ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಬಾರದು.ಶ್ರಾವಣ ಮಾಸ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಮಾಸ.ಈ ಮಾಸದಲ್ಲಿ ನಮ್ಮ ಆಹಾರ, ಆಚಾರ ಮತ್ತು ವಿಚಾರಗಳಲ್ಲಿ ಕೆಲವು ಮಾರ್ಪಾಡುಗಳನ್ನು ಆರೋಗ್ಯದ ದೃಷ್ಠಿಯಿಂದ ಸಂಪ್ರದಾಯ ಅಥವಾ ಆಚರಣೆಗಳ ಮೂಲಕ ಅಳವಡಿಸಲಾಗಿದೆ.
ಮಾಂಸಾಹಾರ ನಿಶಿದ್ದಿಸಲು ವೈಜ್ನಾನಿಕ ಮತ್ತು ಆರೋಗ್ಯದ ಕಾರಣ:
ಶೀತ, ತೀವಾಂತ ಮತ್ತು ವಾಯುವಿನ ಪ್ರಭಾವದಿಂದಾಗಿ ಹಲವು ವಾಯು ವಿಕಾರಗಳು, ಸಾಂಕ್ರಾಮಿಕ ರೋಗಗಳು ಮತ್ತು ಮಾನಸಿಕ ತೊಂದರೆಗಳು ಉದ್ಬವಿಸುಬಹುದು. ಅದ್ದರಿಂದ ಈ ಮಾಸದಲ್ಲಿ ನಮ್ಮ ಆಹಾರ, ಆಚಾರ ಮತ್ತು ವಿಚಾರಗಳಲ್ಲಿ ಕೆಲವು ಮಾರ್ಪಾಡುಗಳನ್ನು ಆರೋಗ್ಯದ ದೃಷ್ಠಿಯಿಂದ ಸಂಪ್ರದಾಯ ಅಥವಾ ಆಚರಣೆಗಳ ಮೂಲಕ ಅಳವಡಿಸಲಾಗಿದೆ. ಮುಖ್ಯವಾಗಿ ಈ ಮಾಸ ಪೂರ್ತಿ ಮಾಂಸಾಹಾರವನ್ನು ವರ್ಜಿಸಲಾಗಿದೆ. ಮಾಂಸಾಹಾರ ನಿಶಿದ್ದಿಸಲು ಕೆಲವು ವೈಜ್ನಾನಿಕ ಮತ್ತು ಆರೋಗ್ಯದ ಕಾರಣಗಳಿವೆ.
1. ಅತಿ ಹೆಚ್ಚು ಮಳೆಯಿಂದಾಗಿ ಜೀರ್ಣ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಸುಲಭವಾಗಿ ಜೀರ್ಣ ವಾಗುವ ಆಹಾರವನ್ನು ಮಾತ್ರ ಸೇವಿಸಲು ಸಾಧ್ಯ. ಮಾಂಸಾಹಾರ ಜೀರ್ಣವಾಗಲು ಕಷ್ಟಕರ ಮತ್ತು ತುಂಬಾ ಸಮಯ ಜೀರ್ಣಿಸಿಕೊಳ್ಳಲು ಬೇಕಾಗಿರುವುದರಿಂದ, ಮಾಂಸಾಹಾರವನ್ನು ಸೇವಿಸಿದರೆ ಅಜೀರ್ಣ, ಮಲಬದ್ದತೆ, ಹೊಟ್ಟೆ ನೋವು, ಉಬ್ಬರದ ಹಲವು ಸಮಸ್ಯೆಗಳು ಉಂಟಾಗುತ್ತದೆ.
Also Read: ಮಳೆಗಾಲದಲ್ಲಿ ಆರೋಗ್ಯ-ಸೂಕ್ತ ಆಹಾರ ಸೇವಿಸಬೇಕು
2. ಮಳೆಗಾಲದಲ್ಲಿ ನೀರು ಕಲುಶಿತವಾಗುವುದರಿಂದ ವಾಂತಿ, ಬೇಧಿ, ಮಲೇರಿಯಾ, ಟೈಫಾಯಿಡ್ ನಂತಹ ಹಲವು ಸಾಂಕ್ರಾಮಿಕ ರೋಗಗಳು ಉಂಟಾಗುತ್ತದೆ ಮತ್ತು ಈ ಸಮಯದಲ್ಲಿ ಸಾಂಕ್ರಾಮಿಕ ರೋಗಗಳು ಶೀಘ್ರವಾಗಿ ಹರಡುತ್ತದೆ. ಇದರ ಪರಿಣಾಮ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.
3. ಮಳೆಗಾಲ ಹಲವು ಪ್ರಾಣಿ ಪಕ್ಷಿಗಳು , ಜಂತುಗಳು ತಮ್ಮ ಸಂತತಿಯನ್ನು ಹೆಚ್ಚಿಸಿಕೊಳ್ಳುವ ಕಾಲ. ಪ್ರಕೃತಿಯು ಈ ಸಂದರ್ಭದಲ್ಲಿ ಪ್ರಾಣಿ ಸಂಕುಲಗಳ ಸಂಖ್ಯೆಯನ್ನು ಅಭಿವೃದ್ದಿಸಿಕೊಳ್ಳಲು ನೀಡಿರುವ ಒಳ್ಳೆಯ ಕಾಲ. ಆದ್ದರಿಂದ ಈ ಕಾಲದಲ್ಲಿ ಮಾಂಸಾಹಾರ ಸೇವಿಸಿದರೆ ಇದರ ಸಂಕುಲವು ಕ್ಷೀಣಿಸಬಹುದು.
5. ನೀರು ಕಲುಶಿತವಾಗಿ ಹಲವು ಸಾಂಕ್ರಾಮಿಕ ರೋಗ ಬರುವುದರಿಂದ ಮಳೆನೀರು, ನದಿನೀರು, ಸೊಪ್ಪು, ಗೆಡ್ಡೆ ಗೆಣಸನ್ನು ವರ್ಜಿಸಲಾಗಿದೆ. ಅತಿಯಾದ ವಾಯುವಿನ ಪರಿಣಾಮ ಮಲಬದ್ದತೆ, ಹೊಟ್ಟೆ ಉಬ್ಬರ, ಗಂಟು ನೋವು ಹೆಚ್ಚಾಗುತ್ತದೆ. ಆದ್ದರಿಂದ ಕಾಳಿನ ಪದಾರ್ಥವನ್ನು ನಿಯಮಿತವಾಗಿ ಬಳಸಲು ಈ ಮಾಸದಲ್ಲಿ ತಿಳಿಸಲಾಗಿದೆ.
6. ಬದಲಿಗೆ, ಬಿಸಿನೀರು, ಹಾಲು,ಜೀರಿಗೆ, ಕಾಳು ಮೆಣಸು, ಶುಂಠಿ, ತುಪ್ಪ, ಮಂಚಕರ್ಮ ವಿಶೇಷ ಚಿಕಿತ್ಸೆಯಾದ ಬಸ್ತಿ ಚಿಕಿತ್ಸೆಯನ್ನು ರೋಗವನ್ನು ತಡೆಗಟ್ಟಲು ಈ ಮಾಸದಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿದೆ.
Also watch: ಶ್ರಾವಣ ಮಾಸದಲ್ಲಿ ಮಾಂಸಾಹಾರ ಏಕೆ ನಿಷಿದ್ಧ?
https://www.youtube.com/watch?v=4dQdNJTGhuo&t=360s
ಡಾ. ಮಹೇಶ ಶರ್ಮಾ. ಎಂ
ಸಹಾಯಕ ಪ್ರಾಧ್ಯಾಪಕರು, ಕಾಯಚಿಕಿತ್ಸಾ ವಿಭಾಗ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು.
Mob: 9964022654 drsharmamysr@gmail.com