Vydyaloka

ಸಾಂಪ್ರದಾಯಿಕ ಪೌಷ್ಟಿಕ ಆಹಾರ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಸಾಂಪ್ರದಾಯಿಕ ಪೌಷ್ಟಿಕ ಆಹಾರ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ.ಈಗಿನ ಆಹಾರಗಳಲ್ಲಿ  ಪೌಷ್ಟಿಕ ಅಂಶವು ಕಮ್ಮಿಯಾಗಿರುತ್ತದೆ.ನೈಸರ್ಗಿಕ ಆಹಾರ  ಸೇವಿಸುವುದರಿಂದ ನಾವು ನಮ್ಮ ಪೌಷ್ಟಿಕತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. 

ಸಾಂಪ್ರದಾಯಿಕ ಪೌಷ್ಟಿಕ ಆಹಾರ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿನಾವು ಯಾವಾಗಲೂ ಪೌಷ್ಟಿಕತೆಯ ಬಗ್ಗೆ ಕೇಳುತ್ತಿರುತ್ತೇವೆ. ನಾವು ಪೌಷ್ಟಿಕವಾಗಿದ್ದರೆ ನಮ್ಮ ದೇಹದ/ಒಳಗಿನ ಅಂಗಗಳು ಸರಿಯಾಗಿ ಚಲನೆ ಮಾಡುತ್ತವೆ. ಇಳಿ ವಯಸ್ಸಿನಲ್ಲಿರುವವರು  ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಕಾಲವು ಕಳೆದಂತೆ ವಯಸ್ಸಾದಾಗ ನಾವು ಪೌಷ್ಟಿಕತೆಯನ್ನು ಪಡೆಯಲು ಕಷ್ಟವಾಗುತ್ತದೆ.  ಪೌಷ್ಟಿಕವಾಗಿರಲು ಏನು ತಿನ್ನುವುದು ಏನನ್ನು ತಿನ್ನಬಾರದು ಎನ್ನುವುದನ್ನು ನಾವು ಗಮನದಲ್ಲಿಡಬೇಕು. ವಿಜ್ನಾನ ಮತ್ತು ಆರೋಗ್ಯದ ಬಗ್ಗೆ ಸಂಶೋಧಿಸಿದಾಗ ಕಾಣಬರುವುದೇನೆಂದರೇ ಈಗಿನ ಆಹಾರಗಳಲ್ಲಿ  ಪೌಷ್ಟಿಕ ಅಂಶವು ಕಮ್ಮಿಯಾಗಿರುತ್ತದೆ. ಆದರೆ ನಮ್ಮ ಪೂರ್ವಜರು  ಗಿಡಗಳು ಹಾಗೂ ಮೂಲಿಕೆಗಳ ಆರೋಗ್ಯಕರವಾದ ಆಹಾರ ಸ್ವೀಕರಿಸುತ್ತಿದ್ದರು, ಹೆಚ್ಚು ಬಲಿಷ್ಟರಾಗಿದ್ದರು. ಅಂತೆಯೇ ಅತೀ ಹೆಚ್ಚು ಪೌಷ್ಟಿಕತೆಯನ್ನು ಹೊಂದಿದ್ದರು.

1. ಜೇನುತುಪ್ಪ: ಜೇನುತುಪ್ಪ ಉತ್ಕರ್ಷದ ನಿರೋಧಕ ಹಾಗೂ ಜೀವವಿರೋಧಿ ಕೆಲಸಗಳಿಗೆ ತುಂಬಾ ಶಕ್ತಿಯುತವಾಗಿದೆ. ಹಾಗೂ ಇದನ್ನು ಸೇವಿಸುವುದರೊಂದಿಗೆ ನಮ್ಮ ಪೌಷ್ಟಿಕತೆಯೂ ಬಲವಾಗುತ್ತದೆ. ಜೇನುತುಪ್ಪದಲ್ಲಿ ಕಾರ್ಬೋ ಹೈಡ್ರೇಟ್ ಹಾಗೂ ಮಾನೋಸ್ಕರೈಡ್ ಹೆಚ್ಚಾಗಿರುತ್ತದೆ.
2.ಬೆಳ್ಳುಳ್ಳಿ: ಇದರಲ್ಲಿ ವಿಟಮಿನ್ ’ಸಿ’ ಬಿ’ ಹಾಗೂ ಬಿ೨ ಮಿನರಲ್ ಇರುತ್ತವೆ. ಬೆಳ್ಳುಳ್ಳಿ ಕೇವಲ ಆಹಾರಗಳಿಗೆ ರುಚಿ ಕೊಡುವ ಸಾಮಾಗ್ರಿಯಲ್ಲದೇ ನಮ್ಮ ದೇಹಕ್ಕೆ ಬೇಕಾಗಿರುವ ಪೌಷ್ಟಿಕತೆಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಆಂಟಿ ಸೆಫ್ಟಿಕ್, ನ್ಯೂಟ್ರಿಷನ್ ಪವರ್ ಇರುತ್ತದೆ. ಬೆಳ್ಳುಳ್ಳಿಯಲ್ಲಿ ಸೆಲ್ಫರ್ ಕಾಂಪೌಂಡ್ ಯಾಲಿಸಿನ್ ಇರುತ್ತದೆ.
3. ಹರಿಶಿನ: ಇದನ್ನು ಭಾರತದ ಚಿನ್ನದ ದ್ರವವೆಂದು ಕರೆಯುತ್ತಾರೆ. ಇದನ್ನು ಹಲವಾರು ವರ್ಷಗಳಿಂದಲೂ ಚರ್ಮದ ಒಳ್ಳೆಯ ಆರೋಗ್ಯಕ್ಕೆ ಉಪಯೋಗಿಸುತ್ತಿದ್ದಾರೆ. ಹರಿಶಿನವನ್ನು ನಾವು ಅಹಾರದಲ್ಲಿ ಸ್ವೀಕರಿಸುವುದರಿಂದ ಕೇವಲ ಚರ್ಮವಲ್ಲದೇ ದೇಹದ ಒಳಗಿರುವ ಅಂಗಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವುದರಲ್ಲಿಯೂ ಶಕ್ತಿಯುತವಾಗಿದೆ.
4. ಎಲೆಕೋಸು: ಡೈಯೆಟ್ ತರಕಾರಿಯೆಂದೇ ಕರೆಯಲ್ಪಡುವ ಈ ಸಾಮಾಗ್ರಿಯನ್ನು ಯುರೋಪ್ ಹಾಗೂ ಏಷಿಯನ್ ದೇಶಗಳಲ್ಲಿ ಅತೀ ಹೆಚ್ಚಾಗಿ ಉಪಯೋಗಿಸುತ್ತಾರೆ. ಇದನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಕಿಣ್ವಗಳು ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಅಂತೆಯೇ ನಮ್ಮ ದೇಹದಲ್ಲಿರುವ ಕೋಶಗಳಿಗೆ ಯಾವುದೇ ಅಪಾಯವಾಗದಂತೆ ತಡೆಯುತ್ತದೆ. ಅತೀ ಮುಖ್ಯವಾಗಿ ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ. ಈ ಎಲ್ಲಾ ಕಾರ್ಯಗಳಿಗೆ ಉಪಯೋಗವಾಗುವ ಎಲೆಕೋಸು ನಮ್ಮ ದೇಹದ ಪೌಷ್ಟಿಕತೆಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಆಂಟಿಯೋರ್ಸ್ ಡೆಂಟ್, ಚೋಲಿನ್, ಬೀಟೆ-ಕ್ಯಾರೊಟಿನ್ ಲ್ಯೂಟಿನ್, ಜ್ಯೆಯಕ್ಸಿಕೀನ್, ಪ್ಲೂವೊನೋಡಿಸ್, ಕ್ವಾರ್ ಸಿಟಿನ್ ಇವುಗಳನ್ನು ಕಾಣಬಹುದು.
5. ಪ್ರೋಬಯೋಟಿಕ್ಸ್ : ನಮ್ಮ ದೇಹದಲ್ಲಿ ಅತೀ ಹೆಚ್ಚಿನ ವಾಸ್ತವವಾಗಿರ ಬೇಕಿರುವುದು ಪ್ರೋಬಯೋಟಿಕ್ಸ್ . ಇದು ನಮ್ಮ ಕರುಳು ಶುದ್ಧವಾಗಿರುವಂತೆ ಮಾಡುವ ಕಾರ್ಯ ನಿರ್ವಹಿಸುತ್ತದೆ. ನಾವು ಯಾವಾಗಲೂ ನಮ್ಮ ಕರುಳು ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು ನಾವು ಪ್ರೋಬಯೋಟಿಕ್ಸ್ ಮಿಶ್ರಿತವಾಗಿರುವ ಆಹಾರವನ್ನು ಸ್ವೀಕರಿಸಬೇಕು. ಯೋಗರ್ಟ್ ಕೂಡ ನಮ್ಮ ಕರುಳು ಶುದ್ಧವಾಗಿರುವಂತೆ ಮಾಡುತ್ತದೆ.ಪ್ರೋಬಯೋಟಿಕ್ಸ್  ನಮ್ಮ ಪೌಷ್ಟಿಕವನ್ನು ಹೆಚ್ಚಿಸುತ್ತದೆ. ಅಂತೆಯೇ ಹಲವಾರು ರೋಗಗಳ ವಿರುದ್ಧವೂ ಕಾಪಾಡುತ್ತದೆ.
6. ಇದೆಲ್ಲಕಿಂತಲೂ ಮೇಲಾಗಿ ಮಾಂಸ, ಮೊಟ್ಟೆ, ಡ್ರೈಫ್ರೂಟ್ಸ್, ಹಾಲಿನ ಪದಾರ್ಥಗಳು, ಗೋಧಿ, ರಾಗಿ ಈ ರೀತಿಯ ನೈಸರ್ಗಿಕ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದಲೂ ನಾವು ನಮ್ಮ ಪೌಷ್ಟಿಕತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಈ ಸಾಮಾಗ್ರಿಗಳಲ್ಲಿ ಝಿಂಕ್ ಅತೀ ಹೆಚ್ಚಾಗಿರುತ್ತದೆ. ತೆಂಗಿನ ನೀರು (ಏಳನೀರು) ಹಾಗೂ ತೆಂಗಿನಕಾಯಿ ಯಿಂದ ತಯಾರಿಸಿದ ಅಹಾರವನ್ನು ಹಾಗೂ ಝಿಂಕ್ ಇರುವ ಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ ನಮ್ಮ ಆರೋಗ್ಯ ಹಾಗೂ ನಮ್ಮ ಪೌಷ್ಟಿಕ ಜೀವನವು ಸಮೃದ್ಧಿಯಾಗಿರುತ್ತದೆ.

ಶಾಹೀನ್ ಮಜೀದ್
ಪ್ರೆಸಿಡೆಂಟ್ ವರ್ಲ್ಡ್ ವೈಡ್- ಸಬಿನ್ಸಾ

Share this: