ಯತ್ತಿನ ಬಗ್ಗೆ ವಿಪರೀತ ಎನಿಸುವ ಕಳವಳ. ಕೀಳರಿಮೆ, ಅಸೂಯೆ. ಒಮ್ಮೊಮ್ಮೆ ಸತ್ತು ಹೋದರೆ ಚೆನ್ನಾಗಿರುತ್ತೆ ಎಂಬಂತಹ ಆತ್ಮಹತ್ಯೆ ಭಾವನೆಗಳ ತುಮಲ. ಚಡಪಡಿಕೆ, ಮೌನವಾಗಿ ಇರಬೇಕಿನಿಸುವುದು ಇತ್ಯಾದಿ.
ಡಿಪ್ರೆಷನ್ ಬಾರದಿರಲು
ಡಿಪ್ರೆಷನ್ ಪರಿಣಾಮಗಳೇನು?
ಇಂತಹ ವ್ಯಾಕುಲತೆಯಿಂದ ಬಳಲಿದರೆ ಹೈಪ್ರೊಥೆರಾಯಿಡಿಸಂ, ತೀವ್ರವಾದ ರಕ್ತಹೀನತೆ, ಕೀಲುನೋವು, ಕ್ಯಾನರ‍್ಸ್‌ಗಳಂತಹ ದೀರ್ಘಕಾಲಿಕ ವ್ಯಾಧಿಗಳಲ್ಲಿ, ನಿದ್ರಾಹೀನತೆಯಲ್ಲೂ ಡಿಪ್ರೆಷನ್ ಪದೇ ಪದೇ ಕಾಣಿಸಿಕೊಳ್ಳುತ್ತದೆ. ಸ್ಟಿರಾಯಿಡ್ಸ್‌ನ್ನು ಧೀರ್ಘಕಾಲಿಕವಾಗಿ ಉಪಯೋಗಿಸುವುದು. ಮದ್ಯಪಾನ ಮತ್ತಿತರ ಹಲವು ದುರ್ವ್ಯಸನಗಳಿಗೆ ದಾಸರಾಗಿರುವುದರಿಂದಲೂ ಡಿಪ್ರೆಷನ್ ಲಕ್ಷಣಗಳು ಹೆಚ್ಚುತ್ತವೆ. ಈಗ ಸಾಕಷ್ಟು ಮಂದಿ ಈ ವ್ಯಾದಿಯಿಂದ ಬಳಲುತ್ತಿದ್ದಾರೆ.
ಸಾಮಾನ್ಯವಾಗಿ ಖಿನ್ನತೆ ಕೆಲವೇ ತಿಂಗಳಲ್ಲಿ ತನ್ನಷ್ಟಕ್ಕೆ ತಾನೇ ಕಡಿಮೆಯಾಗಬಹುದು. ಆದರೆ ಕೆಲವರಲ್ಲಿ ಈ ಪರಿಸ್ಥಿತಿ ತೀವ್ರವಾಗಬಹುದು. ಕೆಲವೊಮ್ಮೆ ಆತ್ಮಹತ್ಯೆ ಭಾವನೆಗಳು ಬರಬಹುದು. ಚಿಕಿತ್ಸೆ ಪಡೆಯದಿದ್ದರೆ ಮತ್ತೆ ಮತ್ತೆ ಡಿಪ್ರೆಷನ್‌ಗೆ ಒಳಗಾಗಬಹುದು. ನಿರ್ಲಕ್ಷಿಸದೆ ಚಿಕಿತ್ಸೆ ಪಡೆಯುವುದು ಸೂಕ್ತ. ಇದನ್ನು ಸೈಕೊಥೆರಪಿ ಅಥವಾ ಎಲೆಕ್ಟ್ರೋ ಕನ್ಸಲ್ಸಿವ್ ಥೆರಪಿಯಿಂದ ಗುಣಪಡಿಸಬಹುದಂತೆ. ಸ್ವಲ್ಪ ಪ್ರಮಾಣದಲ್ಲಿ ಡಿಪ್ರೆಷನ್ ಇರುವವರಿಗೆ ಕೌನ್ಸಿಲಿಂಗ್‌ನಂತಹ ಸೈಕೋಥೆರಪಿಗಳಿಂದ ಪ್ರಯೋಜನ ಆಗುತ್ತದೆ. ಸಮಸ್ಯೆ ಗಂಭೀರವಾದರೆ ಶಾಕ್ ಟ್ರೀಟ್‌ಮೆಂಟ್ ಅಗತ್ಯ ಎನಿಸುತ್ತದೆ.
ಡಿ.ಎ. ಕಲ್ಪಜ
ಪ್ರಧಾನ ಸಂಪಾದಕರು
ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 49069000 Extn: 1147/1366
http://www.vims.ac.in/
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 49069000 Extn: 1147/1366
http://www.vims.ac.in/