Vydyaloka

ಶಾಶ್ವತ ದೃಷ್ಟಿ ನಾಶಕ್ಕೆ ಕಾರಣವಾಗುವ ಡಯಾಬಿಟಿಕ್ ಮ್ಯಾಕುಲೋಪಥಿ

AMD

ಶಾಶ್ವತ ದೃಷ್ಟಿ ನಾಶಕ್ಕೆ ಕಾರಣವಾಗುವ ಡಯಾಬಿಟಿಕ್ ಮ್ಯಾಕುಲೋಪಥಿ ಸಮಸ್ಯೆಗೆ ಚಿಕಿತ್ಸೆ ಬೇಕಾಗುತ್ತದೆ. ಮ್ಯಾಕುಲಾದಲ್ಲಿ (ಮಚ್ಚೆ) ತುಂಬಾ ಪ್ರಮಾಣದ ದ್ರವ ಮತ್ತು ಕೊಬ್ಬು ಸಂಗ್ರಹಗೊಂಡರೆ, ಅದರಿಂದ ಕೇಂದ್ರ ದೃಷ್ಟಿ ಶಾಶ್ವತವಾಗಿ ನಶಿಸಿ ಹೋಗುತ್ತದೆ.

ಡಯಾಬಿಟಿಕ್ ಮ್ಯಾಕುಲೋಪಥಿ ಸಮಸ್ಯೆ ಇದ್ದಾಗ, ಹಾನಿಗೊಂಡ ರಕ್ತ ನಾಳಗಳಿಂದ ಕೊಬ್ಬಿನೊಂದಿಗೆ ಸಮೃದ್ಧವಾಗಿರುವ ದ್ರವ ಮತ್ತು ಕೊಲೆಸ್ಟರಾಲ್ ಸೋರಿಕೆಯಾಗುತ್ತದೆ. ದ್ರವವು ರೆಟಿನಾದ (ಮಾಕ್ಯಲಾ) ಕೇಂದ್ರದ ಬಳಿ ಸಂಗ್ರಹಗೊಂಡರೆ ಮಧ್ಯದ ದೃಷ್ಟಿ ಹದಗೆಡುತ್ತದೆ. ಮಾಕ್ಯುಲಾದಲ್ಲಿ ತುಂಬಾ ದ್ರವ ಮತ್ತು ಕೊಲೆಸ್ಟರಾಲ್ ಶೇಖರಣೆಯಾದರೆ, ಅದರಿಂದ ಕೇಂದ್ರದ ದೃಷ್ಟಿ ಶಾಶ್ವತವಾಗಿ ನಶಿಸಿ ಹೋಗಬಹುದು.

ಕಣ್ಣಿನ ಮ್ಯಾಕುಲರ್ ಸ್ಥಳದಲ್ಲಿ ನೀರು ತುಂಬಿಕೊಳ್ಳುವ ಸಮಸ್ಯೆಗೆ ಸಿಎಸ್‍ಎಂಇ (ಕ್ಲಿನಿಕಲಿ ಸಿಗ್ನಿಫಿಕೆಂಟ್ ಮ್ಯಾಕುಲರ್ ಎಡಿಮಾ) ಎಂದು ಕರೆಯುತ್ತಾರೆ ಸಿಎಸ್‍ಎಂಇ ದೋಷವಿರುವ ಬಹುತೇಕ ರೋಗಿಗಳಿಗೆ ಲೇಸರ್ ಬೇಕಾಗುತ್ತದೆ. ಮ್ಯಾಕುಲಾಗೆ ದ್ರವ ಸೋರಿಕೆಯಾಗುತ್ತಿದ್ದರೆ ಡಯಾಬಿಟಿಕ್ ಮ್ಯಾಕುಲೋಪಥಿ ಸಮಸ್ಯೆಗೆ ಚಿಕಿತ್ಸೆ ಬೇಕಾಗುತ್ತದೆ. ಫ್ಲೂಯೊರಿಸ್‍ಸೀನ್ ಆಂಜಿಯೋಗ್ರಾಮ್ ಮೇಲೆ ರಕ್ತ ನಾಳಗಳಿಂದ ಸೋರಿಕೆಯಾಗುವುದನ್ನು ಗುರುತಿಸುವುದರೊಂದಿಗೆ ಚಿಕಿತ್ಸೆ ಆರಂಭವಾಗುತ್ತದೆ.

ಲೇಸರ್ ಚಿಕಿತ್ಸೆ ತುಂಬಾ ಪರಿಣಾಮಕಾರಿ:

ಸೋರಿಕೆಯಾಗುತ್ತಿರುವ ರಕ್ತ ನಾಳಗಳನ್ನು ಮುಚ್ಚಲು ಲೇಸರ್ ಚಿಕಿತ್ಸೆಯನ್ನು ಅನ್ವಯಿಸಬಹುದು. ಲೇಸರ್ ಬೆಳಕಿನ ತೀವ್ರ ಕಿರಣವಾಗಿದ್ದು, ಪ್ರತಿ ಸೋರಿಕೆ ಮೇಲೆ ಕೇಂದ್ರೀಕರಿಸಲಾಗುತ್ತದೆ. ಲೇಸರ್ ಬೆಳಕು ರಕ್ತಗಳು ಅಥವಾ ಬಣ್ಣದ ದ್ರವ್ಯಗಳ ಮೇಲೆ ಅಪ್ಪಳಿಸಿದಾಗ ಇದು ಉಷ್ಣ ಶಕ್ತಿಯಾಗಿ ಹೀರಿಕೊಂಡು, ಸಣ್ಣ ಸುಟ್ಟಗಾಯ ಮಾಡುತ್ತದೆ. ಮ್ಯಾಕುಲರ್ ಲೇಸರ್ ಚಿಕಿತ್ಸೆಗಳು ಸಾಮಾನ್ಯವಾಗಿ ನೋವು ರಹಿತವಾಗಿರುತ್ತದೆ. ಲೇಸರ್‍ನಿಂದ ಉಂಟಾಗುವ ಸುಡುವಿಕೆಯು ರೆಟಿನಾ ಕೆಳಗೆ ಕಲೆ ಉಂಟು ಮಾಡಲಿದ್ದು, ಇದು ಸಾಮಾನ್ಯವಾಗಿ ರೋಗಿಯ ಗಮನಕ್ಕೆ ಬರುವುದಿಲ್ಲ. ಲೇಸರ್ ಚಿಕಿತ್ಸೆಯ ಪರಿಣಾಮ ನೋಡಲು ಸುಮಾರು ಒಂದು ತಿಂಗಳು ಬೇಕಾಗುತ್ತದೆ (ಎಡಿಮಾ ದೋಷವನ್ನು ಕಡಿಮೆ ಮಾಡಿ ದೃಷ್ಟಿಯನ್ನು ಸುಧಾರಿಸುತ್ತದೆ). ಕೆಲವು ದಿನಗಳ ಒಳಗೆ ಅಥವಾ ಹಲವಾರು ತಿಂಗಳ ದೀರ್ಘ ಕಾಲ ಇದು ಸಂಭವಿಸಿದರೂ ಉತ್ತಮ ಫಲಿತಾಂಶಕ್ಕೆ ಒಂದು ತಿಂಗಳು ಕಾಯಬೇಕಾಗುತ್ತದೆ.

ಮ್ಯಾಕುಲರ್ ಎಡಿಮಾ ದೋಷವಿರುವ ರೋಗಿಗಳಿಗೆ ಆಥವಾ ಶೇ.75ರಷ್ಟು ದೃಷ್ಟಿ ಸ್ಥಿರತೆ ಅಥವಾ ಸುಧಾರಣೆಯಲ್ಲಿ ಲೇಸರ್ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಚಿಕಿತ್ಸೆ ಪಡೆದ ನಂತರವೂ ರೋಗಿಗಳಲ್ಲಿ ಶೇ.25ರಷ್ಟು ಮಂದಿ ಮತ್ತೆ ಸೋರಿಕೆ ಸಂಭವಿಸುವುದರಿಂದ ದೃಷ್ಟಿಯನ್ನು ಕಳೆದುಕೊಂಡ ಪರಿಸ್ಥಿತಿಯಲ್ಲೇ ಮುಂದುವರೆಯುತ್ತಾರೆ. ಚಿಕಿತ್ಸೆ ನಂತರ ರಕ್ತ ನಾಳಗಳು ಮತ್ತೆ ಸೋರಿಕೆಯಾಗುವುದನ್ನು ಕಡಿಮೆ ಮಾಡಲು ಮಧುಮೇಹ ಹಾಗೂ ರಕ್ತದೊತ್ತಡವನ್ನು ನಿಯಂತ್ರಣ ಮಾಡಬೇಕಾದುದು ಮುಖ್ಯ. ಅಸಾಧಾರಣ ರಕ್ತ ನಾಳಗಳನ್ನು ಮುಚ್ಚಿದ ನಂತರ ದ್ರವ ಒಣಗಲು ಒಮ್ಮೊಮ್ಮೆ 2 ರಿಂದ 3 ತಿಂಗಳುಗಳು ಬೇಕಾಗುತ್ತದೆ. ದೃಷ್ಟಿ ಮರಳುವಿಕೆಯು ನಿಧಾನ ಮತ್ತು ಕಾಲ ಕ್ರಮೇಣದ ಪ್ರಕ್ರಿಯೆಯಾಗಿರುತ್ತದೆ. ದ್ರವ ಹಾಗೆಯೇ ಉಳಿದಿದ್ದರೆ, ರಕ್ತ ನಾಳಗಳು ಈಗಲೂ ಸೋರುತ್ತಿರುವ ಜಾಗವನ್ನು ಪತ್ತೆ ಮಾಡಲು ಪುನ: ಫ್ಲೂಯೊರಿಸ್‍ಸೀನ್ ಆಂಜಿಯೋಗ್ರಾಮ್ ಮಾಡಬೇಕಾಗುತ್ತದೆ ಹಾಗೂ ಲೇಸರ್ ಚಿಕಿತ್ಸೆಯನ್ನು ಪುನರಾವರ್ತಿಸಬೇಕಾಗುತ್ತದೆ.

ರೆಟಿನಾದಲ್ಲಿನ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಸೋರಿಕೆಯಿಂದಾಗಿ ಫೋಕಲ್ ಮ್ಯಾಕುಲರ್ ಎಡಿಮಾದಲ್ಲಿ ಊತ ಕಂಡು ಬರುತ್ತದೆ. ಸಾಮಾನ್ಯವಾಗಿ ರೆಟಿನಾದಲ್ಲಿ ಮೈಕ್ರೋಅನ್ಯೂರಿಸೆಮ್ಸ್ ಅಥವಾ ತಿಳಿಯಾದ ರೆಟಿನಾ ರಕ್ತ ನಾಳದಲ್ಲಿ ಸೋರಿಕೆ ಉಂಟಾಗುತ್ತದೆ. ಸೋರಿಕೆಯನ್ನು ತಡೆಗಟ್ಟಲು ಹಾಗೂ ಫೋಕಲ್ ಮ್ಯಾಕುಲರ್ ಎಡಿಮಾಗೆ ಚಿಕಿತ್ಸೆ ನೀಡಲು ಪ್ರತಿ ಮೈಕ್ರೋಅನ್ಯೂರಿಸೆಮ್ಸ್ ಅಥವಾ ಸೋರಿಕೆಯಾಗುತ್ತಿರುವ ರಕ್ತನಾಳಗಳನ್ನು ಹೆಪ್ಪುಗಟ್ಟಿಸಲಾಗುತ್ತದೆ. ಬಿಳಿ ಬಣ್ಣಕ್ಕೆ ತಿರುಗಿಸಲು ಅಥವಾ ಹೆಪ್ಪುಗಟ್ಟಿಸಲು (ಫೋಕಲ್ ಲೇಸರ್) ಸಮರ್ಪಕ ಶಕ್ತಿಯೊಂದಿಗೆ ಮೈಕ್ರೋಅನ್ಯೂರಿಸೆಮ್ಸ್‍ಗೆ ಲೇಸರ್‍ನ ಎ50-100 ಮೈಕ್ರಾನ್ ಸ್ಪಾಟ್ ಅನ್ವಯಿಸಲಾಗುತ್ತದೆ.

ಬಹು ರೆಟಿನಾ ರಕ್ತ ನಾಳಗಳಿಂದ ಹಾಗೂ ರೆಟಿನಾ ಕೆಳಗಿನ ಬಣ್ಣ ದ್ರವ್ಯ ಕೋಶಗಳಿಂದ ಸೋರಿಕೆಯಾಗಿ ಡಿಫ್ಯೂಸ್ ಮ್ಯಾಕುಲರ್ ಎಡಿಮಾ ಉಂಟಾಗುತ್ತದೆ. ಡಿಫ್ಯೂಸ್ ಎಡಿಮಾ ಪ್ರಕರಣದಲ್ಲಿ ಸೋರಿಕೆಯಾಗುತ್ತಿರುವ ಎಲ್ಲ ಸ್ಥಳಗಳಿಗೂ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ಬದಲಿಗೆ ಮ್ಯಾಕುಲದ ಕೇಂದ್ರದ ಸುತ್ತ ಲೇಸರ್‍ನ ಗ್ರಿಡ್ ವಿಧಾನದ ಸ್ಪಾಟ್‍ಗಳನ್ನು ಇರಿಸಲಾಗುತ್ತದೆ. ಗ್ರಿಡ್ ಲೇಸರ್ ಚಿಕಿತ್ಸೆ ಕಾರ್ಯ ನಿರ್ವಹಿಸುವ ವಿಧಾನ ತಿಳಿದು ಬಂದಿಲ್ಲ. ಆದರೆ, ಅಸಾಧಾರಣ ಬಣ್ಣದ ದ್ರವ್ಯಗಳ ಕೋಶಗಳನ್ನು ನಾಶ ಮಾಡುವಲ್ಲಿ ಹಾಗೂ ಹೆಚ್ಚು ಸಾಮಾನ್ಯ ಕೋಶಗಳು ಆವುಗಳ ಬದಲಿಗೆ ಅಲ್ಲಿ ಮರುಸ್ಥಾಪನೆಯಾಗುವಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತದೆ. ಲೇಸರ್ ಚಿಕಿತ್ಸೆಯೊಂದಿಗೆ ಮಾಕ್ಯುಲರ್ ಎಡಿಮಾ ಕಡಿಮೆಯಾಗದಿದ್ದ ಪ್ರಕರಣದಲ್ಲಿ ಕಣ್ಣಿಗೆ ಉದ್ದೀಪನ ಚುಚ್ಚುಮದ್ದುಗಳನ್ನು ನೀಡಲಾಗುತ್ತದೆ. ಇದು ನಾಳಗಳ ಸೋರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಕೆಲವು ರೋಗಿಗಳಿಗೆ ಮಾಕ್ಯುಲಾದ ವಿಟ್ರಿಯೋಸ್ ಪ್ರದೇಶದಲ್ಲಿ ಅಸಾಮಾನ್ಯ ಜೋಡಣೆ ಇರುವುದಿಲ್ಲ. ಇದು ರೆಟಿನಾ ಮೇಲೆ ಎಳೆಯಲು ಕಾರಣವಾಗುತ್ತದೆ. ಇದರಿಂದ ಮಾಕ್ಯುಲರ್ ಟ್ರ್ಯಾಕ್ಷನ್ ಮತ್ತು ಎಡಿಮಾ ಸಮಸ್ಯೆಗೆ ಕಾರಣವಾಗುತ್ತದೆ. ಇಂಥ ಪ್ರಕರಣಗಳಲ್ಲಿ ವಿಟ್ರೆಕ್ಟೋಮಿ ಎಂದು ಕರೆಯಲ್ಪಡುವ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಇದರಲ್ಲಿ ವಿಟ್ರಿಯೋಸ್ ಭಾಗವನ್ನು ತೆಗೆದು ಹಾಕಲಾಗುತ್ತದೆ. ವಿಟ್ರಿಯೋಸ್‍ನ ಟೊಳ್ಳು ಭಾಗವನ್ನು ಸ್ವಚ್ಚವಾದ ದ್ರವ, ಅನಿಲ ಗುಳ್ಳೆ ಅಥವಾ ಇತರ ವಿಟ್ರಿಯೋಸ್ ಪರ್ಯಾಯ ವಸ್ತುಗಳಿಂದ ತುಂಬಲಾಗುತ್ತದೆ. ದೃಷ್ಟಿ ಸುಧಾರಣೆ ನಿಧಾನವಾಗಲಿದ್ದು ಆರು ತಿಂಗಳು ಬೇಕಾಗಬಹುದು. ನಿಮ್ಮ ಕಣ್ಣನ್ನು ರಕ್ಷಿಸಲು ಕೆಲವು ದಿನಗಳ ಕಾಲ ನೇತ್ರ ಪಟ್ಟಿಯನ್ನು ಧರಿಸಬೇಕಾಗುತ್ತದೆ. ಸೋಂಕು ವಿರುದ್ಧ ರಕ್ಷಣೆ ಪಡೆಯಲು ಔಷಧಯುಕ್ತ ಐ ಡ್ರಾಪ್ಸ್‍ಗಳನ್ನು ಸಹ  ಬಳಸಬೇಕಾಗುತ್ತದೆ.

Also Read: ಮಧುಮೇಹ – ಭಾರೀ ಗಂಡಾಂತರ ಎಂದರೆ ದೃಷ್ಟಿ ಹಾನಿ

ಡಾ. ಕೆ.ಭುಜಂಗ ಶೆಟ್ಟಿ
ವ್ಯವಸ್ಥಾಪಕ ನಿರ್ದೇಶಕರು, ನಾರಾಯಣ ನೇತ್ರಾಲಯ
121/ಸಿ, ಪಶ್ಚಿಮ ಕಾರ್ಡ್‍ರಸ್ತೆ, ರಾಜಾಜೀನಗರ ಆರ್ ಬ್ಲಾಕ್, ಬೆಂಗಳೂರು-10, ದೂ: 080-23373311/66121300
Email : info@narayananethralaya.com ; info@nnmail.org

Website : www.narayananethralaya.org

Share this: