Vydyaloka

ಸುರಕ್ಷಿತ ದೀಪಾವಳಿಗೆ ಪ್ರೀತಿಪೂರ್ವಕ ಸಲಹೆಗಳು

ಸುರಕ್ಷಿತ ದೀಪಾವಳಿಗೆ  ನಾವೆಲ್ಲ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಮ್ಮ ಕೈಗಳು ಮತ್ತು ಕಣ್ಣುಗಳಿಗೆ ಗಾಯ ಮಾಡಿಕೊಳ್ಳದೇ ಸುರಕ್ಷಿತವಾಗಿ ಸಡಗರ-ಸಂಭ್ರಮದಿಂದ ಆಚರಿಸೋಣ.

ಪಟಾಕಿಗಳ ಆಯ್ಕೆ

1. ರಾಕೆಟ್, ಬಾಂಬ್‍ಗಳು ಇತ್ಯಾದಿಯಂಥ ಭಾರೀ ಪಟಾಕಿಗಳನ್ನು ಬಳಸದಿರುವುದು ಉತ್ತಮ.

2. ಬ್ರಾಂಡೆಡ್ ಅಲ್ಲದ ಪಟಾಕಿಗಳನ್ನು ಖರೀದಿಸಬೇಡಿ.

ದಾಸ್ತಾನು

1. ಪಟಾಕಿಗಳನ್ನು ಅಡುಗೆ ಮನೆ ಅಥವಾ ಪೂಜಾ ಕೊಠಡಿಗಳಲ್ಲಿ ಸಂಗ್ರಹಿಸಿ ಇಡಬೇಡಿ.

2. ಮಕ್ಕಳ ಕೈಗೆ ಪಟಾಕಿಗಳು ಲಭ್ಯವಾಗದಂತೆ ಇಡಿ.

ಉಸ್ತುವಾರಿ

1. ಬೆಂಕಿಯೊಂದಿಗೆ ತುಂಬಾ ಚಿಕ್ಕ ಮಕ್ಕಳು ಆಟವಾಡಲು ಅವಕಾಶ ನೀಡಬೇಡಿ

2. ಭಾರಿ ಪಟಾಕಿಗಳನ್ನು ಹಚ್ಚುವಾದ ದೊಡ್ಡವರು ನಿಗಾ ವಹಿಸಬೇಕು

ಉಡುಪುಗಳು

1. ನೈಲಾನ್ ಅಥವಾ ಸಿಲ್ಕ್ ಬಟ್ಟೆಗಳಿಗಿಂತ ಕಾಟನ್ ಉಡುಪುಗಳು ಉತ್ತಮ. ಏಕೆಂದರೆ ನೈಲಾನ್ ಅಥವಾ ರೇಷ್ಮೆ ಉಡುಪುಗಳಿಗೆ ಬೆಂಕಿ ತಗುಲಿದಾಗ ಅವು ದೇಹಕ್ಕೆ ಅಂಟಿಕೊಂಡು ತುಂಬಾ ಉಷ್ಣವನ್ನು ಹೀರಿಕೊಳ್ಳುತ್ತವೆ.

2. ಬಿಗಿಯಾದ ಉಡುಪುಗಳನ್ನು ಧರಿಸಿ. ಸಡಿಲ ಮತ್ತು ಜೋತು ಬೀಳುವ ಬಟ್ಟೆಗಳಿಗೆ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ.

3. ಪಟಾಕಿಗಳನ್ನು ಹಚ್ಚುವಾಗ ರಕ್ಷಣೆ ನೀಡುವ ಕನ್ನಡಕಗಳನ್ನು ಧರಿಸಿ ಹಾಗೂ ಪಾದರಕ್ಷೆಗಳನ್ನು ಹಾಕಿಕೊಳ್ಳಿ.

ಸ್ಥಳ

1. ಪಟಾಕಿಗಳನ್ನು ರಸ್ತೆಗಳ ಮೇಲೆ ಸ್ಫೋಟಿಸಬೇಡಿ ಹಾಗೂ ರಸ್ತೆಗಳ ಮೇಲೆ ಎಸೆಯಬೇಡಿ. ಏಕೆಂದರೆ ಇವು ದಾರಿಯಲ್ಲಿ ಹೋಗುವ ಮುಗ್ಧರನ್ನು ಗಾಯಗೊಳಿಸಬಹುದು.

2. ಪಟಾಕಿಗಳನ್ನು ಹಚ್ಚಲು ಮುಕ್ತ ಮೈದಾನಗಳು ಉತ್ತಮ.

3. ಮನೆಯೊಳಗೆ ಪಟಾಕಿಗಳನ್ನು ಹಚ್ಚಬೇಡಿ.

4. ಬೆಳಗಿನ ಜಾವ ಮತ್ತು ತಡರಾತ್ರಿ ಪಟಾಕಿಗಳನ್ನು ಸಿಡಿಸಬೇಡಿ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಪಟಾಕಿ ಹಚ್ಚಬೇಡಿ.

5. ಹಸುಳೆಗಳು, ವೃದ್ದರು ಮತ್ತು ರೋಗಿಗಳಿಗೆ ತೊಂದರೆಯಾಗದಂತೆ ದೀಪಾವಳಿ ಆಚರಿಸಿ.

ಪಟಾಕಿಗಳನ್ನು ಹಚ್ಚುವಾಗ

1. ಬೆಳಕಿನ ಮೇಲೆ ಬಾಗಬೇಡಿ. ಪಟಾಕಿಗಳನ್ನು ಸದಾ ಎತ್ತರದ ಮಟ್ಟದಲ್ಲಿ ಇರಿಸಿ.

2. ಹಚ್ಚಿದ ಪಟಾಕಿಗಳನ್ನು ಪರಸ್ಪರ ಎಸೆದಾಡುವಂಥ ಅಪಾಯಕಾರಿ ಹುಡುಗಾಟ ಖಂಡಿತ ಬೇಡ.

3. ಪಟಾಕಿಗಳನ್ನು ಒಂದೆಡೆ ಸೇರಿಸಿ ಅದನ್ನು ಒಟ್ಟಿಗೆ ಹಚ್ಚಲು ಎಂದೂ ಪ್ರಯತ್ನಿಸಬೇಡಿ.

4. ಪಟಾಕಿಗಳನ್ನು ಹಚ್ಚುವಾಗ ಒಂದು ಬಕೆಟ್ ನೀರು ಮತ್ತು ಮರುಳನ್ನು ಹತ್ತಿರದಲ್ಲಿ ಇಟ್ಟುಕೊಳ್ಳಿ.

5. ಶಬ್ಧ ಹೊಮ್ಮಿಸುವ ಪಟಾಕಿಗಳನ್ನು ಹಚ್ಚುವಾಗ ಉದ್ದವಾದ ಗಂಧದ ಕಡ್ಡಿ ಬಳಸಿ.

6. ಭಾರಿ ಶಬ್ಧ ಹೊಮ್ಮಿಸುವ ದೊಡ್ಡ ಪಟಾಕಿಯನ್ನು ಹಚ್ಚಿ ಅದರ ಮೇಲೆ ಖಾಲಿ ಡಬ್ಬ ಇಡಬೇಡಿ. ಅದು ಸ್ಫೋಟಗೊಂಡಾಗ ತಲೆಗೆ ತಗುಲಿ ಗಾಯವಾಗುವ ಸಾಧ್ಯತೆ ಹೆಚ್ಚು.

7. ರಾಕೆಟ್ ಅತ್ಯಂತ ಅಪಾಯಕಾರಿ ಪಟಾಕಿ. ಅದನ್ನು ಹಾರಿಸುವಾಗ ಎಚ್ಚರಿಕೆ ಅಗತ್ಯ. ಕೈಯಲ್ಲಿ ಹಿಡಿದುಕೊಂಡು ರಾಕೆಟ್‍ನನ್ನು ಗಗನಕ್ಕೆ ಚಿಮ್ಮಿಸುವುದು ಬೇಡ. ರಸ್ತೆಯ ಮೇಲೆ ಮಲಗಿಸಿ ರಾಕೆಟ್ ಹಾರಿಸಬೇಡಿ.

8. ಹೂಕುಂಡಗಳು ಒಮ್ಮೊಮ್ಮೆ ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಅದು ಹಳೇ ದಾಸ್ತಾನಾಗಿದ್ದರೆ ಅದು ಭಾರೀ ಸದ್ದಿನೊಂದಿಗೆ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚು.

9. 125 ಡೆಸಿಬಲ್‍ಗಿಂತ ಕಡಿಮೆ ಶಬ್ದದ ಪಟಾಕಿ ಸಿಡಿಸಬೇಕು.

ಪ್ರಥಮ ಚಿಕಿತ್ಸೆ

ಸಣ್ಣಪುಟ್ಟ ಗಾಯಗಳು : ಪಟಾಕಿ ಹಚ್ಚಿದಾಗ ಕಣ್ಣಿಗೆ ಗಾಯವಾದರೆ, ಸ್ವಚ್ಚ ನೀರಿನಿಂದ ಕಣ್ಣನ್ನು ಚೆನ್ನಾಗಿ ತೊಳೆಯಿರಿ ಹಾಗೂ ಗಾಯಾಳುವನ್ನು ಆಸ್ಪತ್ರೆಗೆ ಕರೆದ್ಯೊಯಿರಿ.
ದೊಡ್ಡ ಗಾಯಗಳು : ದೊಡ್ಡ ಪ್ರಮಾಣದ ಗಾಯಗಳಾಗಿದ್ದರೆ ತಡ ಮಾಡದೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ.

ಪಟಾಕಿಯ ದುಷ್ಪರಿಣಾಮಗಳು

1. ಪಟಾಕಿಗಳು ಹೊರ ಸೂಸುವ ನೈಟ್ರಸ್ ಆಕ್ಸೈಡ್ ಹಾಗೂ ಸಲ್ಫರ್ ಡೈ ಆಕ್ಸೈಡ್‍ನಿಂದಾಗಿ ವಾತಾವರಣದ ಮಾಲಿನ್ಯದ ಮಟ್ಟ ಶೇ.10ರಿಂದ ಶೇ.15ರಷ್ಟು ಹೆಚ್ಚಾಗುತ್ತದೆ.

2. ವಾಯು ಮಾಲಿನ್ಯದಿಂದ ಅಸ್ತಮಾ, ಶ್ವಾಸಕೋಶ ಸಮಸ್ಯೆ ಇತ್ಯಾದಿಗೆ ಕಾರಣವಾಗುತ್ತದೆ.

3. ಶಬ್ಧ ಮಾಲಿನ್ಯ – ಇದರಿಂದ ಒಂದು ವರ್ಷದ ಕೆಳಗಿನ ಮಕ್ಕಳಿಗೆ, ವೃದ್ಧರಿಗೆ ಹಾಗೂ ಸಾಕು ಪ್ರಾಣಿಗಳಿಗೂ ಹಾನಿಕಾರಕ.

4. ಪಟಾಕಿಯಿಂದ ದೃಷ್ಟಿ ನಾಶ, ಕೈಕಾಲುಗಳಿಗೆ ಗಾಯ ಹಾಗೂ ಜೀವಕ್ಕೂ ಸಂಚಕಾರ ಬರಬಹುದು.

5. ಪಟಾಕಿ ನಿಮ್ಮ ಜೇಬು ಮತ್ತು ಹಣ ಎರಡನ್ನೂ ಸುಡುತ್ತದೆ.

ಡಾ.ದಿನಕರ್
ವೈದೇಹಿ ಹಾಸ್ಪಿಟಲ್
ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್

82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4      ಮೊ.: 97422 74849

Share this: