Vydyaloka

ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಿ ಕೋವಿಡ್-19 ತಡೆಯಿರಿ

ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಿ ನಾವು ನಮ್ಮಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಅಂತೆಯೇ ಕೋವಿಡ್-19  ಸೊಂಕಿನಿಂದ ಪಾರಾಗಬಹುದಾಗಿದೆ. 

ಕೋವಿಡ್- 19 ತನ್ನ ಗ್ರಹಣಾಂಗಗಳನ್ನು ಅಪಾಯಕಾರಿಯಾಗಿ ಹರಡಿದೆ ಮತ್ತು ಅದನ್ನು ಎದುರಿಸಲು ಇಲ್ಲಿಯವರೆಗೆ ಯಾವುದೇ ಔಷಧಿಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಸ್ವಯಂ ಪ್ರತ್ಯೇಕತೆಯಿಂದ ಹಾಗೂ ಸಂಪರ್ಕ ತಡೆಯಿಂದ ಈ ವ್ವೆರಸ್ ಎದುರಿಸಲು ಸಾಧ್ಯವಾಗುತ್ತದೆ. ವಯಸ್ಸಾದವರು ಮತ್ತು ಮೊದಲೇ ವೈರಸ್ಸಿಗೆ ತುತ್ತಾದವರ ಬಳಿಯಲ್ಲಿ ಹಾಗೂ ನಮ್ಮ ಬಳಿಯಲ್ಲಿಯೂ ಕೂಡ ರೋಗ ನಿರೋಧಕ ಶಕ್ತಿ ಕಡಿಮೆ ಇರುವಕಾರಣ, ಹಲವಾರು ಮಂದಿ ಈ ಕೋವಿಡ್– 19 ಗೆ ತುತ್ತಾಗುವ ಸಾಧ್ಯತೆ ಇದೆ. ಈ ಸೋಂಕಿನ ವಿರುದ್ಧ ಹೋರಾಡಲು ಹಾಗೂ  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮನೆಯಲ್ಲಿರುವ ಅಹಾರವನ್ನು ಆಂತರಿಕವಾಗಿ ನೋಡುವ ಸಮಯ ಬಂದಿದೆ.
ಕೆಲವು ಗಿಡ ಮೂಲಿಕೆಗಳು ಹಾಗೂ ವಿಟಮಿನ್“ಸಿ” ಮತ್ತು“ ಇ”ಇರುವ ಪದಾರ್ಥಗಳನ್ನು ಸೇವಿಸುವುದರ ಮೂಲಕ ರೋಗ ನಿರೋಧಕ ಶಕಿಯನ್ನು ಹೆಚ್ಚಿಸಬಹುದೆಂದು ಸಮಯ ಹಾಗೂ ಸಂಶೋಧನೆಗಳ ಮುಖಾಂತರ ಸಾಭೀತಾಗಿದೆ. ಅತ್ಯುತ್ತಮವಾದ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಕೆಲವು, “ದೈನಂದಿನ” ಆಹಾರ ಸೇವಿಸಿದರೆ ನಮ್ಮ ದೇಹದಲ್ಲಿರುವ ರೋಗನಿರೋಧಕಶಕ್ತಿ ಹೆಚ್ಚುವುದರಿಂದ ನಾವು ನಮ್ಮಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಅಂತೆಯೇ ಈ ಸೊಂಕಿನಿಂದ ಪಾರಾಗಬಹುದಾಗಿದೆ.

ಈ ಸೋಂಕಿನ ಸಮಯದಲ್ಲಿ ಹೊರಗಡೆ ಇರುವುದರಿಂದ ಹಾಗೂ ಹೋಗುವುದರಿಂದ ನೀವು ಈ ರೋಗಕ್ಕೆ ತುತ್ತಾಗಬಹುದು. ಮನೆಯಲ್ಲೇ ಇದ್ದು ಈ ಮೇಲಿನ ಆಹಾರಗಳನ್ನು ಸೇವಿಸಿ ಹಾಗೂ ಕೆಲಕಾಲ ವ್ಯಾಯಾಮ, ಧ್ಯಾನ ಮಾಡುವುದರಿಂದ ಮನೆಯಲ್ಲಿಯೇ ಲಾಕ್‍ಡೌನ್ ಅಡಿಯಲ್ಲಿರುವ ನಿಮ್ಮ ಮನಸ್ಸು, ದೇಹ ಹಾಗೂ ಆತ್ಮದ ಮೇಲೆ ಯಾವುದೇ ಒತ್ತಡ ಬಾರದಂತೆ ತಡೆಯಬಹುದಾಗಿದೆ.

-ಡಾ. ಅಂಜು ಮಜೀದ್
ಸಮಿ ಸಬಿನ್ಸಾ(ನೇರ)ಸಮೂಹದ ನಿರ್ದೇಶಕರು ಮತ್ತು ಹಿರಿಯ ವಿಜ್ಞಾನಿ

Share this: