ವಿಶ್ವ ಫಾಲೂನ್ ದಾಫಾ ದಿನ-ಮೆ 13 .ಫಾಲೂನ್ ದಾಫಾ ಎಂದರೆ ಸಾಧನೆಯ ಮಹಾನ್ ಮಾರ್ಗ ಅಥವ ಸಾಧನೆಯ ಹಾದಿ ಎಂದರ್ಥ. ಈ ವ್ಯಾಯಾಮವನ್ನು ಮಾಡುವುದರಿಂದ ಮನಸ್ಸಿನ ಏಕಾಗ್ರತೆ ಮೂಡುವುದು.
ಫಾಲೂನ್ ದಾಫಾ- ಸಾಧನೆಯ ಮಾರ್ಗ:
ಫಾಲೂನ್ ದಾಫಾವನ್ನು ಫಾಲೂನ್ ಗಾಂಗ್ ಎಂದೂ ಕೂಡ ಕರೆಯಲಾಗುವುದು. ಫಾಲೂನ್ ದಾಪಾದ ಮುಖ್ಯ ಉದ್ದೇಶವೇನೆಂದರೆ ವಿಶ್ವದ ಲಕ್ಷಣಗಳಾದ ಸತ್ಯ, ಕರುಣೆ ಮತ್ತು ತಾಳ್ಮೆಗಳನ್ನು ಮಾನವ ಜೀವಿಗಳು ಉನ್ನತ ಹಂತದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಮನಸ್ಸು ಮತ್ತು ದೇಹದ ಕೃಷಿ ಮಾಡುವುದು, ಆಸೆ, ವ್ಯಾಮೋಹಗಳನ್ನು ತ್ಯಜಿಸುವುದು, ಕೆಟ್ಟ ಆಲೋಚನೆಗಳಿಂದ ದೂರ ಉಳಿಯುವುದು, ತ್ಯಾಗ ಮಾಡುವ ಮನೋಬಾವ, ಉನ್ನತ ನೈತಿಕತೆಯನ್ನು ಬೆಳೆಸಿಕೊಳ್ಳುವುದು ಇತ್ಯಾದಿ. ನಿರಂತರ ಸಾಧನೆ ಮತ್ತು ಅಭ್ಯಾಸದ ಮೂಲಕ ಗಾಂಗ್ ಅಥವ ಸಾಧನಾ ಶಕ್ತಿಯನ್ನು ಬೆಳೆಸಿಕೊಳ್ಳುವುದೇ ಈ ಅಭ್ಯಾಸದ ಗುರಿ.
ಫಾಲೂನ್ ದಾಫಾ ಎಂದರೆ ಸಾಧನೆಯ ಮಹಾನ್ ಮಾರ್ಗ ಅಥವ ಸಾಧನೆಯ ಹಾದಿ ಎಂದರ್ಥ. ಫಾ ಎಂಬ ಪದವು ಬುದ್ಧ ಪದದ ತರ್ಜುಮೆಯಾಗಿದ್ದು ಜ್ಞಾನವಂತ, ಮಹಾಜ್ಞಾನಿ ಅಥವ ಜ್ಞಾನೋದಯ ಹೊಂದಿದವರು ಎಂಬುದು ಇದರರ್ಥ.
ಈ ವಿಚಾರಗಳು ಅತ್ಯಂತ ಪರಿಣಾಮಕಾರಿಯಾಗಿರುವುದರಿಂದ ಕೌಟುಂಬಿಕ ಜೀವನ, ವೃತ್ತಿ ಜೀವನ ಹಾಗೂ ನಮ್ಮ ಸಾಮಾಜಿಕ ನೆಲೆಗಳಲ್ಲಿ ಎದುರಾಗುವ ಅನೇಕ ಸಮಸ್ಯೆಗಳಿಗೆ ಕಾರಣಗಳು ಹಾಗೂ ಪರಿಹಾರಗಳು ನಮಗೆ ತಿಳಿಯುತ್ತಾ ಹೋಗುವುದು. ಮನಸ್ಸು ನಿರಾಳವಾಗುವುದು, ಕೋಪ, ಅಸಹನೆ, ವ್ಯಾಮೋಹ ಇತ್ಯಾದಿ ಗುಣಗಳು ನಮ್ಮ ನಿಯಂತ್ರಣಕೆ ಬರುವುದು, ಹೃದಯವಂತಿಕೆ ಬೆಳೆಯುವುದು, ತಾಳ್ಮೆ ಮತ್ತು ಸಹಿಷ್ಣುತೆಗಳು ನಮ್ಮಲ್ಲಿ ಮನೆ ಮಾಡುವುದು. ನೈತಿಕತೆಯು ಉನ್ನತ ಹಂತದಲ್ಲಿ ಬೆಳೆಯುವುದು. ಒಟ್ಟಿನಲ್ಲಿ ಈ ಪುಸ್ತಕವನ್ನು ಸತತ ಅಧ್ಯಯನ ಮಾಡುವುದರಿಂದ ನಮ್ಮ ಸಾಮಾನ್ಯ ಜೀವನ, ಆಧ್ಯಾತ್ಮಿಕ ಜೀವನಗಳಿಗೆ ಉತ್ತಮ ನೆಲೆ ಕಾಣಲು ಸಾಧ್ಯ.
ವ್ಯಾಯಾಮವನ್ನು ಮಾಡುವುದರಿಂದ ಮನಸ್ಸಿನ ಏಕಾಗ್ರತೆ:
ಶರೀರದ ಸಾಧನೆಗೆ ೫ ಬಗೆಯ ವ್ಯಾಯಾಮಗಳನ್ನು ಫಾಲೂನ್ ದಾಫ ಸಾಧನೆಯಲ್ಲಿ ಅಭ್ಯಾಸ ಮಾಡಲಾಗುತ್ತದೆ. ಇವುಗಳಲ್ಲಿ ನಾಲ್ಕು ನಿಂತು ಮಾಡುವ ವ್ಯಾಯಾಮ ಹಾಗೂ ಒಂದು ಪದ್ಮಾಸನದಲ್ಲಿ ಕುಳಿತು ಮಾಡುವ ಧ್ಯಾನಾಭ್ಯಾಸವಾಗಿದೆ. ಈ ವ್ಯಾಯಾಮಗಳಿಗೆ ಹಿನ್ನೆಲೆ ಸಂಗೀತವಿದೆ. ಸಂಗೀತದ ಹಿನ್ನೆಲೆಯಲ್ಲಿ ಈ ವ್ಯಾಯಾಮವನ್ನು ಮಾಡುವುದರಿಂದ ಮನಸ್ಸಿನ ಏಕಾಗ್ರತೆ ಮೂಡುವುದು. ವ್ಯಾಯಾಮದ ಚಲನೆಗಳು ಅತ್ಯಂತ ಲಯಬದ್ಧ, ಹಾಗೂ ನಿಧಾನಗತಿಯಲ್ಲಿರುವುದು. ನಿರಂತರವಾಗಿ ಈ ವ್ಯಾಯಾಮಗಳನ್ನು ಮಾಡುವುದರಿಂದ ಶರೀರದಲ್ಲಿ ಸರಾಗವಾಗಿ ರಕ್ತ ಸಂಚಾರವಾಗುವುದು, ಶರೀರದ ಎಲ್ಲಾ ನಾಡಿಗಳ ಮೂಲಕ ಶಕ್ತಿಯ ಸಂಚಲನೆಯಾಗುವುದು, ಶಕ್ತಿಯು ತಲೆಯಿಂದ ಪಾದದವರೆಗೂ ಹರಿಯುವುದರಿಂದ ನಿರಂತರವಾಗಿ ಶರೀರದ ಶುದ್ಧೀಕರಣವಾಗುವುದು, ತ್ವಚೆಯ ತಳಭಾಗದಲ್ಲಿ ಶಕ್ತಿಯು ಸಂಚಲನೆಯಾಗುವುದು. ಫಾಲೂನ್ ದಾಫಾ ವ್ಯಾಯಾಮಗಳನ್ನು ಅಭ್ಯಾಸಿಗರಿಂದ ಉಚಿತವಾಗಿ ಹೇಳಿಕೊಡಲಾಗುತ್ತಿದೆ. ಫಾಲೂನ್ ದಾಫಾದ ಅಭ್ಯಾಸವು ಪುಸ್ತಕವನ್ನು ಓದುವುದು ಹಾಗೂ ವ್ಯಾಯಾಮವನ್ನು ಪ್ರತಿದಿನ ನಿರಂತರವಾಗಿ ಮಾಡುವುದನ್ನು ಒಳಗೊಂಡಿದೆ.
ಫಾಲೂನ್ ಗಾಂಗ್ ಮತ್ತು ಇದರ ಸಂಸ್ಥಾಪಕರಾದ ಮಾಸ್ಟರ್ ಲೀ ಹಾಂಗ್ ಜೀರವರಿಗೆ ಈಗಾಗಲೇ ೧೫೦೦ ಕ್ಕಿಂತಲೂ ಅಧಿಕ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. ಲೀ ಹಾಂಗ್ ಜೀರವರು ನೋಬಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶಿತರಾಗಿದ್ದರು. ಭಾರತದಲ್ಲಿ ಈ ಅಭ್ಯಾಸವನ್ನು ಅನೇಕ ಶಾಲಾ ಕಾಲೇಜುಗಳಲ್ಲಿ ಪರಿಚಯಿಸಲಾಗಿದೆ. ದೆಹಲಿ ಮತ್ತು ಹೈದರಾಬಾದ ನ ಪೋಲೀಸ್ ಶಾಲೆಗಳಿಂದ ಈ ಅಭ್ಯಾಸವನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸಲಾಗಿದೆ. ಅನೇಕ ಜೈಲುಗಳಲ್ಲಿ ಸಿಬ್ಬಂದಿಗಳಿಗೆ ಹಾಗೂ ಅಲ್ಲಿನ ಕೈದಿಗಳಿಗೆ ಫಾಲೂನ್ ದಾಫಾವನ್ನು ಹೇಳಿಕೊಡಲಾಗುತ್ತಿದೆ. ಫಾಲೂನ್ ದಾಫಾ ಮಾಡುವುದರಿಂದ ವ್ಯಕ್ತಿಯ ನಡವಳಿಕೆಗಳಲ್ಲಿ ಶೀಘ್ರಗತಿಯ ಬದಲಾವಣೆಯಾಗುವುದು ಮತ್ತು ಧನಾತ್ಮಕವಾಗಿ ಅವರಲ್ಲಿ ಪರಿವರ್ತನೆಯಾಗುವುದು.
ಫಾಲೂನ್ ದಾಫಾ ನಿಷೇಧ:
ಮೇ 13-ವಿಶ್ವ ಪಾಲೂನ್ ದಾಫಾ ದಿನ:
ಸಭೆ, ಸಮಾರಂಭಗಳು, ಮೆರವಣಿಗೆಗಳು, ಸೆಮಿನಾರ್‌ಗಳು, ಅನುಭವ ಹಂಚಿಕೆ ಇತ್ಯಾದಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಫಾಲೂನ್ ದಾಫಾ ಅಭ್ಯಾಸಿಗರು ವಿಶ್ವಾದ್ಯಂತ ಈ ದಿನವನ್ನು ಅತ್ಯಂತ ಸ್ಮರಣೀಯವಾಗಿ ಪ್ರತಿವರ್ಷ ಆಚರಿಸುತ್ತಿದ್ದರು. ಆದರೆ ಈಗ ಲಾಕ್‌ಡೌನ್ ಪರಿಸ್ಥಿತಿ ಇರುವುದರಿಂದ ಆನ್‌ಲೈನ್ ಮೂಲಕವೇ ಈ ಆಚರಣೆಯನ್ನು ಅಭ್ಯಾಸಿಗರು ಕೈಗೊಳ್ಳುತ್ತಿದ್ದಾರೆ. ಭಾರತದಲ್ಲಿ ಕಂಪ್ಯೂಟರ್ ಆಪ್‌ಗಳನ್ನು ಬಳಸಿ ಹೆಚ್ಚಿನ ಅಭ್ಯಾಸಿಗರು ಏಕಕಾಲದಲ್ಲಿ ತಮ್ಮ ಅಪೂರ್ವ ಅನುಭವಗಳ ಹಂಚಿಕೆ ಮಾಡಿಕೊಳ್ಳುತ್ತಿದ್ದಾರೆ. ಫಾಲೂನ್ ದಾಫಾವು ಇಂದು ಇಡೀ ವಿಶ್ವದಲ್ಲಿಯೇ ಅತ್ಯಂತ ಪರಿಣಾಮಕಾರಿ ಹಾಗೂ ಪ್ರಭಾವೀ ಸಾಧನಾಭ್ಯಾಸವಾಗಿ ಹೊರಹೊಮ್ಮಿದೆ. ಈ ಲಾಕ್‌ಡೌನ್ ಅವಧಿಯಲ್ಲಿಯೂ ಫಾಲೂನ್ ದಾಫಾದ ಎಲ್ಲಾ ವ್ಯಾಯಾಮಗಳನ್ನು ಮನೆಯಲ್ಲಿಯೇ ಕುಳಿತು ಕಲಿಯಬಹುದು. ವ್ಯಾಯಾಮಗಳ ಎಲ್ಲಾ ವೀಡಿಯೋಗಳು, ಮಾಸ್ಟರ್‌ರವರ ಉಪನ್ಯಾಸಗಳು, ಪುಸ್ತಕಗಳು ಮತ್ತು ಹಿನ್ನೆಲೆ ಸಂಗೀತಗಳು ಎಲ್ಲವೂ ಆನ್‌ಲೈನ್ ನಲ್ಲಿ ಉಚಿತವಾಗಿ ಲಭ್ಯವಿದೆ. ವಿವರಗಳಿಗಾಗಿ:
ಸಿ.ಎನ್.ಪ್ರದೀಪ್ ಕುಮಾರ್, ಕೋಲಾರ