ಸ್ಪಾಂಡಿಲೈಟಿಸ್ ವ್ಯಾಧಿ ಕುರಿತು ತಕ್ಕ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ಪೂರ್ಣವಾಗಿ ನೋವುಗಳು ಸುಲಭದಲ್ಲಿ ಇಳಿಮುಖವಾಗುವುದಿಲ್ಲ. ಈ ನೋವು ಬಂದಾಗ ಕುತ್ತಿಗೆಯೆಲ್ಲಾ ಬಿಗಿದಂತೆ ಭಾಸವಾಗುತ್ತದೆ. ತಲೆಶೂಲೆ, ತಲೆಭಾರ, ತಲೆನೋವು ವಿಪರೀತವಾಗಿರುತ್ತದೆ.
ಖಂಡಿತವಾಗಿಯೂ ಹೌದು..!! ಇದು ಸ್ಪೈನಲ್‍ಕಾರ್ಡ್ ಮೂಳೆಗಳಲ್ಲಿ ಉಂಟಾಗುವ ಸಾಮಾನ್ಯ ಶೈಥಿಲ್ಯ ಬದಲಾವಣೆ. ಆದರೆ, ಬಹಳ ಬಾಧೆಯನ್ನುಂಟು ಮಾಡುವಂತಹದು. ಸ್ಪಾಂಡಿಲೈಟಿಸ್ ವ್ಯಾಧಿ ಕುತ್ತಿಗೆ ಮೇಲ್ಭಾಗದಿಂದ ಕೆಳಗಿನವರೆಗೂ ಮಣಿಯಾಗಿರುವ ಸರಮೂಳೆಗಳ ಸಮೂಹವಾಗಿರುವ ಮೂಲೆಗಳ ಮಧ್ಯೆ ತಯಾರಾದ ಕ್ಷೇಷ, ಕಲ್ಮಷ ಶೈಥಿಲ್ಯವಾಗುವುದರಿಂದ ಬರುತ್ತದೆ.
ಇದು ಕುತ್ತಿಗೆ ಭಾಗದಲ್ಲಿ ಭುಜಗಳ ಮಧ್ಯೆ ಬಂದರೆ ಕ್ರೇರಿವಿಕಲ್ ಸ್ಪಾಂಡಿಲೈಟಿಸ್ ಅಂತ ನಡುವಲ್ಲಿರುವ ಮೂಳೆಗಳ ಮಧ್ಯೆ ಬಂದರೆ ಲಂಬೋರ್ ಸ್ಪಾಂಡಿಲೈಟಿಸ್ ಎಂದು ಕರೆಯಲಾಗುತ್ತದೆ. ಇವೆರಡೂ ಅತಿ ಬಾಧೆ ಕೊಡುವ ವ್ಯಾಧಿಗಳೇ..!!ಪೂರ್ಣವಾಗಿ ನೋವುಗಳು ಸುಲಭದಲ್ಲಿ ಇಳಿಮುಖವಾಗುವುದಿಲ್ಲ. ಒಮ್ಮೊಮ್ಮೆ ಈ ಕುತ್ತಿಗೆ ನೋವಿಗೆ ಸಂಬಂಧಿಸಿದ ವ್ಯಾಧಿಗಳಿಂದ ಕಣ್ಣುಗಳು ತಿರುಗುವುದು, ಬ್ಯಾಲೆನ್ಸ್ ತಪ್ಪಿ ತೂಗಿದಂತಾಗುವುದು, ಭಯವನ್ನುಂಟು ಮಾಡುವಂತೆ ಮಾಡುತ್ತದೆ. ಆದ್ದರಿಂದಲೇ ಸ್ಪಾಂಡಿಲೈಟಿಸ್ ವ್ಯಾಧಿ ಕುರಿತು ತಕ್ಕ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ.
ಆರಂಭ ಎಲ್ಲಿ?
ಸಾಮಾನ್ಯವಾಗಿ ಈ ಸ್ಪಾಂಡಿಲೈಟಿಸ್ ವ್ಯಾಧಿ ನಡುವಿನ ಕೊನೆಯ ಮೂಳೆಯ ಘಟ್ಟದ ಮಧ್ಯೆಯಿಂದ ಆರಂಭವಾಗಿ ನಡುವು ನೋವು, ಕಾಲ್ಗಳು, ತೊಡೆಗಳ ಕೊನೆಯವರೆಗೂ ನೋವು ಸಾಗುತ್ತದೆ. ಒಮ್ಮೊಮ್ಮೆ ಭುಜಗಳ ಮಧ್ಯದ ಕಣಿವೆಯಲ್ಲಿ ಸಾಗಿ ಬೆನ್ನು ಹಾಗೂ ಹೃದಯದ ಸ್ಥಳವನ್ನು ನೋವಿಗೆ ಗುರಿ ಮಾಡುತ್ತದೆ. ಕಣ್ಣು, ಶ್ವಾಸಕೋಶಗಳು, ಹೃದಯದ ಕವಾಟಿಗಳಿಗೂ ಸಹ ಇದರ ಪ್ರಭಾವವು ಅಮಿತವಾಗಿ ಕಾಣಿಸಿಕೊಳ್ಳುತ್ತದೆ.
ಈ ವ್ಯಾಧಿಯಿಂದಾಗಿ ಮೂಳೆಗಳು ತಮ್ಮ ಸಾಮಥ್ರ್ಯವನ್ನು ಕಳೆದುಕೊಂಡು, ಗಟ್ಟಿ ಬಿದ್ದು ಸುತ್ತಮುತ್ತಲಿರುವ ಮೂಳೆಗಳು ಬಿಗಿದಂತಾಗಿ ಕೆಲವು ಇತರೆ ವ್ಯಾಧಿಗಳೂ ಬರಬಹುದು ಅಥವಾ ಧೀರ್ಘವಾದ ಕಾಲ ಬಾಧೆ ಕೊಡುವ ವ್ಯಾಧಿ ಬರಬಹುದು. ವ್ಯಕ್ತಿ ತಾನು ಮಾಡುವ ಕೆಲಸದಿಂದ ಬಾಧೆಯನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನದಿಂದ ಇದರ ತೀವ್ರತೆ ಆಧಾರಪಟ್ಟಿರುತ್ತದೆ.
ಹಲವು ದುಷ್ಪರಿಣಾಮ
ಈ ಸ್ಪಾಂಡಿಲೈಟಿಸ್‍ನಿಂದ ಮೂಳೆಗಳಲ್ಲಿ ಒಡಕು ಕಾಣಿಸಿಕೊಂಡು, ಅವುಗಳಲ್ಲಿ ಶಕ್ತಿ ಗುಂದಿ, ಸಾಮಥ್ರ್ಯ ಕಳೆದುಕೊಂಡು ಇತರೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ. ಸ್ಪಾಂಡಿಲೈಟಿಸ್ ಎಲ್ಲಾದರೂ ಬರಬಹುದು. ಆದರೆ, ಕುತ್ತಿಗೆಯ ಮೇಲೆ ಸಾಮಾನ್ಯವಾಗಿ ಬರುವುದನ್ನು ನೋಡುತ್ತಿರುತ್ತೇವೆ. ಸಾಮಾನ್ಯವಾಗಿ ಮನುಷ್ಯ ಬೆಳೆಯುವ ವಯಸ್ಸಿನಲ್ಲಿ ಮೂಳೆಗಳ ಬೆಳವಣಿಗೆಯಲ್ಲಿ ಉಂಟಾಗುವ ಬದಲಾವಣೆಯಿಂದ ಬರುತ್ತದೆ. ಮತ್ತೊಂದು ಸ್ಪಾಂಡಿಲೈಟಿಸ್ ಸಿಂಡ್ರೋಮ್ ಅಂತ. ಈ ಎರಡರಲ್ಲಿ ಯಾವ ವ್ಯಾಧಿ ತಗುಲಿದರೂ ಉಂಟಾಗುವ ಬಾಧೆಗಳು ಭುಜಗಳ ನೋವು, ತಲೆನೋವು, ಕೊರಳ ನೋವು, ಭ್ರಮೆ, ಮೆದುಳಿನ ಮಧ್ಯೆ ಭಾಗದಲ್ಲಿ ಕಾಣಿಸಿಕೊಳ್ಳುವ ಬಾಧೆ, ವಾಂತಿ, ವಿಕಾರವಾಗಿ ಅರಚುವುದು ಇಂಥ ಅನೇಕ ದುಷ್ಪರಿಣಾಮಗಳು ಬೀರುತ್ತವೆ.
ಲಕ್ಷಣಗಳೇನು?
ಮಧ್ಯೆ ಮಧ್ಯೆಯಲ್ಲಿ ಕುತ್ತಿಗೆ ನೋವು ಬರುತ್ತಿರುತ್ತದೆ. ಇದು ಈ ಸಮಸ್ಯೆಯಿಂದಲೇ ಆರಂಭವಾಗುತ್ತದೆ. ಬಲಗಡೆಯಾಗಲಿ ಅಥವಾ ಎಡಗಡೆಯಾಗಲಿ ಇದು ಎರಡು ಭುಜಗಳಿಗೆ ತಾಗಿ ಅಲ್ಲಿಯೂ ಬಾಧೆಯನ್ನು ಸೃಷ್ಟಿಸುತ್ತದೆ. ಕೈ ಬೆರಳುಗಳು ಚೌಗು ಹತ್ತಿದಂತೆ ಚುಮು ಚುಮುಗುಟ್ಟುತ್ತವೆ. ಒತ್ತಡಗಳಿಂದ ಕೈಕಾಲುಗಳು ನಡುಗುವುದು. ಈ ನೋವು ಬಂದಾಗ ಕುತ್ತಿಗೆಯೆಲ್ಲಾ ಬಿಗಿದಂತೆ ಭಾಸವಾಗುತ್ತದೆ. ತಲೆಶೂಲೆ, ತಲೆಭಾರ, ತಲೆನೋವು ವಿಪರೀತವಾಗಿರುತ್ತದೆ. ಒಂದೆಡೆ ಕುಳಿತುಕೊಳ್ಳಲಾಗುವುದಿಲ್ಲ. ನಿಂತಿರಲಾಗಿರುವುದಿಲ್ಲ. ಎಡಗಾಲು ಅಥವಾ ಬಲಗಾಲಿನಲ್ಲಿ ನೋವಿನ ಸೆಳೆತ ಎಳೆಯುತ್ತಿರುತ್ತದೆ. ಕಾಲ್ಗಳು ನಡೆಯಲು ಬಸವಳಿದು ಹೋಗುತ್ತದೆ.
ಪತ್ತೆ ಹೇಗೆ?
ಸಹಜವಾಗಿ ಸ್ಪಾಂಡಿಲೈಟಿಸ್ ಪತ್ತೆ ಹಚ್ಚುವುದು ಸ್ವಲ್ಪ ಕಷ್ಟವೇ ಸರಿ. ಎಕ್ಸರೇಯಿಂದಾಗಿ ಈ ಸ್ಪಾಂಡಿಲೈಟಿಸ್ ಎಲ್ಲಿದೆ? ಎಷ್ಟಿದೆ? ಎನ್ನುವುದು ತಿಳಿಯಬಹುದು. ತಜ್ಞ ವೈದ್ಯರು ಮಾತ್ರ ಬೇಗ ಗುರುತಿಸಬಲ್ಲರು. ನಾಡಿಯನ್ನು ಮುಟ್ಟಿ ಪರೀಕ್ಷೆ ಮಾಡಿ ನೋವಿ ಈ ವ್ಯಾಧಿಯನ್ನೇ ಅಲ್ಲ, ಇದಕ್ಕೆ ಕಾರಣವೇನು? ಹೇಗೆ ಬಂತು? ಕಾರಣಗಳೇನು? ಇತ್ಯಾಧಿ ಅಂಶಗಳನ್ನು ಪತ್ತೆ ಹಚ್ಚಬಲ್ಲರು. ಈ ವ್ಯಾಧಿಗೆ ಚಿಕಿತ್ಸೆ, ಔಷಧಿಗಳು, ಶಸ್ತ್ರಚಿಕಿತ್ಸೆಯೂ ಅಲ್ಲದೆ, ವೈದ್ಯರು ನೋವಿನ ಲಕ್ಷಣಗಳನ್ನು ಸ್ಪಡಿ ಮಾಡಿ ಅದಕ್ಕೆ ತಕ್ಕ ಕೊರಳು ಬೆಲ್ಟು, ನಡುವಿನ ಬೆಲ್ಟೆ ಹಾಕಿ ಚಿಕಿತ್ಸೆ ನೀಡುತ್ತಾರೆ. ಇದರಿಂದಾಗಿ ವ್ಯಾಧಿಗ್ರಸ್ತರಿಗೆ ಸೂಕ್ತ ಪರಿಹಾ ರ ನೀಡುತ್ತದೆ. ಮುಖ್ಯವಾಗಿ ವ್ಯಾಧಿ ಬಂದ ಮೇಲೆ ಚಿಕಿತ್ಸೆಗಿಂತ ಬರದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಉತ್ತಮ.
Also Read: ಸರ್ವೈಕಲ್ ಸ್ಪಾಂಡಿಲೈಟಿಸ್ ಕುತ್ತಿಗೆಗೇ ಕುತ್ತನ್ನು ತರುವ ವ್ಯಾಧಿ
ಡಾ. ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್ ವೈಟ್‍ಫೀಲ್ಡ್, ಬೆಂಗಳೂರು – 560066
080-49069000. www.vims.ac.in