Vydyaloka

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಕೊರೋನಾ ವೈರಸ್ ರೋಗದ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಅತಿ ಮುಖ್ಯ.ಕೆಲವೊಂದು ಜೀವನ ಪದ್ದತಿ ಹಾಗೂ ಆಹಾರ ಆಚಾರವನ್ನು ಪಾಲಿಸುವುದು ಈಗ ಅತಿ ಮುಖ್ಯವಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸಬೇಕು. ಶುಚಿತ್ವವನ್ನು ಕಾಪಾಡುವುದು ಮುಖ್ಯ.

ಕೊರೋನಾ ವೈರಸ್ ರೋಗದ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಮನೆಯಲ್ಲೆ ದಿಗ್ಬಂದನ ಮಾಡಿಕೊಂಡಿರುವ ಈ ಸಂದರ್ಭದಲ್ಲಿ, ರೋಗ ಬರದೇ ಇರಲು, ರೋನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಯುರ್ವೇದ ಶಾಸ್ತ್ರದಲ್ಲಿ ತಿಳಿಸಿರುವ ಕೆಲವೊಂದು ಜೀವನ ಪದ್ದತಿ ಹಾಗೂ ಆಹಾರ ಆಚಾರವನ್ನು ಪಾಲಿಸುವುದು ಈಗ ಅತಿ ಮುಖ್ಯವಾಗುತ್ತದೆ. ರೋಗನಿರೋಧಕ ಶಕ್ತಿ ಇದ್ದಲ್ಲಿ, ಯಾವುದೇ ರೋಗ ಬರುವುದನ್ನು ತಡೆಗಟ್ಟಬಹುದು ಮತ್ತು ರೋಗ ಬಂದರೂ ಅದನ್ನು ತಡೆದುಕೊಳ್ಳುವ ಶಕ್ತಿ ಇರುತ್ತದೆ. ಆದ್ದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸಬೇಕು. ಕೊರೋನಾ ರೋಗ ಸಾಂಕ್ರಾಮಿಕ ರೋಗವಾದ್ದರಿಂದ, ಶುಚಿತ್ವವನ್ನು ಕಾಪಾಡುವುದು ಮುಖ್ಯ.

ಶುಚಿತ್ವ

ಪ್ರತಿದಿನ ಸ್ನಾನ ಮಾಡಬೇಕು, ಅದರಲ್ಲು ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ಉತ್ತವi.. ಸ್ನಾನದ ನಂತರ ಪ್ರತಿದಿನ ಧರಿಸುವ ಬಟ್ಟೆಯನ್ನು ಬದಲಾಯಿಸಬೇಕು. ಊಟ ಮಾಡುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಮತ್ತು ಆಗಾಗೆ ಕಣ್ಣು, ಮೂಗು, ಬಾಯಿಯನ್ನು ಮುಟ್ಟುಕೊಳ್ಳುತ್ತಿರಬಾರದು.

ಆಹಾರ ಸೇವನೆ

1. ಸೇವಿಸುವ ಆಹಾರ ಶುಚಿಯಾಗಿರಬೇಕು, ಸಮಯಕ್ಕೆ ಸರಿಯಾಗಿ ಹಸಿವಾದ ನಂತರವೇ ಪೌಷ್ಟಿಕ ಮತ್ತು ಮಿತಕರ ಆಹಾರವನ್ನು ಸೇವಿಸಬೇಕು. ಮುಖ್ಯವಾಗಿ ಸೇವಿಸುವ ಆಹಾರವು ತಾಜಾ, ಬಿಸಿ ಹಾಗೂ ಚೆನ್ನಾಗಿ ಬೇಯಿಸಿರಬೇಕು.

2. ಮನಯಲ್ಲೆ ಇರುವುದರಿಂದ ಲಘುವಾದ ಆಹಾರ ಮತ್ತು ಸುಲಭವಾಗಿ ಜೇರ್ಣವಾಗುವ ಆಹಾರ ಸೇವಿಸಬೇಕು.

3. ಪೌಷ್ಠಿಕವಾದ ಹಣ್ಣು, ತರಕಾರಿ , ಕಾಳುಗಳನ್ನು, ಆಹಾರಪದಾರ್ಥವನ್ನು ಸೇವಿಸಬೇಕು.

4. ಬೇಯಿಸದ, ಹಸಿ ತರಕಾರಿಯನ್ನು ಸೇವಿಸಬಾರದು.

5. ಚೆನ್ನಾಗಿ ಕುದಿಸಿದ ಬಿಸಿನೀರನ್ನು ಅಥವಾ ಕಾಯಿಸಿ ಆರಿಸಿದ ಬಿಸಿ ನೀರನ್ನು ಸೇವಿಸಬೇಕು. ಇದು ಆಹಾರವನ್ನು ಪಚನಗೊಳಿಸುತ್ತದೆ ಮತ್ತು ಸೋಂಕನ್ನು ತಡೆಗಟ್ಟುತ್ತದೆ.

6. ನಿತ್ಯ ಒಂದು ಗ್ಲಾಸ್ ಹಾಲು ಮತ್ತು ಒಂದು ಚಮಚ ಹಸುವಿನ ತುಪ್ಪವನ್ನು ಸೇವಿಸುವುದು ವ್ಯಧಿನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕಾರಿ.

7. ಅಡುಗೆ ಮಾಡುವಾಗ ಪದಾರ್ಥಗಳಿಗೆ ಅರಿಶಿಣ, ಹಿಂಗು, ಸಾಸಿವೆ, ಕೊಲವೊಂದು ಆಹಾರಗಳಿಗೆ ಶುಂಠಿಯನ್ನು ಸೇರಿಸುವುದು ಒಳಿತು. ಏಕೆಂದರೆ ಈ ವಸ್ತುಗಳು ಔಷಧೀಯ ಗುಣಗಳನ್ನು ಹೊಂದಿದ್ದು, ಸೋಂಕನ್ನು ತಡೆಗಟ್ಟುವ ವಿಶೇಷ ಶಕ್ತಿ ಹೊಂದಿದೆ.

ವ್ಯಾಧಿನಿರೋಧಕ ಶಕ್ತಿ ಹೆಚ್ಚಿಸಲು ಮನೆಮದ್ದು

1. ಒಂದು ಗ್ಲಾಸ್ ಹಾಲಿಗೆ 1-2 ಚಿಟಿಕಿ ಹರಿಶಿಣವನ್ನು ಹಾಕಿ ಕುದಿಸಿ, ಬೆಲ್ಲ ಸೇವಿಸಿ ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಸೇವಿಸುವುದು

2. ಧನಿಯಾ, ಶುಂಠಿ, ಜೀರಿಗೆ, ಬೆಲ್ಲ, ಹರಿಶಿನ ಮತ್ತು ಹಾಲು ಬೆರೆಸಿ ತಯಾರಿಸಿದ ಕಷಾಯವನ್ನು ದಿನದಲ್ಲಿ ಎರಡು ಬಾರಿ ಸೇವಿಸುವುದು

3. ತುಳಸಿ ದಳವನ್ನು ಬಿಸಿನೀರಿನಲ್ಲಿ ಹಾಕಿ ಒಂದು ಗಂಟೆಯನಂತರ ಆಗಾಗ ಸೇವಿಸುವುದು

4. ಬೇವಿನ ಸೊಪ್ಪನ್ನು ಅರೆದು, ಉಂಡೆ ಮಾಡಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು

5. ರೋಗನಿರೋಧಕ ಶಕ್ತಿಯನ್ನು ಅತೀ ಹೆಚ್ಚು ಹೊಂದಿರುವ ಅಮೃತಬಳ್ಳಿಯ ಕಷಾಯವನ್ನು ಸೇವಿಸುವುದು

6. ನೆಲ್ಲಿಕಾಯಿ ಆಂಟಿಆಕ್ಸಿಡೆಂಟ್ಸ್ ಹೇರಳವಾಗಿರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇದು ಸಹಾಯಕಾರಿ.

ವಿಹಾರ – ವ್ಯಾಯಾಮ

ಕೊನೆಯದಾಗಿ

ಡಾ. ಮಹೇಶ್ ಶರ್ಮಾ ಎಂ
ಆಯುರ್ವೇದ ತಜ್ನರು
ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
Mob: 9964022654

Share this: