ದೇಹ ಶಾಂತ ಮಾಡುವ ಪಾನಕ, ಕೋಸಂಬರಿ ಹಾಗೂ ಪಚಡಿಗಳು ಬಿಸಿಲಿನ ತಾಪಕ್ಕೆ ಬಹಳ ಉಪಯುಕ್ತ. ಬೇಸಿಗೆಯ ಬಿಸಿಲಿನ ತಾಪದಿಂದ ರಕ್ಷಣೆಗಾಗಿ ಬೇಲದ ಹಣ್ಣಿನ ಪಾನಕ ಕುಡಿಯಬೇಕು. ಮೈಯೊಳಗಿನ ನೀರು ಬತ್ತಿ, ನಿರ್ಜಲೀಕರಣವಾಗದಂತೆ ಈ ಪಾನಕ
1. ಬೇಲದ ಹಣ್ಣಿನ ಪಾನಕ:
ಬೇಕಾದ ಪದಾರ್ಥಗಳು:- ಒಂದು ಬೇಲದ ಹಣ್ಣು, 4 ಟೇಬಲ್ ಚಮಚ ಬೆಲ್ಲದ ಪುಡಿ, 1/4 ಚಮಚ ಮೆಣಸು ಹಾಗೂ 1/4 ಚಮಚ ಏಲಕ್ಕಿ ಪುಡಿ
1 ಬೇಲದ ಹಣ್ಣು ತೆಗೆದುಕೊಂಡು ಜೋರಾಗಿ ಹೊಡೆದು ಒಡೆದು ಇಟ್ಟುಕೊಳ್ಳಿ. ಅದನ್ನು 4 ಕಪ್ ನೀರಿನಲ್ಲಿ ಸೇರಿಸಿ ಚೆನ್ನಾಗಿ ಹಿಸುಕಿರಿ. ಜರಡಿಯಲ್ಲಿ ಸೋಸಿ ನಂತರ ಪುಡಿ ಮಾಡಿದ ಬೆಲ್ಲ, ಪುಡಿ ಮಾಡಿದ ಕಾಳುಮೆಣಸು ಮತ್ತು ಏಲಕ್ಕಿ ಪುಡಿ ಹಾಕಿ ಬೆರಸಿದರೆ ಕುಡಿಯಲು ಸಿದ್ಧ ಬೇಲದ ಹಣ್ಣಿನ ಪಾನಕ.
2. ನೀರು ಮಜ್ಜಿ ಗೆ:
ಬಿಸಿಲಿನ ತಾಪಕ್ಕೆ ಜೀರ್ಣತೆಗೆ ಇದು ಉತ್ತಮ. ಗಟ್ಟಿ ಮೊಸರಿಗೆ, ನಮಗೆ ಬೇಕಾದ ದಪ್ಪ ಅಥವಾ ತೆಳುತನಕ್ಕೆ ಸರಿಯಾಗಿ ತಣ್ಣೀರು
3. ಹೆಸರುಬೇಳೆ ಕೋಸಂಬರಿ:
2ರಿಂದ 3 ಗಂಟೆ ಹೆಸರುಬೇಳೆ ನೀರಿನಲ್ಲಿ ನೆನಸಿಡಿ. ನಂತರ ನೀರು ಬಸಿಯಿರಿ.ಹೆಸರುಬೇಳೆಗೆ ಹದವಾಗಿ ಉಪ್ಪು ಬೆರಸಿ. ಇಂಗು, ಕೊಂಚ ಅರಿಶಿನಪುಡಿ, ಸಾಸಿವೆ ಹಾಕಿ ಒಗ್ಗರಣೆ ಮಾಡಿ. ಚಟಪಟ ಎಂದಾಗ ಹೆಸರುಬೇಳೆ ಮೇಲೆ ಹಾಕಿ. ತುರಿದ ತೆಂಗಿನಕಾಯಿ ಹಾಕಿ. ಲಿಂಬೆಹಣ್ಣಿನ ರಸ ಹಿಂಡಿ ಚೆನ್ನಾಗಿ ಕಲಸಿ ಇದಕ್ಕೆ ಕಹಿ ಇರದ ಎಳೆಸೌತೆಕಾಯಿಯ ಚಿಕ್ಕ ಚಿಕ್ಕ ಚೂರುಗಳನ್ನು ಹಾಕಿರಿ.ಇದಕ್ಕೆ ಸೌತೆಕಾಯಿ
4. ಕಡಲೇಬೇಳೆ ಕೊಸಂಬರಿ:
2ರಿಂದ 3 ಗಂಟೆ ಕಡಲೇಬೇಳೆ ನೀರಿನಲ್ಲಿ ನೆನಸಿಡಿ. ನಂತರ ನೀರು ಬಸಿಯಿರಿ. ಕಡಲೇಬೇಳೆಗೆ ಹದವಾಗಿ ಉಪ್ಪು ಬೆರಸಿ. ಇಂಗು, ಕೊಂಚ ಅರಿಶಿನಪುಡಿ, ಸಾಸಿವೆ ಹಾಕಿ ಒಗ್ಗರಣೆ ಮಾಡಿ. ಚಟಪಟ ಎಂದಾಗ ಕಡಲೇಬೇಳೆ ಮೇಲೆ ಹಾಕಿ. ತುರಿದ ತೆಂಗಿನಕಾಯಿ ಹಾಕಿ. ಲಿಂಬೆಹಣ್ಣಿನ ರಸ ಹಿಂಡಿ ಚೆನ್ನಾಗಿ ಕಲಸಿ ಇದಕ್ಕೆ ದಾಳಿಂಬೆ ಹಣ್ಣಿನ ಬೀಜಗಳನ್ನು ಹಾಕಿರಿ.
5. ದೊಣ್ಣ ಮೆಣಸಿನಕಾಯಿ ಪಚಡಿ:
ದೊಣ್ಣ ಮೆಣಸಿನಕಾಯಿ ಚೂರುಗಳನ್ನು ಎಣ್ಣೆ ಒಗ್ಗರಣೆಯಲಿ ಬಾಡಿಸಿ. ಒಗ್ಗರಣೆಗೆ ಎಣ್ಣೆ, ಸಾಸಿವೆ,
ಎನ್.ವ್ಹಿ ರಮೇಶ್, ಮೈಸೂರು
ಮೊ: 9845565238