Vydyaloka

ಶಿವಜ್ಯೋತಿ ಆಯುರ್ವೇದ ಕೇಂದ್ರ : ಸಾವಿನ ದವಡೆಯಿಂದ ಬದುಕಿನ ಅಂಗಳಕ್ಕೆ

ಶಿವಜ್ಯೋತಿ ಆಯುರ್ವೇದ ಕೇಂದ್ರ ಸೇವಾ ಮನೋಭಾವದಿಂದ ಸ್ಥಾಪಿಸಲ್ಪಟ್ಟ ಚಿಕಿತ್ಸಾ ಕೇಂದ್ರ.ಈ ಕೇಂದ್ರದಲ್ಲಿ ಪುರಾತನ ಆಯುರ್ವೇದ ಮತ್ತು ಸಿದ್ದೌಷದಗಳ ಸಂಯೋಜನೆಯೊಂದಿಗೆ ತಯಾರಿಸಲ್ಪಟ್ಟ ವಿವಿಧ ಬಗೆಯ ಔಷಧಿಗಳನ್ನು  ನೀಡಲಾಗುತ್ತದೆ.

ಡಾ ಪುರುಷೋತ್ತಮ್ ಆಯುರ್ವೇದ ಚಿಕಿತ್ಸೆಯಲ್ಲಿ ನಿಪುಣರಾದ ವೈದ್ಯರು. ಇವರು 1981 ರಲ್ಲಿ ತಿರುವನಂತಪುರದ ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರವೂ ತನ್ನ ವೃತ್ತಿಯನ್ನು ಮುಂದುವರಿಸಲು ನಿರ್ಧರಿಸಿದ್ದರು. ರೋಗಗ್ರಸ್ತ ಅಸಹಾಯಕರಿಗೂ, ಬಡವರಿಗೂ ನೆರವಾಗಿ ರೋಗವನ್ನು ಗುಣಪಡಿಸಲು ಕಾರ್ಯಬದ್ದರಾದರು. ಅಂತೆಯೇ ಅವರು ಕೊಲ್ಲಂ ಜಿಲ್ಲೆಯ ಪಾರಿಪಳ್ಳಿ ಎಂಬಲ್ಲಿ ಸ್ವಾಮಿ ಶಿವಜ್ಯೋತಿ ಧರ್ಮಾನಂದ ಎಂಬ ಹೆಸರಿನಿಂದ ಆಶ್ರಮವೊಂದನ್ನು ಸ್ಥಾಪಿಸಿದರು. ಅಗಸ್ತ್ಯ ಪದ್ದತಿಯ ಚಿಕಿತ್ಸಾಕ್ರಮವನ್ನು ಪ್ರಾಯೋಗಿಕವಾಗಿ ಬಳಸುತ್ತಾ ಬಂದರು. ಅನೇಕ ಕಾಯಿಲೆಗಳನ್ನು ಆಯುರ್ವೇದದಿಂದಲೇ ಗುಣಪಡಿಸುತ್ತಾ ‘ಸ್ವಾಮಿ’ ಯೆಂದೇ ಖ್ಯಾತರಾದರು. ಅಗಸ್ತ್ಯ ಪದ್ದತಿಯಂತೆ ತಯಾರಿಸುವ ಒಂದು ಭಸ್ಮವನ್ನು ಕ್ಯಾಪ್ಸೂಲ್ ಮಾದರಿಯಲ್ಲಿ ರೋಗಿಗಳಿಗೆ ನೀಡುತ್ತಾ ಬಂದರು.

ತಿರುವನಂತಪಪುರದ ಖ್ಯಾತ ಅರ್ಬುದ (cancer) ಚಿಕಿತ್ಸಾ ಕೇಂದ್ರದಿಂದ ಸಾವು ಖಚಿತವೆಂದು ಕೈಬಿಟ್ಟ ಅನೇಕ ರೋಗಿಗಳನ್ನು ಸಿದ್ದೌಷದದ ಪ್ರಯೋಗದಿಂದ ಇವರು ಬದುಕಿಗೆ ಮರಳಿಸಿದ್ದಾರೆ. ಹಾಗೆ ನೋಡಿದರೆ ಇದೊಂದು ಸೇವಾ ಮನೋಭಾವದಿಂದ ಸ್ಥಾಪಿಸಲ್ಪಟ್ಟ ಚಿಕಿತ್ಸಾ ಕೇಂದ್ರ, ತೀರಾ ಬಡವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಕಡಿಮೆ ಖರ್ಚಿನ ಉತ್ತಮ ಚಿಕಿತ್ಸೆ ಇಲ್ಲಿನ ಧ್ಯೇಯ ವಾಕ್ಯ. ಈ ಕೇಂದ್ರದಲ್ಲಿ ಪುರಾತನ ಆಯುರ್ವೇದ ಮತ್ತು ಸಿದ್ದೌಷದಗಳ ಸಂಯೋಜನೆಯೊಂದಿಗೆ ತಯಾರಿಸಲ್ಪಟ್ಟ ವಿವಿಧ ಬಗೆಯ ಔಷಧಿಗಳನ್ನು  ನೀಡಲಾಗುತ್ತದೆ.

ಸ್ವಾಮಿ ಶಿವಜ್ಯೋತಿ ಧರ್ಮಾನಂದರ ಮೊಮ್ಮಗ ಡಾ. ಶ್ರೀಹರಿ ಈ ಪರಂಪರಾಗತ ಚಿಕಿತ್ಸಾ ಪದ್ದತಿಯನ್ನು ಮುಂದುವರಿಸುತ್ತಿದ್ದಾರೆ. ಇವರು ಈಗ ಬೆಂಗಳೂರಿನ ಮಲ್ಲತ್ಹಳ್ಳಿಯಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಸುಮಾರು  ಇಪ್ಪತ್ತಕ್ಕಿಂತಲೂ ಹೆಚ್ಚು ಕ್ಯಾನ್ಸರ್ ರೋಗಿಗಳಿಗೆ ಇವರು ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ತಿರುವನಂತಪುರದ ರಾಜೀವ್ ಎಂಬ ರಕ್ತಾರ್ಬುದ ರೋಗಿಗೆ ‘ಏಳು ದಿನಗಳು ಮಾತ್ರ’ ವೆಂದು ವೈದ್ಯರು ವಿಧಿ ಬರೆದಿದ್ದರು. ಕೊನೆಯ ಪ್ರಯತ್ನವೆಂಬಂತೆ ರಾಜೀವ್ರವರು ಡಾ. ಶ್ರೀಹರಿಯ ಬಳಿಗೆ ಬಂದು ಚಿಕಿತ್ಸೆ ಪಡೆದು ಅನಂತರ ಬದುಕಿನತ್ತ ಮರಳಿದ್ದಾರೆ. ರಾಜೀವ್ ಈಗ ರೋಗಮುಕ್ತರಾಗಿ ಸಂಸಾರಸ್ಥರಾಗಿ ದಕ್ಷಿಣ ಆಫ್ರಿಕಾದ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.

ಅದೇ ವಯಸ್ಸಿನ ಮತ್ತೊಬ್ಬ ಹುಡುಗ ಡಾ.ಶ್ರೀಹರಿಯಲ್ಲಿ ಅನುಮಾನದಿಂದಲೇ ಚಿಕಿತ್ಸೆಗೆ ಮೈಯೊಡ್ಡಿದ್ದ. ಈ ಚಿಕಿತ್ಸಾ ಕೇಂದ್ರಕ್ಕೆ ಬಂದಾಗ ಅವನ ಹಿಮೋಗ್ಲೋಬಿನ್ ಸಂಖ್ಯೆ 8 ಇತ್ತು. ಚಿಕಿತ್ಸೆಯ ನಂತರ 11.5 ಕ್ಕೇರಿತು. ಒಂದು ವರ್ಷದ ಚಿಕಿತ್ಸೆಯ ನಂತರ ಅವನು ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ. ಬೆಂಗಳೂರಿಗರಾದ ರಾಜೇಂದ್ರ ಪ್ರಸಾದ್ಗೆ ಹೊರಗೆ ಇಳಿಯಲು ಸಾಧ್ಯವಾಗದಷ್ಟು ದೇಹವಿಡೀ ಸೋರಿಯಾಸಿಸ್ ಬಾದಿಸಿತ್ತು. ಇದರಿಂದ ಅವರ ಮದುವೆ ಕೂಡ ಮುರಿದುಬಿದಿತ್ತು. ಡಾ. ಶ್ರೀಹರಿಯವರ ಚಿಕಿತ್ಸೆಯಿಂದ ಅವರು ಸಂಪೂರ್ಣವಾಗಿ ರೋಗಮುಕ್ತರಾಗಿದ್ದಾರೆ. ಈಗ ಮದುವೆಯಾಗಿ ತುಂಬು ಸಂಸಾರದ ಜೀವನ ನಡೆಸುತ್ತಿದ್ದಾರೆ. ತಮಗೆ ಮರುಜೀವ ಕೊಟ್ಟ ‘ದೇವರು’ ಶ್ರೀಹರಿಯೆಂದು ಅವರು ವೈದ್ಯರನ್ನು ಕೊಂಡಾಡುತ್ತಾರೆ.

ಹಲವಾರು ರೋಗಿಗಳ ವಿವಿಧ ಕಾಯಿಲೆಗಳನ್ನು ಗುಣಪಡಿಸಿದ ಇವರಿಗೆ ವಿದೇಶಿ ರೋಗಿಗಳೂ ಇದ್ದಾರೆ. ಪ್ರಚಾರ ಪ್ರಿಯರಲ್ಲದ ಈ ವೈದ್ಯದಂಪತಿ ಕಡಿಮೆ ವೆಚ್ಚದಲ್ಲಿಯೇ ವಿವಿಧ ರೀತಿಯ ಕ್ಯಾನ್ಸರ್ ರೋಗಿಗಳ ಕಾಯಿಲೆ ವಾಸಿ ಮಾಡಬಲ್ಲರು. ಬಹುಮುಖ್ಯವಾಗಿ ರಕ್ತ ಕ್ಯಾನ್ಸರ್ ಮತ್ತು ಇತರ ಎಲ್ಲಾ ರೀತಿಯ  ಕ್ಯಾನ್ಸರ್ ಕಾಯಿಲೆ ಬಳಲುತ್ತಿರುವವರು ಇವರಿಂದ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ರಕ್ತಾರ್ಬುದ (ಕ್ಯಾನ್ಸರ್) ರೋಗಿಗಳಿಗಲ್ಲದೆ ಬಂಜೆತನ, ಮಹಿಳಾ ಸಮಸ್ಯೆಗಳಿಗೂ ಇವರು ಉತ್ತಮ ಚಿಕಿತ್ಸೆ ನೀಡಬಲ್ಲರು. ಅಲ್ಲದೆ ಗ್ಯಾಸ್ಟ್ರಿಕ್ ಸಮಸ್ಯೆ, ಡಿಸ್ಕ್ ಸಮಸ್ಯೆ, ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು, ಸೈನೋಸೈಟಿಸ್, ಮೈಗ್ರೇನ್, ಸಂಧಿವಾತ, ಅಲರ್ಜಿಗಳಿಗೂ ಇವರು ಚಿಕಿತ್ಸೆ ನೀಡಿ ಗುಣಪಡಿಸಬಲ್ಲರು. ಕಡಿಮೆ ಖರ್ಚಿನಲ್ಲಿ ಉತ್ತಮ ಚಿಕಿತ್ಸೆ ನೀಡುವುದು ಈ ವೈದ್ಯರ ಗುಣ.

ಇವರನ್ನು ಸಂಪರ್ಕಿಸ ಬಯಸುವವರು ಈ ಕೆಳಗಿನ ಸನಿಹವಾಣಿಗೆ ಫೋನಾಯಿಸಬಹುದು.
ಮೊ. : 9446492081 / 8921543327.
ವಿಳಾಸ : ಶಿವಜ್ಯೋತಿ ಆಯುರ್ವೇದ ಕೇಂದ್ರ
268, 6ನೇಯ ಮುಖ್ಯರಸ್ತೆ, ರೈಲ್ವೇಬಡಾವಣೆ, ಮೊದಲಹಂತ,
ಉಲ್ಲಾಳ ಮುಖ್ಯರಸ್ತೆ, ಬೆಂಗಳೂರು – 560 056.
Website : www.sdmayurveda.com

Share this: