ರಷ್ಯಾದ ಕೊರೋನಾ ಲಸಿಕೆ ಇನ್ನು ಭಾರತದಲ್ಲೂ ಲಭ್ಯ.! ಕೊರೋನಾಗೆ ಕಂಡು ಹಿಡಿದ ಪ್ರಥಮ ಲಸಿಕೆ ಎಂದೇ ಹೇಳಲ್ಪಡುತ್ತಿರುವ ರಷ್ಯಾದ ಸ್ಪುಟ್ನಿಕ್-ಲಸಿಕೆಯ ಡೋಸ್‍ಗಳನ್ನು ಕಳುಹಿಸಿಕೊಡಲು ಆ ದೇಶವು ಮುಂದಾಗಿದೆ.
ಭಾರತದಲ್ಲಿ ಲಸಿಕೆಯ ಮೂರನೇ ಮತ್ತು ಕೊನೆಯ ಹಂತದ ಮಾನವ ಪ್ರಯೋಗವನ್ನು ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ನಡೆಸಲಿದೆ. ಆರ್.ಡಿ.ಐ.ಎಫ್ ಪ್ರಕಾರ 10 ಕೋಟಿ ಲಸಿಕೆಯ ಪೂರೈಕೆಯು ಈ ವರ್ಷದ ಕೊನೆಯಲ್ಲಿ ಆರಂಭವಾಗಬಹುದು. ಇದು ಮಾನವ ಪ್ರಯೋಗ ಮತ್ತು ನೋಂದಣಿ ಮೇಲೆ ಅವಲಂಬಿತವಾಗಿದ್ದು, ಎಷ್ಟುಬೇಗ ಮಾನವ ಪ್ರಯೋಗ ಮುಗಿದು ಭಾರತದ ಔಷಧ ನಿಯಂತ್ರಣ ಪ್ರಾಧಿಕಾರದಿಂದ ಅನುಮತಿ ಸಿಗುತ್ತೋ ಅಷ್ಟು ಬೇಗ ಲಸಿಕೆಯ ಪೂರೈಕೆ ಪ್ರಾರಂಭವಾಗಲಿದೆ. ಭಾರತಕ್ಕೆ 10 ಕೋಟಿ ಲಸಿಕೆ ಪೂರೈಕೆಯಾಗುವುದರ ಕುರಿತು ಮಾತನಾಡಿದ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್‍ನ ಸಹಾಧ್ಯಕ್ಷ ಜಿ.ವಿ. ಪ್ರಸಾದ್, ‘ಮೊದಲೆರಡು ಹಂತದ ಮಾನವ ಪ್ರಯೋಗದಲ್ಲಿ ರಷ್ಯಾ ಲಸಿಕೆ ಭರವಸೆ ಮೂಡಿಸಿದೆ. ಈ ಲಸಿಕೆಯು ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಸಹಕಾರಿಯಾಗಲಿದೆ’ ಅಂತ ಹೇಳಿದ್ದಾರೆ.
ಇನ್ನೊಂದು ವಿಚಾರವೇನೆಂದರೆ ನಮ್ಮದೇಶದಲ್ಲಿ ರಷ್ಯಾ ಲಸಿಕೆಗೆ ಎಷ್ಟು ಬೆಲೆ ನಿಗದಿಪಡಿಸಲಾಗುತ್ತೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇದನ್ನು ಲಾಭದ ಉದ್ದೇಶಕ್ಕೆ ನೀಡುತ್ತಿಲ್ಲ, ಲಸಿಕೆ ತಯಾರಿಸಲು ಖರ್ಚಾಗಿರುವ ಹಣ ಸಿಕ್ಕರೆ ಸಾಕು ಎಂದು Russian Direct Investment Fund (DIF) ಹೇಳಿಕೊಂಡಿದೆ. ಬ್ರೆಜಿಲ್, ಮೆಕ್ಸಿಕೊ, ಖಜಕಿಸ್ತಾನ್ ಮತ್ತು ಸೌದಿ ಅರೇಬಿಯಾ ಮುಂತಾದ ದೇಶಗಳೊಂದಿಗೆ ಆರ್.ಡಿ.ಐ.ಎಫ್. ಈಗಾಗಲೇ ಲಸಿಕೆ ಪೂರೈಕೆಯ ಒಪ್ಪಂದ ಮಾಡಿಕೊಂಡಿದೆ. ಇದೀಗ ಭಾರತದ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಜೊತೆಗೂ ಒಪ್ಪಂದ ಮಾಡಿಕೊಂಡಿದೆ.
ಆಕ್ಸ್‌ಫರ್ಡ್ ಲಸಿಕೆ ಮಾನವ ಪ್ರಯೋಗಕ್ಕೂ ಗ್ರೀನ್ ಸಿಗ್ನಲ್
ಬ್ರಿಟನ್‍ನಲ್ಲಿ ಈ ಲಸಿಕೆ ಮಾನವ ಪ್ರಯೋಗದ ವೇಳೆ ಸ್ವಯಂ ಸೇವಕರಲ್ಲಿ ಗಂಭೀರ ಸ್ವರೂಪದ ಅಡ್ಡ ಪರಿಣಾಮ ಕಾಣಿಸಿಕೊಂಡಿತ್ತು. ಹಾಗಾಗಿ ಅದರ ಮಾನವ ಪ್ರಯೋಗವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಆದರೆ ಅಮೇರಿಕದಲ್ಲಿ ಸ್ಥಗಿತಗೊಂಡ ಮಾನವ ಪ್ರಯೋಗ ಇನ್ನೂ ಆರಂಭಗೊಂಡಿಲ್ಲ. ಬ್ರಿಟನ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸಹಾ ಇದೀಗ ಮಾನವ ಪ್ರಯೋಗಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.