Vydyaloka

ಸಿರಿಧಾನ್ಯಗಳು ಆರೋಗ್ಯಕ್ಕೆ ಪೂರಕ ನಿಮ್ಮ ಆಹಾರದಲ್ಲಿ ಬಳಸಿ

ಸಿರಿಧಾನ್ಯಗಳನ್ನು ಇಂದು ಜನರು ಆಹಾರವಾಗಿ ಬಳಸುತ್ತಿರುವುದು ಹೆಚ್ಚಾಗುತ್ತಿದೆ ಆರೋಗ್ಯ ಮತ್ತು ಪೌಷ್ಟಿಕತೆಯ ದೃಷ್ಟಿಯಿಂದ ಸಿರಿಧಾನ್ಯಗಳು ಹೆಚ್ಚು ಉಪಯುಕ್ತ.

ಗಾತ್ರದಲ್ಲಿ ಚಿಕ್ಕದಾದ ಸಿರಿಧಾನ್ಯಗಳು ದುಂಡಾಕಾರದಲ್ಲಿದ್ದು ಪೋಯೇಸಿ ಹುಲ್ಲುಜಾತಿ ಕುಟುಂಬಕ್ಕೆ ಸೇರುತ್ತವೆ. ಸಿರಿಧಾನ್ಯಗಳಲ್ಲಿ ವಿವಿಧತೆ ಇದ್ದು ಪ್ರಮುಖ ಬಗೆಗಳು ಇಂತಿವೆ
– ಸಜ್ಜೆ (Pearl millet)
– ರಾಗಿ (Finger millet)
– ನವಣೆ (Foxtail millet)
– ಬರಗು (Proso millet)
– ಊದಲು (Barnyard millet)
– ಹಾರಕ (Kodo millet)
– ಸಾಮೆ (Little millet)

ಸಿರಿಧಾನ್ಯಗಳು ಆರೋಗ್ಯಕ್ಕೆ ಪೂರಕ:
– ಹೆಚ್ಚಿನ ಫೈಬರ್ ಅಂಶ (6-13%)
– ಹೆಚ್ಚಿನ ಪ್ರೋಟೀನ್ (7-12%)
– ಹೆಚ್ಚಿನ ಖನಿಜಗಳನ್ನು ಹೊಂದಿದೆ (ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್)
– ಗ್ಲುಟನ್ ಮುಕ್ತ
– ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ
– ಲೊ ಗ್ಲೈಸೆಮಿಕ್ ಇಂಡೆಕ್ಸ್ (Low Glycemic Index)

ಸಿರಿಧಾನ್ಯಗಳು ಏಕೆ ಮುಖ್ಯ:
1. ಅಪೌಷ್ಟಿಕತೆ ನಿವಾರಣೆ: ಸಿರಿಧಾನ್ಯಗಳಲ್ಲಿ ಅಗತ್ಯ ಪೋಷಕಾಂಶಗಳು ಅತ್ಯುತ್ತಮವಾಗಿದೆ. ಆದ್ದರಿಂದ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಇವು ಉಪಯುಕ್ತ.
2. ಸುಸ್ಥಿರ ಕೃಷಿಯನ್ನು ಬೆಂಬಲಿಸುತ್ತದೆ: ಸಿರಿಧಾನ್ಯಗಳು ಕಡಿಮೆ ನೀರಿನಲ್ಲಿಯೂ ಬೆಳೆಯುತ್ತದೆ ಮತ್ತು ಮಣ್ಣಿನ ಆರೋಗ್ಯವನ್ನು ಉತ್ತೇಜಿಸುತ್ತದೆ.
3. ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸುತ್ತದೆ: ಸಿರಿಧಾನ್ಯಗಳು ಅನೇಕ ಗ್ರಾಮೀಣ ಜನರಿಗೆ ಜೀವನೋಪಾಯವನ್ನು ಒದಗಿಸುತ್ತದೆ. ಆದ್ದರಿಂದ ಇವು ನಿಜವಾದ ರೈತರ ಮಿತ್ರ.
4. ಆಹಾರ ಭದ್ರತೆಯನ್ನು ಉತ್ತೇಜಿಸುತ್ತದೆ: ಸಿರಿಧಾನ್ಯ ವಿವಿಧ ಹವಾಮಾನಗಳಿಗೆ ಹೊಂದಿಕೊಳ್ಳುತ್ತದೆ. ಇದು ಆರ್ಥಿಕತೆಯಲ್ಲಿ ಆಹಾರ ಲಭ್ಯತೆಯನ್ನು ಖಚಿತಪಡಿಸುತ್ತದೆ.
5. ಆರೋಗ್ಯಕರ ಜೀವನವನ್ನು ಬೆಂಬಲಿಸುತ್ತದೆ: ಸಿರಿಧಾನ್ಯ ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿರುವುದರಿಂದ ದೀರ್ಘಕಾಲದ ಕಾಯಿಲೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ನಿಮ್ಮ ಆಹಾರದಲ್ಲಿ ಸಿರಿಧಾನ್ಯಗಳನ್ನು ಬಳಸಿ :
1 ಸಂಸ್ಕರಿಸಿದ ಧಾನ್ಯಗಳನ್ನು ಬಳಸಬೇಡಿ, ಬದಲಿಗೆ ಸಿರಿಧಾನ್ಯ ಆಧಾರಿತ ಉತ್ಪನ್ನಗಳನ್ನು ಬಳಸಿ.
2. ಸಿರಿಧಾನ್ಯಗಳಲ್ಲಿ ವಿವಿಧ ಪಾಕವಿಧಾನಗಳನ್ನು ತಯಾರಿಸಬಹುದು (ಗಂಜಿಗಳು, ಬ್ರೆಡ್, ದೋಸೆಗಳು, ನೂಡಲ್ಸ್, ವೇಫರ್ಗಳು, ಇಡ್ಲಿ ಉಪ್ಮಾ).
3. ಬೇಕರಿ ಉತ್ಪನ್ನಗಳಲ್ಲಿ ಅಥವಾ ಇತರೆ ತಿಂಡಿ ತಿನಿಸುಗಳಲ್ಲಿ ಸಿರಿಧಾನ್ಯಗಳ ಹಿಟ್ಟು ಬಳಸಿ.
4. ಸಿರಿಧಾನ್ಯಗಳಿಂದ ಮಾಡಿದ ತಿಂಡಿ ತಿನ್ನಿ.

ಸಿರಿಧಾನ್ಯ ರೈತರಿಗೆ ಆರ್ಥಿಕ ಬುನಾದಿ ಒದಗಿಸುವುದರ ಜೊತೆಗೆ ಜನರ ಅಪೌಷ್ಟಿಕತೆ ನಿವಾರಣೆಗೆ ಸೂಕ್ತ ಪರಿಹಾರ ಒದಗಿಸಬಲ್ಲದು. ಆದರಿಂದ ಸಿರಿಧಾನ್ಯಗಳ ಬಳಕೆ ಹೆಚ್ಚಿಸಲು ಕ್ರಮ ಕೈ ಗೊಳ್ಳುವುದು ಸೂಕ್ತ.

ಅಜಿತ್ ಕುಮಾರ್
ನಿರ್ದೇಶಕರು
ಆವಿಶ್ಜಿಯಾ ಪ್ರೈವೆಟ್ ಲಿಮಿಟೆಡ್
ನಂ. 28, 2ನೇ ಮುಖ್ಯರಸ್ತೆ, ಮುನಿಸ್ವಾಮಿ ಲೇಔಟ್,
ವಿದ್ಯಾರಣ್ಯಪುರ, ಬೆಂಗಳೂರು 560097
Ph: 98451 83494
ಮೇಲ್ ಐಡಿ: marketing@aavishjia.com
https://www.aavishjia.com

3-1 ಜಿನ್ಸೆಂಗ್ ಕಾಫಿ ಭಾರತದಲ್ಲಿ ಆವಿಶ್ಜಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಮತ್ತು ಎಲ್ಲಾ ಪ್ರಮುಖ ಇ-ಕಾಮರ್ಸ್ ವೆಬ್ ಪೋರ್ಟಲ್‌ಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ಜೊತೆಗೆ www.aavishjia.com ನಲ್ಲಿ ಲಭ್ಯವಿದೆ.

ಸಂಪರ್ಕ/WhatsApp – 63614 12347 / 89719 11440

ವಿತರಣೆ, ಸ್ಟಾಕ್ ಪಾಯಿಂಟ್‌ಗಳು, ಚಿಲ್ಲರೆ ವ್ಯಾಪಾರ ಇತ್ಯಾದಿಗಳಿಗಾಗಿ ಕೂಡ  ಸಂಪರ್ಕಿಸಬಹುದು.

Share this: