Vydyaloka

ರೋಗ ನಿವಾರಕ ತುಳಸಿ

ರೋಗ ನಿವಾರಕ ತುಳಸಿ ಕೋವಿಡ್ 19 ಸಮಯದಲ್ಲಿ ಗಿಡಮೂಲಿಕೆಗಳಲ್ಲಿ ಬಹಳ ಪ್ರಯೋಜನಕಾರಿ ಸಸ್ಯವಾಗಿದೆ. ದೇಹವನ್ನು ಆರೋಗ್ಯಕರವಾಗಿಡಲು, ಸೋಂಕುಗಳನ್ನು ತಡೆಗಟ್ಟುವಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ. ಉತ್ತಮ ಆರೋಗ್ಯ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.

ತುಳಸಿ-ಗಿಡಮೂಲಿಕೆಗಳ ರಾಣಿ. ಇದು ಹೆಚ್ಚಿನ ಪೌಷ್ಠಿಕಾಂಶವನ್ನು ಹೊಂದಿದೆ ಮತ್ತು ದೇಹವನ್ನು ಆರೋಗ್ಯಕರವಾಗಿಡಲು, ಸೋಂಕುಗಳನ್ನು ತಡೆಗಟ್ಟುವಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ. ಉತ್ತಮ ಆರೋಗ್ಯ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ದೇವಾಲಯಗಳು, ಪೂಜೆಗಳು ಮತ್ತು ಆಚರಣೆಗಳಲ್ಲಿ ಪವಿತ್ರ ಹೂವಾಗಿ ಬಳಸುವುದರ ಹೊರತಾಗಿ, ತುಳಸಿಯನ್ನು ಮುಖ್ಯವಾಗಿ ಆಯುರ್ವೇದ  ಔಷಧಿಗಳಲ್ಲಿ ಬಳಸಲಾಗುತ್ತದೆ.

ತುಳಸಿಯ ಪ್ರಾಮುಖ್ಯತೆಯ ಕುರಿತು ಆಯುರ್ವೇದ ಮಹಾಗ್ರಂಥಗಳಾದ ಚರಕಸಂಹಿತೆ, ಸುಶ್ರುತ ಸಂಹಿತೆಗಳಲ್ಲಿ ಸಾಕಷ್ಟು ವಿವರಗಳು ಇವೆ. ಮನೆಯಂಗಳದಲ್ಲಿ ನಳನಳಿಸುವ ತುಳಸಿ ಗಿಡಗಳು ಇರಬೇಕು. ಅದರ ಗಾಳಿ ಸೇವನೆಯಿಂದ ವೈಮನಸ್ಸು ಆಹ್ಲಾದಕರವಾಗುವದು ಎಂದು ಆರೋಗ್ಯ ತಜ್ಞರ ಅಭಿಪ್ರಾಯ.

ಕೋವಿಡ್ 19 ಸಮಯದಲ್ಲಿ ತುಳಸಿ ಗಿಡಮೂಲಿಕೆಗಳಲ್ಲಿ ಬಹಳ ಪ್ರಯೋಜನಕಾರಿ ಸಸ್ಯವಾಗಿದೆ. ಉಸಿರಾಟದ ವ್ಯವಸ್ಥೆಯನ್ನು ಹಿತಗೊಳಿಸುವಲ್ಲಿ ತುಳಸಿ ಮತ್ತು ಶುಂಠಿಯ ಪ್ರಯೋಜನಗಳು ಬಹಳ ಸಹಾಯಕವಾಗಿವೆ.ಇದು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಶೀತ ಮತ್ತು ಕೆಮ್ಮು, ಜ್ವರವನ್ನು ನಿವಾರಿಸಲು ಸಹಾಯ ಮಾಡುತ್ತದೆ.

1. ತುಳಸಿ ರಸ, ಶುಂಠಿ ರಸ, ವೀಳ್ಯದೆಲೆ ರಸ ಮತ್ತು ಪುದೀನ ಸೊಪ್ಪಿನ ರಸವನ್ನು ಸಮ ಪ್ರಮಾಣದಲ್ಲಿ ಒಂದು ಚಮಚ ಜೇನುತುಪ್ಪದೊಂದಿಗೆ ಸೇವಿಸಿದರೆ ಕೆಮ್ಮು ಗುಣವಾಗುತ್ತದೆ.

2. ಕಠಿಣವಾದ ಕೆಮ್ಮಿಗೆ ನಾಲ್ಕಾರು ಕೃಷ್ಣ ತುಳಸಿ, ಒಂದು ವೀಳ್ಯದೆಲೆ, ಒಂದು ಲವಂಗ, ಒಂದು ಚೂರು ಪಚ್ಚ ಕರ್ಪೂರ ಅಗೆದು ರಸ ನುಂಗಬೇಕು. ಎರಡು ದಿನಗಳ ಕಾಲ ದಿನಕ್ಕೆ ಮೂರು ಬಾರಿ ಸೇವಿಸಬೇಕು.

3. ಎರಡು ಚಮಚ ತುಳಸಿ ರಸ, ಒಂದು ಚಮಚ ನಿಂಬೆರಸ, ಒಂದು ಚಮಚ ಈರುಳ್ಳಿ ರಸಗಳನ್ನು ಹತ್ತು ನಿಮಿಷಗಳ ಕಾಲ ಚರ್ಮದ ಮೇಲೆ ಲೇಪಿಸಿ. ಒಂದು ಘಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಶುಭ್ರವಾಗಿ ತೊಳೆಯಿರಿ. ಒಂದು ತಿಂಗಳ ಕಾಲ ಚಿಕಿತ್ಸೆ ಮುಂದುವರೆಸಿದರೆ ಚರ್ಮರೋಗ ನಿವಾರಣೆಯಾಗುವುದು.

4. ಮೂರು ಚಮಚ ತುಳಸಿ ರಸವನ್ನು ಕಾಲು ಕಪ್ ಹಾಲಿನಲ್ಲಿ ಬೆರೆಸಿ ಹದಿನೈದು ದಿನಗಳ ಕಾಲ ಬರಿಹೊಟ್ಟೆಯಲ್ಲಿ ಕುಡಿದರೆ ಚರ್ಮರೋಗ ಶಮನವಾಗುತ್ತದೆ.

5. ತುಳಸಿ ರಸ, ಬೆಳ್ಳುಳ್ಳಿ ರಸ, ಜೇನುತುಪ್ಪ ಸಮಭಾಗ ತೆಗೆದುಕೊಂಡು ಮಿಶ್ರಣ ಮಾಡಿ ತಯಾರಿಸಿ ಮೂರು ದಿನಗಳಿಗೊಮ್ಮೆ ಒಂದು ಚಮಚ ಸೇವಿಸಿದರೆ ಅಜೀರ್ಣದ ಹೊಟ್ಟೆನೋವು ಬಾಧಿಸದು.

6. ಅಸ್ತಮಾ ರೋಗಿಗಳಲ್ಲಿ ಕಂಡುಬರುವ ಉಸಿರಾಟದ ತೊಂದರೆಗೆ ತುಳಸಿರಸ ಸೇವನೆ ಅತ್ಯಂತ ಉಪಯುಕ್ತ.

7. ತುಳಸಿ ಎಲೆಗಳನ್ನು ಬಾಯಲ್ಲಿ ಹಾಕಿ ಅಗಿಯುವದರಿಂದ ಬಾಯಿಯ ದುರ್ಗಂಧ ಕಡಿಮೆಯಾಗುವದು.

8. ನೀರನ್ನು ಶುದ್ಧಿಕರಿಸಬೇಕಾದಲ್ಲಿ ನಾಲ್ಕಾರು ತುಳಸಿ ಎಲೆಗಳನ್ನು ನೀರಿಗೆ ಹಾಕಿರಿ.

9. ತುಳಸಿ ಎಲೆ, ಕರ್ಪೂರ, ಲವಂಗ ಸೇರಿಸಿ ಕುಟ್ಟಿ ಗುಳಿಗೆ ಮಾಡಿ ಹಲ್ಲು ನೋವಿದ್ದ ಜಾಗಕ್ಕೆ ಇಟ್ಟರೆ ಹಲ್ಲುನೋವು ಕಡಿಮೆಯಾಗುವದು.

10. ಪ್ರತಿದಿನ ಬೆಳಿಗ್ಗೆ ಒಂದು ಚಮಚ ತುಳಸಿ ಎಲೆಯ್ ಚೂರ್ಣವನ್ನು ಸೇವಿಸಿದರೆ ರಕ್ತ ಶುದ್ಧಿಯಾಗುವುದು. ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದು.

11. ತುಳಸಿ ರಸವನ್ನು ಮೊಡವೆಗೆ ಹಚ್ಚುವುದರಿಂದ ಕಾಲಕ್ರಮೇಣ ಮೊಡವೆ ಗುಣವಾಗುವುದು.

12. ಜ್ವರದ ತಾಪ ಕಡಿಮೆಯಾಗಲು ಒಂದು ಚಮಚ ತುಳಸಿ ರಸದೊಂದಿಗೆ ನಾಲ್ಕಾರು ಕಾಳುಮೆಣಸಿನ ಕಾಳು ಹಾಕಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ದಿನಕ್ಕೆ ಎರಡು ಬಾರಿ ಸೇವಿಸಿದರೆ ಉಪಯುಕ್ತ.

13. ತುಳಸಿ ರಸ, ಅರಸಿನ ಪುಡಿ, ತೆಂಗಿನ ಎಣ್ಣೆಯನ್ನು ಬೆರೆಸಿ ವಾರಕ್ಕೆ ಎರಡು ಬಾರಿ ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚಾಗುವುದು.

Also watch our video : Tulasi gulkan for immunity/ತುಳಸಿ ಗುಲ್ಕನ್

ಡಾ. ಶಾಂತಗಿರಿ ಮಲ್ಲಪ್ಪ- ಶಾಂತಗಿರಿ ಹೆಲ್ತ್  ಸೆಂಟರ್
ಬಾಣಸವಾಡಿ, ಬೆಂಗಳೂರು.
ಮೊ: 9449662344

 

 

 

 

Share this: